Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
25-4-2019- ಗುರುವಾರದ ದಿನ ಭವಿಷ್ಯ
ಗುರುವಾರದ ದಿನ ಶಿರ್ಡಿಯ ಸಾಯಿಬಾಬಾರನ್ನು ಆರಾಧಿಸುವವರ ಸಂಖ್ಯೆ ಇಡಿಯ ಭಾರತದಲ್ಲಿ ಬಹಳಷ್ಟಿದೆ. ಇವರ ಭಕ್ತರು ವಿವಿಧ ಧರ್ಮಗಳಿಗೆ ಸೇರಿದವರಾಗಿದ್ದು ದೇವರ ಸಮಾನರಾಗಿ ಕಾಣುತ್ತಾರೆ. ಸಾಯಿಬಾಬಾರವರು ಏಕದೇವನನ್ನು ಪ್ರತಿಪಾದಿಸುವ ಸಂತರಾಗಿದ್ದು ಇವರ ಪ್ರವಚನಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಅಂಶಗಳು ಬೆರೆತಿವೆ. ಇದೇ ಕಾರಣಕ್ಕೆ ಸಾಯಿಬಾಬಾರು ಮುಸ್ಲಿಂ ಹಾಗೂ ಹಿಂದೂ ಧರ್ಮೀಯರಲ್ಲಿ ಸಮಾನರಾಗಿ ಜನಪ್ರಿಯರಾಗಿದ್ದಾರೆ.
ಇವರು ಕೇವಲ ತಮ್ಮ ಪ್ರವಚನಗಳಿಂದ ಮಾತ್ರವಲ್ಲ, ಪವಾಡಗಳಿಂದಲೂ ಜನಪ್ರಿಯತೆ ಪಡೆದಿದ್ದಾರೆ.ಶಿರ್ಡಿ ಸಾಯಿ ಬಾಬಾರ ಕುರಿತು ಹಲವಾರು ಕಥೆಗಳು ಪ್ರಚಲಿತದಲ್ಲಿವೆ.ಇವರ ಪವಾಡಗಳಲ್ಲಿ ಪ್ರಮುಖವಾದವು ಎಂದರೆ ಗಾಳಿಯಲ್ಲಿ ತೇಲುವುದು, ಎದುರಿನವರ ಮನವನ್ನು ಓದುವುದು, ಭೂತೋಚ್ಛಾಟನೆ, ನೀರಿನಿಂದ ದೀಪವನ್ನು ಬೆಳಗಿಸುವುದು, ರಾಮ, ಕೃಷ್ಣ ಅಥವಾ ವಿಠೋಬನ ರೂಪದಲ್ಲಿ ತನ್ನ ಭಕ್ತರಿಗೆ ದರ್ಶನ ನೀಡುವುದು ಇತ್ಯಾದಿಗಳು ಪ್ರಮುಖವಾಗಿದೆ. ಈ ಪವಾಡಗಳು ಸಂಭವಿಸಿದ ಬಗ್ಗೆ ತಲೆತಲಾಂತರದಿಂದ ಹೇಳಿಬಂದ ವಿಷಯಗಳೇ ಹೆಚ್ಚಾಗಿದ್ದರೂ ಸಾಯಿಬಾಬಾರ ಭಕ್ತರಿಗೆ ಮಾತ್ರ ಇವು ಒಂದು ಶಕ್ತಿಯಾಗಿವೆ.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ( 25 ಏಪ್ರಿಲ್ 2019)
ನಿಮ್ಮದೇ ಯೋಚನೆ ಹಾಗೂ ಪ್ರಪಂಚದಿಂದ ಹೊರಗೆ ಬನ್ನಿ. ನಿಮಗಿಂತಲೂ ಬಹು ಕಷ್ಟಜೀವನ ನಡೆಸುತ್ತಿರುವವರು ನಿಮ್ಮ ಕಣ್ಣಿಗೆ ಬೀಳುವರು. ಆಗ ನೀವು ಅನುಭವಿಸುತ್ತಿರುವ ಕಷ್ಟ ಕಷ್ಟವೇ ಅಲ್ಲ ಎಂದು ಗೊತ್ತಾಗುವುದು. ಕೆಲಸದ ಸ್ಥಳಗಳಲ್ಲಿ ವಿಶೇಷ ಸ್ಥಾನಮಾನಗಳು ಲಭ್ಯವಾಗಲಿವೆ. ಇದಕ್ಕಾಗಿ ಹಲವರ ಸಹಕಾರವು ದೊರೆಯಲಿದೆ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಮನಸ್ಸು ಉಲ್ಲಾಸಮಯವಾಗುವುದು.ನಿಮ್ಮನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸುತ್ತಿದ್ದೀರಿ. ಆತಂಕರಾಗದಿರಿ. ಬಂದ ಸಮಸ್ಯೆಗಳು ಹಿರಿಯರ ಆಶೀರ್ವಾದದಿಂದ ಕಡಿಮೆ ಆಗುವುದು. ದುರ್ಗೆಯ ಆರಾಧನೆ ಮಾಡಿ.9845743807
ಅದೃಷ್ಟ ಸಂಖ್ಯೆ:2

