Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
'ಕುಲದೇವರ' ಪೂಜೆ ಮಾಡುತ್ತಿದ್ದ ಕುಟುಂಬಕ್ಕೆ ಶಾಕ್..! ಅದು ಕಲ್ಲಲ್ಲ ಡೈನೋಸಾರ್ ಮೊಟ್ಟೆ..!
ಡೈನೋಸಾರ್‌ಗಳು ಭೂಮಿಯಿಂದ ಮಾಯವಾಗಿ ಶತಮಾನಗಳೇ ಉರುಳಿವೆ. ಆದ್ರೂ ನೀವು ಅವುಗಳ ಬಗ್ಗೆ ನಿತ್ಯವೂ ಒಂದಲ್ಲಾ ಒಂದು ರೀತಿ ಕೇಳುತ್ತೀರಿ. ಹೆಚ್ಚೆಂದ್ರೆ ಡೈನೋಸಾರ್‌ನ ಮೂಳೆ ಪತ್ತೆಯಾಗಿದೆ ಅಂತಲೋ ಮೊಟ್ಟೆ ಸಿಕ್ಕಿದೆ ಅಂತಲೋ ಸುದ್ದಿಯಾಗುವುದು ಸಾಮಾನ್ಯ. ಭಾರತದಲ್ಲಿ ಈ ಸುದ್ದಿ ಕೇಳಿಬರೋದು ಅಪರೂಪ. ಆದ್ರೆ ಈಗ ಕೇಳಿಬಂದಿರೋ ಸುದ್ದಿ ನಿಮಗೂ ಆಶ್ಚರ್ಯ ಹುಟ್ಟಿಸುತ್ತೆ.
ಮಧ್ಯ ಪ್ರದೇಶದಲ್ಲಿ ಡೈನೋಸಾರ್ ಮೊಟ್ಟೆಗಳು ಪತ್ತೆಯಾಗಿವೆ. ಇಷ್ಟೇ ಆಗಿದ್ರೆ ಇದ್ರಲ್ಲಿ ಆಶ್ಚರ್ಯ ಪಡಬೇಕಿರೋದು ಏನು ಇಲ್ಲ. ಆದ್ರೆ ಕುಟುಂಬವೊಂದು ಪ್ರತಿದಿನ ಈ ಮೊಟ್ಟೆಗಳನ್ನು ದೇವರ ಮೂರ್ತಿ ಅಂತ ತಪ್ಪಾಗಿ ತಿಳಿದುಕೊಂಡು ಪೂಜೆ ಮಾಡುತ್ತಿದ್ರಂತೆ. ಹೌದು ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯ ಪ್ರದೇಶದ ಸಣ್ಣ ಗ್ರಾಮದಲ್ಲಿ.

ಅಂಗೈಯಗಲ ಸಣ್ಣ ಕಲ್ಲುಗಳಿಗೆ ದೇವರ ಮೂರ್ತಿ ಎಂದು ಪೂಜೆ ಮಾಡುತ್ತಿದ್ದರಂತೆ ಆದ್ರೆ ಆ ಕಲ್ಲುಗಳೀಗ ಡೈನೋಸಾರ್ ಮೊಟ್ಟೆಗಳೆಂದು ತಿಳಿದು ಕುಟುಂಬಸ್ಥರು ದಂಗಾಗಿದ್ದಾರೆ. ಲಕ್ನೋದ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
ತಜ್ಞರು, ತಮ್ಮ ಸಂಶೋಧನೆಯ ನಂತರ, ಪಳೆಯುಳಿಕೆಗೊಂಡ ಮೊಟ್ಟೆಗಳು ಟೈಟಾನೊಸಾರಸ್ ಜಾತಿಗೆ ಸೇರಿದ ಡೈನೋಸಾರ್‌ಗಳದ್ದು ಎಂದು ತೀರ್ಮಾನಿಸಿದರು. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಡ್ಲ್ಯಾ ಗ್ರಾಮದಲ್ಲಿ ಭೂಮಿ ಅಗೆಯುವಾಗ ಈ 'ಕಲ್ಲಿನ ಚೆಂಡುಗಳು' ಕಣ್ಣಿಗೆ ಬಿದ್ದಿದ್ದವು. ವೆಸ್ಟಾ ಮಂಡಲೋಯ್ ಎಂಬುವರು ವರ್ಷಗಳ ಹಿಂದೆ ಅವುಗಳನ್ನು 'ಕುಲ ದೇವರು' ಎಂದು ಪೂಜಿಸುತ್ತಾ ಬಂದಿದ್ದರಂತೆ.
ಭೂಮಿ ಕಾಯುತ್ತಿದ್ದ 'ಕಾಕರ್ ಭೈರವ್'.!
