Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಶನಿ, ರಾಹು, ಕೇತು ವಕ್ರೀಯ ಚಲನೆ: ಈ ಮೂರು ಗ್ರಹಗಳ ಋಣಾತ್ಮಕ ಪರಿಣಾಮ ತಡೆಗಟ್ಟಲು ಲಾಲ್ ಕಿತಾಬ್ ಪರಿಹಾರ
ವೈದಿಕ ಜ್ಯೋತಿಷ್ಯದ ಪ್ರಕಾರ ಯಾವ ವ್ಯಕ್ತಿಯಲ್ಲಿ ಶನಿ, ರಾಹು, ಕೇತು ದೋಷವಿರುತ್ತದೋ ಆ ವ್ಯಕ್ತಿ ತುಂಬಾನೇ ಕಷ್ಟಪಡಬೇಕಾಗುವುದು. ಕೆಲವರಿಗೆ ಆರೋಗ್ಯ ಸಮಸ್ಯೆ, ಇನ್ನು ಕೆಲವರಿಗೆ ಕುಟುಂಬದಲ್ಲಿ ಸಮಸ್ಯೆ, ಬ್ಯುಸ್‌ನೆಸ್‌ನಲ್ಲಿ ಲಾಸ್ ಹೀಗೆ ಅನೇಕ ಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಈ ತ್ರಿಗ್ರಹಗಳ ದೋಷವಿದ್ದರೆ ತುಂಬಾನೇ ಕಷ್ಟ ಅನುಭವಿಸಬೇಕಾಗುವುದು.
ಶನಿಯು ಜೂನ್ 17ಕ್ಕೆ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುವುದು, ಅದರ ಜೊತೆ ರಾಹು ಮತ್ತು ಕೇತು ಕೂಡ ಹಿಮ್ಮುಖ ಚಲನೆ ಮಾಡಲಿದೆ. ಈ ಅವಧಿ ಕೆಲವೊಂದು ರಾಶಿಗಳ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ. ಈ ಸಮಯದಲ್ಲಿ ಕರ್ಕ ರಾಶಿಯವರು, ಸಿಂಹ ರಾಶಿಯವರು, ವೃಶ್ಚಿಕರಾಶಿ ಹಾಗೂ ಮೀನ ರಾಶಿಯವರು ತಮ್ಮ ಬದುಕಿನಲ್ಲಿ ಈ ಮೂರು ಗ್ರಹಗಳ ದೋಷದಿಂದಾಗಿ ಅಧಿಕ ಸಮಸ್ಯೆ ಎದುರಿಸಬೇಕಾಗುವುದು. ಲಾಲ್ ಕಿತಾಬ್‌ನಲ್ಲಿ ಈ ಮೂರು ಗ್ರಹಗಳ ಋಣಾತ್ಮಕ ಪ್ರಭಾವ ತೆಗೆದುಹಾಕಲು ಪರಿಹಾರ ಹೇಳಲಾಗಿದೆ ನೋಡಿ:

ರಾಹುವಿನ ಋಣಾತ್ಮಕ ಪ್ರಭಾವವಿದ್ದಾಗ:
ಈ ಅವಧಿಯಲ್ಲಿ ಅಪಘಾತದ ಸಾಧ್ಯತೆ ಹೆಚ್ಚು, ಅಲ್ಲದೆ ಒಂದು ರಿತಿಯ ಭಯ, ತಪ್ಪು ತಿಳುವಳಿಕೆ ಇರುವುದು. ಅಲ್ಲದೆ ರಾಹು ದೋಷದಿಂದಾಗಿ ಮೋಸಗಾರರು, ವಂಚಕರು ಆಗುವ ಸಾಧ್ಯತೆ ಇದೆ. ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು.
ಕೇತುವಿನ ಋಣಾತ್ಮಕ ಪ್ರಭಾವವಿದ್ದಾಗ
ಕೇತುವಿನ ಋಣಾತ್ಮಕ ಪ್ರಭಾವ ವ್ಯಕ್ತಿ ಮೇಲೆ ಇದ್ದಾಗ ನಾಲಗೆ ಮತ್ತು ಮನಸ್ಸು ಎರಡೂ ಶುದ್ಧವಾಗಿರಲ್ಲ. ವ್ಯಕ್ತಿಯ ಉದ್ಯೋಗದ ಮೇಲೆ ಋಣಾತ್ಮಕ ಪ್ರಭಾವ ಬೀರುವುದು, ವ್ಯವಹಾರ, ಉದ್ಯಮದಲ್ಲಿ ನಷ್ಟ ಉಂಟಾಗುವುದು. ಇದರ ಜೊತೆಗೆ ಮೂತ್ರ ಸೋಂಕು, ಮೈಕೈ ನೋವು, ಮಕ್ಕಳಿಲ್ಲದಿರುವ ಸಮಸ್ಯೆ ಈ ಬಗೆಯ ತೊಂದರೆಗಳು ಕಂಡು ಬರುವುದು.
