Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಚಂದ್ರ ದೋಷವಿದೆಯೇ? ಲಾಲ್ ಕಿತಾಬ್ ಶಾಸ್ತ್ರದಲ್ಲಿ ಹೇಳಲಾಗಿರುವ ಈ ಪರಿಹಾರ ಮಾಡಿ
ನಮ್ಮ ಕುಂಡಲಿಯಲ್ಲಿ ಚಂದ್ರ ದುರ್ಬಲ ಸ್ಥಾನದಲ್ಲಿದ್ದರೆ ಚಂದ್ರದೋಷ ಉಂಟಾಗುತ್ತದೆ. ಚಂದ್ರದೋಷವಿದ್ದರೆ ಮದುವೆ ವಿಳಂಬವಾಗುವುದು, ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುವುದು. ಕೆಲವರಿಗೆ ಮಕ್ಕಳಾಗಲು ಕೂಡ ತೊಂದರೆಯಾಗುವುದು. ಯಾವುದೇ ಗ್ರಹ ದೋಷವಿದ್ದರೂ ಜ್ಯೋತಿಷ್ಯದಲ್ಲಿ ಪರಿಹಾರ ಇದೆ. ಚಂದ್ರ ದೋಷ ನಿವಾರಣೆಗೆ ಲಾಲ್ ಕಿತಾಬ್‌ನಲ್ಲಿ ಪರಿಹಾರವಿದೆ ನೋಡಿ:

ಚಂದ್ರನನ್ನು ಪೂಜಿಸಿ
ಲಾಲ್ ಕಿತಾಬ್ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಚಂದ್ರನು ದುರ್ಬಲ ಸ್ಥಿತಿಯಲ್ಲಿದ್ದರೆ ಚಂದ್ರನನ್ನು ಬಲಪಡಿಸಲು, ಬೆಳ್ಳಿಯ ಪಾತ್ರೆಯಲ್ಲಿ ಗಂಗಾಜಲ, ಹಾಲು, ಅಕ್ಕಿ ಮತ್ತು ಸಕ್ಕರೆ ಹಾಕಿ ಆ ನೀರನ್ನು ಹುಣ್ಣಿಮೆಯಂದು ಚಂದ್ರನಿಗೆ ಅರ್ಘ್ಯವನ್ನಾಗಿ ಅರ್ಪಿಸಬೇಕು.
ಆರ್ಘ್ಯ ಅರ್ಪಿಸುವಾಗ ಈ ಮಂತ್ರ ಪಠಿಸಿ
ಚಂದ್ರನ ಸ್ಥಾನವನ್ನು ಮತ್ತು ಚಂದ್ರನ ದುಷ್ಪರಿಣಾಮಗಳನ್ನು ಬಲಪಡಿಸಲು, ಚಂದ್ರನ ಮಂತ್ರಗಳನ್ನು ಪಠಿಸಿ.
ಓಂ ಪುತ್ರ ಸೋಮಾಯ ನಮಃ ।
ಓಂ ಶ್ರೀ ಚಂದ್ರಾಯ ನಮಃ
ಹುಣ್ಣಿಮೆಯಂದು ಈ ವಸ್ತುಗಳನ್ನು ದಾನ ಮಾಡಿ
ನಮ್ಮ ಜಾತಕದಲ್ಲಿ ಚಂದ್ರ ಸ್ಥಾನವನ್ನು ಬಲಪಡಿಸಲು ಅಕ್ಕಿ ಪಾಯಸ ಮಾಡು ದಾನ ಮಾಡಿ. ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಸೋಮವಾರ ಸಿಹಿ ಹಾಲು ಕುಡಿಯಬಾರದು.
ತಾಯಿಯ ಪಾದಗಳಿಗೆ ನಮಸ್ಕರಿಸಿ
ಲಾಲ್ ಕಿತಾಬ್ ಪ್ರಕಾರ, ಬೆಳಗ್ಗೆ ಎದ್ದ ತಕ್ಷಣ ತಾಯಿಯ ಪಾದ ಮುಟ್ಟಿ ನಮಸ್ಕರಿಸಿ, ಅವಳನ್ನು ಖುಷಿಯಾಗಿ ನೋಡಿಕೊಳ್ಳಿ. ಅವಳು ಖುಷಿಯಾಗಿದ್ದರೆ ಚಂದ್ರನ ದೋಷ ಕಡಿಮೆಯಾಗುವುದು.
ಶಿವನಿಗೆ ರುದ್ರಾಭಿಷೇಕ ಮಾಡಿ
ಲಾಲ್ ಕಿತಾಬ್ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಚಂದ್ರನು ದುರ್ಬಲ ಅಥವಾ ಅಶುಭ ಸ್ಥಾನದಲ್ಲಿದ್ದರೆ ಶಿವನನ್ನು ಆರಾಧಿಸಬೇಕು. ಪ್ರತಿ ಸೋಮವಾರ, ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು ಹಾಗೂ ಶಿವ ಚಾಲೀಸಾವನ್ನು ಪಠಿಸುವುದರಿಂದ ತೊಂದರೆಗಳು ದೂರಾಗುವುದು.
ಈ ವಿಷಯಗಳನ್ನು ನೆನಪಿನಲ್ಲಿಡಿ
ಶಾಸ್ತ್ರ ಪ್ರಕಾರ ಬಿಳಿ ಮತ್ತು ಬೂದು ಬಣ್ಣಗಳು ಚಂದ್ರನ ಸಂಕೇತವಾಗಿದೆ, ಈ ಬಣ್ಣದ ಬಟ್ಟೆಗಳನ್ನು ಧರಿಸಿ, ಅಲ್ಲದೆ ನೀಲಿ, ಹಸಿರು ಮತ್ತು ಗುಲಾಬಿ ಬಣ್ಣಗಳು, ಆಕಾಶ ನೀಲಿ ಬಣ್ಣದ ಉಡುಪು ಧರಿಸಿ. ಚಂದ್ರ ದುರ್ಬಲವಾಗಿರುವವರು ಕಪ್ಪು ಮತ್ತು ಕೆಂಪು ಬಣ್ಣ ನಿಮಗೆ ಅದೃಷ್ಟಕರವಲ್ಲ.
ಯಾರ ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಅವರು ನೀರನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ನಿಮ್ಮ ಮನೆಯಲ್ಲಿ ಹಾಳಾದ ಟ್ಯಾಪ್‌ಗಳನ್ನು ಆದಷ್ಟು ಬೇಗ ಸರಿಪಡಿಸಿ.



Click it and Unblock the Notifications

