Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಮಹಿಳೆಯರು ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಿದ್ದೀರಾ? ಈ ವಿಚಾರ ಗೊತ್ತಿರಲಿ
ರುದ್ರಾಕ್ಷಿ ಅಂದ ತಕ್ಷಣ ನಮಗೆ ನೆನಪಾಗೋದು ಶಿವ. ಆ ಮಹಾದೇವನ ಕೊರಳಲ್ಲಿ ರುದ್ರಾಕ್ಷಿ ಮಾಲೆ ಇದ್ದೇ ಇರುತ್ತದೆ. ಸಾಧು, ಸಂತರು ಕೂಡ ಸಾಮಾನ್ಯವಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಾರೆ. ಆದ್ರೆ ಇತ್ತೀಚಿಗೆ ಸಾಮಾನ್ಯ ಜನರು ಕೂಡ ಇದನ್ನು ಧರಿಸುತ್ತಾರೆ. ಮಹಿಳೆಯರಿಗೂ ಕೂಡ ರುದ್ರಾಕ್ಷಿ ಮಾಲೆಯನ್ನು ಧರಿಸುವ ಆಸಕ್ತಿ ಹೆಚ್ಚಾಗಿದೆ. ಅಷ್ಟಕ್ಕು ಮಹಿಳೆಯರು ರುದ್ರಾಕ್ಷಿ ಮಾಲೆಯನ್ನು ಧರಿಸಬಹುದಾ? ಇದನ್ನು ಧರಿಸುವಾಗ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು? ಇದರಿಂದ ಏನೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.
ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದಾ?
ರುದ್ರಾಕ್ಷಿಯನ್ನು ಧರಿಸೋದಕ್ಕೆ ಲಿಂಗ ಭೇದವಿಲ್ಲ. ಮಹಿಳೆಯರು ಹಾಗೂ ಪುರುಷರು ಯಾರೂ ಕೂಡ ರುದ್ರಾಕ್ಷಿಯನ್ನು ಧರಿಸಬಹುದು. ಆದರೆ ಕೆಲವೊಂದು ತಪ್ಪು ಕಲ್ಪನೆಗಳಿಂದಾಗಿ ಮಹಿಳೆಯರು ರುದ್ರಾಕ್ಷಿಯನ್ನು ಧರಿಸೋದಕ್ಕೆ ಹಿಂಜರಿಯುತ್ತಾರೆ. ಆದರೆ ಇಂತಹ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳಬೇಡಿ. ಮಾತೆ ಪಾರ್ವತಿಯೂ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಿದ್ದರಂತೆ.

ಪಾರ್ವತಿಗೂ ಹಾಗೂ ರುದ್ರಾಕ್ಷಿಗೂ ಇರುವ ಸಂಬಂಧ?
ಮಾತೆ ಪಾರ್ವತಿ ದೇವಿ ಶಿವನ ಕಣ್ಣುಗಳನ್ನು ಮುಚ್ಚಿದ್ದರಿಂದ ಇಡೀ ವಿಶ್ವವೇ ಕತ್ತಲಾಯಿತು. ತನ್ನ ಕಾರ್ಯಕ್ಕೆ ಪಶ್ಚಾತ್ತಾಪಪಟ್ಟ ಪಾರ್ವತಿಯು ರುದ್ರಾಕ್ಷಿ ಮಣಿಗಳನ್ನು ಧರಿಸಿ ಕಂಚಿಗೆ ಪ್ರಯಾಣ ಬೆಳೆಸಿದಳು. ಮಾತೆ ಪಾರ್ವತಿಯೇ ರುದ್ರಾಕ್ಷಿಯನ್ನು ಧರಿಸಿದ್ದರಿಂದ ಮಹಿಳೆಯರು ರುದ್ರಾಕ್ಷಿ ಧರಿಸಬಹುದು. ಯಾವುದೇ ತಪ್ಪಿಲ್ಲ ಅನ್ನೋ ಸ್ಪಷ್ಟ ವಿಚಾರ ನಮಗೆ ಗೊತ್ತಾಗುತ್ತದೆ.
ಮನಸ್ಸಿಗೆ ಶಾಂತಿ ಸಿಗುತ್ತಾ?
