Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಈ ವರ್ಷ ಸುಬ್ರಹ್ಮಣ್ಯ ಷಷ್ಠಿ ಯಾವಾಗ? ಕುಕ್ಕೆಯಲ್ಲಿ ಸುಬ್ರಹ್ಮಣ್ಯ ನೆಲೆನಿಂತ ಪೌರಾಣಿಕ ಕತೆಯೇನು?
ಪ್ರತಿವರ್ಷ ಮಾರ್ಗಶಿರ ಮಾಸದಲ್ಲಿ ಬರುವ ಸ್ಕಂದ ಷಷ್ಠಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು, ಕುಕ್ಕೆ ಸುಬ್ರ ಹ್ಮಣ್ಯ ಸೇರಿದಂತೆ ಹಲವು ಕಡೆ ಷಷ್ಠಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ದಿನ ರಥೋತ್ಸವ ನಡೆಯಲಿದೆ. ಕುಮಾರನದಿಯಲ್ಲಿ ಸ್ನಾನ ಮಾಡಿ ಭಕ್ತರು ದೇವಾಲಯಕ್ಕೆ ಬರುತ್ತಾರೆ. ರಥ ಎಳೆಯುವವರು ಗರುಡ ರಥಕ್ಕೆ ಮೂರು ಸುತ್ತು ಪ್ರದಕ್ಷಣೆ ಹಾಕಿ ರಥ ಎಳೆಯಲಾಗುವುದು. ಈ ವರ್ಷ ಷಷ್ಠಿ ಯಾವಾಗ? ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಕುರಿತ ಪೌರಾಣಿಕ ಕತೆಯೇನು ಎಂದು ನೋಡೋಣ ಬನ್ನಿ?

2024ರಲ್ಲಿ ಸುಬ್ರಹ್ಮಣ್ಯ ಷಷ್ಠಿ ಯಾವಾಗ?
ಈ ವರ್ಷ ಸ್ಕಂದ ಷಷ್ಠಿಯನ್ನು ಡಿಸೆಂಬರ್ 6ರಂದು ಆಚರಿಸಲಾಗುವುದು. ಇದು ನಾಲ್ಕು ದಿನದ ಆಚರಣೆಯಾಗಿದೆ.
ಸುಬ್ರಹ್ಮಣ್ಯ ಷಷ್ಠಿಯ ಆಚರಣೆ
ಈ ದಿನ ಬೇಗ ಎದ್ದು ನದಿ ಸ್ನಾನ ಮಾಡಬೇಕು
ಈ ದಿನ ಕಾರ್ತಿಕೇಯನ ಮಂತ್ರಗಳನ್ನು ಪಠಿಸಬೇಕು.
ಈ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡುತ್ತಾರೆ,ಈ ದಿನ ಸುಬ್ರಹ್ಮಣ್ಯನಿಗೆ ಹಾಲನ್ನು ಅರ್ಪಿಸಿ ಪೂಜಿಸುವುದರಿಂದ ಸರ್ಪದೋಷವವಿದ್ದರೆ ನಿವಾರಣೆಯಾಗುವುದು.
ಕುಕ್ಕೆ ಶ್ರೀ ಕ್ಷೇತ್ರದಲ್ಲಿ ಈ ದಿನ ವಿಶೇಷ ಪೂಜೆ ಇರುತ್ತದೆ
ಈ ದಿನ ದಾನ ಮಾಡಲಾಗುವುವುದು. ಅಕ್ಕಿ,ಆಹಾರ, ವಸ್ತ್ರ ಇವುಗಳನ್ನು ದಾನ ಮಾಡಲಾಗುವುದು.
ಸ್ಕಂದ ಷಷ್ಠಿಯ ಪೌರಾಣಿಕ ಕತೆಯೇನು?
