Mercury Combust: ಫೆ. 28ಕ್ಕೆ ಬುಧ ಅಸ್ತಂಗತ: ಆರ್ಥಿಕವಾಗಿ 3 ರಾಶಿಗಳಿಗೆ ಅದೃಷ್ಟ, ಉಳಿದ ರಾಶಿಗಳಿಗೆ ಮಿಶ್ರಫಲ

ಬುಧ ಗ್ರಹವನ್ನು ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ. ಬುಧ ಕುಂಭ ರಾಶಿಯಲ್ಲಿ ಫೆಬ್ರವರಿ 27ಕ್ಕೆ ಸಂಚಾರವಾಗುತ್ತಿದ್ದಂತೆ ಮಾರನೇಯ ದಿನವೇ ಕುಂಭ ರಾಶಿಯಲ್ಲಿ ಅಸ್ತಂಗತವಾಗಲಿದೆ. ಕುಂಭ ರಾಶಿಯಲ್ಲಿ ಬುಧ ಗ್ರಹ ಅಸ್ತಂಗತವಾದಾಗ ಅದು ಬಹುತೇಕ ರಾಶಿಗಳ ಮೇಲೆ ಒಳ್ಳೆಯ ಪ್ರಯೋಜನ ಬೀರುವುದಿಲ್ಲ, ಕೆಲವು ರಾಶಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಈ ಅವಧಿ ಯಾವ ರಾಶಿಗಳಿಗೆ ಪರ್ವಾಗಿಲ್ಲ, ಯಾವ ರಾಶಿಯವರು ಈ ಅವಧಿಯಲ್ಲಿ ಜಾಗ್ರತೆವಹಿಸಬೇಕಾಗಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿ

ಬುಧ ರಾಶಿಯವರಲ್ಲಿ ಬುಧ 11ನೇ ರಾಶಿಯಲ್ಲಿ ಅಸ್ತಂಗತವಾಗಲಿದೆ.

ಬುಧ ಅಸ್ತಂಗತವಾದಾಗ ನೀವು ನಿರೀಕ್ಷಿತ ಲಾಭವನ್ನು ಪಡೆಯುವ ಸಾಧ್ಯತೆ ಕಡಿಮೆ. ಅತ್ಯಧಿಕ ಕೆಲಸದ ಒತ್ತಡವಿರಲಿದೆ. ದೊಡ್ಡ ನಿರ್ಧಾರಗಳನ್ನುಈ ಅವಧಿಯಲ್ಲಿ ತೆಗೆದುಕೊಳ್ಳಬೇಡಿ. ವ್ಯಾಪಾರಸ್ಥರಿಗೂ ಈ ಅವಧಿ ಅಷ್ಟು ಅನುಖುಲಕರವಲ್ಲ. ನಿಮ್ಮ ಸುತ್ತಲಿನ ವಾತಾವರಣವು ನಿಮಗೆ ಸ್ವಲ್ಪ ಆತಂಕವನ್ನು ಉಂಟುಮಾಡುತ್ತದೆ ಮತ್ತು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಕಷ್ಟವಾಗುತ್ತದೆ. ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ.

ಪರಿಹಾರ: ನೀವು ಬುಧವಾರದಂದು ಶ್ರೀ ವಿಷ್ಣು ಚಾಲೀಸ ಪಠಿಸಿ.

ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯಲ್ಲಿ ಹತ್ತನೇ ಮನೆಯಲ್ಲಿ ಅಸ್ತಮಿಸುತ್ತದೆ. ಈ ಅವಧಿಯಲ್ಲಿ ಕೆಲಸದ ಕಡೆ ಗಮನ ಹರಿಸಬೇಕು, ಇಲ್ಲದಿದ್ದರೆ ಕೆಲಸದಲ್ಲಿ ಸಮಸ್ಯೆಗಳು ಬರಬಹುದು. ಅನಗತ್ಯ ಪ್ರಯಾಣಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ಅವಧಿ ಉತ್ತಮವಾಗಿರುತ್ತದೆ. ನೀವು ಯಾವುದೇ ವ್ಯವಹಾರವನ್ನು ಮಾಡಿದರೆ, ಅಪೇಕ್ಷಿತ ಲಾಭವನ್ನು ಪಡೆಯಲು ನೀವು ಕಾಯಬೇಕಾಗುತ್ತದೆ. ಸಂಗಾತಿಯೊಂದಿಗಿನ ಸಮಸ್ಯೆಯದಲ್ಲಿ ಸಮಸ್ಯೆಗಳಿರಬಹುದು. ಕೌಟುಂಬಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕೆಲಸದ ನಡುವೆ ಸ್ವಲ್ಪ ವಿಶ್ರಾಂತಿ ನೀಡುವುದು ಒಳ್ಳೆಯದು.

