Latest Updates
-
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ!
ಮಂಡ್ಯದ ಚೆಲುವರಾಯ ಸ್ವಾಮಿ ದೇವಾಲಯ: ಇಲ್ಲಿ ಮುಸ್ಲಿಂ ರಾಜಕುಮಾರಿಯಾಗಿದ್ದ ಬಿಬಿ ನಾಚಿಯಾರ್‌ಗೆ ಪೂಜೆ ಸಲ್ಲಿಸಲಾಗುವುದು
ನಮ್ಮ ದೇಶದಲ್ಲಿ ಅದೆಷ್ಟೋ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯದ ಹಿಂದೆ ಒಂದೊಂದು ಐತಿಹಾಸಿಕ, ಪುರಾಣ ಕಥೆಗಳು ಇವೆ. ಲಕ್ಷಾಂತರ ಭಕ್ತಾದಿಗಳು ತಮ್ಮ ತಮ್ಮ ವಲಯದಲ್ಲಿ ಇರುವ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಇಲ್ಲಿಯೂ ಸಾವಿರಾರು ದೇವಾಲಯಗಳಿವೆ ಹಲವಾರು ದೇವರುಗಳನ್ನ ಈ ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ.
ಅದರಲ್ಲೂ ಕೆಲವು ದೇವಾಲಯಗಳಿಗಂತು ಎಷ್ಟು ಪ್ರಖ್ಯಾತಿ ಇರುತ್ತೆ ಅಂದರೆ ದೇಶ ವಿದೇಶಗಳಿಂದ ಆ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ದೇವರನ್ನ ನೋಡಿ ಕೃತಾರ್ಥರಾಗುವವರಿದ್ದಾರೆ. ಹೀಗೆ ದೇಶ ಮಾತ್ರವಲ್ಲದೆ ವಿದೇಶಿ ಭಕ್ತರನ್ನು ಹೊಂದಿರುವ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಚೆಲುವನಾರಾಯಣ ಸ್ವಾಮಿ ದೇವಾಲಯವೂ ಒಂದು.

ಚೆಲುವ ನಾರಾಯಣಸ್ವಾಮಿ ದೇವಾಲಯ:
ವೈಷ್ಣವರ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ಚೆಲುವನಾರಾಯಣ ಸ್ವಾಮಿ ದೇವಾಲಯ ಮಂಡ್ಯದ ಮೇಲುಕೋಟೆಯಲ್ಲಿದೆ. ಇದನ್ನು ದಕ್ಷಿಣ ಬದ್ರಿ ಎಂದೇ ಕರೆಯಲಾಗುತ್ತೆ. ಈ ಸ್ಥಳಕ್ಕೆ ಭೇಟಿ ನೀಡದೆ ಇದ್ದರೆ ಬದ್ರಿಯಾತ್ರೆ ಹೋದರೂ ಕೂಡ ಅದು ಅಪೂರ್ಣ ಎನ್ನುವ ನಂಬಿಕೆ ಇದೆ. ಚೆಲುವನಾರಾಯಣ ಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದು ಶ್ರೀ ರಾಮಾನುಜಾಚಾರ್ಯರು. ಇಲ್ಲಿರುವ ಚೆಲುವನಾರಾಯಣ ಸ್ವಾಮಿ ದೇವರನ್ನ ಶ್ರೀ ಕೃಷ್ಣ, ಬಲರಾಮ ಮೊದಲಾದ ದೇವರುಗಳು ಕೂಡ ಪೂಜೆ ಸಲ್ಲಿಸುತ್ತಿದ್ದರು ಎಂದು ಪುರಾಣಗಳ ನಂಬಿಕೆ. ಇದು ರಾಮಾನುಜಾಚಾರ್ಯರ ದೇವಾಲಯ ಎಂದೇ ಖ್ಯಾತಿ ಪಡೆದಿದೆ. ವೈಷ್ಣವ ಗುರು ಶ್ರೀ ರಾಮಾನುಜಾಚಾರ್ಯರು ಇಲ್ಲಿ ನಾರಾಯಣನ ವಿಗ್ರಹಕ್ಕೆ ಜೀವ ತುಂಬಿ ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನಲಾಗಿದೆ.
