Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಚಂದ್ರಗ್ರಹಣ 2021: ಗ್ರಹಣ ಸಮಯದಲ್ಲಿ ಮಾಡಬೇಕಾದ, ಮಾಡಲೇಬಾರದ ಕೆಲಸಗಳಿವು
ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು ಅಂದರೆ ಬುದ್ಧ ಪೂರ್ಣಿಮಾ ದಿನದಂದು 2021 ವರ್ಷದ ಮೊದಲ ಚಂದ್ರಗ್ರಹಣ ಘಟಿಸಲಿದೆ. ಮೇ 26ರಂದು ನಡೆಯಲಿರುವ ಈ ಚಂದ್ರಗ್ರಹಣದಂದೇ, ಸೂಪರ್ ಮೂನ್, ರೆಡ್ ಬ್ಲಡ್ ಮೂನ್ ಸಹ ಗೋಚರಿಸಲಿರುವುದು ಈ ದಿನದ ವಿಶೇಷವಾಗಿದೆ.

ಒಂದೇ ದಿನ ಸೌರಮಂಡಲದಲ್ಲಿ ಚಂದ್ರಗ್ರಹಣ, ಸೂಪರ್ ಮೂನ್ ರೆಟ್ ಬ್ಲಡ್ ಮೂನ್ ಮೂರು ವಿದ್ಯಾಮಾನಗಳು ಘಟಿಸಲಿದ್ದು, ಈ ದಿನದಂದು ಯಾವುದನ್ನು ಮಾಡಲೇಬಾರದು, ಯಾವೆಲ್ಲಾ ಕೆಲಸಗಳನ್ನು ಮಾಡಬಹುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

ಮಾಡಬಹುದಾದ ಕೆಲಸಗಳು
* ವೈಜ್ಞಾನಿಕವಾಗಿ ಚಂದ್ರ ಗ್ರಹಣವನ್ನು ನೇರವಾಗಿ ಕಣ್ಣುಗಳ ಮೂಲಕ ವೀಕ್ಷಿಸಲು ಸುರಕ್ಷಿತವಾಗಿದೆ. ಆದ್ದರಿಂದ, ಚಂದ್ರ ಗ್ರಹಣಕ್ಕೆ ಸಾಕ್ಷಿಯಾಗಲು ಯಾವುದೇ ವಿಶೇಷ ಮುನ್ನೆಚ್ಚರಿಕೆಗಳನ್ನು ನೋಡಿಕೊಳ್ಳುವ ಅಗತ್ಯವಿಲ್ಲ.
* ಭಾರತೀಯ ಪುರಾಣದ ಪ್ರಕಾರ ಚಂದ್ರಗ್ರಹಣದ ಸಮಯದಲ್ಲಿ "ಮಹಾಮೃತ್ಯುಂಜಯ ಮಂತ್ರ ಅಥವಾ ಇಷ್ಟದೇವರ ನಾಮಸ್ಮರಣೆ"ಯನ್ನು ಜಪಿಸಬೇಕು ಎಂದು ಹೇಳಲಾಗುತ್ತದೆ. ಇದು ಗ್ರಹಣದಿಂದ ಉಂಟಾಗುವ ನಕಾರಾತ್ಮಕ ಶಕ್ತಿಯ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ಮಾಡಬಹುದಾದ ಕೆಲಸಗಳು
* ಆಹಾರ ಶುದ್ಧತೆಯನ್ನು ಕಳೆದುಕೊಳ್ಳದಿರಲು ಆಹಾರ ಪದಾರ್ಥಗಳಿಗೆ ತುಳಸಿ ಎಲೆ ಅಥವಾ ಗರಿಕೆ ಹುಲ್ಲನ್ನು ಹಾಕಿ
* ಅಗತ್ಯವಿರುವವರಿಗೆ ದಾನ ಮಾಡಿದರೆ ಒಳ್ಳೆಯದು ಎನ್ನಲಾಗಿದೆ.
* ಚಂದ್ರ ಗ್ರಹಣ ನಂತರ ನೀವು ಸ್ನಾನ ಮಾಡಬೇಕು.
* ಆದಷ್ಟು ಮನೆಯ ಒಳಗೆ ಇದ್ದರೆ ಒಳಿತು. ಮಕ್ಕಳನ್ನು ಹೊರಗೆ ಬಿಡಬೇಡಿ.
* ಶುಭ ಕಾರ್ಯಗಳನ್ನು ಈ ದಿನ ಮಾಡಬೇಡಿ, ಮುಂದೂಡಿ.

ಇವುಗಳನ್ನು ಮಾಡಲೇಬೇಡಿ
* ಭಾರತೀಯ ಪುರಾಣದ ಪ್ರಕಾರ ಈ ಸಮಯದಲ್ಲಿ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಹಾಗೂ ಆಹಾರ ಸೇವಿಸಿದರೆ ಮೂರು ದಿನಗಳ ಕಾಲ ಉಪವಾಸ ಮಾಡಿ.
* ಹಿಂದೂ ಶಾಸ್ತ್ರದ ಪ್ರಕಾರ ಸಂಭೋಗದಿಂದ ದೂರವಿರುವುದು ಒಳಿತು. ಗ್ರಹಗಳ ಪರಿಣಾಮ ಉತ್ತಮವಾಗಿರದ ಕಾರಣ ಈ ಸಮಯದಲ್ಲಿ ಸಂಭೋಗ ಶುಭವಲ್ಲ ಎನ್ನಲಾಗುತ್ತದೆ.
* ಗ್ರಹಣದ ಅವಧಿಯಲ್ಲಿ ನೀವು ನಿದ್ರೆ ಮಾಡಬೇಡಿ.

ಇವುಗಳನ್ನು ಮಾಡಲೇಬೇಡಿ
* ಗ್ರಹಣದ ಪರಿಣಾಮ ಪ್ರಾಣಿಗಳ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಂದ್ರ ಗ್ರಹಣದಿಂದ ಪ್ರಭಾವಿತವಾಗುತ್ತವೆ, ಆದ್ದರಿಂದ ಆದಷ್ಟು ಪ್ರಾಣಿಗಳಿಂದ ದೂರವಿರಿ.
* ಗರ್ಭಿಣಿಯರು ಹೆಚ್ಚು ಮುಂಜಾಗ್ರತೆ ವಹಿಸಿ ಹಾಗೂ ಗ್ರಹಣವನ್ನು ನೋಡಬೇಡಿ.
* ಗ್ರಹಣವು ಕೆಲವು ನಕಾರಾತ್ಮಕ ಶಕ್ತಿ ಅಥವಾ ಕಿರಣಗಳನ್ನು ಹೊರಸೂಸುವ ಕಾರಣ ಇದು ಕಣ್ಣು, ತ್ವಚೆ ಹಾಗೂ ಹಾರ್ಮೋನುಗಳ ಮೇಲೆ ಪ್ರಭಾವ ಬೀರಲಿದೆ.
* ಗ್ರಹಣದ ವೇಳೆ ಮಲಗಬೇಡಿ



Click it and Unblock the Notifications