ಪರಿಹಾರ: ಶ್ರೀ ವಿಷ್ಣುವಿಗೆ ಹಳದಿ ಹೂ, ಹಣ್ಣುಗಳನ್ನು ಅರ್ಪಿಸಿ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ 9ನೇ ಮನೆಯಲ್ಲಿ ಅಸ್ತಮಿಸುತ್ತದೆ. ಈ ಅವಧಿಯಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನೀವು ಅಗತ್ಯಕ್ಕಿಂತ ಹೆಚ್ಚು ಕಷ್ಟಪಡಬೇಕಾಗಬಹುದು. ವ್ಯಾಪಾರಸ್ಥರಿಗೆ ಈ ಅವಧಿ ಮಧ್ಯಮವಾಗಿರುತ್ತದೆ. ನೀವು ವ್ಯಾಪಾರವನ್ನು ವಿಸ್ತರಿಸಲು ಬಯಸಿದರೆ ಈ ಅವಧಿಯಲ್ಲಿ ಹೊಸ ಹೂಡಿಕೆ ಮಾಡದಿರುವುದು ಒಳ್ಳೆಯದು. ಸಂಗಾತಿ ಮತ್ತು ಕುಟುಂಬದ ಸದಸ್ಯರ ನಡುವೆ ಪರಸ್ಪರ ವಾದಗಳು ಅಥವಾ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಗಳೂ ಇವೆ. ಈ ಅವಧಿಯಲ್ಲಿ ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಕಡೆ ಗಮನ ನೀಡಿ.

ಪರಿಹಾರ: ನೀವು ಪ್ರತಿದಿನ ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಪ್ರತಿದಿನ ಪಠಿಸಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ 8ನೇ ಮನೆಯಲ್ಲಿ ಅಸ್ತಮಿಸಲಿದೆ. ಈ ಅವಧಿ ಆರ್ಥಿಕವಾಗಿ ಒಳ್ಳೆಯದಿದೆ. ಈ ಅವಧಿಯು ಉದ್ಯಮಿಗಳಿಗೆ ಲಾಭದಾಯಕವಾಗಲಿದೆ. ಆರ್ಥಿಕವಾಗಿ, ಈ ಅವಧಿಯು ಉತ್ತಮವಾಗಿರುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳ ಮೇಲೆ ಗಮನ ಕಡಿಮೆಯಾಗುತ್ತದೆ. ಸಂಸಾರದಲ್ಲಿ ಸಮಸ್ಯೆ ಇರಬಹುದು. ಈ ಅವಧಿಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿರಬಹುದು.

ಪರಿಹಾರ: ನೀವು ಬುಧವಾರದಂದು ಶ್ರೀ ದುರ್ಗಾ ಚಾಲೀಸ ಪಠಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಏರಿಳಿತಗಳು ಉಂಟಾಗುವುದು. ಪಾಲುದಾರಿಕೆ ವ್ಯವಹಾರದಲ್ಲಿ ಏರಿಳಿತಗಳಿರುತ್ತವೆ. ನಿಮ್ಮ ವೃತ್ತಿಜೀವನದಲ್ಲಿ, ನಿಮ್ಮ ಸಹೋದ್ಯೋಗಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ಆರ್ಥಿಕವಾಗಿ ಕ್ರಮೇಣ ಪ್ರಯೋಜನಗಳನ್ನು ಪಡೆಯುವ ಅವಕಾಶಗಳಿವೆ. ಸಂಸಾರದಲ್ಲಿ ಕೆಲವು ಸಮಸ್ಯೆಗಳಿರಬಹುದು. ಇಬ್ಬರು ಕೂತು ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ.

