Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಹು- ಕೇತು ಸಂಚಾರ 2020: 12 ರಾಶಿಚಕ್ರಗಳ ಮೇಲಾಗುವ ಪರಿಣಾಮಗಳು
ಜ್ಯೋತಿಷ್ಯದಲ್ಲಿ ಕೇತು ಎಂಬುವುದು ಒಂದು ನಿಗೂಢವಾದ ಗ್ರಹ. ಈ ಗ್ರಹದ ಕುರಿತು ಹೇಳುವಾಗ ಕೇತು ಕೊಡಲು ಬಂದಾಗ ಎಲ್ಲವನ್ನೂ ಕೊಡುತ್ತದೆ, ತೆಗೆದುಕೊಳ್ಳಲು ಬಂದಾಗ ಎಲ್ಲವನ್ನೂ ತೆಗೆದುಕೊಳ್ಳುತ್ತದೆ ಎಂದು ಹೇಳುತ್ತದೆ.
ಈ ಮಾತೇ ಇದು ಎಂಥ ಶಕ್ತಿಶಾಲಿಯಾದ ಗ್ರಹವೆಂಬುವುದನ್ನು ಹೇಳುತ್ತದೆ. ಕೇತುವಿನಿಂದ ಕೆಲವೊಮ್ಮೆ ಒಳಿತಾದರೆ ಕೆಲವೊಮ್ಮೆ ಕೆಡಕು ಉಂಟಾಗುವುದು, ಇವೆಲ್ಲಾ ಕೇತು ನಮ್ಮ ಗ್ರಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುವುದನ್ನು ಅವಲಂಭಿಸಿದೆ. ಇನ್ನು ಮಿಥುನ ರಾಶಿಯಲ್ಲಿದ್ದ ರಾಹು ವೃಷಭರಾಶಿಗೆ ಪ್ರವೇಶಿಸುತ್ತಿದ್ದಾನೆ.

2020ರಲ್ಲಿ ಕೇತು ಸೆಪ್ಟೆಂಬರ್ 23 ಬೆಳಗ್ಗೆ 8:20ಕ್ಕೆ ಧನು ರಾಶಿಯಿಂದ ವೃಶ್ಚಿಕರಾಶಿಗೆ ಸಂಚಾರ ಮಾಡುತ್ತಾನೆ ಹಾಗೂ ವರ್ಷದ ಕೊನೆಯವರೆಗೂ ಕೇತು ಆ ರಾಶಿಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಎಲ್ಲಾ ರಾಶಿಗಳ ಮೇಲೆ ಕೇತುವಿನ ಪ್ರಭಾವ ಹೇಗಿರಲಿದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರವು ವೃಶ್ಚಿಕ ರಾಶಿಗೆ ಕೇತು ಹಾಗೂ ಮಿಥುನರಾಶಿಯಿಂದ ವೃಷಭ ರಾಶಿಗೆ ರಾಹು ಸಂಚಾರದಿಂದ ನಿಮ್ಮ ರಾಶಿಗಳ ಮೇಲಾಗುವ ಪ್ರಭಾವದ ಬಗ್ಗೆ ಏನು ಹೇಳಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯಲ್ಲಿ ರಾಹು ಎರಡನೇ ಮನೆಯಲ್ಲಿದ್ದು ಕೇತು ನಿಮ್ಮ ರಾಶಿಚಕ್ರದಲ್ಲಿ 8ನೇ ಮನೆಗೆ ಸಾಗುವುದರಿಂದ ಮೇಷರಾಶಿಯವರಿಗೆ ಒಳಿತು ಉಂಟಾಗಲಿದೆ. ಕೇತು ಫಲದಿಂದಾಗಿ ಧಾರ್ಮಿಕ ಪ್ರವಾಸಗಳ ಯೋಗ ಕೂಡಿ ಬರುವುದು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತೀರಿ. ಕೆಲವೊಂದು ಅನಗ್ಯತ ಪ್ರಯಾಣದಿಂದಾಗಿ ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಇನ್ನು ತಂದೆಯ ಜೊತೆ ವಿವಾದ ಉಂಟಾಗಿ ನಿಮಗೆ ಬರಬೇಕಿದ್ದ ಪೂರ್ವಜರ ಆಸ್ತಿಗೆ ಅಡಚಣೆ ಉಂಟಾಗಬಹುದು. ಆದ್ದರಿಂದ ಪಿತೃ ಜೊತೆ ವಿವಾದ ಮಾಡಿಕೊಳ್ಳದಿರುವುದು ಒಳ್ಳೆಯದು. ಖರ್ಷು ಸ್ವಲ್ಪ ಅಧಿಕವಿರುವುದರಿಂದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಮಾನಸಿಕ ಒತ್ತಡ ಉಂಟಾಗುವುದು.
ಕೇತು ಸಂಚಾರದ ದೋಷಕ್ಕೆ ಪರಿಹಾರ: ಯಾವುದೇ ದೇವಸ್ಥಾನಕ್ಕೆ ಹೋಗಿ ಕೆಂಪು ಬಣ್ಣದ ಧ್ವಜವನ್ನು ನೀಡಿ ಹಾಗೂ ನಾಯಿಗಳ ದೇವಸ್ಥಾನದಲ್ಲಿ ಕೆಂಪು ಬಣ್ಣದ ಧ್ವಜವನ್ನು ಹಾಕಿ ಮತ್ತು ಬೀದಿ ನಾಯಿಗಳಿಗೆ ಆಹಾರವನ್ನು ನೀಡಿ.