ಐತಿಹಾಸಿಕ ಹಿನ್ನೆಲೆ;
ಇನ್ನು ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಸ್ವಾಮಿಯ ಪ್ರತಿಷ್ಠಾಪನೆ ಆಗಿದ್ದು ಹೇಗೆ ಎನ್ನುವುದಕ್ಕೂ ಐತಿಹಾಸಿಕ ಕಥೆಗಳು ಇವೆ. ಒಮ್ಮೆ ಶ್ರೀ ರಾಮಾನುಜಾಚಾರ್ಯರಿಗೆ ಚೆಲುವನಾರಾಯಣ ಸ್ವಾಮಿ ಮೂರ್ತಿ ದೆಹಲಿಯ ಸುಲ್ತಾನನ ಬಳಿ ಇದೆ ಎಂಬುದು ತಿಳಿದು ಬರುತ್ತದೆ ಆ ಕೂಡಲೇ ಚೆಲುವನಾರಾಯಣ ಸ್ವಾಮಿಯ ವಿಗ್ರಹವನ್ನು ತರಲು ರಾಮಾನುಜಾಚಾರ್ಯರು ದೆಹಲಿಗೆ ಸುಲ್ತಾನನ ಆಸ್ಥಾನಕ್ಕೆ ಹೋಗುತ್ತಾರೆ. ನಾರಾಯಣನ ವಿಗ್ರಹ ಕೊಡಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತಾರೆ. ಆದರೆ ಅಹಂಕಾರಿಯಾಗಿದ್ದ ಸುಲ್ತಾನ ನೀನೇ ನಿನ್ನ ದೇವರನ್ನು ಕರೆ, ನಿನ್ನ ದೇವರಿಗೆ ನಿನ್ನ ಮೇಲೆ ಪ್ರೀತಿ ಇದ್ದರೆ ಅವನಾಗಿಯೆ ಬರುತ್ತಾನೆ ಎಂದು ಹೇಳುತ್ತಾನೆ. ಆಗ ರಾಮಾನುಜಾಚಾರ್ಯರು 'ಶೆಲ್ವ ಪಿಳೈ ವಾರೂಮ್ ಎನ್ರಿ' ಎಂದು ಪ್ರಾರ್ಥಿಸುತ್ತಾ ನಾರಾಯಣನ ಕುರಿತು ಹಾಡನ್ನು ಹಾಡುತ್ತಾರೆ. ಆಗ ಸುಲ್ತಾನನ ರಾಜಕುಮಾರಿ ಬಿಬಿ ನಾಚಿಯಾರ್ ಕೈಯಲ್ಲಿದ್ದ ನಾರಾಯಣನ ಮೂರ್ತಿ ರಾಮಾನುಜಾಚಾರ್ಯರ ಮಡಿಲಲ್ಲಿ ಬಂದು ಕುಳಿತುಕೊಳ್ಳುತ್ತದೆ.
ಸುಲ್ತಾನನ ರಾಜಕುಮಾರಿ ಬಿಬಿ ನಾಚಿಯಾರ್ ಆ ವಿಗ್ರಹವನ್ನು ಬಹಳ ಪ್ರೀತಿಸುತ್ತಿರುತ್ತಾಳೆ. ತನ್ನ ಬಳಿ ಈ ವಿಗ್ರಹ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂದು ರಾಮಾನುಜಾಚಾರ್ಯರನ್ನ ಹಿಂಬಾಲಿಸಿ ಮೇಲುಕೋಟೆಗೆ ಬರುತ್ತಾಳೆ. ನಂತರ ರಾಮಾನುಜಾಚಾರ್ಯರು ಶ್ರೀ ಚೆಲುವನಾರಾಯಣ ಸ್ವಾಮಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ನಾರಾಯಣನ ಪಾದದಲ್ಲಿ ಮುಸ್ಲಿಂ ರಾಜಕುಮಾರಿ ಬಿಬಿ ನಾಚಿಯಾರ್ ಲೀನಳಾಗುತ್ತಾಳೆ. ಆಕೆಯನ್ನು ಲಕ್ಷ್ಮಿಯ ಪ್ರತಿರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ಈಗಲೂ ಚೆಲುವನಾರಾಯಣ ಸ್ವಾಮಿ ದೇವರ ಮೂರ್ತಿಯ ಪಾದದಲ್ಲಿ ಬಿಬಿ ನಾಚಿಯಾರ್ ವಿಗ್ರಹವನ್ನು ಕೂಡ ಕಾಣಬಹುದು. ಇಲ್ಲಿ ಮುಸ್ಲಿಂ ರಾಜಕುಮಾರಿಯಾಗಿದ್ದ ಬಿಬಿ ನಾಚಿಯಾರ್ ಗೆ ಮೊದಲು ಪೂಜೆ ಸಲ್ಲಿಸಲಾಗಿತ್ತದೆ.
