For Quick Alerts
ALLOW NOTIFICATIONS  
For Daily Alerts

ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ

|

ಶುಭೋದಯ....ದಿನ ಬೆಳಗಾಗಿ ನಮ್ಮ ದಿನಚರಿ ಆರಂಭವಾಗುವುದೇ ಒಂದು ನಂಬಿಕೆ ಮೇಲೆ. ಈ ದಿನ ಎಲ್ಲವೂ ಒಳಿತಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇವೆ. ಜ್ಯೋತಿಷ್ಯದಲ್ಲೂ ಕೂಡ ಈ ದಿನ ಯಾವ ರಾಶಿಗೆ ಹೇಗಿರಲಿದೆ ಎಂದು ಹೇಳಲಾಗುತ್ತದೆ. ಬನ್ನಿ ಈ ದಿನ ನಿಮ್ಮ ರಾಶಿಫಲ ಹೇಗಿದೆ ಎಂದು ತಿಳಿಯೋಣ:

Dina Bhavishya 27 january 2021

ಸಂವತ್ಸರ: ಶಾರ್ವರಿ
ಆಯನ: ಉತ್ತರಾಯಣ
ಋತು: ಶಿಶಿರ
ಮಾಸ: ಪುಷ್ಯ
ನಕ್ಷತ್ರ: ಜನವರಿ 28, ಮಧ್ಯಾಹ್ನ 03:49ರವರೆಗೆ ಪುನರ್ವಸು, ನಂತರ ಪುಷ್ಯ
ಪಕ್ಷ: ಶುಕ್ಲ ಪಕ್ಷ
ರಾಹುಕಾಲ: ಮಧ್ಯಾಹ್ನ 12:34ರಿಂದ 01:55ರವರೆಗೆ
ಗುಳಿಕಕಾಲ: ಮಧ್ಯಾಹ್ನ 11:13ರಿಂದ 12:34ರವರೆಗೆ
ಯಮಗಂಡಕಾಲ: ಬೆಳಗ್ಗೆ 08:32ರಿಂದ 09:53ರವರೆಗೆ
ದುರ್ಮುಹೂರ್ತ: ಮಧ್ಯಾಹ್ನ 12:13ರಿಂದ 12:56ರವರೆಗೆ

ಸೂರ್ಯೋದಯ: ಬೆಳಗ್ಗೆ 07:12ಕ್ಕೆ
ಸೂರ್ಯಾಸ್ತ: ಸಂಜೆ 05:56ಕ್ಕೆ

ಕಷ್ಟಕಾರ್ಪಣ್ಯದಿಂದ ಮುಕ್ತಿ ಹೊಂದಲು ದಾರಿ ದೀಪ:
ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಕೇಂದ್ರ
ತುಳುನಾಡಿನ ಕರಾವಳಿಯ ದೈವಶಕ್ತಿ ಜ್ಯೋತಿಷ್ಯರು

ಸ್ತ್ರೀ-ಪುರುಷ ಪ್ರೇಮವಿಚಾರ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ,
ಅತ್ತೆ-ಸೊಸೆ ಕಿರಿಕಿರಿ, ವಶೀಕರಣ, ಸಂತಾನಯೋಗ, ಇತ್ಯಾದಿ ಸಮಸ್ಯೆಗಳಿಗೆ,
ಅಷ್ಟಮಂಗಳ ಪ್ರಶ್ನೆ, ತಾಂಬೂಲ ಪ್ರಶ್ನೆ, ಜಾತಕ ವಿಶ್ಲೇಷಣೆ ಮಾಡಿ ನಿಮ್ಮ
ಇಷ್ಟಾರ್ಥ ಕಾರ್ಯಗಳಿಗೆ 5 ದಿನದಲ್ಲಿ ಪರಿಹಾರ ಶತಸಿದ್ದ.
ಮನೆಯ ವಿಳಾಸ: ನಂ.86, ಸಂಪಿಗೆ ರಸ್ತೆ, ಮಲ್ಲೇಶ್ವರಂ ಮೊ: 9945515555