ಈ ಮೊಟ್ಟೆಗಳನ್ನು ಅವರು 'ಕಾಕರ್ ಭೈರವ್' ಎಂದು ಕರೆಯುತ್ತಿದ್ದರು. ಕಾಕರ್ ಎಂದರೆ ಭೂಮಿ ಮತ್ತು ಭೈರವ್ ಎಂದರೆ ಭಗವಂತ ಎಂಬರ್ಥ ಕೊಡುತ್ತಿತ್ತು. ಹೀಗಾಗಿ ಆ ಕುಟುಂಬ ಈ ಕಲ್ಲುಗಳಿಗೆ ನಿತ್ಯ ಪೂಜೆ ಮಾಡಿ 'ಕಾಕರ್ ಭೈರವ್' ಜಾನುವಾರುಗಳು ಮತ್ತು ಕೃಷಿ ಭೂಮಿಯನ್ನು ಕಾಯುತ್ತಿದೆ ಎಂದು ನಂಬಿಕೆ ಹೊಂದಿದ್ದರು.
ಆದರೆ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್‌ನ ತಂಡ ಈ ಕಲ್ಲುಗಳ ಪರೀಕ್ಷೆಗೊಳಪಡಿಸಿದ್ದಾಗ ಇದು ಡೈನೋಸಾರ್‌ನ ಮೊಟ್ಟೆಗಳು ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದ ಕುಟುಂಬ ಹಾಗೂ ಇಡೀ ಗ್ರಾಮ ನಿಬ್ಬೆರಗಾಗಿದೆ. ಮಣ್ಣಿನೊಳಗೆ ಮೊಟ್ಟೆಗಳು ವರ್ಷಗಳಿದ್ದ ಕಾರಣ ಕಲ್ಲುಗಳಂತೆ ರೂಪ ತಳೆದಿದ್ದವು. ಜೊತೆಗೆ ಅಷ್ಟೇ ಗಟ್ಟಿಯಾಗಿದ್ದವು. ಈ ಕುಟುಂಬ ದೇವರು ಎಂದು ಸಂಗ್ರಹಿಸಿ ಜೋಪಾನ ಮಾಡಿದ್ದರಿಂದ ಮೊಟ್ಟೆಗಳಿಗೆ ಹಾನಿಯಾಗದ ಉಳಿದುಕೊಂಡಿದ್ದವು.
ಏನಿದು ಟೈಟಾನೋಸಾರ್ ಮೊಟ್ಟೆ?
ಟೈಟಾನೋಸಾರ್ ಮೊದಲ ಭಾರತೀಯ ಡೈನೋಸಾರ್ ಆಗಿದೆ. ಈ ಡೈನೋಸಾರ್ ಅನ್ನು 1877 ರಲ್ಲಿ ಮೊದಲ ಬಾರಿಗೆ ದಾಖಲಿಸಲಾಯಿತು ಮತ್ತು ಅದರ ಹೆಸರು 'ಟೈಟಾನಿಕ್ ಲಿಜರ್ಡ್' ಎಂಬ ಜಾತಿಗೆ ಸೇರಿಸಲಾಗಿತ್ತು. ಟೈಟಾನೋಸಾರ್ ಭೂಮಿಯಲ್ಲಿದ್ದ ಅತೀದೊಡ್ಡ ಡೈನೋಸಾರ್‌ಗಳಲ್ಲಿ ಒಂದಾಗಿದೆ. ಅಂದಾಜಿನ ಪ್ರಕಾರ, ಕ್ರಿಟೇಶಿಯಸ್ ಅವಧಿಯಲ್ಲಿ, ಸುಮಾರು 70 ಮಿಲಿಯನ್ ವರ್ಷಗಳ ಹಿಂದೆ ಈ ಪ್ರಭೇದಗಳು ಜೀವಿಸಿದ್ದವು ಎನ್ನಲಾಗಿದೆ.
ಈ ವರ್ಷದ ಆರಂಭದಲ್ಲಿ, ನರ್ಮದಾ ಕಣಿವೆಯಲ್ಲಿ ಸಂಚರಿಸುತ್ತಿದ್ದ ಟೈಟಾನಿಕ್ ಲಿಜರ್ಡ್‌ನ 250 ಕ್ಕೂ ಹೆಚ್ಚು ಮೊಟ್ಟೆಗಳು ಮಧ್ಯ ಪ್ರದೇಶದ ಧಾರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು.
ಜನವರಿಯಲ್ಲಿ, ದೆಹಲಿ ವಿಶ್ವವಿದ್ಯಾನಿಲಯ (DU) ಮತ್ತು ಭೋಪಾಲ್‌ನ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (IISER) ಯ ಸಂಶೋಧಕರ ತಂಡವು ನಡೆಸಿದ ಅಧ್ಯಯನವನ್ನು ಪೀರ್-ರಿವ್ಯೂಡ್ ವೈಜ್ಞಾನಿಕ ಜರ್ನಲ್ PLOS One ನಲ್ಲಿ ಪ್ರಕಟಿಸಲಾಗಿದೆ. ಅವರು ಟೈಟಾನೋಸಾರ್‌ಗಳಿಗೆ ಸೇರಿದ 256 ಪಳೆಯುಳಿಕೆ ಮೊಟ್ಟೆಗಳನ್ನು ಹೊಂದಿರುವ 92 ಗೂಡುಗಳ ಸ್ಥಳವನ್ನು ಬಹಿರಂಗಪಡಿಸಿದ್ದಾರೆ.



Click it and Unblock the Notifications