ವೃಷಭ ರಾಶಿ
ವೃಷಭ ರಾಶಿಯಲ್ಲಿ ರಾಹು ಇದ್ದು ಕೇತು 7ನೇಮನೆಗೆ ಸಾಗುತ್ತಿದ್ದಾನೆ. ಧಾರ್ಮಿಕ ವಿಷಯದಲ್ಲಿ ಆಳವಾದ ಸಂಶೋಧನೆ ನಡೆಸುತ್ತಿದ್ದರೆ ಯಶಸ್ಸು ದೊರೆಯುವುದು. ಕೌಟಂಬಿಕ ಜೀವನದಲ್ಲಿ ಸ್ವಲ್ಪ ತೊಂದರೆಗಳು ಎದುರಾಗುವುದು ಇನ್ನು ಖರ್ಚು ಕೂಡ ಸ್ವಲ್ಪ ಅಧಿಕವಿರುತ್ತದೆ. ವೈವಾಹಿಕ ಬದುಕಿನಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಿ. ಅನಗ್ಯತ ವಿವಾದ ಮಾಡಿಕೊಳ್ಳಬೇಡಿ. ಇನ್ನು ಬೇರೆಯವರಿಗೆ ಸಾಲ ಕೊಡುವಾಗಲೂ ಎಚ್ಚರಿಕೆ ವಹಿಸಿ, ಕೊಟ್ಟ ತಿರುಗಿ ಬರಲು ಕಷ್ಟವಿದೆ,
ಕೇತು ಸಂಚಾರದ ದೋಷಕ್ಕೆ ಪರಿಹಾರ: ನೀವು ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಿದರೆ ದೋಷ ಪರಿಹಾರವಾಗುವುದು ಅಲ್ಲದೆ ಬಡವರಿಗೆ ಕೈಲಾದ ದಾನ ಮಾಡಿ.

ಮಿಥುನ ರಾಶಿ
ಈ ರಾಶಿಯವರಿಗೆ ರಾಹು ಹನ್ನೆರನೇ ಸ್ಥಾನದಲ್ಲಿದ್ದು ಕೇತು 6ನೇ ಮನೆಗೆ ಸಾಗುತ್ತಾನೆ. ಇದರಿಂದಾಗಿ ವೈವಾಹಿಕ ಬದುಕಿನಲ್ಲಿ ಕೆಲವೊಂದು ತೊಂದರೆಗಳು ಬರುವ ಸಾಧ್ಯತೆ ಇದೆ. ಇನ್ನು ಅವಾಹಿತರಿಗೂ ಸೂಕ್ತ ಸಂಬಂಧ ಕೂಡಿ ಬರುವುದಿಲ್ಲ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಲು ಇದು ಸೂಕ್ತವಲ್ಲ, ಇನ್ನು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ಕಣ್ಮುಚ್ಚಿ ನಂಬಲು ಹೋಗಬೇಡಿ. ಕೆಲವೊಂದು ಕಠಿಣ ಪರಿಸ್ಥಿತಿ ಎದುರಾಗುವುದು ಆದರೆ ಶ್ರಮದಿಂದ ಕೆಲಸ ಮಾಡಿದರೆ ಖಂಡಿತ ಫಲ ಸಿಗುವುದು.
ಕೇತು ಸಂಚಾರದ ದೋಷಕ್ಕೆ ಪರಿಹಾರ: ವಿಘ್ನ ನಿವಾರಕನನ್ನು ಆರಾಧಿಸಿ.