ಪರಿಹಾರ: ಓಂ ನಮೋ ನಾರಾಯಣ ಮಂತ್ರ ಪಠಿಸಿ.

ಕನ್ಯಾ ರಾಶಿ

ಕನ್ಯಾ ರಾಶಿ

ಬುಧನು ಕನ್ಯಾ ರಾಶಿಯಲ್ಲಿ 6ನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಕೆಲವು ಹಠಾತ್ ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು, ಕಠಿಣ ಪ್ರಯತ್ನಗಳನ್ನು ಮಾಡುವುದು ಅವಶ್ಯಕ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ನಿರೀಕ್ಷಿತ ಲಾಭವನ್ನು ಪಡೆಯುವಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ಖರ್ಚುಗಳು ಹೆಚ್ಚಾಗಲಿದೆ. ಅಲ್ಲದೆ ಆರೋಗ್ಯ ಸಮಸ್ಯೆಗಳಿರಬಹುದು.

ಪರಿಹಾರ: ಬುಧವಾರದಂದು ಶ್ರೀ ರಾಧಾ ಅಷ್ಟಕವನ್ನು ಪಠಿಸಿ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಿಗೆ ಬುಧನು ಐದನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಈ ಅವಧಿಯಲ್ಲಿ ಉದ್ಯೋಗ ಬದಲಾವಣೆಯ ಪರಿಸ್ಥಿತಿ ಬರಬಹುದು. ನೀವು ಯಾವುದೇ ವ್ಯವಹಾರವನ್ನು ಮಾಡಿದರೆ, ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನಿಮ್ಮ ವ್ಯಾಪಾರ ಪ್ರಗತಿಯಾಗುತ್ತದೆ. ಆರ್ಥಿಕವಾಗಿ ಈ ಅವಧಿಯು ನಿಮಗೆ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ, ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ.

ಪರಿಹಾರ: ನೀವು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಕೊಳಲನ್ನು ಅರ್ಪಿಸಬೇಕು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ನಾಲ್ಕನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಈ ಅವಧಿಯಲ್ಲಿ ಏರಳಿತಗಳಿರುತ್ತದೆ. ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನೀವು ಅದರಲ್ಲಿಯೂ ಯಶಸ್ಸನ್ನು ಪಡೆಯಬಹುದು. ಆದರೆ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಈ ಸಮಯವು ತುಂಬಾ ಒಳ್ಳೆಯದಲ್ಲ. ಆರ್ಥಿಕವಾಗಿ, ಈ ಸಮಯವು ಮಧ್ಯಮವಾಗಿರುತ್ತದೆ. ನೀವು ಒಂದು ಕಡೆಯಿಂದ ಉತ್ತಮ ಆದಾಯವನ್ನು ಪಡೆದರೆ, ಇನ್ನೊಂದು ಕಡೆಯಿಂದ ಖರ್ಚುಗಳು ಸಹ ಹೆಚ್ಚಾಗಲಿದೆ, ಜೀವನದಲ್ಲಿ ಸೌಕರ್ಯಗಳ ಹೆಚ್ಚಳಕ್ಕೆ ನೀವು ಗಮನ ಹರಿಸಿ. ಕೌಟುಂಬಿಕ ಕಲಹಗಳು ಹೆಚ್ಚಾಗಬಹುದು. ತಾಯಿಯ ಆರೋಗ್ಯವು ಹದಗೆಡಬಹುದು, ಆದ್ದರಿಂದ ಅವರ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.

ಪರಿಹಾರ: ನೀವು ಪ್ರತಿದಿನ ಶ್ರೀ ಹನುಮಾನ್ ಚಾಲೀಸ ಪಠಿಸಿ

ಧನು ರಾಶಿ

ಧನು ರಾಶಿ

ಧನು ರಾಶಿಯವರಲ್ಲಿ 3ನೇ ಅಸ್ತಮಿಸುತ್ತಾನೆ. ಈ ಸಮಯವು ಕುಂಭ ರಾಶಿಯಲ್ಲಿ ನಿಮ್ಮ ವೃತ್ತಿಜೀವನಕ್ಕೆ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.ಹೊಸ ಉ ದ್ಯೋಗಾವಕಾಶವೂ ಬರಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ಮಾಡಿದರೆ ಈ ಅವಧಿಯು ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ. ನಿಮ್ಮ ಆದಾಯ ಮತ್ತು ನಿಮ್ಮ ವೆಚ್ಚಗಳ ನಡುವೆ ಸಮತೋಲನವಿದ್ದರೆ ಒಳ್ಳೆಯದು

ಪರಿಹಾರ: ನೀವು ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸಿ.

