Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಯನಾಡಲ್ಲಿ ಭರದಿಂದ ಸಾಗಿದೆ ರಕ್ಷಣಾ ಕಾರ್ಯ: 6 ಗಂಟೆಯೊಳಗೆ ಸೇತುವೆ ನಿರ್ಮಾಣ..!
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಕೇರಳ ಹಾಗೂ ಕರಾವಳಿ ಭಾಗದಲ್ಲಿ ಭಾರೀ ಸಮಸ್ಯೆ ತಂದಿಟ್ಟಿದೆ. ಕೇರಳದಲ್ಲಿ ಉಂಟಾದ ಗುಡ್ಡ ಕುಸಿತ ನೂರಾರು ಮಂದಿಯನ್ನು ಬಲಿ ಪಡೆದುಕೊಂಡಿದೆ. ಈ ರೀತಿಯ ದುರಂತ ಕೇರಳ ಹಿಂದೆಂದೂ ಕಂಡಿರಲಿಲ್ಲ. ಪ್ರಕೃತಿಯ ಮುಂದೆ ಎಲ್ಲರು ಮಂಡಿಯೂರಬೇಕು ಎಂಬ ಸಂದೇಶ ರವಾನೆಯಾದಂತಿದೆ.
ಆದರೆ ಈಗ ಕೇರಳದ ವಯನಾಡಿನಲ್ಲಿ ಉಂಟಾದ ಭೀಕರ ದುರಂತದಲ್ಲಿ ಕರ್ನಾಟಕದವರೂ ಇದ್ದಾರೆ ಎಂದು ವರದಿಯಾಗಿತ್ತು. ಜೊತೆಗೆ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನೂರಾರು ಮಂದಿ ಎನ್‌ಡಿಆರ್‌ಎಫ್ ಸಿಬ್ಬಂದಿ ಮಣ್ಣಿನಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ.

ಆದರೆ ದ್ವೀಪದಂತಾಗಿರುವ ಪ್ರದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಸೇತುವೆಯೊಂದನ್ನು ರೆಡಿ ಮಾಡಲಾಗುತ್ತಿದ್ದು, ಈ ಸೇತುವೆಯ ನಿರ್ಮಾಣಗೊಂಡರೆ ರಕ್ಷಣಾ ಕಾರ್ಯ ಭರದಿಂದ ಸಾಗಲಿದೆ. ಈ ಸೇತುವೆ ಹಿಂದೆ ದೊಡ್ಡ ಇತಿಹಾಸದ ಕಥೆ ಅಡಗಿದೆ. ಇದು ಎರಡನೇ ಮಹಾಯುದ್ದದ ಸಮಯದಲ್ಲಿ ಮೊದಲ ಬಾರಿಗೆ ಬಳಸಲಾದ ಪೋರ್ಟಬಲ್ ಸೇತುವೆಯಂತೆ.
ಇದೇ ಸೇತುವೆಯನ್ನ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿತದ ಸ್ಥಳದಲ್ಲಿ ಜನರನ್ನು ರಕ್ಷಿಸಲು ಬಳಸಲಾಗುತ್ತದೆ. ಬೈಲಿ ಸೇತುವೆಗಳು ಎಂದು ಕರೆಯಲ್ಪಡುವ ಅಂತಹ ಸೇತುವೆಗಳನ್ನು ವಿಮಾನಗಳಲ್ಲೂ ರವಾನಿಸಲಾಗುತ್ತದೆ. ಇದನ್ನು ಮಡಚಿಡಬಹುದು, ಅಲ್ಲದೆ ತುಂಡು ತುಂಡುಗಳಾಗಿ ಬೇರ್ಪಡಿಸಲುಬಹುದು.
ಈ ಸೇತುವೆಯನ್ನ ದೆಹಲಿಯಿಂದ ಕೋಝಿಕ್ಕೋಡ್‌ಗೆ ತರಲಾಗುತ್ತಿದೆ. ಇದು ಸುಮಾರು 110 ಅಡಿ ಉದ್ದವಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಸೇತುವೆ ನಿರ್ಮಾಣಕ್ಕಾಗಿ ಬೇಕಾದ ಸಾಮಗ್ರಿಯನ್ನು ಬೆಂಗಳೂರಿನಿಂದ ತರಲಾಗುತ್ತಿದೆ. ಈ ಸೇತುವೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡರೆ ರಕ್ಷಣಾ ಕಾರ್ಯಕ್ಕೆ ಸಹಕಾರಿಯಾಗಲಿದೆ. ಈ ಸೇತವೆ ನಿರ್ಮಾಣಕ್ಕೆ 6 ಗಂಟೆಗಳು ಸಾಕು ಎಂದು ತಿಳಿದುಬಂದಿದೆ.
ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ ಸೇನಾ ತಂಡವು ಸೇತುವೆಯನ್ನು ನಿರ್ಮಿಸಲು ಪ್ರಾರಂಭಿಸಿದೆ ಮತ್ತು ಸಂಜೆಯೊಳಗೆ ಅದು ಪೂರ್ಣಗೊಳ್ಳಬಹುದು ಎಂದು ರಾಜ್ಯ ಸಚಿವ ಕೆ ರಾಜನ್ ಹೇಳಿದ್ದಾರೆ. ರಕ್ಷಣಾ ಕಾರ್ಯಕ್ಕೆ ಅಗೆಯುವ ಯಂತ್ರಗಳನ್ನು ನಿಯೋಜಿಸಬೇಕಾದ ಕಾರಣ ಸೇತುವೆಯು ನಿರ್ಣಾಯಕವಾಗಿದೆ ಎಂದು ಸಚಿವರು ಹೇಳಿದ್ದಾರೆ. ಸೇತುವೆಯ ಕೆಲವು ಭಾಗಗಳನ್ನು ಏರ್‌ಲಿಫ್ಟ್ ಮಾಡಲಾಗಿದೆ ಮತ್ತು ಇತರ ಘಟಕಗಳನ್ನು ರಸ್ತೆಯ ಮೂಲಕ ವಯನಾಡಿಗೆ ತರಲಾಗುತ್ತಿದೆ.
ಬೈಲಿ ಸೇತುವೆ ಎಂದರೇನು?
1940-41ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರು ಬೈಲಿ ಸೇತುವೆಗಳನ್ನು ಅಭಿವೃದ್ಧಿಪಡಿಸಿದ್ದರು. ಈ ಟ್ರಸ್ ಸೇತುವೆಗಳನ್ನು ಜೋಡಿಸಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿರುವುದಿಲ್ಲ ಹೀಗಾಗಿ ಕೆಲವೇ ಗಂಟೆಯಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗುತ್ತದೆ.
ಬೈಲಿ ಸೇತುವೆಗಳಿಗೆ ಡೊನಾಲ್ಡ್ ಬೈಲಿ ಹೆಸರಿಡಲಾಗಿದೆ, ಈತ ಮೊಟ್ಟ ಮೊದಲ ಬಾರಿಗೆ ಇದರ ಮಾದರಿ ತಯಾರಿಸಿದ್ದನಂತೆ, ಆಧರೆ ಅದನ್ನು ನಿರಾಕರಿಸಲಾಗಿತ್ತು, ಆದ್ರೆ ಆತ ಸುಮ್ಮನಾಗದೆ ಈ ಸೆತುವೆಯನ್ನ ಮತ್ತಷ್ಟು ಅಭಿವೃದ್ಧಿಪಡಿಸಿದ. ಬೈಲಿಯವರ ಪ್ರಸ್ತಾಪವನ್ನು ಅಂತಿಮವಾಗಿ ಅಂಗೀಕರಿಸಲಾಯಿತು, ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಿರ್ಮಿಸಲಾದ ಕೆಲವು ಬೈಲಿ ಸೇತುವೆಗಳು ಟ್ಯಾಂಕ್‌ಗಳ ಭಾರವನ್ನು ಸಹ ತಡೆಯಬಲ್ಲ ಶಕ್ತಿ ಹೊಂದಿದ್ದವು. ಹೀಗಾಗಿ ಈ ಸೇತುವೆ ಆತನ ಹೆಸರನ್ನೇ ಇಟ್ಟು ಎಲ್ಲಾ ಕಡೆಗಳಲ್ಲಿ ಬಳಸಲಾಗಿತ್ತು.
ಆರಾಮವಾಗಿ ಇದನ್ನು ಸಾಗಿಸುವ ಉದ್ದೇಶದಿಂದ ಬ್ರಿಟಿಷರು ತಮ್ಮೊಡನೆ ಈ ಸೇತುವೆಯನ್ನೂ ಕೊಂಡೊಯ್ಯುತ್ತಿದ್ದರು. ಈಗ ಇದೇ ಸೇತಿವೆ ವಯನಾಡಿಗೂ ಬರುತ್ತಿದೆ.
ವಯನಾಡಿನಲ್ಲಿ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 143ಕ್ಕೆ ಏರಿದೆ ಮತ್ತು ಸುಮಾರು 200 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಗಾಯಗೊಂಡವರ ಸಂಖ್ಯೆ 200 ದಾಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ಸಹ ಮುಂದುವರೆದಿದ್ದು, ರಕ್ಷಣಾ ಕಾರ್ಯವೂ ಸಹ ಭರದಿಂದ ಸಾಗುತ್ತಿದೆ.



Click it and Unblock the Notifications
