Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Rahu Ketu Dosha : ರಾಹು-ಕೇತು ದೋಷ ನಿವಾರಣೆಗೆ ಈ ಸರಳ ಪರಿಹಾರ ಮಾಡಿದರೆ ಸಾಕು
ಏಪ್ರಿಲ್ 12ಕ್ಕೆ ರಾಹು-ಕೇತು ಗ್ರಹವು ತನ್ನ ರಾಶಿ ಬದಲಾಯಿಸುತ್ತಿದೆ. ರಾಹು ಮೇಷ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಯನ್ನು ಪ್ರವೇಶಿಸುವುದು. ಇದರ ಪ್ರಭಾವ 12 ರಾಶಿಗಳ ಮೇಲೆ ಇರಲಿದೆ.
ಸಮುದ್ರ ಮಂಥನ ಮಾಡುವ ಸಮಯದಲ್ಲಿ ಉಕ್ಕಿ ಬಂದ ಅಮೃತವನ್ನು ದೇವತೆಗಳು ಅಸುರರಿಗೆ ನೀಡುವುದಿಲ್ಲ, ಆದರೆ ಸ್ವರಭಾನು ಎಂಬ ರಾಕ್ಷಸ ವೇಷ ಮರೆಸಿ ದೇವತೆಗಳ ಜೊತೆ ಕೂರುತ್ತಾನೆ. ಅವನಿಗೆ ಅಮೃತ ನೀಡಲಾಗುವುದು, ಅವನು ಅದನ್ನು ಕುಡಿಯುವಷ್ಟರಲ್ಲಿ ಅವನು ರಾಕ್ಷಸ ಎಂಬುವುದನ್ನು ಅರಿತ ಸೂರ್ಯ ಹಾಗೂ ಚಂದ್ರ ವಿಷ್ಣುವಿಗೆ ತಿಳಿಸುತ್ತಾನೆ. ವಿಷ್ಣು ತನ್ನ ಸುದರ್ಶನ ಚಕ್ರದಿಂದ ರಾಕ್ಷಸನ ರುಂಡ-ಮುಂಡ ಬೇರಾಗುವಂತೆ ಮಾಡುತ್ತಾನೆ, ಆದರೆ ಅವನು ಅಷ್ಟರಲ್ಲಿಯೇ ಅಮೃತ ಕುಡಿದಿದ್ದ ಕಾರಣ ಸಾವಾಗುವುದಿಲ್ಲ, ಆ ರುಂಡ ಮುಂಡವೇ ರಾಹು-ಕೇತು. ರಾಹು ಹಾವಿನ ತಲೆಯ ರೂಪದಲ್ಲಿ ಇದ್ದರೆ ಕೇತು ಹಾವಿನ ಬಾಲದ ರೂಪದಲ್ಲಿ ಇರುತ್ತದೆ.
ರಾಹು-ಕೇತು ಸೂರ್ಯ ಹಾಗೂ ಚಂದ್ರನ ಶತ್ರುಗಳಾಗಿದ್ದು ಸೂರ್ಯಗ್ರಹಣ-ಹಾಗೂ ಚಂದ್ರಗ್ರಹಣಕ್ಕೆ ರಾಹು-ಕೇತು ಕಾರಣ ಎಂಬುವುದನ್ನು ವೈದಿಕ ಶಾಸ್ತ್ರ ಹೇಳುತ್ತದೆ.
ಈ ಎರಡು ಗ್ರಹಗಳು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದ್ದು ಆದ್ದರಿಂದಲೇ ರಾಹುಕಾಲದಲ್ಲಿ ಯಾವುದೇ ಶುಭಕಾರ್ಯ ಮಾಡುವುದು ನಿಷಿದ್ಧ ಎಂದು ನಂಬಲಾಗಿದೆ.

ರಾಹು ದೋಷ ಯಾವಗೆಲ್ಲಾ ಉಂಟಾಗುವುದು
1. ರಾಹು ಹಾಗೂ ಚಂದ್ರ ಸೇರಿದಾಗ ರಾಹು ದೋಷ ಉಂಟಾಗುವುದು.
2. ರಾಹು ಮೊದಲ, 2ನೇ, 5ನೇ, 7ನೇ, 8ನೇ, 9ನೇ, 12ನೇ ಮನೆಯಲ್ಲಿದ್ದಾಗ ರಾಹು ದೋಷವಿರುತ್ತದೆ.
3, ಚಂದ್ರ ಅಧಿಪತಿಯಾಗಿರುವ ರಾಶಿಯಲ್ಲಿ ಗುರು ಹಿಮ್ಮುಖವಾಗಿ ಚಲಿಸಿದಾಗ
ವೈದಿಕ ಶಾಸ್ತ್ರದಲ್ಲಿ ರಾಹು ಕೇತು ದೋಷವಿದೆ. ಕೆಲವೊಂದು ಸರಳ ಪರಿಹಾರ ಮೂಲಕ ರಾಹು-ಕೇತು ದೋಷ ತೆಗೆಯಬಹುದು.

