For Quick Alerts
ALLOW NOTIFICATIONS  
For Daily Alerts

ಗುರುವಾರದ ದಿನ ಭವಿಷ್ಯ: 02 ಏಪ್ರಿಲ್ 2020

|

ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

Dina Bhavishya

ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ.

ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...

ಸಂವತ್ಸರ: ಶ್ರೀ ಶಾರ್ವರಿ
ಆಯನ: ಉತ್ತರಾಯನ
ಋತು: ಶಿಶಿರ
ಮಾಸ: ವಸಂತ
ಪಕ್ಷ: ಶುಕ್ಲ
ತಿಥಿ: ನವಮಿ
ನಕ್ಷತ್ರ: ಪುನರ್ವಸು
ರಾಹುಕಾಲ: ಮಧ್ಯಾಹ್ನ 1.58 ರಿಂದ 3.32 ರವರೆಗೆ
ಗುಳಿಕಕಾಲ: ಬೆಳಿಗ್ಗೆ 9.17 ರಿಂದ 10.51 ರವರೆಗೆ
ಯಮಗಂಡಕಾಲ: ಬೆಳಿಗ್ಗೆ 6.10 ರಿಂದ 7.43 ರವರೆಗೆ
ದುರ್ಮುಹೂರ್ತ: ಮಧ್ಯಾಹ್ನ 10.20 ರಿಂದ 11.10 ರವರೆಗೆ
ಸೂರ್ಯೋದಯ: ಬೆಳಿಗ್ಗೆ 6.10
ಸೂರ್ಯಾಸ್ತ: ಸಂಜೆ 6.40

ಮೇಷ ರಾಶಿ

ಮೇಷ ರಾಶಿ

xಇಂದು ನೀವು ಯಾವುದೇ ಕಾರಣವಿಲ್ಲದೆ ದುಃಖವನ್ನು ಅನುಭವಿಸಬಹುದು. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯುವುದು ನಿಮಗೆ ಒಳ್ಳೆಯದು. ನೀವು ಬಯಸಿದರೆ ನಿಮ್ಮ ಭಾವನೆಗಳನ್ನು ಆಪ್ತರ ಜತೆ ಹಂಚಿಕೊಳ್ಳಬಹುದು. ಕೆಲಸದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಮತ್ತು ಇಂದು ನೀವು ಸೃಜನಶೀಲ ಯೋಜನೆಯಲ್ಲಿ ಕೆಲಸ ಮಾಡಬಹುದು. ನಿಮ್ಮ ಬಗ್ಗೆಯೇ ನೀವು ಹೆಮ್ಮೆ ಪಡುತ್ತೀರಿ. ಹಿರಿಯರ ಬೆಂಬಲದೊಂದಿಗೆ ಅದ್ಭುತ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಹಣಕಾಸಿನ ದೃಷ್ಟಿಯಿಂದ ಇಂದು ಲಾಭದಾಯಕ ದಿನವಾಗಲಿದೆ. ಹೂಡಿಕೆಗೂ ಇದು ಶುಭ ದಿನವಾಗಿರುತ್ತದೆ. ಸಂಗಾತಿಯ ವರ್ತನೆ ಉತ್ತಮವಾಗಿರುವುದಿಲ್ಲ ಮತ್ತು ಅದು ನಿಮ್ಮನ್ನು ಕಾಡಬಹುದು. ಸಂಬಂಧಿಕರೊಂದಿಗಿನ ವಾದಗಳು ನಿಮಗೆ ಒತ್ತಡವನ್ನು ಉಂಟುಮಾಡಬಹುದು.