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯಲ್ಲಿ ಎರಡನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಈ ಅವಧಿಯಲ್ಲಿ ನೀವು ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು. ವ್ಯಾಪಾರ ಮಾಡುತ್ತಿದ್ದರೆ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಆರ್ಥಿಕವಾಗಿ ಈ ಸಮಯವು ಉತ್ತಮವಾಗಿದೆ. ಆರೋಗ್ಯದ ದೃಷ್ಟಿಯಿಂದ, ಈ ಸಮಯದಲ್ಲಿ ಯಾವುದೇ ದೊಡ್ಡ ಸಮಸ್ಯೆ ಗೋಚರಿಸುವುದಿಲ್ಲ. ಆಹಾರಕ್ರಮದ ಕಡೆ ಗಮನ ಹರಿಸಿ.

ಪರಿಹಾರ: ಶ್ರೀ ವಿಷ್ಣುವಿನ ಆರಾಧನೆ ಮಾಡಿ.

ಕುಂಭ ರಾಶಿ

ಕುಂಭ ರಾಶಿ

ಬುಧವು ಕುಂಭ ರಾಶಿಯಲ್ಲಿ ಅಸ್ತಮಿಸುತ್ತದೆ. ಈ ಅವಧಿಯಲ್ಲಿ ನೀವಾಡುವ ಮಾತಿನ ಕಡೆ ಗಮನ ಹರಿಸಿ. ನೀವು ಉದ್ಯೋಗದಲ್ಲಿಯೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಯಾವುದೇ ವ್ಯವಹಾರವನ್ನು ಮಾಡಿದರೆ, ಈ ಅವಧಿಯು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಈ ಸಮಯ ಉತ್ತಮವಾಗಿರುತ್ತದೆ. ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಪರಿಹಾರ: ನೀವು ಶ್ರೀ ರಾಧಾ-ಕೃಷ್ಣರನ್ನು ಪೂಜಿಸಿ.

 ಮೀನ ರಾಶಿ

ಮೀನ ರಾಶಿ

ಮೀನ ರಾಶಿಯ 12ನೇ ಮನೆಯಲ್ಲಿಅಸ್ತಮಿಸುತ್ತಾನೆ. ಕುಂಭ ರಾಶಿಯಲ್ಲಿ ಬುಧ ಸಂಕ್ರಮಿಸುವುದು ನಿಮ್ಮ ಜೀವನದಲ್ಲಿ ಕೆಲವು ಏರಿಳಿತಗಳನ್ನು ತರಬಹುದು. ನೀವು ಯಾವುದೇ ವ್ಯವಹಾರವನ್ನು ಮಾಡಿದರೆ ಅದಕ್ಕೆ ಒಳ್ಳೆಯ ಲಾಭ ಸಿಗಲಿದೆ. ಖರ್ಚು ಅಧಿಕವಿದ್ದರೂ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ. ಕುಟುಂಬ ಜೀವನದಲ್ಲಿ ಪರಸ್ಪರ ಸಮಸ್ಯೆಗಳು ಹೆಚ್ಚಾಗಬಹುದು.

ಪರಿಹಾರ: ನೀವು ಪ್ರತಿದಿನ ನಿಮ್ಮ ಹಣೆಯ ಮೇಲೆ ಅರಿಶಿನ ಅಥವಾ ಕುಂಕುಮ ತಿಲಕವಿಡಿ

English summary

Mercury Combust In Aquarius on 28 February 2023 Effects And Remedies On 12 Zodiac Signs In Kannada

Mercury Combust In Aquarius 2023 Effects on Zodiac Signs : The Venus Transit in Capricorn will take place on 28 February. Learn about remedies to perform in Kannada,
Story first published: Thursday, February 23, 2023, 13:19 [IST]
X
Desktop Bottom Promotion