Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ನಿಮ್ಮ ರಾಶಿಗೆ ತಕ್ಕಂತೆ ಹೀಗೆ ಹೋಳಿ ಆಚರಿಸಿ, ಸಮೃದ್ಧಿ ಹೆಚ್ಚುವುದು
ಬಣ್ಣದ ಓಕುಳಿ ಹಬ್ಬ ಹೋಳಿಯನ್ನು ಮಾರ್ಚ್ 8ರಂದು ಆಚರಿಸಲಾಗುವುದು. ಮಾರ್ಚ್ 7ಕ್ಕೆ ಹೋಲಿಕಾ ದಹನ್ ಮುಹೂರ್ತವಿದೆ, ಅದರ ಮಾರನೇಯ ದಿನ ಬಣ್ಣದ ಹಬ್ಬವನ್ನು ಆಚರಿಸಲಾಗುವುದು.

ಹೋಳಿ ಹಬ್ಬವೆಂದರೆ ಬರೀ ಬಣ್ಣಗಳನ್ನು ಎರಚುವುದಲ್ಲ, ಆ ಬಣ್ಣ ಎರಚುವುದರ ಹಿಂದೆ ಅರ್ಥವಿದೆ. ಬಣ್ಣಗಳು ಬದುಕನ್ನು ಪ್ರತಿನಿಧಿಸುತ್ತದೆ, ಬಣ್ಣಗಳಂತೆ ಬದುಕು ಕೂಡ ಆಕರ್ಷಕವಾಗಿರಲಿ ಎಂಬುವುದರ ಸಂಕೇತವಾಗಿದೆ. ಕೆಟ್ಟದರ ಮೇಲೆ ಒಳ್ಳೆಯದು ಗೆಲ್ಲುತ್ತದೆ ಎಂಬುವುದನ್ನು ಈ ಹಬ್ಬ ಸೂಚಿಸುತ್ತದೆ.
ಬಣ್ಣವನ್ನು ಎರಚಿ ಆಟ ಆಡುವಾಗ ನಿಮ್ಮ ರಾಶಿಗೆ ಸೂಕ್ತವಾದ ಬಣ್ಣದಲ್ಲಿ ಆಡಿದರೆ ಮತ್ತಷ್ಟು ಶುಭವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ರಾಶಿಗೆ ತಕ್ಕಂತೆ ನೀವು ಯಾವ ಬಣ್ಣಗಳಲ್ಲಿ ಹೋಳಿ ಆಡಬೇಕು ಎಂದು ನೋಡೋಣ ಬನ್ನಿ:

ಮೇಷ ರಾಶಿ
ನೀವು ರೋಸ್, ಅರಿಶಿಣ ಅಥವಾ ಬಿಳಿ ಬಣ್ಣವನ್ನು ಕೆಂಪು ಬಣ್ಣದ ಜೊತೆ ಮಿಶ್ರ ಮಾಡಿ, ಹೋಳಿ ಆಡುವ ಮುನ್ನ ಈ ಬಣ್ಣದಿಂದ ನಿಮ್ಮ ಹಣೆಗೆ ತಿಲಕವಿಟ್ಟು ಆಡಿ. ಈ ಬಣ್ಣ ನಿಮ್ಮ ವೃತ್ತಿ ಜೀವನದಲ್ಲಿ ಏಳಿಗೆ ಉಂಟು ಮಾಡುತ್ತದೆ.

ವೃಷಭ ರಾಶಿ
ರಂಗಿನ ಹಬ್ಬವನ್ನು ನೀವು ಹಸಿರು, ಬಿಳಿ ಅಥವಾ ಇತರ ಬ್ರೈಟ್ ಕಲರ್ ಬಣ್ಣ ಬಳಸಿ ಆಟ ಆಡಿ. ನೀವು ಹೋಳಿ ಹಬ್ಬದ ದಿನ ಬೆಳಗ್ಗೆ ಸೂರ್ಯ ದೇವನಿಗೆ ಆರ್ಘ್ಯ ಅರ್ಪಿಸಿ.

ಮಿಥುನ ರಾಶಿ
ನೀವು ಹೋಳಿ ಆಚರಣೆಯ ಮುನ್ನ ಶಿವನ ದೇವಾಲಯಕ್ಕೆ ಭೇಟಿ ನೀಡಿ, ನಂತರ ಬಣ್ಣದ ಹಬ್ಬವನ್ನು ಸಂತೋಷದಿಂದ ಆಚರಿಸಿ.