ಅದೃಷ್ಟ ಬಣ್ಣ: ತಿಳಿ ಗುಲಾಬಿ

ಅದೃಷ್ಟ ಸಂಖ್ಯೆ: 21

ಶುಭ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ರವರೆಗೆ

ವೃಷಭ ರಾಶಿ

ವೃಷಭ ರಾಶಿ

ಇಂದು ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ, ಇದರಿಂದಾಗಿ ನೀವು ತುಂಬಾ ಅಸಮಾಧಾನಗೊಳ್ಳುತ್ತೀರಿ. ದೀರ್ಘಕಾಲದಿಂದ ಈಡೇರದ ಪ್ರಮುಖ ವಿಷಯಗಳು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಈ ದಿನ ಉದ್ಯಮಿಗಳು ಸ್ವಲ್ಪ ಜಾಗರೂಕರಾಗಿರಬೇಕು. ಸಂಗಾತಿಯನ್ನು ಕುರುಡಾಗಿ ನಂಬಬೇಡಿ. ಉದ್ಯೋಗದಲ್ಲಿರುವ ಜನರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದ್ದಕ್ಕಿದ್ದಂತೆ ಅನೇಕ ಜವಾಬ್ದಾರಿಗಳು ನಿಮ್ಮದಾಗಬಹುದು. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಮಗು ನಿಮಗೆ ಕೆಲವು ಒಳ್ಳೆಯ ಸುದ್ದಿಗಳನ್ನು ತರುತ್ತದೆ. ಅವರ ಪ್ರಗತಿಯ ಬಗ್ಗೆ ನೀವು ಸಂತೋಷವಾಗಿರುತ್ತೀರಿ. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುವುದಿಲ್ಲ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 17

ಅದೃಷ್ಟ ಸಮಯ: ಮಧ್ಯಾಹ್ನ 1:00 ರಿಂದ 9:00 ರವರೆಗೆ

ಮಿಥುನ ರಾಶಿ

ಮಿಥುನ ರಾಶಿ

ಮನೆಯ ವಾತಾವರಣ ಸರಿಯಾಗುವುದಿಲ್ಲ. ಇಂದು ನಿಮ್ಮ ಹೆಚ್ಚಿನ ಸಮಯ ಕುಟುಂಬದ ವಿಷಯಗಳನ್ನು ಪರಿಹರಿಸಲು ಖರ್ಚು ಮಾಡಲಾಗುವುದು. ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ ಇಲ್ಲದಿದ್ದರೆ ಭವಿಷ್ಯದಲ್ಲಿ ವಿಷಾದಿಸುತ್ತೀರಿ. ಸಂಗಾತಿಯೊಂದಿಗೆ ದೀರ್ಘಕಾಲ ವಾದ ಮಾಡುತ್ತಿದ್ದರೆ ಪರಸ್ಪರ ಕ್ಷಮಿಸಿ ಮುಂದುವರಿಯುವುದು ಉತ್ತಮ. ಕೆಲಸದ ಒತ್ತಡವು ಇರುವುದಿಲ್ಲ, ಆದರೆ ಕಚೇರಿಯಲ್ಲಿ ಹೆಚ್ಚು ಗಲಾಟೆ ಮಾಡುವುದನ್ನು ತಪ್ಪಿಸಬೇಕು. ಉದ್ಯಮಿಗಳು ಇಂದು ಸ್ವಲ್ಪ ಉದ್ವಿಗ್ನರಾಗುತ್ತಾರೆ ಮತ್ತು ಅವರ ಕೆಲಸವು ಮಧ್ಯದಲ್ಲೆ ಸಿಲುಕಿಕೊಳ್ಳಬಹುದು. ಸರಿಯಾದ ಆಯ್ಕೆ ಮಾಡಿದರೆ ಖಂಡಿತ ಲಾಭ ಸಿಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕೇಸರಿ

ಅದೃಷ್ಟ ಸಂಖ್ಯೆ: 4

ಅದೃಷ್ಟ ಸಮಯ: ಬೆಳಿಗ್ಗೆ 5:40 ರಿಂದ 12:45 ರವರೆಗೆ

ಕರ್ಕ ರಾಶಿ

ಕರ್ಕ ರಾಶಿ

ವೈಯಕ್ತಿಕ ಸಂಬಂಧಗಳ ವಿಚಾರದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುವ ಮೂಲಕ ಉತ್ತಮವಾಗುತ್ತೀರಿ. ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಅಸ್ತವ್ಯಸ್ತಗೊಳಿಸಲು ಬಿಡಬೇಡಿ. ಸಕಾರಾತ್ಮಕ ಚಿಂತನೆ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ನೀವು ಜೀವನದಲ್ಲಿ ಮುಂದುವರಿಯಬಹುದು. ಹಣಕಾಸಿನ ವಿಚಾರದಲ್ಲಿ ಇಂದು ಸಾಮಾನ್ಯ ದಿನವಾಗಿರುತ್ತದೆ. ಕೆಲವು ಸಣ್ಣ ವೆಚ್ಚಗಳು ಸಾಧ್ಯವಾದರೂ, ಯಾವುದೇ ಸಮಸ್ಯೆ ಇರುವುದಿಲ್ಲ. ಕೆಲಸದಲ್ಲಿ ಈ ದಿನ ಶುಭವಾಗಿರುತ್ತದೆ. ದಾಂಪತ್ಯದಲ್ಲಿ ಮಂದತೆ ಇರುತ್ತದೆ. ಸಂಗಾತಿಯ ಮನಸ್ಥಿತಿ ಇಂದು ಕೆಟ್ಟದಾಗಿರಬಹುದು, ಆದ್ದರಿಂದ ಅವರ ಜತೆ ಹೆಚ್ಚು ಸಮಯವನ್ನು ಕಳೆಯಿರಿ. ಇಂದು ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ.