ಮಾತೇ ಪಾರ್ವತಿ ಮಾತ್ರವಲ್ಲ ಹಿಂದಿನ ಕಾಲದಲ್ಲಿ ಸ್ತ್ರಿ ತಪಸ್ವಿಗಳು ಕೂಡ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಿದ್ದರಂತೆ. ಇನ್ನೂ ಈ ಆಧುನಿಕ ಯುಗದಲ್ಲಿ ಮಾನಸಿಕ ಸಮಸ್ಯೆಗಳು ಮತ್ತು ಶಾಂತಿಯ ಹುಡುಕಾಟದಲ್ಲಿರುವವರು ರುದ್ರಾಕ್ಷಿಯನ್ನು ಧರಿಸಿದರೆ ಅವರು ಶಾಂತಿಯನ್ನು ಸಾಧಿಸಬಹುದಂತೆ. ಜೊತೆಗೆ ಅವರ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತಂತೆ. ಅಷ್ಟೇ ಅಲ್ಲ, ಅಜ್ಞಾನವನ್ನು ತೊಡೆದು ಹಾಕುವ ಶಕ್ತಿ ಕೂಡ ಈ ರುದ್ರಾಕ್ಷಿ ಮಾಲೆಗಿದೆ.
ರುದ್ರಾಕ್ಷಿ ಮಾಲೆಯನ್ನು ಧರಿಸುವ ಮೊದಲು ಈ ರೀತಿ ಮಾಡಿ :
* ಮೊದಲು ರುದ್ರಾಕ್ಷಿ ಮಾಲೆಯನ್ನು ನೀರಿನಿಂದ ತೊಳೆಯಿರಿ
* ಮಾಲೆಯನ್ನು ರಾತ್ರಿಯಿಡೀ ತುಪ್ಪದಲ್ಲಿ ಮುಳುಗಿಸಿ ಇಡಿ
* ನಂತರ ಇದನ್ನು ತೊಳೆದು 24 ಗಂಟೆಗಳ ಕಾಲ ಹಸುವಿನ ಹಾಲಿನಲ್ಲಿ ಮುಳುಗಿಸಿ ಇಡಿ
* ರುದ್ರಾಕ್ಷಿಗೆ ಪೂಜೆಯನ್ನು ಮಾಡಿ, ಶಿವ ಮಂತ್ರವನ್ನು ಪಠಿಸಿ ನಂತರ ಮಾರನೇ ದಿನ ಬೆಳಗ್ಗೆ ಇದನ್ನು ಧರಿಸಿ
* ಇನ್ನೂ ಹಸುವಿನ ಹಾಲು ಮತ್ತು ಹಸುವಿನ ತುಪ್ಪವನ್ನು ಖರೀದಿಸಲು ನಿಮ್ಮಿಂದ ಸಾಧ್ಯವಾಗದೇ ಇದ್ದರೆ ತೈಲವನ್ನೂ ಕೂಡ ಬಳಕೆ ಮಾಡಬಹುದು.
* ರುದ್ರಾಕ್ಷಿ ಮಾಲೆಯನ್ನು ನೆನೆಸಿಡಲು ಲೋಹಿಯ ಪಾತ್ರೆಗಳನ್ನೇ ಬಳಸಿ. ಗಾಜು ಅಥವಾ ಪ್ಲಾಸ್ಟಿಕ್ ಬಳಸೋದು ಬೇಡ
* ರುದ್ರಾಕ್ಷಿ ಮಾಲೆಯನ್ನು ಧರಿಸುವ ಮೊದಲು ಅದನ್ನು ಹಣೆಯ ಮೇಲೆ ಒತ್ತಿ ನಂತರ ಧರಿಸಿರಿ.
ಮಹಿಳೆಯರು ಋತುಚಕ್ರದ ಸಮಯದಲ್ಲಿ ರುದ್ರಾಕ್ಷಿ ಧರಿಸಬಹುದಾ?
ಮಹಿಳೆಯರು ಋತುಚಕ್ರದ ಸಮಯದಲ್ಲಿ ನೀವು ರುದ್ರಾಕ್ಷಿಯನ್ನು ಧರಿಸಬಹುದು. ರುದ್ರಾಕ್ಷಿದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ ಒಂದು ಹಾರ್ಮೋನುಗಳನ್ನು ಸಮತೋಲನಗೊಳಿಸುವ ಸಾಮರ್ಥ್ಯ. ರುದ್ರಾಕ್ಷಿ ಮಾಲೆಯು ಋತು ಚಕ್ರದ ಸಮಯದಲ್ಲಿ ಮುಟ್ಟಿನ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ.