ಮೇಷ ರಾಶಿ:

ಮೇಷ ರಾಶಿ:

ಆರ್ಥಿಕವಾಗಿ ನೀವು ಇಂದು ಲಾಭ ಗಳಿಸಬಹುದು. ನಿಮ್ಮ ಆರ್ಥಿಕ ಏಳಿಗೆಯ ಪ್ರಯತ್ನವು ಬಹಳ ಸಮಯದಿಂದ ನಡೆಯುತ್ತಿದ್ದರೆ, ಇಂದು ಯಶಸ್ಸು ಸಿಗುವುದು. ನಿಮಗೆ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಸಂತಸ ಸಿಗುವುದು. ಹಿರಿಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಉತ್ತಮವಾಗಿರುತ್ತದೆ ಮತ್ತು ಬಾಸ್ ನ ಬೆಂಬಲ ಸಿಗುತ್ತದೆ. ವ್ಯಾಪಾರಸ್ಥರಿಗೆ ಲಾಭ ದೊರೆಯುವುದು. ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವು ಎಚ್ಚರಿಕೆಯಿಂದ ತೆಗೆದುಕೊಂಡರೆ ಇಂದು ನೀವು ಅಪಾರ ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಮನೆಯ ಸದಸ್ಯರೊಂದಿಗಿನ ಸಂಬಂಧವು ಸುಧಾರಿಸುವ ಸಾಧ್ಯತೆಯಿದೆ. ಆದಾಗ್ಯೂ, ನಿಮ್ಮ ಮಾತು ಮತ್ತು ನಡವಳಿಕೆ ವಿಚಾರದಲ್ಲಿ ನೀವು ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಇಂದು ಆರೋಗ್ಯದಲ್ಲಿ ಕೊಂಚ ಏರು ಪೇರು ಉಂಟಾಗುವ ಸಾಧ್ಯತೆಯಿದೆ.

ಉತ್ತಮ ಬಣ್ಣ: ಹಳದಿ

ಶುಭ ಸಂಖ್ಯೆ: 23

ಶುಭ ಸಮಯ: ಬೆಳಗ್ಗೆ 7:50 ರಿಂದ ಸಂಜೆ 5ರವರೆಗೆ

ವೃಷಭ ರಾಶಿ:

ವೃಷಭ ರಾಶಿ:

ನಿಮ್ಮ ವ್ಯವಹಾರವನ್ನು ಅಭಿವೃದ್ದಿ ಪಡಿಸಲು ನೀವು ಪ್ರಯತ್ನಿಸುತ್ತಿದ್ದರೆ ನೀವು ಇಂದು ಉತ್ತಮ ಯಶಸ್ಸನ್ನು ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಸಹ ಆರ್ಥಿಕವಾಗಿ ಲಾಭ ಪಡೆಯಬಹುದು. ನಿಮ್ಮ ಕೆಲಸವು ಆಸ್ತಿಗೆ ಸಂಬಂಧಪಟ್ಟಿದ್ದರೆ ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕಚೇರಿಯಲ್ಲಿ ಕೆಲಸದ ಹೊರೆ ಹಠಾತ್ ಹೆಚ್ಚಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ, ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನೀವು ಯಾವುದೇ ದೊಡ್ಡ ಹಣಕಾಸಿನ ವಹಿವಾಟು ಮಾಡುವುದನ್ನು ಇಂದು ತಪ್ಪಿಸಬೇಕು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಸಂಗಾತಿಯೊಂದಿಗೆ ನಿಮ್ಮ ನಡವಳಿಕೆಯನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸಿ. ಸಣ್ಣ ವಿಷಯಗಳ ಮೇಲೆ ಕೋಪಗೊಳ್ಳುವ ನಿಮ್ಮ ಅಭ್ಯಾಸದಿಂದಾಗಿ, ಅದು ಕಹಿ ಅನುಭವ ಕೊಡಬಹುದು. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಕ್ರೀಮ್

