Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಂಗಳ ಗೋಚಾರ 2022: ಫೆ.26ಕ್ಕೆ ಮಕರದಲ್ಲಿ ಮಂಗಳ ಸಂಚಾರ ಈ 4 ರಾಶಿಗಳಿಗೆ ತುಂಬಾ ಒಳ್ಳೆಯದು
ವೈದಿಕ ಜ್ಯೋತಿಷ್ಯದಲ್ಲಿ, ಮಂಗಳ ಗ್ರಹದ ಬದಲಾವಣೆಯು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಮಂಗಳವನ್ನು ಶಕ್ತಿ, ಸಹೋದರ, ಶೌರ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಮಂಗಳವು ಮೇಷ ಮತ್ತು ವೃಶ್ಚಿಕ ರಾಶಿಗಳ ಅಧಿಪರಿ. ಮಂಗಳವು ಮಕರ ರಾಶಿಯಲ್ಲಿ ಉತ್ಕೃಷ್ಟವಾಗಿದೆ ಹಾಗೂ ಕರ್ಕದಲ್ಲಿ ದುರ್ಬಲವಾಗಿದೆ. ಇದೀಗ ಮಕರ ರಾಶಿಗೆ ಪ್ರವೇಶಿಸಿರುವುದರಿಂದ ತುಂಬಾ ಒಳ್ಳೆಯದು.
ಫೆಬ್ರವರಿ 26ಕ್ಕೆ ಮಂಗಳವು ಮಕರ ರಾಶಿಗೆ ಸಂಚರಿಸಲಿದೆ. ಈ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದ್ದು ಈ 4 ರಾಶಿಗಳಿಗೆ ಈ ಅವಧಿ ತುಂಬಾನೇ ಒಳ್ಳೆಯದಿದೆ ನೋಡಿ:

ಮೇಷ-
ಮಂಗಳ ರಾಶಿಯ ಬದಲಾವಣೆಯು ನಿಮಗೆ ಲಾಭದಾಯಕವಾಗಿರುತ್ತದೆ. ಮಂಗಳನ ಸಂಚಾರವು ನಿಮ್ಮ ರಾಶಿಚಕ್ರದ ಹತ್ತನೇ ಅಂದರೆ ಕರ್ಮದ ಮನೆಯಲ್ಲಿ ಇರುತ್ತದೆ. ಮಂಗಳ ಸಂಚಾರದ ಅವಧಿಯಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧವು ಮಧುರವಾಗಿರುತ್ತದೆ.

ವೃಷಭ ರಾಶಿ -
ಮಂಗಳನು ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಮಂಗಳ ಸಂಚಾರದ ಪ್ರಭಾವದಿಂದ ನಮ್ಮ ಎಲ್ಲಾ ಕೆಲಸದಲ್ಲಿ ಅದೃಷ್ಟದ ಬೆಂಬಲವಿರುತ್ತದೆ. ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವ ಜನರು ಯಶಸ್ಸನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ.

ಧನು ರಾಶಿ -
ಮಂಗಳ ಸಂಚಾರವು ಧನು ರಾಶಿಯವರಿಗೆ ಮಂಗಳಕರವಾಗಿದೆ. ಮಂಗಳವು ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿ ಅಂದರೆ ಹಣದ ಮನೆಯಲ್ಲಿ ಸಾಗುವುದರಿಂದ ನೀವು ಹಠಾತ್ ವಿತ್ತೀಯ ಲಾಭವನ್ನು ಪಡೆಯಬಹುದು. ಯಾವುದೇ ಹೂಡಿಕೆಯು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ತುಂಬಾ ದಿನದಿಂದ ಬರಬೇಕಾಗಿದ್ದ ಹಣ ಬರುವುದು.

ಮೀನ ರಾಶಿ -
ಮೀನ ರಾಶಿಯವರಿಗೆ ಮಂಗಳ ಸಂಚಾರವು ಲಾಭದಾಯಕವಾಗಿರುತ್ತದೆ. ಮಂಗಳವು ನಿಮ್ಮ ರಾಶಿಯ 11 ನೇ ಅಂದರೆ ಆದಾಯದ ಮನೆಯಲ್ಲಿ ಸಾಗುತ್ತದೆ. ಈ ಸಮಯ ವ್ಯವಹಾರಸ್ಥರಿಗೆ ತುಂಬಾ ಒಳ್ಳೆಯದು. ನೀವು ಹಸ ಉದ್ಯೋಗಕ್ಕೆ ಹುಡುಕುತ್ತಿದ್ದರೆ ಅವಕಾಶಗಳು ದೊರೆಯುವುದು. ಮಂಗಳನ ಪ್ರಭಾವದಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.



Click it and Unblock the Notifications
