Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ದೀಪಾವಳಿ ಮಾರನೇಯ ದಿನವೇ ಸೋಮಾವತಿ ಅಮವಾಸ್ಯೆ: ಸಂಜೆ ಈ ಪರಿಹಾರ ಮಾಡಿದರೆ ಕಷ್ಟಗಳು ದೂರಾಗುವುದು
ದೀಪಾವಳಿಯ ಮಾರನೆಯ ದಿನ ಸೋಮಾವತಿ ಅಮವಾಸ್ಯೆ ಬಂದಿದೆ. ಸೋಮಾವತಿ ಅಮವಾಸ್ಯೆಗೆ ತುಂಬಾನೇ ಪ್ರಾಮುಖ್ಯತೆ ಇದೆ. ಈ ಸೋಮಾವತಿ ಅಮವಾಸ್ಯೆಯಂದು ಮಾಡುವ ದಾನಕ್ಕೆ ತುಂಬಾನೇ ಮಹತ್ವವಿದೆ. ಈ ಅಮವಾಸ್ಯೆಯಂದು ದಾನ ಮಾಡುವುದರಿಂದ ಕಷ್ಟಗಳು, ಅನಾರೋಗ್ಯಗಳಿಂದ ಪಾರಾಗಬಹುದು ಎಂದು ಹೇಳಲಾಗುವುದು. ಈ ಸೋಮಾವತಿ ಅಮವಾಸ್ಯೆಯಂದು ಸಂಜೆ ಈ ಪರಿಹಾರ ಮಾಡಿ:

* ಸಂಜೆ ಹೊತ್ತು ತುಳಸಿಗೆ ಪೂಜೆ ಸಲ್ಲಿಸಿ 108 ಬಾರಿ ಪ್ರದಕ್ಷಣೆ ಹಾಕಿ. ಲಕ್ಷ್ಮಿ, ವಿಷ್ಣು ಮಂತ್ರಗಳನ್ನು ಹೇಳುತ್ತಾ ತುಳಸಿಯ ಸುತ್ತ ಪ್ರದಕ್ಷಣೆ ಹಾಕಿ, ಹೀಗೆ ಮಾಡುವುದರಿಂದ ಆರ್ಥಿಕ ಸಂಕಷ್ಟಗಳು ದೂರಾಗುವುದು.
* ಈ ದಿನ ಆಲದ ಮರದ ಕೆಳಗಡೆ ಹಣತೆ ದೀಪವನ್ನು ಹಚ್ಚಿ, 108 ಬಗೆಯ ಹಣ್ಣುಗಳನ್ನು ಇರಿಸಿ, ಆಲದ ಮರದ ಸುತ್ತ 108 ಬಾರಿ ಸುತ್ತು ಬನ್ನಿ. ಹೀಗೆ ಸುತ್ತು ಬರುವಾಗ 8 ಬಾರಿ ಹಸಿ ನೂಲನ್ನು ಮರಕ್ಕೆ ಸುತ್ತಬೇಕು. ಪೂಜೆಯ ಬಳಿಹ ಹಣ್ಣುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ.
ಉದ್ಯೋಗ ತೊಂದರೆಗಳು ನೀಗಲು
ಸೋಮಾವತಿ ಅಮಾವಾಸ್ಯೆಯಂದು ನಿಂಬೆ ಹಣ್ಣನ್ನು 7 ಸುತ್ತು ನಿಮ್ಮ ತಲೆಗೆ ಸುತ್ತಿ ನಂತರ ಅದನ್ನು ನಾಲ್ಕು ಭಾಗಗಳನ್ನಾಗಿ ಕತ್ತರಿಸಿ, ನಾಲ್ಕು ದಿಕ್ಕಿಗೆ ಹಾಕಿ, ಹೀಗೆ ಮಾಡುವುದರಿಂದ ಉದ್ಯೋಗ ಅವಕಾಶಗಳು ಹುಡುಕಿ ಬರುವುದು.
ಮನೆಯ ಸಮೃದ್ಧಿ ಹೆಚ್ಚಾಗಲು
ಸೋಮಾವತಿ ಅಮಾವಾಸ್ಯೆಯ ಸಂಜೆ ಮನೆಯ ಈಶಾನ್ಯ ಮೂಲೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಆ ದೀಪದಲ್ಲಿ ಕೆಂಪು ಬಣ್ಣದ ದಾರದ ಬತ್ತಿಯನ್ನು ಹಾಕಿ ಅದರಲ್ಲಿ ಸ್ವಲ್ಪ ಕುಂಕುಮವನ್ನು ಹಾಕಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಹೀಗೆ ಮಾಡುವುದರಿಂದ ಮನೆಯ ಸಂಪತ್ತು ಹೆಚ್ಚಾಗುವುದು.
ದುಃಖ ದೂರಾಗಲು
ಸೋಮಾವತಿ ಅಮಾವಾಸ್ಯೆಯ ದಿನ ಗೋಧಿ ಹಿಟ್ಟಿನಲ್ಲಿ ಸ್ವಲ್ಪ ಸಕ್ಕರೆ ಬೆರೆಸಿ. ಅದನ್ನು ಕಪ್ಪು ಇರುವೆಗಳಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ, ಹೀಗೆ ಮಾಡುವುದರಿಂದ ದುಃಖ, ಸಂಕಟ ಇವೆಲ್ಲಾ ದೂರಾಗುವುದು.



Click it and Unblock the Notifications
