Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Shravan : ಶ್ರಾವಣ ಮಾಸದಲ್ಲಿ ಈ 5 ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟವೋ ಅದೃಷ್ಟ!
ಶ್ರಾವಣ ಮಾಸ ಹಿಂದೂಗಳಿಗೆ ವಿಶೇಷ ಮಾಸ. ಈ ತಿಂಗಳನ್ನು ಶಿವನಿಗೆ ಅರ್ಪಣೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಭಕ್ತಾದಿಗಳು ಶಿವನಿಗಾಗಿ ವಿಶೇಷ ಪೂಜೆಯನ್ನು ಅರ್ಪಣೆ ಮಾಡೋದಲ್ಲದೇ, ಮಹಾದೇವನನ್ನು ಒಲಿಸಿಕೊಳ್ಳೋದಕ್ಕೆ ನಾನಾ ರೀತಿಯ ಉಪವಾಸ ವ್ರತಗಳನ್ನೂ ಕೂಡ ಮಾಡಲಾಗುತ್ತದೆ. ನಂಬಿಕೆಗಳ ಪ್ರಕಾರ ಯಾರು ಶಿವನನ್ನು ಭಕ್ತಿಯಿಂದ ಪೂಜಿಸ್ತಾರೋ ಅವರ ಜೀವನದಲ್ಲಿ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಪ್ರಾಪ್ತಿಯಾಗುತ್ತಂತೆ.
ಇನ್ನೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿದ್ರೆ ಈ ಸಮಯದಲ್ಲಿ ಶಿವನ ಜೊತೆಗೆ ಪಾರ್ವತಿಯನ್ನು ಪೂಜಿಸಿದ್ರೆ ಆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಂತೆ. ಇನ್ನೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸ ಪವಿತ್ರವಾದ ತಿಂಗಳಾಗಿದ್ದು, ಈ ತಿಂಗಳಿನಲ್ಲಿ ಕೆಲ ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಸಮೃದ್ಧಿ ಹೆಚ್ಚಾಗುತ್ತಂತೆ. ಹಾಗಾದ್ರೆ ಆ ವಸ್ತುಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಢಮರುಗ
ಮಹಾದೇವ ತನ್ನ ಪ್ರಿಯ ವಾದ್ಯವಾದ ಢಮರುಗವನ್ನು ಯಾವಾಗಲೂ ಕೈಯಲ್ಲಿಯೇ ಹಿಡಿದಿರುತ್ತಾನೆ. ಇದರ ಶಬ್ಧದಿಂದ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತಂತೆ. ಅಷ್ಟೇ ಅಲ್ಲ, ಇದರ ಶಬ್ಧದಿಂದ ಮಾನಸಿಕ ಒತ್ತಡವನ್ನು ನಿವಾರಿಸೋದು ಮಾತ್ರವಲ್ಲದೇ ನಮ್ಮ ಮನಸ್ಸು ಶಾಂತಗೊಳ್ಳುತ್ತಂತೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದ ಸೋಮವಾರದಂದು ಡಮರುವನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುತ್ತಂತೆ.
2. ಬಿಲ್ವಪತ್ರೆ
ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಇದರ ಹೊರತಾಗಿ ಶಿವನ ಪೂಜೆಯು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಶಿವನಿಗೆ ಇದನ್ನು ಅರ್ಪಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತಂತೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಜೀವನದಲ್ಲಿ ಇನ್ಯಾವುದೇ ಸಮಸ್ಯೆಗಳು ಇದ್ದರೆ ಶಿವನಿಗೆ ಬಿಲ್ವಪತ್ರೆ ಅರ್ಪಿಸೋದ್ರಿಂದ ಸಮಸ್ಯೆಗಳು ನೆರವೇರುತ್ತಂತೆ.
3. ಬೆಳ್ಳಿಯ ತ್ರಿಶೂಲ
ಹಿಂದೂ ಧರ್ಮದಲ್ಲಿ ತ್ರಿಶೂಲವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬೆಳ್ಳಿ ತ್ರಿಶೂಲವನ್ನು ಸೋಮವಾರದಂದು ಮನೆಗೆ ತಂದರೆ ಮನೆಯ ಎಲ್ಲಾ ಋಣಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ. ಒಂದು ವೇಳೆ ಬೆಳ್ಳಿಯ ತ್ರಿಶೂಲವನ್ನು ಖರೀದಿಸಲು ಸಾಧ್ಯವಾಗದಿದ್ದರೆ ತಾಮ್ರದ ತ್ರಿಶೂಲವನ್ನು ಕೂಡ ಖರೀದಿಸಬಹುದು. ಬೆಳ್ಳಿಯ ತ್ರಿಶೂಲ ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ. ಜೊತೆಗೆ ಯಾವುದೇ ಹಣಕಾಸಿನ ತೊಂದರೆಗಳು ಎದುರಾಗೋದಿಲ್ಲ.
4. ರುದ್ರಾಕ್ಷಿ
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ದೇವರನ್ನು ಕುರಿತು ಪೂಜೆ ಮಾಡುವಾಗ ರುದ್ರಾಕ್ಷಿ ಮಣಿಯನ್ನು ಹಿಡಿದು ಜಪ ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿಯನ್ನು ಮನೆಗೆ ತಂದರೆ ತುಂಬಾನೇ ಒಳ್ಳೆಯದು. ಆ ವ್ಯಕ್ತಿಯ ಅದೃಷ್ವೇ ಬದಲಾಗುತ್ತಂತೆ. ಆ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತಂತೆ.
ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೆಯೋ ಅವರ ಜೀವನದಲ್ಲಿ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಕೌಟುಂಬಿಕ ಕಲಹಗಳಿದ್ದರೆ ಅವುಗಳೆಲ್ಲಾ ನಿವಾರಣೆಯಾಗುತ್ತಂತೆ. ಅಷ್ಟೇ ಅಲ್ಲ, ರುದ್ರಾಕ್ಷಿ ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ.
5. ಭಸ್ಮ
ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಭಸ್ಮ ಕೂಡ ಒಂದು ಅಂತ ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಭಸ್ಮವನ್ನು ದೇವಸ್ಥಾನದಲ್ಲಿ ಇಡುವುದರಿಂದ ಶ್ರೇಯಸ್ಸು ಹೆಚ್ಚಾಗುತ್ತಂತೆ. ನೀವು ಶಿವನ ವಿಗ್ರಹದ ಜೊತೆಗೆ ಭಸ್ಮವನ್ನು ಇಟ್ಟರೆ ಶಿವನು ಪ್ರಸನ್ನನಾಗುತ್ತಾನಂತೆ. ಹಾಗೂ ನಮ್ಮ ಜೀವನದಲ್ಲಿ ಎದುರಾಗಿದ್ದ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ, ಸಂಪತ್ತು ಮತ್ತು ಸಮೃದ್ಧಿ ಕೂಡ ಹೆಚ್ಚಾಗುತ್ತದೆ.
ಶ್ರಾವಣ ಮಾಸದಲ್ಲಿ ಈ ಐದು ವಸ್ತುಗಳನ್ನು ಮನೆಗೆ ತರುವುದು ಶುಭಕರ ಎಂದು ಪರಿಗಣಿಸಲಾಗಿದೆ. ನಿಮಗೆ ಆರ್ಥಿಕ ಸಮಸ್ಯೆಯಿಂದ ಹಿಡಿದು ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ.



Click it and Unblock the Notifications