ಶುಭ ಸಂಖ್ಯೆ: 18

ಶುಭ ಸಮಯ: ಮಧ್ಯಾಹ್ನ 3ರಿಂದ 9 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಇಂದು, ನೀವು ನಿಮ್ಮ ಆತಂಕದಿಂದ ಮುಕ್ತರಾಗುತ್ತೀರಿ. ನಿಮ್ಮ ಕೆಲಸದ ಮೇಲೆ ನೀವು ಗಮನಹರಿಸಲು ಸಾಧ್ಯವಾಗುತ್ತದೆ ಮತ್ತು ಶ್ರಮಪಟ್ಟು ಕೆಲಸ ಮಾಡುತ್ತೀರಿ. ವ್ಯಾಪಾರಿಗಳು ಇಂದು ಪ್ರಯೋಜನ ಪಡೆಯಬಹುದು. ನಿಮ್ಮ ಕೆಲಸವು ಷೇರು ಮಾರುಕಟ್ಟೆಗೆ ಸಂಬಂಧಿಸಿದ್ದಲ್ಲಿ ಇಂದು ನಿಮಗೆ ತುಂಬಾ ಅದೃಷ್ಟದ ದಿನವಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಇರುತ್ತೀರಿ. ಪೋಷಕರಿಂದ ಪ್ರೀತಿ ಮತ್ತು ಆಶೀರ್ವಾದಗಳನ್ನು ಪಡೆಯುವ ಮೂಲಕ ನೀವು ಪಾಸಿಟಿವ್ ಆಗಿರುತ್ತೀರಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವೂ ಉತ್ತಮವಾಗಿರುತ್ತದೆ. ಇಂದು ಬಹಳ ಸಮಯದ ನಂತರ ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡುತ್ತಾ, ಇಂದು ನೀವು ಸಣ್ಣ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಇಂದು ನೀವು ತುಂಬಾ ರಿಫ್ರೆಶ್ ಆಗರ‍್ತೀರಿ.

ಉತ್ತಮ ಬಣ್ಣ: ಕಡು ಹಸಿರು

ಶುಭ ಸಂಖ್ಯೆ: 4

ಶುಭ ಸಮಯ: ಸಂಜೆ 5 ರಿಂದ ರಾತ್ರಿ 8:30 ರವರೆಗೆ

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿ:

ಯಾವುದಾದರೂ ಒಂದು ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸಲು ಕಚೇರಿಯಲ್ಲಿ ನೀವು ತುಂಬಾ ಶ್ರಮಿಸುತ್ತಿದ್ದರೆ, ನಿಮ್ಮ ಕಠಿಣ ಪರಿಶ್ರಮ ಇಂದು ಯಶಸ್ವಿಯಾಗಲಿದೆ. ನಿಮ್ಮ ಕಾರ್ಯಕ್ಷಮತೆಗೆ ಉನ್ನತ ಅಧಿಕಾರಿಗಳು ತೃಪ್ತರಾಗುತ್ತಾರೆ ಮತ್ತು ನಿಮ್ಮನ್ನು ಪ್ರಶಂಸಿಸುತ್ತಾರೆ. ಅದೇ ರೀತಿ, ವ್ಯಾಪಾರಸ್ಥರು ತಮ್ಮ ನಷ್ಟವನ್ನು ಸರಿದೂಗಿಸುವ ಅವಕಾಶವನ್ನು ಪಡೆಯಬಹುದು. ಸಾರಿಗೆ ಸಂಬಂಧಿತ ವ್ಯವಹಾರದಲ್ಲಿ ಕಾನೂನು ವಿಷಯಗಳಲ್ಲಿ ವ್ಯಾಪರಾಸ್ಥರು ಜಾಗರೂಕರಾಗಿರಬೇಕು. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನೀವು ದೊಡ್ಡ ಮಟ್ಟದ ಖರ್ಚು ಮಾಡುವುದನ್ನು ತಡೆಯಬೇಕು. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಮನೆಯ ಸದಸ್ಯರೊಂದಿಗಿನ ನಿಮ್ಮ ಸಂಬಂಧವು ಸರಿ ಇಲ್ಲದಿದ್ದರೆ, ಇಂದು ಎಲ್ಲಾ ತಪ್ಪು ಕಲ್ಪನೆಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ಆಗ ನಿಮ್ಮ ನಡುವೆ ಎಲ್ಲವೂ ಸರಿ ಆಗಬಹುದು.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 20

