Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ಅಣ್ಣನ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ!
ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 30 ಮತ್ತು 31 ರಂದು ಆಚರಿಸಲಾಗುತ್ತಿದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟುತ್ತಾರೆ. ಅವರ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

ಅದಕ್ಕೆ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಮತ್ತು ರಕ್ಷಿಸುವ ಭರವಸೆ ನೀಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಉತ್ತಮ ಸಹೋದರ ಅನ್ನಿಸಿಕೊಳ್ತಾರಂತೆ. ಅಷ್ಟಕ್ಕೂ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ವೈದಿಕ ಜ್ಯೋತಿಷ್ಯದ ಪ್ರಕಾರ ವೃಷಭ ರಾಶಿಯವರು ತುಂಬಾನೇ ಪ್ರಾಮಾಣಿಕರು ಮತ್ತು ನಿಷ್ಠಾವಂತರು. ಅವರು ತಮ್ಮ ನಿಷ್ಠೆಗೆ ಹೆಸರುವಾಸಿಯಾಗಿರುತ್ತಾರೆ. ಅದು ಅವರನ್ನು ಉತ್ತಮ ಸಹೋದರನನ್ನಾಗಿ ಮಾಡುತ್ತದೆ. ಈ ರಾಶಿಯವರು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಎಂತಹದ್ದೇ ಕಷ್ಟಗಳು ಎದುರಾದರೂ ಅವರು ಯಾವಾಗಲೂ ತಮ್ಮ ಸಹೋದರಿಯರ ಜೊತೆಗಿರುತ್ತಾರೆ. ವೃಷಭ ರಾಶಿಯ ಸಹೋದರರು ತಮ್ಮ ಸಹೋದರಿಯರನ್ನು ಎಂತಹ ಸಂದರ್ಭದಲ್ಲೂ ಕೈ ಬಿಡುವುದಿಲ್ಲ.
ಮೇಷ ರಾಶಿ
ಮೇಷ ರಾಶಿಯವರು ಉತ್ತಮ ಅಣ್ಣನಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾರೆ. ಅವರು ತಮ್ಮ ಸಹೋದರಿ ಅಥವಾ ಸಹೋದರನನ್ನು ಎಂದಿಗೂ ಒಂಟಿಯಾಗಿ ಇರಲು ಬಿಡುವುದಿಲ್ಲ. ಕಠಿಣ ಸಮಯದಲ್ಲೂ ಕೂಡ ಅವರು ತಮ್ಮ ಒಡಹುಟ್ಟಿದವರನ್ನು ಹುರಿದುಂಬಿಸುತ್ತಾರೆ. ಅವರು ತೊಂದರೆಗಳನ್ನು ಎದುರಿಸುತ್ತಿದ್ದರೆ ಅದರಿಂದ ಹೊರ ಬರಲು ಸಹಾಯ ಮಾಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯ ಸಹೋದರರು ತಂಗಿಯ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತಾರೆ. ಜೀವನದಲ್ಲಿ ಕೆಲವೊಮ್ಮೆ ನೀವು ನಿರಾಶೆ ಅನುಭವಿಸುತ್ತಿದ್ದರೆ ಅಥವಾ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಕಷ್ಟವಾಗಿದ್ದರೆ ತುಲಾ ರಾಶಿಯ ಸಹೋದರರಿಂದ ಸಲಹೆ ಪಡೆಯುವುದು ಉತ್ತಮ. ತುಲಾ ರಾಶಿಯ ಸಹೋದರರು ಸರಿಯಾದ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಮತ್ತು ಮುಂಬರುವ ನಷ್ಟಗಳನ್ನು ನಿಭಾಯಿಸಲು ಸಹಾಯ ಮಾಡುತ್ತಾರೆ.
ಧನು ರಾಶಿ
ಧನು ರಾಶಿಯ ಸಹೋದರರು ತುಂಬಾ ಧೈರ್ಯಶಾಲಿಗಳು. ಧನು ರಾಶಿ ಸಹೋದರರರು ತಮ್ಮ ಸಹೋದರಿ ಯಾವತ್ತಿಗೂ ಬೇಸರ ಅಥವಾ ಒಂಟಿತನವನ್ನು ಅನುಭವಿಸಲು ಅವಕಾಶ ನೀಡುವುದಿಲ್ಲ. ಕೆಟ್ಟ ಸಮಯದಲ್ಲೂ ನಿಮ್ಮನ್ನು ರಂಜಿಸುವ ಮೂಲಕ ನಿಮ್ಮನ್ನು ಸಂತೋಷಪಡಿಸುವ ಸಾಮರ್ಥ್ಯವನ್ನು ಅವರು ಹೊಂದಿರುತ್ತಾರೆ.
ಮಕರ ರಾಶಿ
ಮಕರ ರಾಶಿಯ ಸಹೋದರರಿಂದ ಅವರ ಸಹೋದರಿಯರ ಜೇಬುಗಳು ಎಂದಿಗೂ ಖಾಲಿಯಾಗುವುದಿಲ್ಲ. ಮತ್ತು ಅವರನ್ನು ಸಂತೋಷವಾಗಿಡಲು ಅವನು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಾನೆ. ಸಹೋದರಿಯರ ಒಂದು ಬೇಡಿಕೆ ಮೇರೆಗೆ ಅವರ ಬೇಡಿಕೆಗಳನ್ನು ಪೂರೈಸುತ್ತಾರೆ.



Click it and Unblock the Notifications