Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಗಸ್ಟ್ 1 ರಾತ್ರಿ ಗೋಚರಿಸಲಿದೆ ಬ್ಲೂ ಮೂನ್: ಮತ್ತೆ ಬ್ಲೂ ಮೂನ್ ಕಣ್ತುಂಬಿಕೊಳ್ಳಲು 9 ವರ್ಷ ಕಾಯಬೇಕು
ಈ ಆಗಸ್ಟ್ ತಿಂಗಳು 2 ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಹೌದು ಈ ತಿಂಗಳಿನಲ್ಲಿ ಎರಡು ಸೂಪರ್ ಮೂನ್ ದಿನಗಳಿವೆ, ಒಂದು ಆಗಸ್ಟ್ ಒಂದರಂದು ಸಂಭವಿಸಿದರೆ ಮತ್ತೊಂದು ಆಗಸ್ಟ್ 31ಕ್ಕೆ ಸಂಭವಿಸಲಿದೆ. ಅದರಲ್ಲೂ ಇಂದಿನ ಬ್ಲೂ ಮೂನ್ ನೀವೇನಾದರೂ ಮಿಸ್ ಮಾಡಿದರೆ ಮತ್ತೆ ಅಂಥ ದೃಶ್ಯ ನೋಡಲು 9 ವರ್ಷ ಕಾಯಬೇಕಾಗುತ್ತದೆ. ಖಗೋಳದಲ್ಲಿ ನೈಸರ್ಗಿಕವಾಗಿ ನಡೆಯಲಿರುವ ಈ ವಿಸ್ಮಯಗಳ ಕುರಿತ ಮತ್ತೊಂದಿಷ್ಟು ಮಾಹಿತಿ ತಿಳಿಯೋಣ...
ಸೂಪರ್ ಮೂನ್ ಎಂದರೇನು?
ಸೂಪರ್ ಮೂನ್‌ನಲ್ಲಿ ಚಂದ್ರ ಸಾಮಾನ್ಯವಾಗಿ ಕಾಣುವುದಕ್ಕಿಂತ ದೊಡ್ಡದಾಗಿ ಕಾಣುತ್ತಾನೆ. ಈ ದಿನ ಚಂದ್ರ ಭೂ ಕಕ್ಷೆಯ ಸಮೀಪಕ್ಕೆ ಬರಲಿದೆ, ಆದ್ದರಿಂದ ಚಂದ್ರ ಸಾಮಾನ್ಯವಾಗಿ ಕಾಣಿಸುವುದಕ್ಕಿಂತ ದೊಡ್ಡದಾಗಿ ಗೋಚರಿಸಲಿದೆ. ಸಾಮಾನ್ಯವಾಗಿ ಶೇ. 8 ರಿಂದ ಶೇ. 16ರಷ್ಟು ದೊಡ್ಡದಾಗಿ ಕಾಣಲಿದೆ.

ನಾಸಾ ಪ್ರಕಾರ ಚಂದ್ರ ಭೂಮಿಯಿಂದ 226,000 ಮತ್ತು 251,000 ಮೈಲಿ ದೂರದಲ್ಲಿದೆ, ವರ್ಷದಲ್ಲಿ ಎರಡರಿಂದ ಮೂರು ಬಾರಿ ಭೂ ಕಕ್ಷೆಯ ಸಮೀಪಕ್ಕೆ ಬರುತ್ತದೆ. ಹೀಗಾಗಿ ಚಂದ್ರನ ಗಾತ್ರ ದೊಡ್ಡದಾಗಿ ಗೋಚರಿಸುವುದು, ಇದನ್ನು ಸೂಪರ್‌ಮೂನ್ ಎಂದು ಕರೆಯಲಾಗುವುದು. ಸೂಪರ್‌ಮೂನ್ ಸಮಯದಲ್ಲಿ ಸೂರ್ಯ ಭೂಮಿಗೆ ಸುಮಾರು 30,000 ಕಿ. ಮೀ ಸಮೀಪವಾಗುತ್ತಾನೆ. ಈ ಕಾರಣದಿಂದ ಚಂದ್ರ ತುಂಬಾ ದೊಡ್ಡ ಗಾತ್ರದಲ್ಲಿ ಗೋಚರಿಸಲಿದೆ.