ಅದೃಷ್ಟ ಬಣ್ಣ: ಗುಲಾಬಿ

ಅದೃಷ್ಟ ಸಂಖ್ಯೆ: 35

ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ರಾತ್ರಿ 8:45 ರವರೆಗೆ

ಸಿಂಹ ರಾಶಿ

ಸಿಂಹ ರಾಶಿ

ಕೆಲಸದಲ್ಲಿ ದಿನವು ಉತ್ತಮವಾಗಿದೆ. ಉದ್ಯೋಗದಲ್ಲಿರುವವರು ಹಿರಿಯರ ಬೆಂಬಲವನ್ನು ಪಡೆಯುತ್ತಾರೆ. ಉದ್ಯಮಿಗಳು ಹೊಸ ಯೋಜನೆಗಳನ್ನು ಪಡೆಯಬಹುದು. ಇಂದು ಪ್ರತಿಯೊಬ್ಬರೂ ನಿಮ್ಮ ಪ್ರತಿಭೆಯನ್ನು ಕಾಣುತ್ತದೆ, ಇದು ನಿಮ್ಮ ಗೌರವ ಹಾಗೂ ಬೇಡಿಕೆಯನ್ನು ಹೆಚ್ಚಿಸುತ್ತದೆ. ನೀವು ಯಾವುದೇ ಹೊಸ ಯೋಜನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಇಂದು ಕುಟುಂಬ ಸದಸ್ಯರೊಂದಿಗೆ ಮೋಜಿನ ದಿನವಾಗಿರುತ್ತದೆ. ಪೋಷಕರಿಂದಲೂ ಆಶ್ಚರ್ಯವಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ, ಆದರೆ ಹಣದ ವಿಷಯದಲ್ಲಿ ಯಾವುದೇ ಆತುರಪಡಬೇಡಿ. ಇಂದು, ಒಂದು ಪ್ರಮುಖ ವಿಷಯದ ಬಗ್ಗೆ ನಿಮ್ಮ ಆತಂಕವನ್ನು ಕೊನೆಗೊಳಿಸುವ ಮೂಲಕ ನೀವು ಶಾಂತಿ ಮತ್ತು ಸಂತೋಷವನ್ನು ಅನುಭವಿಸುವಿರಿ.

ಅದೃಷ್ಟ ಬಣ್ಣ: ಕಂದು

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಸಂಜೆ 6:20 ರಿಂದ 8:20 ರವರೆಗೆ

ಕನ್ಯಾ ರಾಶಿ

ಕನ್ಯಾ ರಾಶಿ

ಉದ್ಯೋಗದಲ್ಲಿರುವವರು ಇಂದು ಜಾಗರೂಕರಾಗಿರಬೇಕು. ಉದ್ಯಮಿಗಳು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಯೋಚಿಸುವ ಅಗತ್ಯವಿದೆ. ಯಾವುದೇ ವ್ಯವಹಾರ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳುವುದನ್ನು ತಪ್ಪಿಸಿ, ವಿಶೇಷವಾಗಿ ನೀವು ಪಾಲುದಾರಿಕೆಯಲ್ಲಿ ಹೊಸದನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಕುಟುಂಬದಲ್ಲಿ ದಿನವು ತುಂಬಾ ಚೆನ್ನಾಗಿರುತ್ತದೆ. ಪೋಷಕರಿಂದ ಬೆಂಬಲವಿದೆ ಮತ್ತು ಆದ್ದರಿಂದ, ಅವರು ಹಂಚಿಕೊಂಡ ಯಾವುದೇ ಪ್ರಮುಖ ಸಲಹೆಯು ನಿಮಗೆ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಇಂದು ಪರಿಹರಿಸಬಹುದು. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಕೆಂಪು

