Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರಿ ಜಗನ್ನಾಥ ರಥ ಯಾತ್ರೆ: 3 ರಥಗಳ ವಿಶೇಷತೆ ಹಾಗೂ ಅದರ ಹಿಂದಿನ ಮಹತ್ವವೇನು?
ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಯಲ್ಲಿ 3 ರಥಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಜಗನ್ನಾಥ. ಬಲಭದ್ರ, ಸುಭದ್ರರನ್ನು ಹೊತ್ತುಕೊಂಡ ರಥಗಳನ್ನು ಎಳೆಯುವುದನ್ನು ಕಣ್ತುಂಬಿಕೊಳ್ಳಂದೇ ಲಕ್ಷಾಂತರ ಭಕ್ತರು ಒಡಿಶಾಗೆ ಆಗಮಿಸುತ್ತಾರೆ. ಈ ರಥಗಳು ಕೂಡ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಇಲ್ಲಿ ಪ್ರತಿವರ್ಷ ಹೊಸ ರಥಗಳನ್ನು ನಿರ್ಮಿಸಿ ತೇರು ಎಳೆಯಲಾಗುವುದು. ಇಲ್ಲಿಯ ರಥಗಳ ಮಹತ್ವದ ಬಗ್ಗೆ ನೋಡುವುದಾದರೆ:
ಜಗನ್ನಾಥ, ಬಲಭದ್ರ ಮತ್ತು ಸುಭದ್ರರನ್ನು ಕರೆದೊಯ್ಯಲು ಸಿದ್ಧವಾಗುತ್ತೆ 3 ರಥಗಳು
ಪ್ರತಿವರ್ಷ ಅಕ್ಷಯ ತೃತೀಯದಂದು ಬಡಗಿಗಳು ರಥ ನಿರ್ಮಾಣದ ಕಾರ್ಯವನ್ನು ಪ್ರಾರಂಭಿಸುತ್ತಾರೆ, 3 ರಥಗಳನ್ನು ನಿಮಿಷಿ ಅವುಗಳಿಗೆ ಕೆಂಪು, ಹಳದಿ, ಹಸಿರು ಛತ್ರಿಗಳನ್ನು ಹೊದಿಸಲಾಗುವುದು. ಜಗನ್ನಾಥ್ ರಥವನ್ನು ನಂದಿಘೋಷ್ ಎಂದು ಕರೆಯಲಾಗುವುದು. ಇದರರ್ಥ ಅಪ್ಯಾಯಮಾನವಾದ ಅಥವಾ ಇಂಪಾದ ಧ್ವನಿ ಎಂಬುವುದಾಗಿದೆ. ಈ ರಥ 65 ಟನ್‌ನಷ್ಟು ಭಾರವಿರುತ್ತದೆ. ಬಲಭದ್ರ ಸ್ವಾಮಿಯ ರಥವನನ್ನು ತಾಳಧ್ವಜ ಎಂದು ಕರೆಯಲಾಗುವುದು. ಇದರರ್ಥ ಶಕ್ತಿಯುತವಾದದ್ದು. ಸುಭದ್ರಳ ರಥವನ್ನು ಪದ್ಮಧ್ವಜವೆಂದು ಕರೆಯಲಾಗುವುದು. ಇದರರ್ಥ ಗರ್ವದ ನಾಶ ಎಂಬುವುದಾಗಿದೆ.

ಈ 3 ರಥಗಳ ಬಗ್ಗೆ ಹೆಚ್ಚಿನ ಮಾಹಿತಿ
ಜಗನ್ನಾಥ ರಥ
ಹೆಸರು: ನಂದಿಘೋಷ್ ರಥ
ಎತ್ತರ:45.6 ಅಡಿ ಎತ್ತರವಿರುತ್ತದೆ
ಚಕ್ರ:18
ಮುಖ: ನಂದಿಮುಖ
ಆಯುಧ: ಶಂಖ ಮತ್ತು ಚಕ್ರ
ಬಣ್ಣ: ಕೆಂಪು ಮತ್ತು ಹಳದಿ
ಮರ: 832 ಹಲಗೆ ಬಳಸಲಾಗುವುದು
ದೇವರು: ಗರುಡ
ಸಾರಥಿ: ದರುಕಾ
ಧ್ವಜದ ಹೆಸರು: ತ್ರೈಲೋಕಯಮೋಹಿನೀ, ಬಲಹ್ಕೆ, ಶ್ವೇತ
ಕುದುರೆ ಹೆಸರು: ಹರ್ದಶ್ವ
ಹಗ್ಗದ ಹೆಸರು: ಶಂಖಚೂಡ ವರಾಹ, ಕೃಷ್ಣ,
ದೇವರ ಮೂರ್ತಿಗಳು: ಗೋಪಿ ಕೃಷ್ಣ, ನರಸಿಂಹ, ರಾಮ, ನಾರಾಯಣ, ತ್ರಿವಿಕ್ರಮ, ಹನುಮಾನ್ ರುದ್ರಾ
ಬಲಭದ್ರ ರಥ
ಹೆಸರು: ತಾಳಧ್ವಜ
ಎತ್ತರ:45 ಅಡಿ
ಚಕ್ರ:16
ಬಣ್ಣ: ಕೆಂಪು ಮತ್ತು ನೀಲಿ
ಮುಖ: ಕೇತು ಭದ್ರ
ಆಯುಧ: ಹಲ ಮತ್ತು ಮುಸಲ
ಮರ: 763 ಹಲಗೆ ಬಳಸಲಾಗುವುದು
ದೇವರು: ವಾಸುದೇವ
ಸಾರಥಿ: ಮಾತಾಲಿ
ಧ್ವಜ: ಉನ್ನಾನಿ
ಕುದುರೆ: ತಿಬ್ರಾ, ಘೋರಾ, ದಿಘಾಶ್ರಮ,
ಸ್ವಮಾನವ
ಕುದುರೆಯ ಹೆಸರು: ಬಸುಕಿ, ಗಣೇಶ, ಕಾರ್ತಿಕೇಯಾ
ದೇವರುಗಳು: ಪ್ರಲಾಂಬರಿ, ಮೃತ್ಯುಂಜಯ, ನಾತ್ಮವರ, ಮುಕ್ತೇಶ್ವರ, ಶೇಷದೇವ.
