Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೆ. 29ಕ್ಕೆ ನೇರವಾಗಿ ಸಂಚರಿಸಲಿರುವ ಶನಿ: 5 ರಾಶಿಗಳಿಗೆ ಆಗಲಿದೆ ಧನ ಲಾಭ
ಈ ವರ್ಷ ಮೇ 11ರಿಂದ ಮಕರ ರಾಶಿಯಲ್ಲಿ ವಕ್ರತೆಯಲ್ಲಿ ಸಂಚರಿಸುತ್ತಿದ್ದ ಶನಿ ಸೆಪ್ಟೆಂಬರ್ 29ರಿಂದ ನೇರವಾಗಿ ಸಂಚರಿಸಲಿದ್ದಾನೆ. ಶನಿಯನ್ನು ಶಿಸ್ತುಬದ್ಧ ಹಾಗೂ ನ್ಯಾಯಯುತವಾದ ಗ್ರಹವೆಂದು ಗುರುತಿಸಲಾಗಿದೆ. ತಪ್ಪು ಮಾಡಿದರೆ ಶಿಕ್ಷಿಸುವ ಶನಿ ನಮ್ಮ ಕರ್ಮಕ್ಕೆ ಅನುಸಾರ ಫಲವನ್ನು ನೀಡುತ್ತಾನೆ.

ಮಕರ ರಾಶಿಯಲ್ಲಿ ಶನಿಯ ಆಗಮನದಿಂದಾಗಿ ಪ್ರಯತ್ನಗಳಿಂದ ಮಾತ್ರ ಯಶಸ್ಸು, ಲಾಭ ಸಿಗುವುದಾದರೂ ಶನಿಯ ನೇರ ಸಂಚಾರ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದರಲ್ಲೂ ಮಕರದಲ್ಲಿ ಶನಿಯ ನೇರ ಸಂಚಾರದಿಂದಾಗಿ ಕೆಲವೊಂದು ರಾಶಿಗಳಿಗೆ ತುಂಬಾ ಒಳ್ಳೆಯದಾಗಲಿದೆ.
ಶನಿ ಸಂಚಾರ ಆರಂಭಿಸುವಾಗ ರಾಹು ಮತ್ತು ಕೇತು ಸ್ಥಾನ ಬದಲಾಗುತ್ತದೆ. ಇದರಿಂದ 5 ರಾಶಿಗಳ ಮೇಲೆ ಧನಾತ್ಮಕ ಪ್ರಭಾವ ಬೀರಲಿದ್ದು, ಸಮಸ್ಯೆಗಳು ದೂರವಾಗಿ ತಮ್ಮ ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಲಿದ್ದಾರೆ. ಇಲ್ಲಿ ಶನಿಯ ನೇರ ಸಂಚಾರದಿಂದ ಯಾವ ರಾಶಿಗಳಿಗೆ ಒಳಿತಾಗಲಿದೆ ಎಂದು ಹೇಳಿದ್ದೇವೆ ನೋಡಿ:

ಮಿಥುನ ರಾಶಿ
ಮಿಥುನ ರಾಶಿಯವರೇ ಇಷ್ಟು ಸಮಯ ಅನುಭವಿಸಿದ ಕಷ್ಟಗಳಿಂದ ಮುಕ್ತಿ ಪಡೆಯಲಿದ್ದೀರಿ. ವೃತ್ತಿಯಲ್ಲಿ ಇದ್ದ ಸವಾಲುಗಳು ದೂರವಾಗಿ ಪ್ರಗತಿ ಕಾಣುವಿರಿ. ಇನ್ನು ವಾಹನ ಖರೀದಿಗೆ ಬಯಸಿದ್ದರೆ ಕಾಲವು ಕೂಡಿ ಬಂದಿದೆ.
ನಿಮ್ಮ ಕಾರ್ಯಗಳಿಗೆ ಕುಟುಂಬದವರ ಹಾಗೂ ಸಂಗಾತಿಯ ಬೆಂಬಲವಿರುತ್ತದೆ. ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ವ್ಯಾಪಾರ ವಿಸ್ತರಣೆ ಮಾಡುವುದರಿಂದ ಲಾಭ ಕಾಣುವಿರಿ. ಉದ್ಯೋಗಿಗಳಿಗೆ ಕೂಡ ಬಡ್ತಿ ಸಿಗುವುದು.

