Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಭೂಮಿ ಪೂಜೆ ಮಾಡುವಾಗ ಈ ತಪ್ಪುಗಳಾಗದಂತೆ ಎಚ್ಚರ ವಹಿಸಿ!
ಭೂಮಿ ಪೂಜೆಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಮನೆ ಕಟ್ಟುವಾಗ ಅಥವಾ ವ್ಯಾಪಾರ, ವ್ಯವಹಾರಕ್ಕಾಗಿ ಕಟ್ಟಡ ಕಟ್ಟುವಾಗ ಮೊದಲು ಭೂಮಿ ಪೂಜೆಯನ್ನು ನೆರವೇರಿಸಿ ಮುಂದಿನ ಕಾರ್ಯಗಳನ್ನು ಮಾಡಲಾಗುತ್ತದೆ. ಇದರಿಂದ ನಾವು ಮಾಡುವ ಕೆಲಸ ಯಾವುದೇ ಅಡ್ಡಿ-ಆತಂಕಗಳು ಇಲ್ಲದೆ ಒಳ್ಳೆಯ ರೀತಿಯಲ್ಲಿ ನೆರವೇರುತ್ತೆ ಎನ್ನುವ ನಂಬಿಕೆಯಿದೆ.

ಈ ಭೂಮಿ ಪೂಜೆ ಎನ್ನುವಂತಹದ್ದು ಅತ್ಯಂತ ಪವಿತ್ರವಾದ ಶಾಸ್ತ್ರ. ಈ ಶಾಸ್ತ್ರವನ್ನು ಹೇಗಂದರೆ ಹಾಗೆ ಪೂರೈಸೋ ಹಾಗಿಲ್ಲ. ಇದನ್ನು ಮಾಡುವಾಗ ಕೆಲವೊಂದು ನಿಯಮಗಳನ್ನು ಶಾಸ್ತ್ರಬದ್ಧವಾಗಿ ನೆರವೇರಿಸಬೇಕಾಗುತ್ತದೆ. ಅಷ್ಟಕ್ಕು ಭೂಮಿಪೂಜೆಯನ್ನು ಯಾವ ದಿಕ್ಕಿನಲ್ಲಿ ಮಾಡಬೇಕು? ಭೂಮಿಪೂಜೆ ಹೇಗಿರಬೇಕು? ಭೂಮಿ ಪೂಜೆ ಮಾಡುವಾಗ ಯಾವೆಲ್ಲಾ ತಪ್ಪುಗಳು ಆಗಬಾರದು ಅನ್ನೋದನ್ನು ತಿಳಿಯೋಣ.
ಯಾವ ದಿಕ್ಕಿನಲ್ಲಿ ಭೂಮಿ ಪೂಜೆ ಮಾಡಬೇಕು?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತು ಇದು ಭೂಮಿ ಪೂಜೆಗೆ ಉತ್ತಮವಾಗಿದೆ. ಅದಕ್ಕಾಗಿಯೇ ನೀವು ಭೂಮಿಯನ್ನು ಪೂಜಿಸುವಾಗಲೆಲ್ಲ ಈಶಾನ್ಯ ದಿಕ್ಕಿಗೆ ಮಾತ್ರ ಮುಖಮಾಡಿ ಭೂಮಿಪೂಜೆಯನ್ನು ನಡೆಸಿ.
ಮನೆಯ ಅಡಿಪಾಯದಲ್ಲಿ ಏನು ಇಡಬೇಕು
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಭೂಮಿ ಪೂಜೆ ಮಾಡುವಾಗ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಮನೆಯ ಅಡಿಪಾಯದ ಕೆಳಗಡೆ ಬೆಳ್ಳಿಯ ಜೋಡಿ ಸರ್ಪಗಳನ್ನು ಹಾಕುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.
ಈ ಭೂಮಿಯು ಶೇಷ ನಾಗನ ಮೇಲೆ ನಿಂತಿದೆ ಅನ್ನೋ ನಂಬಿಕೆಯಿದೆ. ಹೀಗಾಗಿ ಭೂಮಿ ಪೂಜೆ ಮಾಡುವಾಗ ಬೆಳ್ಳಿಯ ಜೋಡಿ ಸರ್ಪಗಳನ್ನು ಹಾಕೋದ್ರಿಂದ ಶೇಷನಾಗ ನಮ್ಮನ್ನು ಶಾಶ್ವತವಾಗಿ ಕಾಯುತ್ತಾನೆಂದು ನಂಬಲಾಗಿದೆ. ಹಾಗೂ ಮನೆಗೆ ದುಷ್ಟ ಶಕ್ತಿ ಸುಳಿಯದಂತೆ ಕಾಪಾಡುತ್ತದೆ.
ಮನೆಯ ಅಡಿಪಾಯ ಎಷ್ಟಿರಬೇಕು?
