Latest Updates
-
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ!
ಅಚ್ಚರಿ.! ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ಧೆ ರಸ್ತೆಯಲ್ಲಿ ಮರುಜೀವ ಪಡೆದಳು..!!
ಸತ್ತವರು ಬದುಕಿ ಬರುತ್ತಾರೆ ಎಂದರೆ ಯಾರಾದರು ನಂಬುತ್ತಾರಾ? ಇದು ನಂಬಲು ಸಾಧ್ಯವಿಲ್ಲದ ವಾದವಾಗಿದೆ. ಸತ್ತ ಮೇಲೆ ಆತ್ಮ ದೇಹತ್ಯಾಗ ಮಾಡಲಿದೆ ಎಂಬುದು ಹಿಂದೂ ಪುರಾಣಗಳಲ್ಲಿನ ಉಲ್ಲೇಖವಾಗಿದೆ. ಜೊತೆಗೆ ಒಮ್ಮೆ ಉಸಿರು ನಿಲ್ಲಿಸಿದ ಬಳಿಕ ಮತ್ತೆ ಅದೇ ದೇಹಕ್ಕೆ ಉಸಿರು ಬಂದರೆ ಅದನ್ನು ಪವಾಡ ಎನ್ನಬಹುದು ಅಷ್ಟೆ.
ಹೀಗೆ ಇಲ್ಲೊಂದು ಪ್ರಕರಣ ಸಹ ಪವಾಡದಂತೆ ಕಾಣುತ್ತಿದೆ. ಸತ್ತ ವೃದ್ಧೆಯೊಬ್ಬಳು 18 ಗಂಟೆಯ ಬಳಿಕ ಮತ್ತೆ ಮರುಜೀವ ಪಡೆದ ಘಟನೆ ಇದು. ಹೌದು ನೀವು ನಂಬಲು ಸಾಧ್ಯವಾಗದ ಘಟನೆಯೊಂದನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ. ಆಕೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿ ಮೃತಪಟ್ಟಿದ್ದಳು, ಆದರೆ 18 ಗಂಟೆಯ ಬಳಿಕ ಮತ್ತೆ ಮರುಜೀವ ಪಡೆದಳು.

ಹಾಗಾದರೆ ಏನಿದು ಘಟನೆ? ನಡೆದಿರುವುದು ಎಲ್ಲಿ? ಈ ಘಟನೆ ನಡೆದಿರುವುದು ಛತ್ತೀಸ್‌ಗಢದಲ್ಲಿ, ಆಸ್ಪತ್ರೆಯ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ ವೃದ್ಧೆಯ ದೇಹವನ್ನು ಆಕೆಯ ಮಕ್ಕಳು ಬಿಹಾರಕ್ಕೆ ಕರೆದೊಯ್ಯುವಾಗ ಜೀವ ಬಂದಿದೆ. 71 ವರ್ಷದ ರಮಾವತಿ ದೇವಿ ಎಂಬ ವೃದ್ಧೆ ಬಿಹಾರದ ಬೇಗಿಸರಾಯ್ ಜಿಲ್ಲಾ ಸದರ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಯುಸಿಐ) ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಫೆಬ್ರವರಿ 11 ರಂದು ಈ ಘಟನೆ ನಡೆದಿದ್ದು, ಆಕೆ ಅನಾರೋಗ್ಯದ ಹಿನ್ನೆಲೆ ಛತ್ತೀಸ್‌ಗಢದ ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಮರುದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆಕೆಯ ಇಬ್ಬರು ಪುತ್ರರಾದ ಘನಶ್ಯಾಮ್ ಸಾಹ್ ಮತ್ತು ಮುರಾರಿ ಸಾಹ್ ನಂತರ ಬಿಹಾರದ ಬೇಗುಸರಾಯ್ ಜಿಲ್ಲೆಯ ತಮ್ಮ ಸ್ಥಳೀಯ ಗ್ರಾಮ ನೀಮಾ ಚಂದ್‌ಪುರದಲ್ಲಿ ಅಂತಿಮ ವಿಧಿಗಳನ್ನು ಮಾಡಲು ನಿರ್ಧರಿಸಿದರು. ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಖಾಸಗಿ ವಾಹನವನ್ನು ಬಾಡಿಗೆಗೆ ಪಡೆದಿದ್ದರು.
ಅವರ ಪ್ರಯಾಣದ ಸುಮಾರು 18 ಗಂಟೆಗಳ ನಂತರ, ಪುತ್ರರು ತಮ್ಮ ತಾಯಿಯ ದೇಹದಲ್ಲಿ ಕೆಲವು ಚಟುವಟಿಕೆಗಳನ್ನು ಗಮನಿಸಿದರು. ಆರಂಭದಲ್ಲಿ ಅವರಿಗೆ ತಮ್ಮ ಕಣ್ಣುಗಳನ್ನು ನಂಬಲಾಗಲಿಲ್ಲ, ಆದರೆ ಅವರು ಬಿಹಾರದ ಔರಂಗಾಬಾದ್ ತಲುಪಿದಾಗ ಚಟುವಟಿಕೆಗಳು ಹೆಚ್ಚು ಸ್ಪಷ್ಟವಾಯಿತು.