ವಾಸ್ತುಶಿಲ್ಪ: ಮೇಲುಕೋಟೆಯಲ್ಲಿರುವ ಚೆಲುವನಾರಾಯಣ ಸ್ವಾಮಿ ದೇವಾಲಯದ ಸೊಬಗನ್ನು ಎಷ್ಟು ಬಣ್ಣಿಸಿದರು ಸಾಲದು. ಇದು ಸುಮಾರು ಸಾವಿರ ವರ್ಷಗಳಿಗಿಂತ ಹಳೆಯ ದೇವಾಲಯ. ಇಲ್ಲಿನ ಕೆತ್ತನೆಗಳು, ಕಲ್ಲಿನ ಮಂಟಪ, ಕಲ್ಲಿನಿಂದ ಕಟ್ಟಿದ ಪುಷ್ಕರಣಿ ಎಲ್ಲವೂ ಭಕ್ತಾದಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಈ ದೇವಾಲಯದಲ್ಲಿ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು. ದೇವಾಲಯದ ಮುಖ್ಯ ಮೆಟ್ಟಿಲುಗಳ ಅಕ್ಕ-ಪಕ್ಕದಲ್ಲಿ ಪಂಚ ಕಲ್ಯಾಣಿ ಕೂಡ ಕಾಣಿಸುತ್ತದೆ. ಭಾವಿಯ ಆಕಾರದಲ್ಲಿ ಇರುವ ಭುವನೇಶ್ವರಿ ಮಂಟಪ ಕೂಡ ಬಹಳ ಆಕರ್ಷಣೀಯವಾಗಿ ಕೆತ್ತನೆ ಮಾಡಲಾಗಿದೆ.
ಮೈಸೂರು ಅರಮನೆಯ ಆರಾಧ್ಯ ದೈವ: ಮೈಸೂರಿನ ಒಡೆಯರಾದ ರಾಜ ಒಡೆಯರ್ ಚೆಲುವ ನಾರಾಯಣ ಸ್ವಾಮಿಯ ಅಪ್ಪಟ ಭಕ್ತರು. ಈ ದೇವಾಲಯದಲ್ಲಿ ಒಂದೂವರೆ ಅಡಿ ಎತ್ತರದ ರಾಜ ಒಡೆಯರ್ ಅವರ ಮೂರ್ತಿ ಯನ್ನು ಕೂಡ ಕೆತ್ತಲಾಗಿದೆ. ದಂತ ಕಥೆಯ ಪ್ರಕಾರ ರಾಜ ಒಡೆಯರ್ ಅವರು ಮರಣಿಸಿದ ನಂತರ ಭಗವಂತನ ಪಾದದಲ್ಲಿ ಲೀನರಾದರು ಅದಾದ ನಂತರ ಅವರು ಕಾಣಿಸಿಕೊಳ್ಳಲೇ ಇಲ್ಲ ಎಂದು ಹೇಳಲಾಗುತ್ತದೆ.
ಉತ್ಸವ ಪ್ರಸಾದ; ಮೇಲುಕೋಟೆಯಲ್ಲಿ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಬ್ರಹ್ಮ ಮಹೋತ್ಸವ ನಡೆಸಲಾಗುತ್ತದೆ. ಬಹಳ ಅದ್ದೂರಿಯಾಗಿ ನಡೆಸಲಾಗುವ ಈ ಉತ್ಸವದಲ್ಲಿ ದೇವರಿಗೆ ವಜ್ರ ಕಿರೀಟ ಧಾರಣೆ ಮಾಡಲಾಗುತ್ತದೆ. ಇನ್ನು ಮೇಲುಕೋಟೆಯ ಪುಳಿಯೋಗರೆ ಪ್ರಸಾದ ತುಂಬಾನೇ ಫೇಮಸ್. ಅಯ್ಯಂಗಾರ್ ಪುಳಿಯೋಗರೆ ಎಂದು ಕೇಳಿರುತ್ತೀರಿ. ಅದರ ಆರಂಭ ಇಲ್ಲಿಂದಲೇ ಆಗಿದ್ದು. ಮೈಸೂರಿನ ರಾಜ ಮನೆತನದಿಂದ ಸಮೃದ್ಧವಾಗಿದ್ದ ಈ ದೇವಾಲಯವನ್ನು ನಂತರ ಮೇಲುಕೋಟೆ ಬ್ರಾಹ್ಮಣರಿಗೆ ಹಸ್ತಾಂತರಿಸಲಾಗಿದೆ. ಚೆಲುವ ನಾರಾಯಣ ಸ್ವಾಮಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಒಮ್ಮೆಯಾದರೂ ಮೇಲುಕೋಟೆಗೆ ಹೋಗಲೇಬೇಕು.



Click it and Unblock the Notifications