Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮದುವೆ ಮನೆಯಲ್ಲಿ ನಂಬುವ ಈ ಮೌಢ್ಯತೆಗಳ ಅರ್ಥ ನಿಮಗೆ ಗೊತ್ತೆ..!
ಮದುವೆಯನ್ನು ಅತ್ಯಂತ ಮಂಗಳಕರ ಸಂದರ್ಭ ಎಂದು ಪರಿಗಣಿಸಲಾಗುತ್ತದೆ. ಪ್ರಪಂಚದ ಅನೇಕ ಭಾಗಗಳಲ್ಲಿ, ಮದುವೆಗಳಿಗೆ ಸಂಬಂಧಿಸಿದ ಹಲವಾರು ಜನಪ್ರಿಯ ನಂಬಿಕೆಗಳು ಮತ್ತು ಮೂಢನಂಬಿಕೆಗಳು ಇವೆ, ಹಲವು ನಂಬಿಕೆಗಳು ಕಾಲಕ್ಕೆ ಅನುಗುಣವಾಗಿ ಬದಲಾದರೆ ಇನ್ನು ಕೆಲವು ಇಂದಿಗೂ ಚಾಲ್ತಿಯಲ್ಲಿದೆ. ಇದು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ರವಾನೆಯಾಗುತ್ತಲೇ ಇದೆ.
ಈ ನಂಬಿಕೆಗಳ ಪ್ರಕಾರ ಮದುವೆ ಮನೆಯಲ್ಲಿ ಕೆಲವು ಆದರೆ ಶುಭ, ಇನ್ನು ಕೆಲವು ಅಶುಭ ಎನ್ನಲಾಗುತ್ತದೆ. ನಿಮಗೆ ಪರಿಚಯವಿಲ್ಲದ ಅಥವಾ ಪರಿಚಯ ಇದ್ದರೂ ಅದರ ಅರ್ಥ ತಿಳಿದಿರದ ಕೆಲವು ವಿವಾಹ ನಂಬಿಕೆಗಳು ಮತ್ತು ಮೂಢನಂಬಿಕೆಗಳು ಇಲ್ಲಿವೆ ನೋಡಿ:

1. ಮದುವೆಯ ದಿನ ಮಳೆ
ಮದುವೆಯ ದಿನ ಮಳೆ ಬಂದರೆ ಕೆಲವು ಸಂಸ್ಕೃತಿಗಳಲ್ಲಿ ಇದನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮದುವೆಯ ದಿನದಂದು ಮಳೆಯು ಫಲವತ್ತತೆ ಮತ್ತು ಸಂಪತ್ತಿನ ಸಂಕೇತವೆಂದು ನಂಬಲಾಗಿದೆ. ಇದೊಂದು ಶುಭ ಸಂಸಾರದ ಮುನ್ಸೂಚನೆಯನ್ನು ತೋರಿಸುತ್ತದೆ.

2. ವಧುವಿನ ಮೆಹೆಂದಿಯ ಬಣ್ಣ
ವಧುವಿನ ಗೋರಂಟಿ ಬಣ್ಣವು ಗಾಢವಾಗಿ ಕಂಡರೆ, ಅವಳ ಮದುವೆಯು ಬಲವಾಗಿರುತ್ತದೆ, ಅಲ್ಲದೆ ಅವಳನ್ನು ತನ್ನ ಪತಿ ಆಗುವವನು ಅಷ್ಟು ಪ್ರೀತಿಸುತ್ತಾನೆ ಎಂದರ್ಥ.
ಇನ್ನೊಂದು ಮೂಢನಂಬಿಕೆಯೆಂದರೆ, ವಧುವಿನ ಕೈಯಲ್ಲಿ ಮೆಹೆಂದಿಯು ತನ್ನ ವರನಿಗಿಂತ ಹೆಚ್ಚು ಕಾಲ ಇದ್ದರೆ, ಅವಳು ತನ್ನ ಅತ್ತೆಯಂದಿರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾಳೆ.