ರಾಹು-ಕೇತು ದೋಷ ವ್ಯಕ್ತಿಯ ಮೇಲೆ ಬೀರುವ ಪರಿಣಾಮ
* ಮಾನಸಿಕ ಸಮಸ್ಯೆ
* ಖಿನ್ನತೆ
* ಒತ್ತಡ
* ನಷ್ಟ
* ಕಾನೂನು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವುದು
* ಕುಟುಂಬದಲ್ಲಿ ಅಕಾಲಿಕ ಮರಣ
* ಬದುಕಿನಲ್ಲಿ ದರ್ಘಟನೆ
* ತ್ವಚೆ ಸಮಸ್ಯೆ
* ಉಸಿರಾಟದ ತೊಂದರೆ
ಕೇತು ಸರಿಯಾದ ಸ್ಥಾನದಲ್ಲಿ ಇಲ್ಲದೇ ಹೋದರೆ ಮೆದುಳಿನ ಸಮಸ್ಯೆ, ಕಿವಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಕಂಡು ಬರುವುದು. ಕೇತು ನಮ್ಮಲ್ಲಿ ಅಹಂ ಹೆಚ್ಚಿಸುತ್ತೆ, ಕೆಟ್ಟ ಚಟುವಟಿಕೆ, ಕೆಟ್ಟ ಸಂಗ ಸೇರುವಂತೆ ಪ್ರೇರೇಪಿಸುತ್ತದೆ.
ರಾಹು-ಕೇತು ದೋಷ ತುಂಬಾನೇ ಕೆಟ್ಟ ಪರಿಣಾಮ ಬೀರುವುದು, ಆದ್ದರಿಂದ ರಾಹು-ಕೇತು ದೋಷಕ್ಕೆ ಪರಿಹಾರ ಮಾಡಲೇಬೇಕು.

ರಾಹು-ಕೇತು ದೋಷಕ್ಕೆ ಸರಳ ಪರಿಹಾರ
* ಅನಾಥರಿಗೆ ಸಿಹಿ ನೀಡುವುದರಿಂ ಕೇತುವಿನ ಋಣಾತ್ಮಕ ಪ್ರಬಾವ ತೆಗೆಯಬಹುದು.
* ಪ್ರತಿದಿನ 'ಓಂ ನಮಃ ಶಿವಾಯ' 108 ಬಾರಿ ಪಠಿಸಿ.
* ಬಿಲ್ವೆ ಪತ್ರೆ, ಹಸಿ ಹಾಲು, ಹಣ್ಣುಗಳು ಹಾಗೂ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ.
* ದೋಷ ನಿವಾರಣ ಮಂತ್ರವನ್ನು 108 ಬಾರಿ ಪಠಿಸಿ
* ಶಿವ ಕೃಪೆಗೆ ಪಾತ್ರರಾಗುವಂತೆ ನಡೆದುಕೊಳ್ಳಿ,ಶಿವ ಭಕ್ತರಾಗುವುದರಿಂದ ರಾಹು-ಕೇತು ದೋಷ ತೆಗೆಯಬಹುದು.

ರಾಹು-ಕೇತು ದೋಷ ನಿವಾರಣೆಗೆ ಪರಿಹಾರ
* ನಿವಾರಣ ಯಂತ್ರ ಅಥವಾ ರುದ್ರಾಕ್ಷಿ ಮಾಲೆ ಧರಿಸಿ
* ನಾಗ ಪೂಜೆ ಮಾಡಿಸಿ.
ಬೆಳ್ಳಿಯಲ್ಲಿ ತಯಾರಿಸಿದ ದೋಷ ನಿವಾರಣ ಉಂಗುರ ಬಳಸಿ.
* ರುದ್ರಾಭಿಷೇಕ ಮಾಡಿಸಿ.
* ಕುಕ್ಕೆಗೆ ಹೋಗಿ ಬನ್ನಿ
* ಕಾಳ ಸರ್ಪ ನಿವಾರಣ ಪೂಜೆ ಮಾಡಿಸಿ.
* ಅಡುಗೆ ಮನೆಯಲ್ಲಿಯೇ ಆಹಾರ ಸೇವಿಸಿ.
* ರಾಹು ಹಾಗೂ ಕೇತುವಿಗೆ ಪ್ರತ್ಯೇಕ ಜಪ ಮಾಡಿ.

ರಾಹು-ಕೇತು ದೋಷಕ್ಕೆ ಸರಳ ಪರಿಹಾರ
* ಕೆಂಪು ಬಟ್ಟೆ ಹಾಗೂ ಹವಳ ಬಲಸಬೇಡಿ.
* ಕಪ್ಪು ಕಂಬಳಿಯನ್ನು ಬಡವರಿಗೆ ದಾನ ಮಾಡಿ.
* ದೇವಾಲಯಕ್ಕೆ ಸಾಸಿವೆಯೆಣ್ಣೆಯನ್ನು ದಾನ ಮಾಡಿ.
* ಬೀದಿ ನಾಯಿಗಳಿಗೆ ಆಹಾರ ಹಾಕಿ.
* ಕಪ್ಪು ಬಟ್ಟೆ ಧರಿಸಬೇಡಿ.
* ರಾಹುವಿಗೆ ಹಳದಿ ಹಾಗೂ ಬಿಳಿ ಪ್ರಿಯವಾದ ಬಣ್ಣ, ಈ ಬಣ್ಣದ ಬಟ್ಟೆ ಧರಿಸಿ.
ಈ ಸರಳ ಪರಿಹಾರ ಮೂಲಕ ರಾಹು-ಕೇತು ದೋಷ ಹೋಗಲಾಡಿಸಬಹುದು.



Click it and Unblock the Notifications
