Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
March 2023 Horoscope : ಈ ತಿಂಗಳು ಯಾವ ರಾಶಿಗಳಿಗೆ ಅದೃಷ್ಟ, ಯಾರು ಜಾಗ್ರತೆವಹಿಸಬೇಕು
ಮಾರ್ಚ್ ತಿಂಗಳಿನಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡಲಿದೆ. ಮಾರ್ಚ್ ತಿಂಗಳಿನಲ್ಲಿ ಸೂರ್ಯ, ಶುಕ್ರ, ಬುಧ ಮತ್ತು ಮಂಗಳಗಳು ತಮ್ಮ ರಾಶಿ ಬದಲಾವಣೆ ಮಾಡಲಿದೆ. ಈ ತಿಂಗಳಿನಲ್ಲಿ ಗುರುವು ಅಸ್ತಂತವಾಗಲಿದ್ದು, ಅಸ್ತಂಗತವಾಗಿರುವ ಶನಿಯು ಉದಯವಾಗಲಿದೆ. ಜ್ಯೋತಿಷ್ಯದ ಪ್ರಕಾರ ಈ ಗ್ರಹಗತಿಗಳ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

ಈ ತಿಂಗಳು ಯಾವ ರಾಶಿಗಳಿಗೆ ಅತ್ಯಂತ ಉತ್ತಮವಾಗಿದೆ ಎಂದು ನೋಡುವುದಾದರೆ ಈ ನಾಲ್ಕು ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ, ಈ ರಾಶಿಗಳಿಗೆ ಸವಾಲಿನ ದಿನಗಳಾಗಿವೆ:

ಮೇಷ ರಾಶಿ
ಗ್ರಹಗಳ ಚಲನೆಯಲ್ಲಿನ ಈ ಬದಲಾವಣೆಯು ಮೇಷ ರಾಶಿಯವರಿಗೆ ಅವರ ವೃತ್ತಿಜೀವನದಲ್ಲಿ ಯಶಸ್ಸನ್ನು ನೀಡುತ್ತದೆ. ಮತ್ತೊಂದೆಡೆ, ವೈವಾಹಿಕ ಜೀವನದಲ್ಲಿ ಸಂತೋಷ ನೀಡಲಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ. ಆರೋಗ್ಯದ ದೃಷ್ಟಿಯಿಂದ ಸಮಯ ಉತ್ತಮವಾಗಿದೆ. ಉದ್ಯೋಗಿಗಳ ಆದಾಯ ಹೆಚ್ಚಾಗಲಿದೆ, ವ್ಯಾಪಾರಸ್ಥರು ನಿರೀಕ್ಷಿತ ಲಾಭ ಪಡೆಯಬಹುದು.

ಮಿಥುನ ರಾಶಿ
ಈ ತಿಂಗಳು ಮಿಥುನ ರಾಶಿಯವರಿಗೆ ಒಳ್ಳೆಯದಿದೆ. ನೀವು ಆರ್ಥಿಕವಾಗಿ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದೆಲ್ಲಾ ಬಗೆಹರಿಯಲಿದೆ, ಎಲ್ಲರೂ ಒಗ್ಗಟ್ಟಾಗಿ ಖುಷಿಯಾಗಿರುವಿರಿ. ಸಂಗಾತಿ ಹಾಗೂ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುವುದರಿಂದ ಆರ್ಥಿಕವಾಗಿ ಉತ್ತಮವಾಗಿದೆ. ನಿಮಗೆ ಬರಬೇಕಾಗಿದ್ದ ಹಣ ಈ ಅವಧಿಯಲ್ಲಿ ನಿಮ್ಮ ಕೈ ಸೇರಲಿದೆ.

ಕನ್ಯಾ ರಾಶಿ
ಮಾರ್ಚ್ ತಿಂಗಳು ಕನ್ಯಾ ರಾಶಿಯವರಿಗೆ ಉತ್ತಮವಾಗಿದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮದುವೆ ಮಾತುಕತೆಗೆ ಸಮಯ ಯೋಗ್ಯವಾಗಿದೆ. ದೂರ ಪ್ರಯಾಣ ಮಾಡಬಹುದು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲಿದೆ.

ತುಲಾ ರಾಶಿ
ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ಪ್ರೇಮ ಸಂಬಂಧಗಳ ವಿಷಯದಲ್ಲಿ ಈ ರಾಶಿಯವರಿಗೆ ಉತ್ತಮವಾಗಿರುತ್ತದೆ. ವಿದೇಶದಲ್ಲಿ ಉದ್ಯೋಗ್ಯಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ಶುಭ ಫಲಿತಾಂಶ ಪಡೆಯಬಹುದು. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದೀರಿ. ಜೀವನ ಸಂಗಾತಿಯ ಸಮಯ ಉತ್ತಮವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.

ಯಾರಿಗೆ ಈ ತಿಂಗಳಿನಲ್ಲಿ ಸವಾಲುಗಳು ಅಧಿಕ
ವೃಶ್ಚಿಕ ರಾಶಿ
ಈ ತಿಂಗಳು ವೃಶ್ಚಿಕ ರಾಶಿಯವರಿಗೆ ಸ್ವಲ್ಪ ಕಷ್ಟವಾಗಬಹುದು. ನೀವು ಬಯಸಿದವರಿಂದ ಬೆಂಬಲ ಸಿಗದೆ ನಿರಾಸೆ ಉಂಟಾಗಬಹುದು, ಕೆಲಸದಲ್ಲಿ ತುಂಬಾನೇ ಒತ್ತಡವಿರುತ್ತದೆ, ಈ ಸಮಯದಲ್ಲಿ ಆದಾಯ ಕಡಿಮೆ ಇರುತ್ತದೆ, ವೆಚ್ಚಗಳು ಅಧಿಕವಿರಲಿದೆ.

ಕುಂಭ ರಾಶಿ
ಈ ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಅನೇಕ ಏರಳಿತಗಳು ಉಂಟಾಗಬಹುದು. ಕೆಲಸದ ವಿಷಯದಲ್ಲಿ ಸ್ವಲ್ಪ ಕೂಡ ನಿರ್ಲಕ್ಷ್ಯ ಮಾಡಬಾರದು. ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಕೂಡ ಕಾಡುವುದು.



Click it and Unblock the Notifications