ಕರ್ಕ ರಾಶಿ
ಕರ್ಕರಾಶಿಯಲ್ಲಿ ರಾಹು ಹನ್ನೊಂದನೇ ಮನೆಯಲ್ಲಿದ್ದು ಕೇತು 5ನೇ ಮನೆಗೆ ಸಾಗುತ್ತಿದ್ದಾನೆ. ಕೆಲಸದಲ್ಲಿ ಅನೇಕ ವಿಘ್ನಗಳು ಎದುರಾಗಿ ಮಾಡುತ್ತಿರುವ ಕೆಲಸ ಅರ್ಧಕ್ಕೆ ನಿಲ್ಲಬಹುದು. ಎದುರಾಳಿ ನಿಮಗಿಂತ ಲಾಭವನ್ನು ಗಳಿಸಬಹುದು. ಆದರೆ ಇವುಗಳಿಂದ ಯಾವುದೇ ಯಾವುದೇ ರೀತಿಯ ಗೊಂದಲ ಮತ್ತು ದಿಗ್ಭ್ರಮೆಗೊಳಗಾಗಬೇಡಿ. ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಮಾತುಕತೆ ಬಂದರೂ ಸರಿದೂಗಿಸಿಕೊಂಡು ಹೋಗುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕೆಲಸದ ಕಡೆ ತುಂಬಾ ಗಮನ ನೀಡಿ, ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಬೇಡಿ.
ಕೇತು ಸಂಚಾರದ ದೋಷಕ್ಕೆ ಪರಿಹಾರ: ಒಂಭತ್ತು ಮುಖದ ರುದ್ರಾಕ್ಷ ಧರಿಸುವುದು ಒಳ್ಳೆಯದು.

ಸಿಂಹ ರಾಶಿ
ಸಿಂಹರಾಶಿಯಲ್ಲಿ ರಾಹು 10ನೇ ಮನೆಯಲ್ಲಿದ್ದು ಕೇತು ನಾಲ್ಕನೇ ಮನೆಗೆ ಸಂಚಾರ ಮಾಡುತ್ತಾನೆ. ಇದರಿಂದ ಉದ್ಯೋಗದಲ್ಲಿರುವವರಿಗೆ ಸ್ವಲ್ಪ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಇನ್ನು ವ್ಯಾಪಾರಸ್ಥರು ಉತ್ತಮ ಡೀಲ್‌ಗಾಗಿ ಸಾಕಷ್ಟು ಶ್ರಮ ಹಾಕಬೇಕು. ದೊಡ್ಡ ಆರ್ಥಿಕ ತೊಂದರೆ ಇಲ್ಲ, ಆದರೆ ಅಧಿಕ ಆದಾಯಕ್ಕೆ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಆರೋಗ್ಯ ಸಮಸ್ಯೆ ಕಾಣಿಸಿದರೆ ಕೂಡಲೇ ವೈದ್ಯರನ್ನು ಕಾಣಬೇಕು, ನಿರ್ಲಕ್ಷ್ಯ ಮಾಡಬಾರದು. ಇನ್ನು ವೈಕ್ತಿಕ ಜೀವನ ಸಾಧಾರಣವಾಗಿರಲಿದೆ. ಸಂಗೀತ ಕೇಳುವುದು, ಬರೆಯುವುದು, ಓದುವುದು ಹೀಗೆ ಅಭಿರುಚಿಯ ಕ್ಷೇತ್ರದಿಂದ ತೃಪ್ತಿ ದೊರೆಯಲಿದೆ.
ಕೇತು ಸಂಚಾರದ ದೋಷಕ್ಕೆ ಪರಿಹಾರ: ಹನುಮಂತನ ಪೂಜಿಸಿ.