ಶುಭ ಸಮಯ: ಬೆಳಗ್ಗೆ 10:35 ರಿಂದ ಸಂಜೆ 7 ರವರೆಗೆ

ಸಿಂಹ ರಾಶಿ:

ಸಿಂಹ ರಾಶಿ:

ನೀವು ವಿದ್ಯಾರ್ಥಿಯಾಗಿದ್ದರೆ, ಇಂದು ನಿಮ್ಮ ಅಧ್ಯಯನದಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು. ಆದರೆ ಅದಕ್ಕೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಈ ಸಮಸ್ಯೆ ತಾತ್ಕಾಲಿಕವಾದದ್ದು, ಶೀಘ್ರದಲ್ಲೇ ಈ ಸಮಸ್ಯೆ ಕೊನೆಗೊಳ್ಳುತ್ತದೆ ಮತ್ತು ನಿಮ್ಮ ಅಧ್ಯಯನಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ. ಹಣದ ಬಗ್ಗೆ ಮಾತನಾಡುತ್ತಾ, ಇಂದಿನ ದಿನವು ತುಂಬಾ ದುಬಾರಿಯಾಗಲಿದೆ. ಹಾಗಾಗಿ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬೇಕು. ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಮನೆಯ ಸದಸ್ಯರೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ತಾಯಿಯ ಆರೋಗ್ಯವು ಸರಿ ಇಲ್ಲದಿದ್ದರೆ, ಆಕೆಯ ಆರೋಗ್ಯ ಸುಧಾರಿಸುವ ಸಾಧ್ಯತೆಯಿದೆ. ಅವರನ್ನು ಒತ್ತಡದಿಂದ ದೂರವಿರಿಸಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ಆಯಾಸ ಹೆಚ್ಚಾಗಬಹುದು.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 35

ಶುಭ ಸಮಯ: ಮಧ್ಯಾಹ್ನ 2:30 ರಿಂದ 6 ರವರೆಗೆ

ಕನ್ಯಾರಾಶಿ:

ಕನ್ಯಾರಾಶಿ:

ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಲಿದೆ. ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಕಚೇರಿಯಲ್ಲಿ ಬಾಸ್‌ ನಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು. ಚಿಲ್ಲರೆ ವ್ಯಾಪಾರಿಗಳು ನಿರೀಕ್ಷೆಯಂತೆ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಹೆಚ್ಚು. ಇಂದು ಷೇರು ಮಾರುಕಟ್ಟೆಯಲ್ಲಿ ದುಡಿಯುವ ಜನರಿಗೆ ಮಿಶ್ರ ಫಲ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ತಂದೆಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಯಾವುದನ್ನಾದರೂ ಅವರು ಒಪ್ಪದಿದ್ದರೆ, ನೀವು ಸಮಧಾನದಿಂದ ಇರಬೇಕಾಗುತ್ತದೆ. ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಬಜೆಟ್ ಪ್ರಕಾರ ನೀವು ಚಿಂತನಶೀಲವಾಗಿ ಖರ್ಚು ಮಾಡುತ್ತೀರಿ. ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ಗಂಟಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು. ತಂಪಾದ ತಿನಿಸುಗಳನ್ನು ತಿನ್ನಬೇಡಿ.