ಸೂಪರ್ ಮೂನ್ ಸಮಯದಲ್ಲಿ ಸಮುದ್ರ ತೀರಕ್ಕೆ ಹೋಗಬೇಡಿ
ಚಂದ್ರನ ಏರಳಿತಕ್ಕೆ ಚಂದ್ರನಿಗೂ ಸಂಬಂಧವಿದೆ ಎಂದು ಹೇಳಲಾಗುವುದು. ಸೂಪರ್ ಮೂನ್‌ಗಳ ಸಮಯದಲ್ಲಿ ಸಮುದ್ರ ಅಲೆಗಳ ಹೊಡೆತ ಜೋರಾಗಿರುತ್ತದೆ. ಈ ಸಮಯದಲ್ಲಿ ಸಮುದ್ರದ ಸಮೀಪಕ್ಕೆ ಹೋಗದಿರುವುದು ಸೂಕ್ತ, ಹೋದರೂ ಅಲೆಗಳಲ್ಲಿ ಆಟ ಆಡಲು ಹೋಗದಿರುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಅದರಲ್ಲೂ ಈಗ ಮಳೆಗಾಲವಾಗಿರುವುದರಿಂದ ಸಮುದ್ರ ತುಂಬಿರುತ್ತದೆ, ಸೆಲ್ಫಿ ಮುಂತಾದ ಹುಚ್ಚಾಟದಿಮದ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ.
ಯಾವಗೆಲ್ಲಾ ಸೂಪರ್ ಮೂನ್ ಗೋಚರಿಸಲಿದೆ?
ಜುಲೈ 3ಕ್ಕೆ ಕಳೆಯಿತು, ಆಗಸ್ಟ್ 1, ಆಗಸ್ಟ್ 31 ಹಾಗೂ ಸೆಪ್ಟೆಂಬರ್ 29ಕ್ಕೆ ಸೂಪರ್ ಮೂನ್ ಗೋಚರಿಸಲಿದೆ.
ಬ್ಲೂ ಮೂನ್ ಯಾವಾಗ ಬರುತ್ತದೆ?
ತಿಂಗಳ ಮೊದಲು ಅಥವಾ ಎರಡನೇ ತಾರೀಕು ಹುಣ್ಣಿಮೆ ಇದ್ದಾಗ ಆ ತಿಂಗಳಿನಲ್ಲಿ 31 ದಿನವಿದ್ದರೆ ಬ್ಲೂ ಮೂನ್ ಉಂಟಾಗುವುದು.
ಬ್ಲೂ ಮೂನ್ ದಿನದಂದು ಗ್ರಹಣ ಸಂಭವಿಸುತ್ತದೆಯೇ?
ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆಗೆ 29.5 ದಿನಗಳ ಅಂತರವಿರುತ್ತದೆ. ಆದರೆ ವಿಶ್ವದಾದ್ಯಂತ ಗ್ರಿಗೇರಿಯನ್ ಕ್ಯಾಲೆಂಡರ್ ಬಳಸಲಾಗುವುದು. ಹಾಗಾಗಿ ತಿಂಗಳಿನಲ್ಲಿ ಕೆಲವೊಮ್ಮೆ ಎರಡು ಹುಣ್ಣಿಮೆ ಬರುತ್ತದೆ. ಬ್ಲೂಮೂನ್ ಡೇ ಅಥವಾ ಸೂಪರ್ ಮೂನ್ ಎಂದರೆ ಸೂರ್ಯನ ಗಾತ್ರ ದೊಡ್ಡದಾಗಿ ಗೋಚರಿಸುವುದು, ಆದರೆ ಯಾವುದೇ ಗ್ರಹಣ ಸಂಭವಿಸಲ್ಲ.



Click it and Unblock the Notifications