ರುದ್ರಾಕ್ಷಿ ಮಾಲೆಯನ್ನು ಧರಿಸೋದ್ರಿಂದ ಏನೆಲ್ಲಾ ಪ್ರಯೋಜನಗಳಿದೆ?
* ರುದ್ರಾಕ್ಷಿ ಮಣಿ ನಿಮಗೆ ರಕ್ಷಣೆಯನ್ನು ನೀಡುತ್ತದೆ. ಹಾಗೂ ನಿಮ್ಮಲ್ಲಿರುವ ಋಣಾತ್ಮಕತೆಯನ್ನು ತೊಲಗಿಸುತ್ತದೆ
* ನಾವು ಸೇವಿಸುವ ಆಹಾರ, ನೀರು ಶುದ್ಧವಾಗಿದ್ಯಾ ಅಥವಾ ಅಶುದ್ಧವಾಗಿದ್ಯಾ ಅನ್ನೋದನ್ನು ತಿಳಿದುಕೊಳ್ಳಬಹುದು
* ರುದ್ರಾಕ್ಷಿಯು ಅತ್ಯಂತ ಶಕ್ತಿ ಶಾಲಿ ಹಾಗೂ ನಮ್ಮಲ್ಲಿ ಪ್ರತ್ಯೇಕತೆಯ ಭಾವನೆಯನ್ನು ಉಂಟು ಮಾಡುತ್ತದೆ.
* ರುದ್ರಾಕ್ಷಿಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೂ ನರ ಮಂಡಲವನ್ನು ಶಾಂತಗೊಳಿಸುತ್ತದೆ
* ರುದ್ರಾಕ್ಷಿಯನ್ನು ಧರಿಸೋದ್ರಿಂದ ನಿಮ್ಮ ಬುದ್ಧಿ ಚುರುಕಾಗುತ್ತದೆ. ಹಾಗೂ ನೀವು ಯಾವಾಗಲು ಜಾಗರೂಕರಾಗಿರುತ್ತೀರಿ
* ಮಕ್ಕಳಲ್ಲಿ ರುದ್ರಾಕ್ಷಿ ಮಣಿಯು ಗಮನ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ
* ರುದ್ರಾಕ್ಷಿ ಮಣಿಯನ್ನು ಧರಿಸೋದ್ರಿಂದ ಮನಸ್ಸು ಪರಿಶುದ್ಧವಾಗುತ್ತದೆ
* ಯೋಗ ಹಾಗೂ ಪ್ರಾರ್ಥನೆ ಮಾಡುವಾಗ ರುದ್ರಾಕ್ಷಿಯನ್ನು ಧರಿಸಬಹುದು
* ಚರ್ಮದ ಸಮಸ್ಯೆಯನ್ನು ರುದ್ರಾಕ್ಷಿಯಿಂದ ಹೋಗಲಾಡಿಸಬಹುದು
* ಕೀಲು ನೋವಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ
* ಕೆಮ್ಮು ಹಾಗೂ ಶೀತಕ್ಕೂ ಪರಿಹಾರವಿದೆ
ರುದ್ರಾಕ್ಷಿ ಮಾಲೆಯನ್ನು ಹಿರಿಯರ ಅಥವಾ ತಿಳಿದವರ ಮಾರ್ಗ ದರ್ಶನದ ಮೂಲಕ ಧರಿಸಿದರೆ ಒಳ್ಳೆಯದು. ಅಪ್ಪಿ- ತಪ್ಪಿಯೂ ಶೋಕಿಗಾಗಿ ಇದನ್ನು ಬಳಸೋದಕ್ಕೆ ಹೋಗಲೇಬೇಡಿ. ದೈವೀಕ ಅಂಶವಿರುವ ರುದ್ರಾಕ್ಷಿಗೆ ಅದರದ್ದೇ ಆದ ಪವಿತ್ರ ಗುಣಗಳಿದೆ.



Click it and Unblock the Notifications