ಸುಭದ್ರ ರಥ
ಹೆಸರು: ಪದ್ಮಧ್ವಜ
ಎತ್ತರ: 44.6 ಎತ್ತರ
ಚಕ್ರ: 14
ಬಣ್ಣ: ಕೆಂಪು ಮತ್ತು ಕಪ್ಪು
ಮುಖ: ಭಕ್ತಿ ಸುಮೇಧ
ಆಯುಧ: ಪದ್ಮ, ಕಲ್ಹಾರ್
ಮರ: 593 ಹಲಗೆ
ರಕ್ಷಕ: ಜಯದುರ್ಗಾ
ಸಾರಥಿ: ಅರ್ಜುನಾ
ಧ್ವಜದ ಹೆಸರು: ನಾಡಾಂಬಿಕ
ಕುದುರೆ: ರೋಚಿಕಾ, ಮೋಚಿಕಾ, ಜಿತ, ವನ ದುರ್ಗಾ, ಶುಲಿದುರ್ಗಾ
ದೇವರುಗಳು: ವರಾಹಿ, ಶ್ತಾಮ ಕಾಳಿ, ಮಂಗಳ, ವಿಮಲ
ರಥ ಯಾತ್ರೆಗೆ ಈ ಪೂಜಾ ವಿಧಿಗಳನ್ನು ಪಾಲಿಸಲಾಗುವುದು
ರಥ ಯಾತ್ರೆಯಲ್ಲಿ ಬಲಭದ್ರ ಸ್ವಾಮಿಯ ವಿಗ್ರಹವನ್ನು ಮೊದಲು ತರಲಾಗುವುದು. ನಂತರ ಸುಭದ್ರ ಕೊನೆಗೆ ಜಗನ್ನಾಥ ಸ್ವಾಮಿಯ ರಥವನ್ನು ತರಲಾಗುವುದು. ಈ ರಥವನ್ನು ತರುವ ಮುನ್ನ ಪುರಿಯ ರಾಜನು ರಸ್ತೆಯನ್ನು ಚಿನ್ನದ ಪೊರಿಕೆಯಿಂದ ಗುಡಿಸುತ್ತಾನೆ, ನಂತರ ಸಾವಿರಾರು ಜನರು ಸೇರಿ ರಥವನ್ನು ಎಳೆದು ದುಂಡಿಚಾ ದೇವಾಲಯಕ್ಕೆ ತರಲಾಗುವುದು. ಈ ದೇವಾಲಯವನ್ನು ಜಗನ್ನಾಥ ಸ್ವಾಮಿಯ ಅತ್ತೆಯ ನಿವಾಸ ಎಂದು ಹೇಳಾಗುವುದು.
ಈ ರಥ ಯಾತ್ರೆಯ ಮಹತ್ವವೇನು?
ಈ ರಥಯಾತ್ರೆ ಈ ರೀತಿಯ ಸಂದೇಶವನ್ನು ಸಾರುತ್ತದೆ. ಮಾನವ ದೇಹವು ರಥದಂತೆ, ಇದನ್ನು ಚಲಾಯಿಸುವ ಸಾರಥಿ ದೇವರು. ದೇವರು ನಮ್ಮನ್ನು ಐಹಿಕ ಸುಖ ಭೋಗಗಳ ಮೂಲಕ ನಮ್ಮನ್ನು ಹಾಯಿಸಿ ಆಧ್ಯಾತ್ಮಿಕದ ಕಡೆಗೆ ಕೊಂಡೊಯ್ಯುತ್ತಾರೆ. ಜನನ ಮತ್ತು ಮರಣದ ಚಕ್ರದಿಮದ ಬಿಡುಗಡೆಯಾಗಲು ದೇವರಲ್ಲಿ ಸಂಪೂರ್ಣ ಶ್ರದ್ಧೆ ಮತ್ತು ಸಮರ್ಪಣೆಯನ್ನು ಹೊಂದದ ಹೊರತು ಮುಕ್ತಿ ಸಾಧ್ಯವಿಲ್ಲ.



Click it and Unblock the Notifications