ಅದೃಷ್ಟ ಸಂಖ್ಯೆ: 7

ಅದೃಷ್ಟ ಸಮಯ: ಸಂಜೆ 7 ರಿಂದ 9:25 ರವರೆಗೆ

ತುಲಾ ರಾಶಿ

ತುಲಾ ರಾಶಿ

ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ. ಸಂಗಾತಿಯಿಂದಾಗಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವ ಸಾಧ್ಯತೆಯಿದೆ. ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದರ ಮೂಲಕ ವಿಭಿನ್ನ ಸಂತೋಷವನ್ನು ಅನುಭವಿಸುವಿರಿ. ಆರ್ಥಿಕ ರಂಗದಲ್ಲಿ ಈ ದಿನ ಅತ್ಯುತ್ತಮವಾಗಿದೆ. ಹಿಂದಿನ ಸಾಲದ ಹಣ ಮರಳಿ ಪಡೆಯುವ ಸಾಧ್ಯತೆಯಿದೆ. ಕಚೇರಿಯಲ್ಲಿ ಮುಖ್ಯಸ್ಥರಿಂದ ಅಭಿನಂದನೆಗಳನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಇಂದು ಕೆಲವು ಉದ್ಯೋಗಾವಕಾಶಗಳು ಸಿಗಬಹುದು. ಉದ್ಯಮಿಗಳಿಗೆ ಸಹ ಅಪೇಕ್ಷಿತ ಲಾಭ ಸಿಗುತ್ತದೆ. ಆರೋಗ್ಯವು ಸುಧಾರಿಸುವುದರಿಂದ ನೀವು ಒಳ್ಳೆಯದನ್ನು ಅನುಭವಿಸುವಿರಿ.

ಅದೃಷ್ಟ ಬಣ್ಣ: ನೀಲಿ

ಅದೃಷ್ಟ ಸಂಖ್ಯೆ: 20

ಅದೃಷ್ಟ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2:05

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಇಂದು ನಿಮ್ಮ ಆರೋಗ್ಯವು ಪರಿಪೂರ್ಣವಾಗಲಿದೆ. ನಿಮ್ಮನ್ನು ಒತ್ತಡರಹಿತವಾಗಿಡಲು ನೀವು ಎಲ್ಲ ಪ್ರಯತ್ನಗಳನ್ನು ಮಾಡುತ್ತೀರಿ. ನಿಮಗೆ ಇಂದು ಹೆಚ್ಚು ಕೆಲಸವಿಲ್ಲದಿದ್ದರೆ, ಹೊರಗೆ ಹೋಗಿ ನಿಮ್ಮ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ ಅಥವಾ ನಿಮಗಾಗಿ ಸ್ವಲ್ಪ ಶಾಪಿಂಗ್ ಮಾಡಿ. ಹಣದ ಬಗ್ಗೆ ನಿಮ್ಮ ಕಾಳಜಿ ಇಂದು ಕೊನೆಗೊಳ್ಳುತ್ತದೆ. ನೀವು ಯಾರಿಗಾದರೂ ಸಾಲ ನೀಡಿದ್ದ ಹಣ ಇಂದು ನಿಮಗೆ ಹಿಂದಿರುಗಿಸುವ ಬಲವಾದ ಸಾಧ್ಯತೆಯಿದೆ. ಯೋಚಿಸದೆ ಯಾರನ್ನಾದರೂ ಸುಲಭವಾಗಿ ನಂಬದಿರಲು ಇದು ನಿಮಗೆ ಪಾಠವಾಗುತ್ತದೆ. ನಿಮ್ಮ ವೈಯಕ್ತಿಕ ಜೀವನವು ಆನಂದಮಯವಾಗಿರುತ್ತದೆ ಮತ್ತು ಕೆಲಸದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ.