3. ಮದುವೆಗೂ ಮುನ್ನ ವಧು-ವರರು ಒಬ್ಬರನ್ನೊಬ್ಬರು ನೋಡುವಂತಿಲ್ಲ
ಮದುವೆಗೂ ಮುನ್ನ ವಧು-ವರರು ಒಬ್ಬರನ್ನೊಬ್ಬರು ನೋಡುವಂತಿಲ್ಲ ಎಂಬ ಮೂಢನಂಬಿಕೆಯು ಬಹಳ ಹಿಂದಿನ ಕಾಲದ ಪದ್ಧತಿಯಾಗಿದೆ. ಸಮಾರಂಭದ ಮೊದಲು ದಂಪತಿಗಳು ಒಬ್ಬರನ್ನೊಬ್ಬರು ನೋಡಿದರೆ, ಅದು ಮದುವೆಯ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸುವ ಅವಕಾಶವನ್ನು ನೀಡುತ್ತದೆ ಎಂದು ಜನರು ನಂಬಿದ್ದರು. ಆದಾಗ್ಯೂ, ಇಂದು ಅನೇಕ ದಂಪತಿಗಳಾಗ ಬಯಸುವವರು ಭೇಟಿಯಾಗಲು ಅವಕಾಶ ಇದೆ, ಇದಕ್ಕೆ ಹಿರಿಯರೇ ಸಮ್ಮತಿ ಸಹ ಸೂಚಿಸುತ್ತಾರೆ.

4. ಮೊದಲು ಬಲಗಾಲು
ವಧು ಮೊದಲು ತನ್ನ ಎಡಗಾಲಿನಿಂದ ಹೊಸ ಮನೆಗೆ ಪ್ರವೇಶಿಸಿದರೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಹಿಂದೂ ಸಂಪ್ರದಾಯದಲ್ಲಿ ಗಂಡನ ಮನೆಗೆ ಶುಭ ಬರಲಿ ಎಂದು ಆಶಿಸಿ ಹೊಸಿಲಿಗೆ ನಮಸ್ಕರಿಸಿ, ಅಕ್ಕಿಯ ಸೇರನ್ನು ಒದ್ದು ಬಲಗಾಲಿಟ್ಟು ಮನೆ ಪ್ರವೇಶಿಸುತ್ತಾರೆ.

5. ಹಾಲು ಉಕ್ಕುವುದು
ಮದುವೆಯ ಸಮಯದಲ್ಲಿ, ಕುಟುಂಬ ಸದಸ್ಯರು ಹಾಲು ಕುದಿಸುವಾಗ ಜಾಗರೂಕರಾಗಿರಬೇಕು ಎಂದು ನಂಬಲಾಗಿದೆ. ಮದುವೆಯ ದಿನ ಅಥವಾ ಹಿಂದಿನ ಮುಂದಿನ ದಿನಗಳಲ್ಲಿ ಹಾಲು ಉಕ್ಕುವುದು ಅಥವಾ ಚೆಲ್ಲುವುದು ದುರದೃಷ್ಟವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

6. ಗಾಜು ಒಡೆಯುವುದು
ಇಟಲಿಯಲ್ಲಿನ ಪದ್ಧತಿಯ ಪ್ರಕಾರ, ನವವಿವಾಹಿತರು ತಮ್ಮ ಮದುವೆಯಲ್ಲಿ ಹೂದಾನಿ ಅಥವಾ ಗಾಜನ್ನು ಒಡೆದು ಹಾಕುತ್ತಾರೆ. ಅಲ್ಲಿನ ಸಂಪ್ರದಾಯದ ಪ್ರಕಾರ, ಗಾಜಿನ ಸಾಮಾನುಗಳು ಎಷ್ಟು ತುಂಡುಗಳಾಗಿ ಒಡೆಯುತ್ತವೆಯೋ ದಂಪತಿಗಳು ಅಷ್ಟು ವರ್ಷಗಳ ಕಾಲ ಸಂತೋಷದಿಂದ ಜೀವನ ನಡೆಸುತ್ತಾರೆ ಎಂಬುದನ್ನು ಸಂಕೇತಿಸುತ್ತದೆ.



Click it and Unblock the Notifications