ಕನ್ಯಾ ರಾಶಿ
ಕನ್ಯಾ ರಾಶಿಯಲ್ಲಿ ರಾಹು ಒಂಭತ್ತನೇ ಮನೆಯಲ್ಲಿದ್ದು ಕೇತು ಮೂರನೇ ಮನೆಗೆ ಸಂಚಾರ ಮಾಡುತ್ತಿದ್ದಾನೆ. ಈ ಸಂಚಾರ ಮಾನಸಿಕ ಸಂತೋಷಕ್ಕಾಗಿ ಉತ್ತಮವಾಗಿಲ್ಲ. ಯಾವುದಾದರು ಒಂದು ವಿಷಯದಿಂದ ಒತ್ತಡ ಉಳಿದಿರುತ್ತದೆ ಹಾಗೂ ಮನಸ್ಸಿಗೆ ವಿಶ್ರಾಂತಿ ಸಿಗುವುದಿಲ್ಲ. ಕುಟುಂಬದಲ್ಲಿ ಅಶಾಂತಿಯ ವಾತಾವರಣವಿರುತ್ತದೆ. ವಾಹನ ಚಲಾಯಿಸುವಾಗ ಜಾಗ್ರತೆ. ಇನ್ನು ವ್ಯಾಪಾರ ಕ್ಷೇತ್ರದಲ್ಲೂ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಉದ್ಯೋಗಸ್ಥರಿಗೆ ಉದ್ಯೋಗ ಬದಲಾವಣೆಗೆ ಸೂಕ್ತವಲ್ಲ.
ಕೇತು ಸಂಚಾರದ ದೋಷಕ್ಕೆ ಪರಿಹಾರ: ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ.

ತುಲಾ ರಾಶಿ
ತುಲಾರಾಶಿಯವರಲ್ಲಿ ರಾಹು 8ನೇ ಮನೆಯಲ್ಲಿದ್ದು ಕೇತು ಎರಡನೇ ಮನೆಗೆ ಸಂಚಾರ ಮಾಡುತ್ತಾನೆ. ದೂರದ ಪ್ರವಾಸಕ್ಕೆ ಈ ಕಾಲ ಸೂಕ್ತವಾಗಿಲ್ಲ. ಒಡಹುಟ್ಟಿದವರ ಜೊತೆ ವಿವಾದಗಳು ಉಂಟಾಗಬಹುದು. ಆದಾಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಬರಬಹುದು. ಸಂಗಾತಿಯ ಬೆಂಬಲ ನಿಮಗಿರುವುದರಿಂದ ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಜೀವನ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇನ್ನು ಯಾರನ್ನೂ ಕಣ್ಮುಚ್ಚಿ ನಂಬಿದರೆ ಮೋಸ ಹೋಗುವಿರಿ. ಆದ್ದರಿಂದ ಎಚ್ಚರ
ಕೇತು ಸಂಚಾರದ ದೋಷಕ್ಕೆ ಪರಿಹಾರ: ಗಣಪತಿಯನ್ನು ಪೂಜಿಸಿ, ಬುಧವಾರ ಗಣಪತಿಗೆ ಹುಲ್ಲನ್ನು ಸಮರ್ಪಿಸಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ರಾಹು 7ನೇ ಮನೆಯಲ್ಲಿದ್ದು ಕೇತು ವೃಶ್ಚಿಕರಾಶಿಗೆ ಪ್ರವೇಶ ಮಾಡಲಿದ್ದಾನೆ. ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳು ಎದುರಾಗಬಹುದು. ವ್ಯಾಪಾರಸ್ಥರು ಗುಣಮಟ್ಟದ ವಸ್ತುಗಳನ್ನು ನೀಡಿದರೆ ಮಾತ್ರ ಗ್ರಾಹಕರನ್ನು ಸೆಳೆಯಲು ಸಾಧ್ಯ. ಯೋಚಿಸದೆ ಯಾರಿಗೂ ಯಾವುದೇ ಭರವಸೆಗಳನ್ನು ನೀಡಬೇಡಿ. ಮಾತಿನಲ್ಲಿನ ಕಹಿ ಕಾರಣದಿಂದಾಗಿ ನಿಮ್ಮ ಸ್ವಂತ ಸಂಬಂಧವು ನಿಮ್ಮಿಂದ ದೂರವಾಗಬಹುದು, ಆದ್ದರಿಂದ ಮಾತಿನ ಮೇಲೆ ಹಿಡಿತವಿರಲಿ. ಹಠಾತ್ ಅಥವಾ ಗಡಿಬಿಡಿಯಿಂದ ಹೂಡಿಕೆ ಮಾಡಬೇಡಿ, ಮಾಡಿದರೆ ನಷ್ಟ ಉಂಟಾಗುವುದು. ಗೊಂದಲದ ಪರಿಸ್ಥಿತಿಯಲ್ಲಿ ಬಂದು ಯಾವುದೇ ಹೂಡಿಕೆಯನ್ನು ಮಾಡಬೇಡಿ. ಇದರಿಂದ ನಿಮ್ಮದೇ ನಷ್ಟವಾಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಕೇತುವಿನ ಸಂಚಾರ ನಿಮ್ಮ ರಾಶಿಚಕ್ರದಲ್ಲೇ ಇರುವುದರಿಂದ ದಿಗ್ಭ್ರಮೆಯ ಪರಿಸ್ಥಿತಿ ಉಂಟಾಗಬಹುದು. ಯಾವುದೇ ಭಯ ಅಥವಾ ಆತಂಕಕ್ಕೆ ಸಿಲುಕಬೇಡಿ ಮತ್ತು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ.
ಕೇತು ಸಂಚಾರದ ದೋಷಕ್ಕೆ ಪರಿಹಾರ: ಕೇತು ಗ್ರಹದ ಮಂತ್ರ ಓಂ ಕೇಂ ಕೇತವೇ ನಮಃ ಜಪಿಸಿ.