ವೃಷಭ
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದ ವ್ಯಕ್ತಿಗಳು ನಿಮ್ಮದೆರು ಬಂದು ಕ್ಷ ಮೆ ಯಾಚಿಸುವ ಸಂದರ್ಭ ಎದುರಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹೆಚ್ಚಿನ ನಿರೀಕ್ಷೆಗಳಿಂದ ನಿರಾಸೆಯೇ ಉಂಟಾಗುವುದು. ಹಾಗಾಗಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ. ನಿಮಗೆ ದೊರಕಿದಷ್ಟರಲ್ಲೇ ತೃಪ್ತಿಯನ್ನು ಕಾಣಿ. ಇದರಿಂದ ನೀವು ಸಮಾಜದಲ್ಲಿ ಗೌರವಿಸಲ್ಪಡುವಿರಿ. ಬಾಳಸಂಗಾತಿಯೊಂದಿಗೆ ಕಲಹ ಸಾಧ್ಯತೆ ಇದೆ. ಇದನ್ನು ಜಾಣ್ಮೆಯಿಂದ ಎದುರಿಸಿದಲ್ಲಿ ಒಳಿತಾಗುವುದು. ಅವರ ವಿಚಾರಧಾರೆಗಳಿಗೂ ಬೆಲೆ ಕೊಡುವುದರಿಂದ ನಿಮಗೆ ಹೆಚ್ಚಿನ ಲಾಭವುಂಟಾಗುವುದು. 9845743807 ಅದೃಷ್ಟ ಸಂಖ್ಯೆ:1

ಮಿಥುನ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಮಾಜದಲ್ಲಿ ಕೀರ್ತಿ ಗೌರವ ಆದರಗಳಿಂದ ಮನಸ್ಸಿಗೆ ಸಂತೋಷ ಎನಿಸುವುದು. ವದಂತಿಗಳಿಗೆ ಕಿವಿಗೊಡದಿರಿ. ಮನೆಯ ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ.ವ್ಯಾಪಾರ, ವ್ಯವಹಾರಗಳಿಗೆ ಮೀಸಲಿಟ್ಟ ಹಣ ಆರೋಗ್ಯದ ಸಲುವಾಗಿ ಖರ್ಚಾಗುವ ಸಾಧ್ಯತೆ ಇದೆ ಅಥವಾ ಟ್ಯಾಕ್ಸ್ ಕಟ್ಟುವುದಕ್ಕಾಗಿ ಉಪಯೋಗಿಸ ಬೇಕಾಗುವುದು. ಸರ್ಕಾರಕ್ಕೆ ಸಲ್ಲಿಸಬೇಕಾದ ಕರವನ್ನು ಸಕಾಲಕ್ಕೆಪಾವತಿಸಿ.ಹಳೆಯ ಸಾಲದ ತೀರುವಳಿ ಆಗುವುದು. ಕೆಲವರು ವೃತ್ತಿಯಲ್ಲಿ ಬದಲಾವಣೆ ಬಗ್ಗೆ ಚಿಂತಿಸಿದರೆ ಮತ್ತೆ ಕೆಲವರು ಮನೆ ಬದಲಾಯಿಸುವ ಚಿಂತೆ ಯಲ್ಲಿದ್ದೀರಿ. ಮನೆ ಬದಲಾವಣೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು.9845743807 ಅದೃಷ್ಟ ಸಂಖ್ಯೆ:4