ಕಟಕ ರಾಶಿ
ಮಕರದಲ್ಲಿ ಶನಿಯ ನೇರ ಸಂಚಾರದಿಂದಾಗಿ ಕಟಕ ರಾಶಿಯವರಿಗೂ ಒಳಿತಾಗಲಿದೆ, ಚಂದ್ರ ಕಟಕ ರಾಶಿಯ ಅಧಿಪತಿಯಾಗಿದ್ದು ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ನಿಮ್ಮ ವೃತ್ತಿ ಬದುಕಿನಲ್ಲಿ ಮತ್ತಷ್ಟು ಪ್ರಗತಿ ಕಾಣುವಿರಿ ಇನ್ನು ವ್ಯಾಪಾರ ಕ್ಷೇತ್ರದಲ್ಲಿದ್ದರೆ ಅಧಿಕ ಲಾಭಗಳಿಸುವಿರಿ. ತುಂಬಾ ಕಾಲದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕೂಡ ಕಡಿಮೆಯತಾಗುತ್ತದೆ. ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಮತ್ತಷ್ಟು ಒಳಿತಾಗುತ್ತದೆ.

ವೃಶ್ಚಿಕ ರಾಶಿ
ತುಂಬಾ ಕಾಲದ ಬಯಕೆಯು ಈಡೇರಲಿದೆ. ಮನೆಯಲ್ಲಿಯೂ ಶುಭ ಕಾರ್ಯ ನಡೆಯಲಿದೆ. ಇನ್ನು ಆಸ್ತಿ ಖರೀದಿಗೆ ಬಯಸಿದ್ದರೆ ಆ ಭಾಗ್ಯ ಕೂಡಿ ಬರಲಿದೆ. ನಿಮಗೆ ಕುಟುಂಬದವರ ಹಾಗೂ ಸ್ನೇಹಿತರ ಬೆಂಬಲ ಸಿಗುವುದು. ನೀವು ಹಾಕಿದ ಯೋಜನೆಯಂತೆಯೇ ಎಲ್ಲವೂ ನಡೆಯುವುದು. ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಲಿದೆ.

ಧನು ರಾಶಿ
ಶನಿಯ ನೇರ ಸಂಚಾರ ಧನು ರಾಶಿಯವರ ತುಂಬಾ ಧನಾತ್ಮಕವಾದ ಪರಿಣಾಮವನ್ನೇ ಬೀರಿದೆ. ಅನಿರೀಕ್ಷಿತ ಲಾಭ ದೊರೆಯಲಿದೆ, ಇದರಿಂದ ಆದಾಯ ಹೆಚ್ಚಲಿದೆ. ಇನ್ನು ಕಾರು, ಆಸ್ತಿ ಖರೀದಿಯ ಯೋಗವೂ ಕೂಡಿ ಬರಲಿದೆ. ಇನ್ನು ವೈವಾಹಿಕ ಜೀವನ ಖುಷಿಯಾಗಿರಲಿದೆ. ನೀವು ಮಾಡಬೇಕೆಂದು ಬಯಸಿದ ಕಾರ್ಯ ಮಾಡಲು ಎಲ್ಲರ ನೆರವು ಸಿಗುತ್ತದೆ. ಇದರಿಂದ ನಿಮ್ಮ ವ್ಯಾಪಾರ-ವಹಿವಾಟುಗಳು ಯಾವುದೇ ಸಮಸ್ಯೆಯಿಲ್ಲದೆ ಸಾಗುತ್ತದೆ.

ಕನ್ಯಾ ರಾಶಿ
ಕನ್ಯಾರಾಶಿಯವರು ಕೂಡ ಧನ ಲಾಭವನ್ನು ನಿರೀಕ್ಷಿಸಬಹುದಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಹೊಂದುವಿರಿ, ಇನ್ನು ಉದ್ಯಮಿಗಳಾಗಿದ್ದರೆ ಮತ್ತಷ್ಟು ಲಾಭ ದೊರೆಯಲಿದೆ. ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಕೌಟಂಬಿಕ ಜೀವನದಲ್ಲಿ ಸ್ವಲ್ಪ ಏರಳಿತ ಉಂಟಾದರೂ ದೊಡ್ಡ ಸಮಸ್ಯೆಯೇನೂ ಉಂಟಾಗುವುದಿಲ್ಲ. ಈ ಹಿಂದೆ ಅಪೂರ್ಣವಾಗಿದ್ದ ಕೆಲಸ ಮತ್ತೆ ಪ್ರಾರಂಭಿಸಲು ಸಕಾಲವಾಗಿದ್ದು ಶುರು ಮಾಡಿದರೆ ಲಾಭ ಕಾಣುವಿರಿ.

ಇತರ ರಾಶಿಗಳ ಮೇಲೆ ಶನಿ ಗೋಚಾರಫಲ ಪ್ರಭಾವ
ಮೇಷ ರಾಶಿ
ಕೌಟಂಬಿಕ ಸಂಘರ್ಷ ಎದುರಾಗಲಿದೆ. ಹಲವು ಸಮಸ್ಯೆಗಳು ಎದುರಾದರೂ ಕೊನೆಗೆ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ನೀವು ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಶತ್ರುಗಳ ಕಡೆ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಲಾಭವೂ ಸಿಗುತ್ತದೆ.