ಅದೃಷ್ಟ ಬಣ್ಣ: ಬಿಳಿ

ಅದೃಷ್ಟ ಸಂಖ್ಯೆ: 6

ಅದೃಷ್ಟ ಸಮಯ: ಮಧ್ಯಾಹ್ನ 12 ರಿಂದ 9:45 ರವರೆಗೆ

ಧನು ರಾಶಿ

ಧನು ರಾಶಿ

ಮನರಂಜನೆ ಮತ್ತು ನಿಮ್ಮ ಸುತ್ತಲಿನ ವಿಷಯಗಳನ್ನು ಅನ್ವೇಷಿಸಲು ಇಂದು ಉತ್ತಮ ದಿನವಾಗಿದೆ. ಆರ್ಥಿಕ ರಂಗದಲ್ಲಿ ದಿನ ಚೆನ್ನಾಗಿರುತ್ತದೆ. ಇಂದು ಯಾವುದೇ ಆರ್ಥಿಕ ಸಮಸ್ಯೆ ಇರುವುದಿಲ್ಲ. ನೀವು ಯಾರೊಂದಿಗೆ ವ್ಯವಹರಿಸುತ್ತಿದ್ದೀರಿ ಎಂಬುದರ ಬಗ್ಗೆ ಜಾಗರೂಕರಾಗಿರಿ. ಇಂದು ಸಾಲ ನೀಡುವುದನ್ನು ತಪ್ಪಿಸಿ. ಉದ್ಯಮಿಗಳಿಗೆ ಇದು ಒಳ್ಳೆಯ ದಿನವಾಗಿರುತ್ತದೆ ಏಕೆಂದರೆ ಅವರು ಇಂದು ಇದ್ದಕ್ಕಿದ್ದಂತೆ ಉತ್ತಮ ಲಾಭವನ್ನು ಪಡೆಯುತ್ತಾರೆ. ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸಿ, ಅವರು ನಿಮ್ಮ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಸ್ನೇಹಿತನ ಅಸೂಯೆ ಸ್ವಭಾವವು ನಿಮ್ಮ ಹತಾಶೆಗೆ ಕಾರಣವಾಗಬಹುದು. ಅಂತಹ ಜನರನ್ನು ನಿರ್ಲಕ್ಷಿಸಲು ನೀವು ಕಲಿಯಬೇಕು. ಉದ್ಯೋಗದಲ್ಲಿರುವ ಜನರು ನಿಮ್ಮ ಹಿರಿಯರೊಂದಿಗೆ ಜಾಗರೂಕರಾಗಿರಬೇಕು. ಬಹುಶಃ ಅವರು ಇಂದು ನಿಮ್ಮೊಂದಿಗೆ ಯಾವುದನ್ನೂ ಒಪ್ಪುವುದಿಲ್ಲ.

ಅದೃಷ್ಟ ಬಣ್ಣ: ಗಾಢ ನೀಲಿ

ಅದೃಷ್ಟ ಸಂಖ್ಯೆ: 8

ಅದೃಷ್ಟ ಸಮಯ: ಸಂಜೆ 5:00 ರಿಂದ ರಾತ್ರಿ 8:00 ರವರೆಗೆ

ಮಕರ ರಾಶಿ

ಮಕರ ರಾಶಿ

ಇಂದು ನೀವು ನಿಮ್ಮ ಕಾರ್ಯನಿರತ ದಿನಚರಿಯಿಂದ ಸ್ವಲ್ಪ ಸಮಯ ತೆಗೆದುಕೊಳ್ಳಲು ಮತ್ತು ನಿಮ್ಮ ಬಗ್ಗೆ ಗಮನಹರಿಸಲು ಸಾಧ್ಯವಾಗುತ್ತದೆ. ಪ್ರೀತಿಯ ಜನರಿಗೆ ಇಂದು ವಿಶೇಷ ದಿನವಾಗಲಿದೆ. ಯಾರಾದರೂ ನಿಮಗೆ ಪ್ರೇಮ ನಿವೇದನೆ ಮಾಡಿದರೆ ನೀವು ಕೂಡ ಅವರ ಬಗ್ಗೆ ಅದೇ ಭಾವನೆಗಳನ್ನು ಹೊಂದಿರುವುದರಿಂದ ಅದನ್ನು ತಕ್ಷಣ ಸ್ವೀಕರಿಸಿ. ಇಂದು ನೀವು ತುಂಬಾ ಶಕ್ತಿಯುತವಾಗಿರುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸುತ್ತೀರಿ.