ಉತ್ತಮ ಬಣ್ಣ: ಕಿತ್ತಳೆ

ಶುಭ ಸಂಖ್ಯೆ: 12

ಶುಭ ಸಮಯ: ಬೆಳಗ್ಗೆ 4:15 ರಿಂದ ಸಂಜೆ 5 ರವರೆಗೆ

ತುಲಾ ರಾಶಿ:

ತುಲಾ ರಾಶಿ:

ಕೆಲಸದ ಒತ್ತಡ ಹೆಚ್ಚುತ್ತಿರುವ ಕಾರಣ, ಇಂದು ನಿಮಗೆ ಕಷ್ಟವಾಗಬಹುದು. ವ್ಯಾಪಾರಸ್ಥರು ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ. ನೀವು ಗೊಂದಲದ ಸ್ಥಿತಿಯಲ್ಲಿ ಇರುವಿರಿ. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ಅನುಭವಿ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಿದ ನಂತರವೇ ನೀವು ಮುಂದುವರಿಯಬೇಕು. ನೀವು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಜಗಳವಾಡುವುದನ್ನು ತಪ್ಪಿಸಬೇಕು. ಅವರು ನಿಮಗಾಗಿ ಯಾವುದೇ ಕೆಲಸವನ್ನು ನೀಡಿದರೆ, ಅದರ ಬಗ್ಗೆ ಗಂಭೀರವಾಗಿರಿ ಮತ್ತು ನಿಮ್ಮ ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸಿ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಮನೆಯ ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಹಣ ಪರಿಸ್ಥಿತಿ ಚೆನ್ನಾಗಿರುತ್ತದೆ. ನೀವು ದುಂದು ವೆಚ್ಚ ಮಾಡದಿದ್ದರೆ ದೊಡ್ಡ ಸಮಸ್ಯೆ ಇರುವುದಿಲ್ಲ. ಇಂದು ನೀವು ಬೆನ್ನುನೋವಿನ ಸಮಸ್ಯೆಗೆ ಒಳಗಾಗುವಿರಿ.

ಉತ್ತಮ ಬಣ್ಣ: ಬಿಳಿ

ಶುಭ ಸಂಖ್ಯೆ: 9

ಶುಭ ಸಮಯ: ಮಧ್ಯಾಹ್ನ 3 ರಿಂದ 7 ರವರೆಗೆ

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿ:

ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ಅದ್ಭುತ ದಿನವಾಗಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಗಟ್ಟಿಯಾಗಿರುತ್ತದೆ. ಅಲ್ಲದೆ, ನಿಮ್ಮ ನಡುವಿನ ಪ್ರೀತಿ ಕೂಡ ಗಾಢವಾಗುತ್ತದೆ. ಇಂದು ನೀವು ನಿಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಬಹುದು. ನೀವು ಮದುವೆಯಾಗಿದ್ದರೆ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯದಲ್ಲ. ದೊಡ್ಡ ಮಟ್ಟಿಗಿನ ಖರೀದಿ ಮಾಡುವ ಮನಸ್ಥಿತಿಯಲ್ಲಿದ್ದರೆ ಅದನ್ನು ತಪ್ಪಿಸಿ. ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವ ಜನರಿಗೆ ಬಡ್ತಿ ಸಿಗಬಹುದು. ಮತ್ತೊಂದೆಡೆ, ಖಾಸಗಿ ಉದ್ಯೋಗ ಅವಕಾಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಮಾತನಾಡುತ್ತಾ, ಇಂದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಆರೋಗ್ಯವಾಗಿರುತ್ತೀರಿ.