ಧನು ರಾಶಿ
ಧನುರಾಶಿಯಲ್ಲ ರಾಹು 6ನೇ ಮನೆಯಲ್ಲಿದ್ದು ಕೇತು ಹನ್ನೆರಡನೇ ಮನೆಗೆ ಸಂಚಾರ ಮಾಡಲಿದ್ದಾನೆ. ಇದರಿಂದ ನಿಮ್ಮ ಬದುಕಿನಲ್ಲಿ ಯಾವುದೇ ಪ್ರಮುಖ ಸಮಸ್ಯೆಗಳು ಬರುವುದಿಲ್ಲ, ಉದ್ಯೋಗದಲ್ಲಿ ಬಡ್ತಿ ಅವಕಾಶ ಸಿಗಲಿದೆ, ವರ್ಷದ ಕೊನೆಯಲ್ಲಿ ವಿದೇಶ ಪ್ರವಾಸ ಯೋಗವೂ ಇದೆ. ಇನ್ನು ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬಂದರೂ ಎಲ್ಲವೂ ಸರಿ ಹೋಗುವುದು.
ಕೇತು ಸಂಚಾರದ ದೋಷಕ್ಕೆ ಪರಿಹಾರ: ಇಷ್ಟದೇವರನ್ನು ಪ್ರತಿದಿನ ಪೂಜಿಸಿ

ಮಕರ ರಾಶಿ
ಮಕರ ರಾಶಿಯಲ್ಲಿ ರಾಹು 5ನೇ ಮನೆಯಲ್ಲಿದ್ದು ಕೇತು ಹನ್ನೊಂದನೇ ಮನೆಗೆ ಚಂಚಾರ ಮಾಡಲಿದ್ದಾನೆ. ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಶ್ರಮ ಹಾಕಿದರೆ ಉತ್ತಮ ಫಲ ಸಿಗುವುದು. ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ, ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ತಮ್ಮ ಉದ್ಯಮ ವಿಸ್ತಾರವಾಗುವುದು. ಇನ್ನು ಆರೋಗ್ಯ ಕೂಡ ಸ್ಥಿರವಾಗಿರಲಿದೆ. ಮಧ್ಯವಯಸ್ಕರಿಗೆ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಕಾಡಬಹುದು, ನಿಯಮಿತ ವೈದ್ಯಕೀಯ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಇನ್ನು ವೈವಾಹಿಕ ಜೀವನ ಕೂಡ ಸುಖಕರವಾಗಿರಲಿದೆ.
ಕೇತು ಸಂಚಾರದ ಪರಿಹಾರ: ಇಷ್ಟ ದೇವರನ್ನು ಪ್ರಾರ್ಥಿಸಿ, ಮತ್ತಷ್ಟು ಒಳಿತು ಉಂಟಾಗುವುದು.