ಕರ್ಕ ರಾಶಿ
ನೀವು ಹೋಳಿ ಆಡುವ ಮುನ್ನ ಹಿರಿಯರಿಗೆ ಬಣ್ಣದಿಂದ ತಿಲಕವಿಟ್ಟು ನಂತರ ಹೋಳಿ ಹಬ್ಬವನ್ನು ಆಚರಿಸಿ. ನೀವು ಬಣ್ಣದ ಪುಡಿಯಲ್ಲಿ ಆಟ ಆಡುವ ಬದಲಿಗೆ ಬಣ್ಣವನ್ನು ನೀರಿನಲ್ಲಿ ಕಲೆಸಿ ಅದರಲ್ಲಿ ಎರಚಾಡಿ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬೆಳಗ್ಗೆ ಕುಂಕುಮವನ್ನು ಸೂರ್ಯನಿಗೆ ಆರ್ಘ್ಯ ಅರ್ಪಿಸುವಾಗ ಅರ್ಪಿಸಿ, ನಂತರ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ.

ಕನ್ಯಾ ರಾಶಿ
ಈ ವರ್ಷ ಹೋಳಿ ಆಚರಿಸಲು ಹಸಿರು, ನೀಲಿ, ಕಡು ನೀಲಿ ಬಣ್ಣ ಬಳಸಿ. ಈ ಬಣ್ಣ ನಿಮಗೆ ಅದೃಷ್ಟದ ಬಣ್ಣಗಳಾಗಿವೆ.

ತುಲಾ ರಾಶಿ
ಈ ವರ್ಷ ರಂಗಿನ ಹಬ್ಬ ಆಚರಿಸುವ ಮುನ್ನ ಹಿರಿಯರಿಗೆ ತಿಲಕವಿಡಿ. ಮದುವೆ ವಿಳಂಬವಾಗುತ್ತಿದ್ದರೆ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳಿಗೆ ಕನ್ಯಾ ಪೂಜೆ ಮಾಡಿ.

ವೃಶ್ಚಿಕ ರಾಶಿ
ನೀವು ಕೆಂಪು, ಬಿಳಿ, ಪಿಂಕ್ ಬಣ್ಣವನ್ನು ಬಳಸಿ ಹೋಳಿ ಹಬ್ಬ ಆಚರಿಸಿ. ನೀವು ಈ ವರ್ಷ ಹೋಳಿ ಆಡುವಾಗ ನೀರು ಬಳಸಬೇಡಿ.

ಧನು ರಾಶಿ
ನೀವು ಹೋಳಿ ಆಚರಣೆ ಮಾಡುವ ಮುನ್ನ ನಿಮ್ಮ ಗುರುಗಳ ಆಶೀರ್ವಾದ ಪಡೆಯಬೇಕು. ಈ ದಿನ ಶಿವನ ಪೂಜೆ ಮಾಡಿ.

ಮಕರ ರಾಶಿ
ಮಕರ ರಾಶಿಯವರು ಈ ದಿನ ಬಿಳಿ, ನೀಲಿ, ಹಳದಿ ಬಣ್ಣದ ಉಡುಗೆ ಧರಿಸಿ.

ಕುಂಭ ರಾಶಿ
ಕುಂಭ ರಾಶಿಯವರು ನೇರಳೆ, ಬಿಳಿ, ಪಿಂಕ್ ಬಣ್ಣವನ್ನು ಬಳಸಿ. ಈ ದಿನ ಶನಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದು ನಂತರ ಹೋಳಿ ಆಚರಿಸಿ.

ಮೀನ ರಾಶಿ
ಗುಲಾಬಿ ಬಣ್ಣ, ಹಳದಿ, ಬಿಳಿ ಈ ಬಣ್ಣದ ನಿಮ್ಮ ರಾಶಿಗೆ ಅದೃಷ್ಟದ ಬಣ್ಣವಾಗಿದೆ. ಈ ಬಣ್ಣಗಳು ನಿಮ್ಮ ಬದುಕಿಗೆ ಸಮೃದ್ಧಿಯನ್ನು ತುಂಬುವುದು.



Click it and Unblock the Notifications