ಕಟಕ
ಮರಕ್ಕಿಂತ ಮರ ದೊಡ್ಡದು. ಅಂತೆಯೇ ನಿಮ್ಮ ಬುದ್ಧಿವಂತಿಕೆ ಯನ್ನು ಮೀರಿಸುವ ಜನರು ಜಗತ್ತಿನಲ್ಲಿ ಕಾಣಬರುತ್ತಾರೆ. ಹಾಗಾಗಿ ನಿಮ್ಮ ಬುದ್ಧಿಮತ್ತೆಯ ವಿಚಾರವಾಗಿ ಅಹಂಕಾರ ಪಡುವುದು ಸೂಕ್ತವಲ್ಲ.ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗದೇ ಚಡ ಪಡಿಸಲಿದ್ದೀರಿ. ಈ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದರ್ಶಕರನ್ನು ಕಂಡು ನಿಮ್ಮ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ.ಮನೆಯಲ್ಲಿನ ಮಂಗಳಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಇದರಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಮೂಡುವುದು. ಹಣಕಾಸಿನ ಸ್ಥಿತಿ ಉತ್ತಮ ವಾಗಿರುತ್ತದೆ. ದೂರದಿಂದ ಬರುವ ವಾರ್ತೆಯು ನಿಮಗೆ ಮುದ ನೀಡುವುದು.9845743807 ಅದೃಷ್ಟ ಸಂಖ್ಯೆ:6

ಸಿಂಹ
ವಿಚಿತ್ರವಾದ ಗೊಂದಲಗಳ ನಡುವೆ ಸಿಕ್ಕಿಬೀಳುವ ಸಂದಿಗ್ಧತೆ ಎದುರಾಗಲಿದೆ. ಅದರಿಂದಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಹೆಣಗಾಡುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ. ಒಳಿತಾಗುವುದು.ನಿಮಗೆ ಜನ್ಮದತ್ತವಾಗಿ ಬಂದ ಕೆಲವು ಸಂಗತಿಗಳನ್ನು ಮರೆಮಾಚದಿರಿ. ಅವುಗಳಿಂದ ನಿಮ್ಮ ಕೀರ್ತಿ ಶಿಖರಕ್ಕೆ ಏರಲು ಅನುಕೂಲವಾಗುವುದು. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಹಾಗಾಗಿ ನೀವು ನಿಮ್ಮ ಕೀಳರಿಮೆಯಿಂದ ಹೊರಬನ್ನಿ. ನಿಮ್ಮಲ್ಲಿ ಅನೇಕರು ಬಂಡಾಯದ ಕಹಳೆಯನ್ನು ಊದುವ ತವಕದಲ್ಲಿದ್ದೀರಿ. ಆದರೆ ನಿಮ್ಮವರಿಂದಲೇ ನಿಮಗೆ ಹಿನ್ನಡೆ ಉಂಟಾಗುವುದು. ಹಾಗಾಗಿ ನಿಮಗೆ ಒಂಟಿತನ ಕಾಡುವುದು.9845743807 ಅದೃಷ್ಟ ಸಂಖ್ಯೆ:4