ಸಾಮಾನ್ಯವಾಗಿ ಮನೆಯ ಅಡಿಪಾಯ ನಾಲ್ಕರಿಂದ ಐದು ಅಡಿ ಆಳದಲ್ಲಿರಬೇಕು. ಹೆಚ್ಚು ಆಳ ಮಾಡಿದಷ್ಟು ಮನೆಯ ಅಡಿಪಾಯ ಮತ್ತಷ್ಟು ಗಟ್ಟಿಯಾಗಿ ಇರುತ್ತದೆ. ಹಾಗೂ ನಮ್ಮ ಮನೆ ಕೂಡ ಬಲವಾಗಿ ಇರುತ್ತದೆ. ಮನೆಯ ಅಡಿಪಾಯವನ್ನು ಕನಿಷ್ಠ ಪಕ್ಷ ನಾಲ್ಕೈದು ಅಡಿ ಆಳ ಮಾಡಲೇಬೇಕು. ಇದರಿಂದ ನಿಮ್ಮ ಮನೆ ಬಲವಾಗಿ ಇರುತ್ತದೆ. ಮತ್ತು ಬಾಳಿಕೆ ಕೂಡ ಬರುತ್ತದೆ.
ಭೂಮಿ ಪೂಜೆಯ ಆಚರಣಾ ವಿಧಿ ಹೇಗಿರಬೇಕು?
ಭೂಮಿ ಪೂಜೆಯನ್ನು ಮಾಡುವಾಗ ಕೆಲವೊಂದು ಆಚರಣಾ ವಿಧಿಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಕೆಲವರು ಭೂಮಿ ಪೂಜೆ ಮಾಡುವಾಗ ಹಿರಿಯರು ಹಾಗೂ ತಿಳಿದವರ ಮಾರ್ಗ ದರ್ಶನ ಪಡೆಯುತ್ತಾರೆ. ಹೆಚ್ಚಿನವರು ಅರ್ಚಕರನ್ನು ಕರೆಸಿ ಎಲ್ಲಾ ವಿಧಿ-ವಿಧಾನಗಳನ್ನು ಕೈಗೊಳ್ಳುತ್ತಾರೆ.
ಸ್ಥಳ ಗುರುತಿಸುವಿಕೆ
ಮೊದಲು ಸ್ನಾನ ಮಾಡಿ. ಆ ನಂತರ ಭೂಮಿ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಸ್ಥಳವನ್ನು ಸ್ವಚ್ಛಗೊಳಿಸಲು ಮತ್ತು ಶುದ್ಧೀಕರಿಸಲು ಗಂಗಾಜಲವನ್ನು ಬಳಸಲಾಗುತ್ತದೆ. ನಿರ್ಮಾಣ ಸ್ಥಳದ ಈಶಾನ್ಯ ಮೂಲೆಯಲ್ಲಿ ವಿವಿಧ ದೇವತೆಗಳನ್ನು ಪ್ರತಿನಿಧಿಸುವ 64 ಆಕೃತಿಯನ್ನು ಬರೆಯಿರಿ.
ಆರ್ಚಕರಿಂದಲೇ ಭೂಮಿ ಪೂಜೆ ಮಾಡಿಸೋದು ಒಳ್ಳೆಯದು!
ಭೂಮಿ ಪೂಜೆ ಮಾಡುವಾಗ ಅರ್ಚಕರಿಂದಲೇ ಮಾಡಿಸಿದರೆ ಒಳ್ಳೆಯದು. ಏಕೆಂದರೆ ವಾಸ್ತು ದೋಷವಾದರೆ ಮನೆಗೆ ಋಣಾತ್ಮಕ ಶಕ್ತಿಯ ಆಗಮನವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಗಣೇಶನ ಆರಾಧನೆಯೊಂದಿಗೆ ಭೂಮಿ ಪೂಜೆ ಆರಂಭವಾಗಲಿ!
ಯಾವುದೇ ಶುಭ ಕಾರ್ಯಗಳು ನಡೆಯೋವಾಗ ಮೊದಲ ಗಣೇಶನನ್ನು ನೆನೆಯೋದು ವಾಡಿಕೆ. ಅದೇ ರೀತಿ ಭೂಮಿ ಪೂಜೆ ಮಾಡುವಾಗಲೂ ಗಣೇಶನ ಪೂಜೆ ಮಾಡಿ ನಂತರ ಮುಂದುವರೆದರೆ ಒಳ್ಳೆಯದು. ಇನ್ನೂ ಮನೆ ಕಟ್ಟುವ ಸಂದರ್ಭದಲ್ಲಿ ಯಾವುದೇ ಅಡೆ-ತಡೆಗಳಾಗದಂತೆ ನೋಡಿಕೊಳ್ಳಲು ಗಣೇಶನ ಪೂಜೆ ಮಾಡಲಾಗುತ್ತದೆ.
ದೇವರ ಅನುಮತಿ ಪಡೆಯಿರಿ!