ಅದೃಷ್ಟ ಬಣ್ಣ: ಹಸಿರು

ಅದೃಷ್ಟ ಸಂಖ್ಯೆ: 12

ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ

ಕುಂಭ ರಾಶಿ

ಕುಂಭ ರಾಶಿ

ನೀವು ಹಣಕಾಸಿನ ವಿಷಯದಲ್ಲಿ ವಿಫಲವಾದರೆ ಅದು ನಿಮ್ಮನ್ನು ನಿರಾಶೆಗೊಳಿಸಬಹುದು. ಹಣಕಾಸಿನ ತೊಂದರೆಯಿಂದಾಗಿ ಕೆಲವು ಸಮಸ್ಯೆಗಳು ಬರಬಹುದು. ಭವಿಷ್ಯದ ಬಗ್ಗೆ ಯೋಚಿಸಿ, ಆದರೆ ಈ ಸುಂದರ ದಿನವನ್ನು ಆನಂದಿಸಿ. ಸಾಧ್ಯವಾದರೆ, ಇಂದು ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿ. ಕೆಲಸದಲ್ಲಿ ಇಂದು ಸಾಮಾನ್ಯವಾಗಲಿದೆ. ನಿಮ್ಮ ಹಿರಿಯರಿಂದ ಪ್ರಶಂಸೆ ಮತ್ತು ಬೆಂಬಲವನ್ನು ಪಡೆಯಲು ಬಯಸಿದರೆ ಹೆಚ್ಚು ಶ್ರಮಿಸಬೇಕು. ಸ್ವಾವಲಂಬಿಯಾಗಲು ಇದು ಉತ್ತಮ ಸಮಯ. ಕೆಲಸದ ವಿಚಾರದಲ್ಲಿ ಇತರರ ಮೇಲೆ ಅವಲಂಬಿತರಾಗಬೇಡಿ. ನಿಮ್ಮ ಭಾವನಾತ್ಮಕ ಆರೋಗ್ಯವು ಉತ್ತಮವಾಗಿದ್ದರೆ, ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಅದೃಷ್ಟ ಬಣ್ಣ: ಹಳದಿ

ಅದೃಷ್ಟ ಸಂಖ್ಯೆ: 19

ಅದೃಷ್ಟ ಸಮಯ: ಬೆಳಿಗ್ಗೆ 5:15 ರಿಂದ ಮಧ್ಯಾಹ್ನ 1:00 ರವರೆಗೆ

ಮೀನ ರಾಶಿ

ಮೀನ ರಾಶಿ

ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಬಯಸಿದರೆ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಸಾಧ್ಯವಾದಷ್ಟು ಸುಗಮವಾಗಿಡಲು ಪ್ರಯತ್ನಿಸಿ. ವಾದಗಳನ್ನು ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ. ಸಾಕಷ್ಟು ವ್ಯತ್ಯಾಸಗಳಿದ್ದರೆ,ಪರಿಣಾಮಕಾರಿ ಸಂವಹನದ ಮೂಲಕ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ವಹಿಸಲು ಪ್ರಯತ್ನಿಸಿ. ಹಣಕಾಸಿನ ವಿಚಾರದಲ್ಲಿ ಇಂದು ಒಳ್ಳೆಯ ದಿನವಲ್ಲ. ಆರ್ಥಿಕ ನಷ್ಟಗಳು ಬರುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಒತ್ತಡ ಹೆಚ್ಚಾಗಬಹುದು. ಕೆಲಸದ ಸ್ಥಳದಲ್ಲಿ ಹಿರಿಯರ ಮುಂದೆ ಸರಿಯಾಗಿ ವರ್ತಿಸಬೇಕು. ನಿಮ್ಮ ಪ್ರತಿಷ್ಠೆಗೆ ಕಳಂಕ ತರುವಂತಹ ಕೆಲಸವನ್ನು ಮಾಡಬೇಡಿ. ಆರೋಗ್ಯ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ. ಮುಖ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಅದೃಷ್ಟ ಬಣ್ಣ: ನೇರಳೆ

ಅದೃಷ್ಟ ಸಂಖ್ಯೆ: 38

ಅದೃಷ್ಟ ಸಮಯ: ಸಂಜೆ 7:00 ರಿಂದ 9:00 ರವರೆಗೆ

English summary

Dina Bhavishya 02 Apr 2020

Horoscope is an astrological chart or diagram representing the positions of the Sun, Moon, planets, astrological aspects and sensitive angles at the time of an event, such as the moment of a person's birth. The word horoscope is derived from Greek words and scopos meaning "time" and "observer".
Story first published: Wednesday, April 1, 2020, 20:49 [IST]
X
Desktop Bottom Promotion