Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಸೂರ್ಯ, ಶನಿ, ರಾಹುವಿಂದಾಗಿ ಸಂಸಪ್ತಾಕ ಯೋಗ: 3 ರಾಶಿಯವರು ಸೆಪ್ಟೆಂಬರ್‌ನಲ್ಲಿ ಜಾಗ್ರತೆ
ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿ ಗ್ರಹವು ರಾಶಿ ಬದಲಾವಣೆ ಮಾಡುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ, ಸೂರ್ಯನು ಕನ್ಯಾರಾಶಿಗೆ ಸಾಗುತ್ತಾನೆ. ಸೆಪ್ಟೆಂಬರ್ 17 ಕ್ಕೆ ಸೂರ್ಯ ಸಂಕ್ರಾಂತಿ. ಅಲ್ಲಿಯವರೆಗೆ ಸೂರ್ಯನು ತನ್ನದೇ ಆದ ಸಿಂಹ ರಾಶಿಯಲ್ಲಿಯೇ ಇರುತ್ತಾನೆ. ಶನಿಯು ಕುಂಭ ರಾಶಿಯಲ್ಲಿದೆ, ರಾಹು ಮೇಷ ರಾಶಿಯಲ್ಲಿದೆ.

ಈ ಅವಧಿಯಲ್ಲಿ ಈ ಮೂರು ಗ್ರಹಗಳು ಒಟ್ಟಿಗೆ ಸೇರಲಿದೆ. ಅಲ್ಲದೆ ಮೇಷದಲ್ಲಿ ರಾಹು ಮತ್ತು ಗುರುಗಳ ಸಂಯೋಗದಿಂದ ಗುರು ಚಂಡಾಲ ಯೋಗ ಕೂಡ ಇದೆ. ಇದಲ್ಲದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಸಪ್ತಕ ಯೋಗವೂ ಇರುತ್ತದೆ. ಈ ರೀತಿಯಾಗಿ, ಈ ಎಲ್ಲಾ ಯೋಗಗಳು 12 ರಾಶಿಯವರಿಗೆ ಪರಿಣಾಮ ಬೀರುತ್ತವೆ ಆದರೆ ಈ ಮೂರು ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ.
ಕರ್ಕ ರಾಶಿ: ಶನಿ, ರಾಹು ಮತ್ತು ಸೂರ್ಯನ ಅಶುಭ ಪ್ರಭಾವು ಕರ್ಕ ರಾಶಿಯವವರ ಮೇಲಿರುವುದರಿಂದ ಈ ಅವಧಿಯಲ್ಲಿ ಜಾಗ್ರತಿವಹಿಸಿ. ಗುರು ಚಂಡಾಲ ಯೋಗ ಇರುವುದರಿಂದ ಈ ಅವಧಿಯಲ್ಲಿ ನೀವು ಜಾಗ್ರತೆವಹಿಸಿ. ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಏರಿಳಿತದ ಸಾಧ್ಯತೆಗಳಿರುತ್ತದೆ. ಈ ಅವಧಿಯಲ್ಲಿ ಹಣ ಬರುತ್ತದೆ, ಆದರೆ ಖರ್ಚು ಅಧಿಕವಿರಲಿದೆ. ಆಸ್ಪತ್ರೆ, ಔಷಧಿಗಳಿಗೆ ಅಧಿಕ ಖರ್ಚು ಬರಬಹುದು. ಈ ತಿಂಗಳು ಹೂಡಿಕೆ ಮತ್ತು ಉದ್ಯೋಗ ಬದಲಾವಣೆಯಿಂದ ಇಂಥದ್ದೆಲ್ಲಾ ಮಾಡದಿರುವುದು ಒಳ್ಳೆಯದು.
ಕನ್ಯಾ ರಾಶಿ: ಶನಿ, ರಾಹು ಮತ್ತು ಸೂರ್ಯನ ದುಷ್ಪರಿಣಾಮಗಳು ಕನ್ಯಾ ರಾಶಿಯವರ ಮೇಲಿರುವುದರಿಂದ ಈ ಅವಧಿಯಲ್ಲಿ ನಕಾರಾತ್ಮಕವಾಗಿರಲಿದೆ. ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗುವುದು ಕಷ್ಟವಾಗುವುದು. ನೀವು ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ನೀವು ಬಯಸಿದರೆ, ಸ್ವಲ್ಪ ಸಮಯದ ನಂತರ ಮಾಡುವುದು ಒಳ್ಳೆಯದು. ವ್ಯಾಪಾರವನ್ನು ವಿಸ್ತರಿಸಲು ಈ ಅವಧಿ ಸರಿಯಲ್ಲ. ಹೊರಗಡೆಯ ಆಹಾರ ತಿನ್ನದಿದ್ದರೆ ಒಳ್ಳೆಯದು.
ವೃಶ್ಚಿಕ: ಶನಿ, ರಾಹು ಮತ್ತು ಸೂರ್ಯನ ದುಷ್ಟ ಅಂಶವು ವೃಶ್ಚಿಕ ರಾಶಿಯವರ ಮೇಲಿರುವುದರಿಂದ ಈ ಅವಧಿಯಲ್ಲಿ ಎಚ್ಚರವಹಿಸಿ. ಉದ್ಯೋಗ-ವ್ಯವಹಾರದಲ್ಲಿ ಏರಿಳಿತಗಳಿರಬಹುದು. ಈ ಸಮಯದಲ್ಲಿ ತಾಳ್ಮೆಯಿಂದ ಪರಿಸ್ಥಿತಿ ತೂಗಿಸಿಕೊಂಡು ಹೋಗಲು ಪ್ರಯತ್ನಿಸಿ, ಹೆಚ್ಚಿನ ಬದಲಾವಣೆಯನ್ನು ತರಲು ಪ್ರಯತ್ನಿಸಬೇಡಿ. ಯಾರಿಗಾದರೂ ಸಾಲ ನೀಡಿದರೆ ಆ ಹಣ ಮರಳಿ ಪಡೆಯುವುದು ಕಷ್ಟವಾಗುವುದು. ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಸೆಪ್ಟೆಂಬರ್ ತಿಂಗಳ ನಂತರ ನಿಮ್ಮ ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ.



Click it and Unblock the Notifications