Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಸಂಸಪ್ತಕ ಯೋಗದಿಂದಾಗಿ ಅಶುಭ ಫಲ: ಆಗಸ್ಟ್ 18ರವರೆಗೆ ಈ 5 ರಾಶಿಯವರು ಜಾಗ್ರತೆವಹಿಸಿ
ಜುಲೈ 1ಕ್ಕೆ ಮಂಗಳ 02:37 ಕ್ಕೆ ಸಿಂಹ ರಾಶಿಗೆ ಪ್ರವೇಶಿಸಿದೆ. ಆಗಸ್ಟ್ 18ರವರೆಗೆ ಮಂಗಳ ಇದೇ ರಾಶಿಯಲ್ಲಿಯೇ ಇರಲಿದೆ. ಸಿಂಹ ರಾಶಿಯಲ್ಲಿ ಮಂಗಳನ ಉಪಸ್ಥಿತಿ ಮತ್ತು ಕುಂಭದಲ್ಲಿ ಶನಿಯ ಉಪಸ್ಥಿತಿಯು ಸಂಸಪ್ತಕ ಯೋಗವನ್ನು ಉಂಟು ಮಾಡಿದೆ. ವೈದಿಕ ಶಾಸ್ತ್ರದ ಪ್ರಕಾರ ಸಂಸಪ್ತಕ ಯೋಗದಿಂದ ಧನಹಾನಿ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗಬಹುದು.
ಯಾವುದೇ ಎರಡು ಗ್ರಹಗಳು ಪರಸ್ಪರ ಏಳನೇ ಸ್ಥಾನದಲ್ಲಿದ್ದರೆ ಆವಾಗ ಸಂಸಪ್ತಕ ಯೋಗ ಉಂಟಾಗುವುದು. ಮಂಗಳವು ಸಿಂಹ ರಾಶಿಯಲ್ಲಿದ್ದಾಗ ಆಗ ಶನಿಯು ಕುಂಭ ರಾಶಿಯಲ್ಲಿರುತ್ತಾನೆ. ಈ ಎರಡೂ ರಾಶಿಗಳು ಪರಸ್ಪರ ಏಳನೇ ಸ್ಥಾನದಲ್ಲಿವೆ. ಇದರಿಂದ ಸಂಸಪ್ತಕ ಯೋಗ ಉಂಟಾಗಿದೆ. ಈ ಸಂಸಪ್ತಕ ಯೋಗ ಅಶುಭ ಫಲ ನೀಡಲಿದೆ ಇದರಿಂದ ಪ್ರಕೃತಿ ವಿಕೋಪ ಸಂಭವಿಸಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳಿದೆ.

ಕೆಲವು ಕಡೆ ಪ್ರಳಯ ಇನ್ನು ಕೆಲವು ಕಡೆ ಮಳೆಗೆ ಅಭಾವ, ಭೂಕಂಪನ, ರಾಜ್ಯ ರಾಜ್ಯಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ ಎಂದು ಭವಿಷ್ಯ ಹೇಳಲಾಗಿತ್ತು. ಅದರಂತೆ ಈಗಾಗಲೇ ದೇಶದಲ್ಲಿ ಹಲವು ಕಡೆ ಪ್ರಳಯ, ಇನ್ನು ಕೆಲವು ಕಡೆ ಮಳೆಯೇ ಇಲ್ಲ, ದೇಶದಲ್ಲಿ ಕೆಲವು ಕಡೆ ಉದ್ವಿಗ್ನ ಪರಿಸ್ಥಿತಿ ಎಲ್ಲವೂ ಕಂಡು ಬರುತ್ತಿದೆ.
ಸಂಸಪ್ತಕ ಯೋಗವಿರುವಾಗ ಈ 5 ರಾಶಿಯವರು ಎಚ್ಚರಿಕೆವಹಿಸಬೇಕಾಗಿದೆ:
ಮೇಷ ರಾಶಿ:
ಮಂಗಳ ಮತ್ತು ಶನಿಗ್ರಹದಿಂದ ರೂಪುಗೊಂಡ ಸಂಸಪ್ತಕ ಯೋಗದಿಂದ ಮೇಷ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು. ವಾಹನ ಅಪಘಾತವಾಗುವ ಸಂಭವವಿದ್ದು, ಎಚ್ಚರಿಕೆಯಿಂದ ಚಾಲನೆ ಮಾಡಿ. ಪ್ರೇಮ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಂಡು ಬರಲಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಕಡೆ ಗಮನಹರಿಸಬೇಕು.
ಕರ್ಕ ರಾಶಿ: ಸಂಸಪ್ತಕ ಯೋಗದಿಂದಾಗಿ ಆಗಸ್ಟ್ 18 ರವರೆಗೆ ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಈ ಅವಧಿಯಲ್ಲಿ ಮಾತಿನ ಮೇಲೆ ಹಿಡಿತವಿರಬೇಕು. ಉದ್ಯೋಗದಲ್ಲಿರುವವರು, ವ್ಯಾಪಾರ ಮಾಡುವವರು ಈ ಅವಧಿಯಲ್ಲಿ ಜಾಗ್ರತೆವಹಿಸಬೇಕು.
ಕನ್ಯಾ ರಾಶಿ:
ಕನ್ಯಾ ರಾಶಿಯವರು ಈ ಸಮಯದಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು , ಇಲ್ಲವಾದಲ್ಲಿ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಯಾವುದೇ ಹೂಡಿಕೆಯನ್ನು ಬುದ್ಧಿವಂತಿಕೆಯಿಂದ ಮಾಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಮಕರ ರಾಶಿ:
ಸಂಸಪ್ತಕ ಯೋಗದಿಂದಾಗಿ ಮಕರ ರಾಶಿಯವರು ಎಚ್ಚರಿಕೆ ವಹಿಸಬೇಕು. ಈ ಸಮಯದಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಕೌಟುಂಬಿಕ ಕಲಹದಿಂದ ಮನಸ್ಸು ಒತ್ತಡಕ್ಕೆ ಒಳಗಾಗಬಹುದು. ಈ ಸಮಯದಲ್ಲಿ ಆದಾಯಕ್ಕಿಂತ ಅಧಿಕ ಖರ್ಚು ಬರಲಿದೆ.
ಮೀನ ರಾಶಿ:
ಉದ್ಯೋಗಿಗಳಿಗೆ ಸವಾಲಿನ ಸಮಯ ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದಿಲ್ಲ. ಈ ಅವಧಿಯಲ್ಲಿ ನೀವು ನಿಮ್ಮ ವ್ಯಕ್ತಿತ್ವಕ್ಕೆ ಹಾನಿಯುಂಟಾಗದಂತೆ ಎಚ್ಚರವಹಿಸಿ.



Click it and Unblock the Notifications