ರಸ್ತೆ ಬದಿ ವಾಹನ ನಿಲ್ಲಿಸಿ ಕೆಲಕಾಲ ಮೃತದೇಹದ ಚಟುವಟಿಕೆಗಳನ್ನು ವೀಕ್ಷಿಸಿದರು. ಆಕೆ ಜೀವಂತವಾಗಿರುವುದನ್ನು ಕಂಡು ಅವರು ಆಶ್ಚರ್ಯಚಕಿತರಾದರು. ಹೀಗಾಗಿ ಅಲ್ಲಿಂದ ಬೇಗ ಬೇಗ ಅವರು ಬೇಗುಸರಾಯ್ ಸದರ್ ಆಸ್ಪತ್ರೆಗೆ ಧಾವಿಸಿದರು, ಅಲ್ಲಿ ಆಕೆಯನ್ನು ಐಸಿಯುಗೆ ದಾಖಲಿಸಲಾಯಿತು.
ರಾಮಾವತಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಕೃಷ್ಣ ಕುಮಾರ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಅವರ ಸ್ಥಿತಿ ಸುಧಾರಿಸಿದೆ ಎಂದು ಹೇಳಿದರು. ಆಸ್ಪತ್ರೆಗೆ ದಾಖಲಾದ ಕೂಡಲೇ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಡಾ.ಕುಮಾರ್ ಮಕ್ಕಳಿಗೆ ಮಾಹಿತಿ ನೀಡಿದರು. ರೋಗಿಯನ್ನು ರಸ್ತೆಯ ಮೂಲಕ ಕರೆತರಲಾಗಿತ್ತು. ವಾಹನದ ಜರ್ಕ್ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಆಗಿ ಕೆಲಸ ಮಾಡಿರಬಹುದು, ಇದರಿಂದಾಗಿ ಪ್ರಜ್ಞೆ ಮರಳಿದೆ ಎಂದು ವೈದ್ಯರು ಶಂಕಿಸಿದರು.
'ವಾಹನದಲ್ಲಿ ಜರ್ಕ್ ಸಿಪಿಆರ್ ಆಗಿ ಕೆಲಸ ಮಾಡಿರಬಹುದು'
ರಾಮಾವತಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಕೃಷ್ಣ ಕುಮಾರ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಮತ್ತು ಅವರ ಸ್ಥಿತಿ ಸುಧಾರಿಸಿದೆ ಎಂದು ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ದಾಖಲಾದ ಕೂಡಲೇ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ರೋಗಿಯನ್ನು ವಾಹನಲ್ಲಿ ತರುವಾಗ ವಾಹನ ಜರ್ಕ್‌ಗೆ ಒಳಗಾಗಿದ್ದು, ಇದು ಉಸಿರಾಟ ಪ್ರಕ್ರಿಯೆ ಮತ್ತೆ ಆರಂಭವಾಗುವಂತೆ ಮಾಡಿದೆ. ಕೆಲವು ಬಾರಿ ರೋಗಿಯ ಹೃದಯ ಬಡಿತ ಅಂತ್ಯಗೊಂಡವಾಗ ನಾವು ಸಿಪಿಆರ್ ಮಾಡುತ್ತೇವೆ ಈ ವೇಳೆ ಮತ್ತೆ ಆತನ ಉಸಿರಾಟ ಪ್ರಕ್ರಿಯೆ ಆರಂಭಗಾಗಿತ್ತದೆ. ಇಲ್ಲಿಯೂ ಸಹ ಅದೇ ಆಗಿದೆ. ವಾಹನ ಜೋರಾಡಿ ಓಡಿಸಿದ್ದು ಜೊತೆಗೆ ಗುಂಡಿಗಳು, ಜರ್ಕ್ ಕೊಟ್ಟ ಕಾರಣ ಆಕೆಗೆ ಸಿಪಿಆರ್ ರೀತಿಯ ಪ್ರಕ್ರಿಯೆಗೆ ಒಳಗಾಗಿ ಮತ್ತೆ ಉಸಿರಾಟ ಆರಂಭವಾಗಿದೆ. ಈ ಕೆಲಸವನ್ನು ಆಸ್ಪತ್ರೆಯಲ್ಲಿ ಮಾಡಿದರೂ ಬದುಕುಳಿಯುತ್ತಿದ್ದಳು ಎಂದು ಹೇಳುವುದು ಕಷ್ಟ ಎಂದು ವೈದ್ಯರು ವಿವರಿಸಿದರು.



Click it and Unblock the Notifications