ಶನಿಯ ಋಣಾತ್ಮಕ ಪ್ರಭಾವವಿದ್ಧಾಗ
ಅನೈತಿಕ ಸಬಂಧದ ಕಡೆಗೆ ಆಸಕ್ತಿ ಬೆಳೆಸಬಹುದು, ವ್ಯವಹಾರದಲ್ಲಿ ಆಸಕ್ತಿ ಕಡಿಮೆಯಾಗುವುದು, ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಇರಲ್ಲ, ಮನೆಯಲ್ಲಿ ಸದಾ ಜಗಳ, ಸಾಲದ ಬಾಧೆ, ಮೋಸ, ವಂಚನೆ ಈ ರೀತಿಯೆಲ್ಲಾ ಉಂಟಾಗುವುದು.
ಶನಿ, ರಾಹು, ಕೇತು ದೋಷಕ್ಕೆ ಲಾಲ್ ಕಿತಾಬ್ ಪರಿಹಾರವೇನು?
- ಶನಿ, ರಾಹು, ಕೇತು ಮಂತ್ರ ಪಠಿಸಿ
- ಶನಿವಾರ ಶನಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ
- ಕಾಗೆ, ಕಪ್ಪು ನಾಯಿ, ಕಪ್ಪು ಹಸು ಇವುಗಳಿಗೆ ಶನಿವಾರ ಆಹಾರ ನೀಡಿ
- ಪ್ರತಿದಿನ ಹನುಮಾನ್ ಚಾಲಿಸ ಪಠಿಸಿ.
- ಮನೆಯಲ್ಲಿ ಬೆಳ್ಳಿಯ ಆನೆಮೂರ್ತಿ ತಂದಿಡಿ.
- ಮಲಗುವಾಗ ತಲೆ ಬಳಿಯಲ್ಲಿ ಮೂಲಂಗಿ ಇಡಿ.
- ಮಕ್ಕಳಿಗೆ ಶನಿವಾರ ಉಡುಗೊರೆ ನೀಡಿ
- ಅಗ್ಯತವಿರುವ ಮಕ್ಕಳಿಗೆ ಕಲಿಕೆಗೆ ಅಗ್ಯತವಿರುವ ವಸ್ತುಗಳನ್ನು ದಾನ ಮಾಡಿ.
ಇತರ ಪರಿಹಾರ
- ಮೀನುಗಳಿಗೆ ಮಂಗಳವಾರ ಕಪ್ಪು ಎಳ್ಳು ಹಾಗೂ ಉದ್ದಿನ ಬೇಳೆ ಮಿಶ್ರ ಮಾಡಿ (150ಗ್ರಾಂ) ಆಹಾರವನ್ನಾಗಿ ನೀಡಿ.
- ರಾತ್ರಿ ಮಲಗುವಾಗ ಉದ್ದು ಹಾಗೂ ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಮಲಗಬೇಕು.
- ಬೆಳಗ್ಗೆ ಎದ್ದ ಮೇಲೆ ಮೀನಿನ ಕೊಳಕ್ಕೆ ಹೋಗಿ ಆ ಉದ್ದು ಹಾಗೂ ಎಳ್ಳು ಮಿಶ್ರಣವನ್ನು ಹಾಕಬೇಕು. ಮೀನು ಆಹಾರವನ್ನು ತಿನ್ನಲಾರಂಭಿಸಿದಾಗ ಹಿಂತಿರುಗಿ. ಇದನ್ನು ಮಂಗಳವಾರದಂದೇ ಮಾಡಬೇಕು.
ಹೀಗೆ ಮಾಡುವು ಶನಿ, ರಾಹು, ಕೇತು ದೋಷವನ್ನು ಕಡಿಮೆ ಮಾಡಬಹುದು.



Click it and Unblock the Notifications