ಕುಂಭ ರಾಶಿ
ಕುಂಭರಾಶಿಯಲ್ಲಿ ರಾಹು 4ನೇ ಮನೆಯಲ್ಲಿದ್ದು ಕೇತು 10ನೇ ಮನೆಗೆ ಸಂಚಾರ ಮಾಡಲಿದ್ದಾನೆ. ಉದ್ಯಮಿಗಳಿಗೆ ಕೆಲವೊಂದು ಬದಲಾವಣೆಗಳು ಬರಲಿದ್ದು, ಅದರಿಂದ ಒಳಿತೇ ಉಂಟಾಗುವುದು. ಇನ್ನು ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ಶ್ರಮ ಹಾಕಿದಷ್ಟು ಉತ್ತಮ ಫಲ ನಿರೀಕ್ಷೆ ಮಾಡಬಹುದು. ಇನ್ನು ಆರ್ಥಿಕ ಸ್ಥಿತಿಯೂ ಉತ್ತಮವಾಗಿರಲಿದೆ. ಆರೋಗ್ಯದಲ್ಲೂ ಯಾವುದೇ ತೊಂದರೆ ಉಂಟಾಗುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಹಾಗೂ ವೈವಾಹಿಕ ಜೀವದಲ್ಲಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ, ಇದರಿಂದ ಖುಷಿಯಾಗಿರುವಿರಿ.
ಕೇತು ಸಂಚಾರದ ಪರಿಹಾರ: ಒಂಭತ್ತು ಮುಖದ ರುದ್ರಾಕ್ಷ ಧರಿಸಿದರೆ ಒಳ್ಳೆಯದು.

ಮೀನಾ ರಾಶಿ
ಮೀನಾ ರಾಶಿಯಲ್ಲಿ ರಾಹು 3ನೇ ಮನೆಯಲ್ಲಿದ್ದು ಕೇತು 9ನೇ ಮನೆಗೆ ಸಂಚಾರ ಮಾಡುತ್ತಿದ್ದಾನೆ. ಇದರಿಂದ ಉದ್ಯೋಗಸ್ಥರಿಗೆ ಹಾಗೂ ಉದ್ಯಮಿಗಳಿಗೆ ಕೆಲಸದಲ್ಲಿ ಸ್ವಲ್ಪ ಸವಾಲು ಎದುರಾಗುವುದು, ಆದರೆ ಕಠಿಣ ಶ್ರಮಕ್ಕೆ ಖಂಡಿತ ಫಲ ಸಿಗಲಿದೆ. ಇನ್ನು ಆದಾಯ ಮೂಲಗಳು ಹೆಚ್ಚಾಗಲಿದೆ. ಹಣವನ್ನು ಉಳಿತಾಯ ಮಾಡುವುದು ಒಳ್ಳೆಯದು. ಇನ್ನು ಆರೋಗ್ಯದ ಕಡೆ ಸ್ವಲ್ಪ ಗಮನ ನೀಡುವುದು ಒಳ್ಳೆಯದು. ಇನ್ನು ವೈವಾಹಿಕ ಬದುಕಿನಲ್ಲಿ ದೊಡ್ಡ ತೊಂದರೆಗಳು ಎದುರಾಗುವುದಿಲ್ಲ. ಸಂಬಂಧ ಮತ್ತಷ್ಟು ಬಲಪಡಿಸಲು ಪ್ರಯತ್ನಿಸಿ.
ಕೇತು ಸಂಚಾರದ ಪರಿಹಾರ: ಕೇತು ಗ್ರಹದ ಬೀಜ ಮಂತ್ರ ಜಪಿಸಿ, ಒಳಿತಾಗುವುದು



Click it and Unblock the Notifications