Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಮೌನಿ ಅಮವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಿವಿಧಾನ ಪಾಲಿಸಿ
Pulse
oi-Shreeraksha
By Shreeraksha
ಪಿತೃದೋಷಗಳಿಂದ ಮುಕ್ತಿ ಪಡೆಯಲು ಸಹಾಯಮಾಡುವ ಅಮವಾಸ್ಯೆಯೇ ಮೌನಿ ಅಮವಾಸ್ಯೆ. ಮೌನವಾಗಿಯೇ ಏನನ್ನೂ ಮಾತನಾಡದೇ ಆಚರಣೆ ಮಾಡುವ ಕಾರಣದಿಂದಾಗಿ ಇದನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.ಫೆಬ್ರವರಿ 11ರಂದು ಇರುವ ಈ ಅಮವಾಸ್ಯೆಯಂದು ಗಂಗಾ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಸದ್ಗುಣಗಳನ್ನು ಪಾಲನೆ ಮಾಡುವುದು ಬಹಳ ಶುಭಕರ.

ಮೌನಿ ಅಮವಾಸ್ಯೆಯಂದು ಎಳ್ಳು ಅಥವಾ ಇತರ ವಸ್ತುಗಳನ್ನು ದಾನ ಮಾಡುವುದರಿಂದ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರರಾಗುತ್ತೀರಿ. ಮೌನಿ ಅಮಾವಾಸ್ಯೆಯಂದು, ಪಿತೃಗಳ ಎಲ್ಲಾ ಕೆಲಸಗಳನ್ನು ಮೌನವಾಗಿ ಮಾಡಲಾಗುತ್ತದೆ. ಈ ದಿನ, ಪಿತೃದೋಷವನ್ನು ಕೆಲವು ವಿಶೇಷ ಕ್ರಮಗಳಿಂದ ಸಮಾಧಾನಪಡಿಸಬಹುದು. ಆ ವಿಧಾನಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಪಿತೃದೋಷ ನಿವಾರಣೆಗಾಗಿ ಪೂಜೆ ಮಾಡುವ ವಿಧಾನ:
- ಪಿತೃ ದೋಷವನ್ನು ತೊಡೆದುಹಾಕಲು, ಈ ದಿನ ಪೂರ್ವಜರನ್ನು ಧ್ಯಾನಿಸುತ್ತಾ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
- ಪಿತ್ರ ದೋಷ ತಡೆಗಟ್ಟಲು, ಕಮಲದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಕೆಂಪು ಹೂವುಗಳು ಮತ್ತು ಕಪ್ಪು ಎಳ್ಳು ಸೇರಿಸಿ.
- ನಂತರ ಈ ನೀರನ್ನು ಸೂರ್ಯ ದೇವರಿಗೆ ಅರ್ಪಿಸಿ, ನಿಮ್ಮ ಪಿತೃಗಳ ಶಾಂತಿಗಾಗಿ ಪ್ರಾರ್ಥಿಸಿ.
- ಅಶ್ವತ್ಥ ಮರದ ಮೇಲೆ ಕೆಲವು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ಇಟ್ಟು, ಮರವನ್ನು 108 ಬಾರಿ ಪ್ರದಕ್ಷಿಣೆ ಹಾಕಿ.
- ಮೌನಿ ಅಮಾವಾಸ್ಯೆಯ ದಿನ, ಎಳ್ಳಿನ ಲಡ್ಡು, ಎಳ್ಳೆಣ್ಣೆ, ನೆಲ್ಲಿ, ಕಂಬಳಿ ಮತ್ತು ಬಟ್ಟೆಗಳನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಿ. ಇದನ್ನು ಮಾಡುವುದರಿಂದ ನಿಮಗೆ ಪುಣ್ಯ ಲಭಿಸುತ್ತದೆ.
- ಮನೆಯ ದಕ್ಷಿಣ ಭಾಗದಲ್ಲಿ ಸ್ವಲ್ಪ ಎಳ್ಳನ್ನು ಬಿಳಿ ಬಟ್ಟೆಯ ಮೇಲೆ ಹಾಕಿ. ಅದರ ಮೇಲೆ ಹಿತ್ತಾಳೆ ಅಥವಾ ತಾಮ್ರದ ಹೂಜಿಯನ್ನು ಸ್ಥಾಪಿಸಿ.
- ಈಗ ಅದರ ಎಡಭಾಗದಲ್ಲಿ ಎಳ್ಳೆಣ್ಣೆಯ ದೀಪವನ್ನು ಪಿತೃಗಳಿಗಾಗಿ ಹಚ್ಚಿ. ಈಗ ನೀರು ತುಂಬಿದ ಸ್ಟೀಲ್ ಪಾತ್ರೆಯನ್ನು ಮಧ್ಯದಲ್ಲಿ ಇರಿಸಿ.
- ಅದರ ಮೇಲೆ ಸ್ಟೀಲ್ ಪ್ಲೇಟ್ ಮತ್ತು ಎಳ್ಳಿನ ರೊಟ್ಟಿ ಇರಿಸಿ.
- ಈಗ ಅದರ ಮೇಲೆ ತುಳಸಿ ಎಲೆಯನ್ನು ಇರಿಸಿ.
- ಇದಕ್ಕೆ ಬಿಳಿ ಹೂವನ್ನು ಅರ್ಪಿಸಿ ಮತ್ತು ಶ್ರೀಗಂಧದ ತಿಲಕವನ್ನು ಇಡಿ.
- ಈಗ ರೊಟ್ಟಿಯನ್ನು ನಾಲ್ಕು ತುಂಡುಗಳನ್ನು ಮಾಡಿ. ಅದರಲ್ಲಿ ಒಂದು ತುಂಡನ್ನು ನಾಯಿಗೆ, ಎರಡನೆಯ ತುಂಡು ಹಸುವಿಗೆ, ಮೂರನೆಯ ತುಂಡನ್ನು ಕ್ಷುದ್ರಶಕ್ತಿಗಳಿಗೆ, ನಾಲ್ಕನೆಯ ತುಂಡನ್ನು ಅಶ್ವತ್ಥ ಮರದ ಕೆಳಗೆ ಇರಿಸಿ.

ವಾಸ್ತು ಪ್ರಕಾರ ಪಿತೃ ದೋಷ ನಿವಾರಣೆಗೆ ಹೀಗೆ ಮಾಡಿ:

ನೆನಪಿನಲ್ಲಿಡಿ:
ಈ ಎಲ್ಲಾ ಕೆಲಸಗಳನ್ನು ನೀವು ಮೌನವಾಗಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.
Comments
English summary
Mauni Amavasya 2021 : Pitru Dosh Nivaran Pujan Vidhi
Story first published: Wednesday, February 10, 2021, 18:00 [IST]
Other articles published on Feb 10, 2021



Click it and Unblock the Notifications