ಕಶ್ಯಪ ಎಂಬ ಋಷಿಗೆ 13 ಜನ ಪತ್ನಿಯರು. ಇವರೆಲ್ಲರೂ ದಕ್ಷನ ಮಕ್ಕಳಾಗಿರುತ್ತಾರೆ, ಅವರಲ್ಲಿ ಕದ್ರ ಮತ್ತು ವಿನುತಾ ಕೂಡ ಇಬ್ಬರು. ಕದ್ರು ವಿನೂತಳನ್ನು ಆಟದಲ್ಲಿ ಮೋಸದಿಂದ ಸೋಲಿಸಿ ತನ್ನ ಚರಣದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ, ವಿನೂತಳ ಮಗ ಗರುಡ, ಕದ್ರ ಮಕ್ಕಳುಸರ್ಪಗಳು. ಗರುಡನಿಗೆ ತನ್ನ ತಾಯಿಗಾದ ಮೋಸ ತಿಳಿದು ತುಂಬಾನೇ ಕೋಪ ಬರುತ್ತದೆ, ಸರ್ಪಗಳನ್ನು ಕುಕ್ಕಿ ತನ್ನ ದ್ವೇಷ ತೀರಿಸುತ್ತಾನೆ.
ಗರುಡನಿಂದ ಪಾರಾಗಲು ಶೇಷ ವೈಕುಂಠದಲ್ಲಿ ಹರಿಗೆ ತಲ್ಪವಗುತ್ತಾನೆ, ಹಾವುಗಳು ಶಿವನ ಕೊರಳು ಸೇರಿಕೊಳ್ಳುತ್ತದೆ. ವಾಸುಕಿ ಸರ್ಪವು ಕುಮಾರಧಾರಾ ನದಿಯ ಪಕ್ಕದಲ್ಲಿರುವ ಗುಹೆಯಲ್ಲಿ ಅಡಗಿಕೊಳ್ಳುತ್ತದೆ. ಇದನ್ನು ತಿಳಿದು ಗರುಡ ಅಲ್ಲಿಗೂ ಬರುತ್ತಾನೆ, ಕಶ್ಪ ಮುನಿ ಬಂದು ಮಕ್ಕಳಿಗೆ ಯುದ್ಧವನ್ನು ನಿಲ್ಲಿಸುವಂತೆ ಕೋರುತ್ತಾನೆ. ವಾಸುಕಿಯು ಪ್ರಾಣ ಭಯದಿಂದ ಶಿವನ ಮೊರೆ ಹೋಗುತ್ತಾನೆ, ಆವಾಗ ಶಿವನು ಹೆದರಡಬೇಡ, ಸರ್ಪ ಕುಲದ ರಕ್ಷಣೆಗೆ ನನ್ನ ಮಗ ಸುಬ್ರಹ್ಮಣ್ಯ ಬರುತ್ತಾನೆ ಎಂದು ಹೇಳುತ್ತಾನೆ.
ಹೀಗಿರಲು ಸುಬ್ರಹ್ಮಣ್ಯ ರಾಕ್ಷಸ ತಾರಕಾಸುರನನ್ನು ಕೊಂದು ಆಯುಧ ತೊಳೆಯಲು ಧಾರಾ ನದಿಗೆ ಬರುತ್ತಾನೆ, ಅಲ್ಲಿಂದ ಆ ನದಿಗೆ ಕುಮಾರಧಾರ ಎಂಬ ಹೆಸರು ಬರುತ್ತದೆ. ಇಂದ್ರನು ತ್ನ ಮಗಳಾದ ದೇವಸೇನೆಯನ್ನು ಸುಬ್ರಹ್ಮಣ್ಯನಿಗೆ ಮದುವೆ ಮಾಡಿ ಕೊಡುತ್ತಾನೆ. ಸುಬ್ರಹ್ಮಣ್ಯ ಪತ್ನಿ ದೇವಸೇನೆ ಹಾಗೂ ವಾಸುಕಿ ಜೊತೆಯಲ್ಲಿ ಕುಕ್ಕೆಯಲ್ಲಿ ನೆಲೆ ನಿಲ್ಲುತ್ತಾನೆ.
ಸುಬ್ರಹ್ಮಣ್ಯ ಸರ್ಪಗಳ ರಕ್ಷಣೆಗೆ ಬಂದು ಕುಕ್ಕೆಯಲ್ಲಿ ನೆಲೆಸಿದನು, ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸರ್ಪದೋಷ ನಿವಾರಣೆಯಾಗಲಿದೆ.



Click it and Unblock the Notifications