ಭೂಮಿ ಪೂಜೆಯ ಸಂದರ್ಭದಲ್ಲಿ ಎಣ್ಣೆ ಅಥವಾ ತುಪ್ಪದ ದೀಪವನ್ನು ಬೆಳಗಿ ನಂತರ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಭೂಮಿ ಪೂಜೆ ಮಾಡುವಾಗ ಬೆಳ್ಳಿಯ ಸರ್ಪಗಳ ಜೋಡಿಯನ್ನು ಯಾವ ಕಾರಣಕ್ಕೆ ಹಾಕಬೇಕು ಎಂದರೆ ಶೇಷನಾಗನು ಭೂಮಿಯನ್ನು ಆಳುತ್ತಿದ್ದಾನೆ. ಮತ್ತು ಆತ ಭಗವಾನ್ ವಿಷ್ಣುವಿನ ಸೇವಕ.
ಹೀಗಾಗಿ ನೀವು ಭೂಮಿ ಪೂಜೆಯ ಮೂಲಕ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಕೋರುತ್ತಿದ್ದೀರಿ ಎಂದರ್ಥ. ನಮ್ಮ ಮನೆಯನ್ನು ರಕ್ಷಿಸಲು ಹಾಗೂ ನಾಗ ದೇವರ ಆಶೀರ್ವಾದವನ್ನು ಪಡೆಯಲು ನಿರ್ಮಾಣ ಕಾರ್ಯವನ್ನು ಆರಂಭಿಸುವ ಮೊದಲು ದೇವರ ಅನುಮೋದನೆ ಪಡೆಯಬೇಕು.
ಕಳಶ ಪೂಜೆ
ಕಲಶವು ಬ್ರಹ್ಮಾಂಡದ ಸಂಕೇತವಾಗಿದೆ. ಒಂದು ಕಲಶವನ್ನು ನೀರಿನಿಂದ ತುಂಬಿಸಿ ಅದರ ಮೇಲೆ ತಲೆಕೆಳಗಾದ ತೆಂಗಿನಕಾಯಿಯೊಂದಿಗೆ ಮಾವು ಅಥವಾ ವೀಳ್ಯದೆಲೆಗಳನ್ನು ಇಡಬೇಕು. ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲು ಕಲಶದಲ್ಲಿ ನಾಣ್ಯ ಮತ್ತು ವೀಳ್ಯದೆಲೆಯನ್ನು ಹಾಕಲಾಗುತ್ತದೆ. ಕಲಶ ಪೂಜೆಯನ್ನು ಮಾಡುವುದರ ಉದ್ದೇಶ ಏನೆಂದರೆ ದೈವಿಕ ಶಕ್ತಿಯನ್ನು ಪ್ರಸಾರ ಮಾಡಲು ಮತ್ತು ನಿರ್ದಿಷ್ಟ ಭೂಮಿಗೆ ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸಲು ಈ ಪೂಜೆಯನ್ನು ಮಾಡಲಾಗುತ್ತದೆ.
ಭೂಮಿಯನ್ನು ಅಗೆಯಬೇಕು
ಒಂದು ಸಣ್ಣ ತುಂಡು ಭೂಮಿಯನ್ನು ಅಗೆದು ಅದರ ಮೇಲೆ ಮನೆ ಕಟ್ಟಲು ಬೇಕಾಗುವ ಅಡಿಪಾಯದ ಕಲ್ಲು ಅಥವಾ ಇಟ್ಟಿಗೆಯನ್ನು ಹಾಕಬೇಕು.
ಈ ವಸ್ತುಗಳನ್ನು ಅರ್ಪಿಸಿ!
ಭೂಮಿ ಪೂಜೆ ಮಾಡುವಾಗ ಹೂಗಳು, ಧೂಪದ್ರವ್ಯಗಳು, ಹಸಿ ಅಕ್ಕಿ, ಶ್ರೀಗಂಧ, ಅರಿಶಿನ, ಸಿಂಧೂರ, ವೀಳ್ಯದೆಲೆ, ಹಣ್ಣುಗಳು, ಸಿಹಿತಿಂಡಿಗಳು ಮತ್ತು ಇತರ ವಸ್ತುಗಳನ್ನು ಭೂಮಿ ಪೂಜೆಯ ಸಂದರ್ಭದಲ್ಲಿ ಆರ್ಚರಕರಿಂದ ಅರ್ಪಿಸಬೇಕು.
ಭೂಮಿ ಪೂಜೆ ಪವಿತ್ರ ಹಾಗೂ ಸೂಕ್ಷ್ಮವಾದ ವಿಚಾರ. ಈ ಸಂದರ್ಭದಲ್ಲಿ ಯಾವುದೇ ರೀತಿ ತಪ್ಪುಗಳು ಆಗದಂತೆ ಗಮನವಹಿಸಬೇಕು.



Click it and Unblock the Notifications