ಉತ್ತಮ ಬಣ್ಣ: ಕಡು ಹಳದಿ

ಶುಭ ಸಂಖ್ಯೆ: 31

ಶುಭ ಸಮಯ: ಬೆಳಗ್ಗೆ 8:15 ರಿಂದ ಸಂಜೆ 6 ರವರೆಗೆ

ಧನು ರಾಶಿ:

ಧನು ರಾಶಿ:

ಇಂದು, ನಿಮ್ಮ ಸಂಗಾತಿಯೊಂದಿಗೆ ಸಣ್ಣ ವಿಷಯದ ಬಗ್ಗೆಯೂ ಜಗಳವಾಡಬಹುದು. ನಿಮ್ಮ ಸಂಗಾತಿಯ ಕೆಲವು ಮಾತುಗಳು ನಿಮ್ಮ ಭಾವನೆಗಳನ್ನು ನೋಯಿಸಬಹುದು. ನೀವು ಈ ಸಮಯದಲ್ಲಿ ಶಾಂತವಾಗಿರಿ. ಕೆಲಸದ ಬಗ್ಗೆ ಮಾತನಾಡುವುದಾದರೆ, ನೀವು ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್ ಅಥವಾ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರೆ, ನಿಮಗೆ ಭಡ್ತಿ ಸಿಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಸಹ ಪ್ರಯೋಜನ ಪಡೆಯಬಹುದು. ಹಣದ ಬಗ್ಗೆ ಮಾತನಾಡುತ್ತಾ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ಆದರೆ, ಇತರರನ್ನು ಮೆಚ್ಚಿಸಲು, ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯದಲ್ಲ. ಗಂಟು ನೋವು ಕಾಣಿಸಿಕೊಳ್ಳಬಹುದು.

ಉತ್ತಮ ಬಣ್ಣ: ನೇರಳೆ

ಶುಭ ಸಂಖ್ಯೆ: 44

ಶುಭ ಸಮಯ: ಸಂಜೆ 6 ರಿಂದ 11 ರವರೆಗೆ

ಮಕರ ರಾಶಿ:

ಮಕರ ರಾಶಿ:

ವಿದ್ಯಾರ್ಥಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ನೀವು ಶ್ರದ್ಧೆಯಿಂದ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ವ್ಯವಹಾರ ಸಂಪರ್ಕಿತ ಜನರಿಗೆ ದಿನದ ಆರಂಭವು ಸರಿಯಾಗಿರುವುದಿಲ್ಲ, ಆದರೆ ದಿನದ ಎರಡನೇ ಭಾಗದಲ್ಲಿ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಮತ್ತು ನೀವು ಉತ್ತಮ ಆರ್ಥಿಕ ಲಾಭವನ್ನು ಸಹ ಪಡೆಯಬಹುದು. ನಿರುದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಅಗತ್ಯತೆ ಇರುವುದರಿಂದ, ಇಂದು ತುಂಬಾ ಶ್ರಮಿಸಬೇಕಾಗಬಹುದು. ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೀರಿ ಮತ್ತು ಯಶಸ್ಸನ್ನೂ ಪಡೆಯುತ್ತೀರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಪೋಷಕರೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಹಣದ ವಿಷಯದಲ್ಲಿ, ನಿಮಗೆ ಉತ್ತಮ ದಿನ. ಆಸ್ತಿಗೆ ಸಂಬಂಧಿಸಿದ ವಿಷಯದಲ್ಲಿ ದೊಡ್ಡ ಲಾಭ ಸಿಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಉತ್ತಮ ಬಣ್ಣ: ಗುಲಾಬಿ

ಶುಭ ಸಂಖ್ಯೆ: 13

ಶುಭ ಸಮಯ: ಬೆಳಗ್ಗೆ 6 ರಿಂದ 12:45 ರವರೆಗೆ

ಕುಂಭ ರಾಶಿ:

ಕುಂಭ ರಾಶಿ:

ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಬಾಸ್‌ನ ಗಮನ ಸೆಳೆಯಲು, ನಿಮ್ಮ ಸಣ್ಣ ಕಾರ್ಯಗಳನ್ನು ಸಹ ಎಚ್ಚರಿಕೆಯಿಂದ ಮತ್ತು ಶ್ರದ್ಧೆಯಿಂದ ಮಾಡಲು ಪ್ರಯತ್ನಿಸಿ. ಬಟ್ಟೆ ವ್ಯಾಪಾರಿಗಳು ಉತ್ತಮ ಲಾಭ ಪಡೆಯಬಹುದು. ಮತ್ತೊಂದೆಡೆ, ಪೀಠೋಪಕರಣಗಳಿಗೆ ಸಂಬಂಧಿಸಿದ ವ್ಯವಹಾರ ಮಾಡುವವರು ಸಹ ನಿರೀಕ್ಷಿತ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಇದೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸರಿ ಇಲ್ಲದಿದ್ದರೆ, ಇಂದು ನಿಮ್ಮ ನಡುವಿನ ಎಲ್ಲಾ ಸಮಸ್ಯೆಯನ್ನು ಕೊನೆಗೊಳಿಸಬಹುದು. ನಿಮ್ಮ ಸಂಗಾತಿ ತನ್ನ ಎಲ್ಲಾ ಕೋಪವನ್ನು ಮರೆತು, ನಿಮ್ಮ ದಾಂಪತ್ಯ ಜೀವನ ಉತ್ತಮವಾಗುವುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾರೆ, ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ.

ಉತ್ತಮ ಬಣ್ಣ: ಹಸಿರು

ಶುಭ ಸಂಖ್ಯೆ: 11

ಶುಭ ಸಮಯ: ಸಂಜೆ 4:40 ರಿಂದ 10:05 ರವರೆಗೆ

ಮೀನ ರಾಶಿ:

ಮೀನ ರಾಶಿ:

ವ್ಯಾಪಾರಸ್ಥರು ತಮ್ಮ ಆರ್ಥಿಕ ನಿರ್ಧಾರಗಳನ್ನು ಇಂದು ಬಹಳ ಜಾಗರೂಕತೆಯಿಂದ ತೆಗೆದುಕೊಳ್ಳಬೇಕು. ನಿಮ್ಮ ಹೊಸ ವ್ಯವಹಾರಕ್ಕಾಗಿ ದೊಡ್ಡ ಸಾಲವನ್ನು ತೆಗೆದುಕೊಳ್ಳಲು ನೀವು ಯೋಜಿಸುತ್ತಿದ್ದರೆ ಇಂದು ಅದಕ್ಕೆ ಸೂಕ್ತ ಸಮಯವಲ್ಲ. ಉದ್ಯೋಗದಲ್ಲಿರುವವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ಇಂದು ನೀವು ನಿಮ್ಮ ಎಲ್ಲಾ ಕಾರ್ಯಗಳನ್ನು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಜೀವನ ಉತ್ತಮವಾಗಿರುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗೆ ಹೊಂದಾಣಿಕೆ ಸ್ವಲ್ಪ ಹದಗೆಡಬಹುದು. ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ನೀವು ವಿಶೇಷ ಕಾಳಜಿ ವಹಿಸುವುದು ಉತ್ತಮ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಸಣ್ಣ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಇದಕ್ಕೆ ಸಮಯ ಅನುಕೂಲಕರವಾಗಿರುತ್ತದೆ. ಮಾನಸಿಕವಾಗಿ ಸದೃಢವಾಗಿರಲು ಪ್ರತಿದಿನ ಧ್ಯಾನ ಮಾಡಿ.

ಉತ್ತಮ ಬಣ್ಣ: ನೀಲಿ

ಶುಭ ಸಂಖ್ಯೆ: 7

ಶುಭ ಸಮಯ: ಮಧ್ಯಾಹ್ನ 2 ರಿಂದ 9 ರವರೆಗೆ

English summary

Dina Bhavishya 27 january 2021

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Tuesday, January 26, 2021, 21:18 [IST]
X
Desktop Bottom Promotion