ವೃಷಭ
ಈ ರಾಶಿಯವರು ದೂರ ಪ್ರಯಾಣಿಸಬೇಕಾಗುವುದು. ಆರ್ಥಿಕ ದೃಷ್ಟಿಯಿಂದ ನೋಡುವುದಾರೆ ಪ್ರಯತ್ನಕ್ಕೆ ತಕ್ಕ ಲಾಭ ದೊರೆಯದಿದ್ದರೂ ತುಂಬಾ ನಷ್ಟವೇನು ಆಗುವುದಿಲ್ಲ. ವೃತ್ತಿಯಲ್ಲಿ ಸವಾಲುಗಳು ಬರುತ್ತವೆ, ಅದನ್ನು ಧೈರ್ಯದಿಂದ ಎದುರಿಸಬೇಕಾಗಿದೆ. ಇನ್ನು ಶಬ್ದ ಪ್ರಯೋಗಗಳ ಬಗ್ಗೆ ಹಿಡಿತವಿದ್ದರೆ ಒಳ್ಳೆಯದು.

ಸಿಂಹ ರಾಶಿ
ನೀವು ವೃತ್ತಿಯಲ್ಲಿ ತುಂಬಾ ಜಾಗೃತರಾಗಿರಿ, ಇಲ್ಲದಿದ್ದರೆ ಸಂಘರ್ಷಗಳು ಎದುರಾಗಲಿವೆ. ಇನ್ನು ಜಾಗ ಖರೀದಿ ಮಾಡುವ ಆಲೋಚನೆಯಿದ್ದರೆ ಯೋಚಿಸಿ ಮುಂದುವರೆಯಿರಿ, ಇಲ್ಲದಿದ್ದರೆ ಮೋಸ ಹೋಗುವ ಸಾಧ್ಯತೆ ಇದೆ. ಇನ್ನು ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ದೊರೆಯಲಿದೆ.

ತುಲಾ ರಾಶಿ
ಬೇರೆಯವರ ಮತು ಕೇಳಿ ನಿವೇಶನಕ್ಕೆ ಹೂಡಿಕೆ ಮಾಡುವ ಮುನ್ನ ಯೋಚಿಸಿ. ನಿಮಗೆ ಚಿಕ್ಕ-ಚಿಕ್ಕ ಯಾತ್ರೆಯ ಯೋಗವಿದೆ ಇನ್ನು ಸೆಪ್ಟೆಂಬರ್ ನಂತರ ವಿದೇಶ ಪ್ರಯಾಣದ ಯೋಗವಿದೆ. ಯಾವುದೇ ವಾದ ವಿವಾದದಲ್ಲಿ ಸಿಲುಕಿಕೊಳ್ಳದಂತೆ ಎಚ್ಚರವಹಿಸಿ.

ಮಕರ ರಾಶಿ
ಮಾನಸಿಕ ತೊಳಲಾಟ ಸ್ವಲ್ಪ ಹೆಚ್ಚಲಿದೆ. ಹಿಂದೆ ಮಾಡಿದ ಯಾವುದೇ ಹೂಡಿಕೆ ನಿಮಗೆ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನಿಮ್ಮ ಹಾದಿಯಲ್ಲಿ ಶತ್ರುಗಳ ಕಡೆಯಿಂದ ಸೃಷ್ಟಿಯಾದ ಅಡೆತಡೆಗಳನ್ನು ನೀವು ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಅದೃಷ್ಟ ನಿಮ್ಮ ಕಡೆ ಇರುತ್ತದೆ.

ಕುಂಭ ರಾಶಿ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಿರಿ. ತುಂಬಾ ಸಮಯದಿಂದ ಬರಬೇಕಾಗಿದ್ದ ಹಣ ಕೈ ಸಿಗಲಿದೆ.ಇನ್ನು ಆಸ್ತಿ, ನಿವೇಶನ ಖರೀದಿ ಮಾಡುವ ಮುನ್ನ ಯೋಚಿಸುವುದು ಒಳ್ಳೆಯದು. ಉದ್ಯೋಗಾಕಾಂಕ್ಷಿಗಳಿಗೆ ಲಾಭ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ.

ಮೀನ ರಾಶಿ
ಕೆಲಸದ ಒತ್ತಡ ಅಧಿಕವಿರಲಿದೆ. ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ನಿಮ್ಮ ತಾಯಿಯಿಂದ ನಿಮಗೆ ವಿಶೇಷ ಆಶೀರ್ವಾದ ಸಿಗುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ.



Click it and Unblock the Notifications