ಕನ್ಯಾ
ಹಿತಶತ್ರುಗಳು ನಿಮ್ಮ ಬಗ್ಗೆ ಅಲ್ಲಸಲ್ಲದ ಅಪವಾದಗಳನ್ನು ಹೇರುವ ಸಾಧ್ಯತೆ ಇದೆ. ಆದರೆ ಅದು ಸುಳ್ಳೆಂದು ಗೊತ್ತಾದಾಗ ಅವರು ನಿಮ್ಮಬಳಿಕ್ಷಮೆಯಾಚಿಸುವ ಪ್ರಸಂಗ ಎದುರಾಗುವುದು.ಅವಸರದ ನಿರ್ಣಯಗೈದು ತಪ್ಪು ಹಾದಿ ತುಳಿಯದಿರಿ. ಈ ಬಗ್ಗೆ ಹಿರಿಯರ ಮತ್ತು ಅನುಭವಿಕರ ಅನುಭವಗಳನ್ನು ಆಲಿಸಿ. ಆದಾಗ್ಯೂ ನಿಮಗೆ ದೈವಕೃಪೆಯಿಂದ ಒಳಿತಾಗುವುದು.ಉತ್ತಮವಾದ ಪುರಸ್ಕಾರ ವೊಂದು ಬರಲು ದಿನವು ಪ್ರಶಸ್ತವಾಗಿದೆ. ಇದಕ್ಕೆ ಬಾಳಸಂಗಾತಿಯ ಬೆಂಬಲವೂ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಆದರೆ ಇದೆಲ್ಲವನ್ನು ಸ್ವೀಕರಿಸುವ ಸಮಯ ನಿಮಗೆ ಸಿಗದೆ ಹೋಗಬಹುದು.9845743807 ಅದೃಷ್ಟ ಸಂಖ್ಯೆ:8

ತುಲಾ
ಅನೇಕ ಕೊರತೆಗಳ ಸರಮಾಲೆ ದಿಢೀರನೆ ಎದುರಾಗಬಹುದು. ಆರ್ಥಿಕ ಮುಗ್ಗಟ್ಟಿನ ತೊಂದರೆಯು ಬೃಹದಾಕಾರವಾಗಿ ಎದುರು ನಿಲ್ಲುವುದು. ಸ್ನೇಹಿತರು, ಬಂಧುಗಳು ನಿಮಗೆ ಹಣ ಸಹಾಯ ಮಾಡಬಹುದು. ಆದರೆ ನೀವು ಅವರ ವಿಶ್ವಾಸವನ್ನು ಗಳಿಸಬೇಕಾಗುವುದು.ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರಿಗೆ ಸಂಕಷ್ಟದ ದಿನ. ನೀವು ಮಾಡದೆ ಇರುವ ತಪ್ಪಿಗೆ ಹೊಣೆಗಾರ ರಾಗಬೇಕಿದೆ. ಇದರಿಂದ ಹೊರಬಂದು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಣೆ ದುಸ್ತರ ವಾಗುವುದು. ಇದಕ್ಕಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಸಾಧ್ಯವಾದರೆ ಕಡಲೇಕಾಳನ್ನು ದಾನ ಮಾಡಿ. ಇಲ್ಲವೆ ಹಸುವಿಗೆ ನೀಡಿ. ಬಡವರಿಗೆ ಆಹಾರವನ್ನು ನೀಡಿ.9845743807 ಅದೃಷ್ಟ ಸಂಖ್ಯೆ:6

ವೃಶ್ಚಿಕ
ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಗುರುಜನ ಮಾನ್ಯರ ಕರೆದು ಆದರ ಆತಿಥ್ಯವನ್ನು ಮಾಡುವಿರಿ. ಅವರ ಆಶೀರ್ವಾದದಿಂದ ನಿಮಗೆ ಒಳಿತಾಗುವುದು. ಸಾಂಸಾರಿಕ ಜೀವನ ಉತ್ತಮ ಮಟ್ಟದ್ದಾಗಿರುತ್ತದೆ.ನಿಮ್ಮ ಕೆಲಸದ ಒತ್ತಡದ ಮಧ್ಯೆ ನಿಮ್ಮ ಕೆಲವು ಪ್ರತಿಭಾಯುಕ್ತ ಹವ್ಯಾಸಗಳನ್ನು ಅಲಕ್ಷ್ಯ ಮಾಡದಿರಿ. ಇಂತಹ ಹವ್ಯಾಸಗಳಿಂದ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ತಪ್ಪದೇ ಪಠಿಸಿ.ಕಚೇರಿಯ ಕೆಲಸದಲ್ಲಿ ಸಮಯಾವಾಧಾನ ದಿಂದ ಉತ್ಕೃಷ್ಟ ಫಲವನ್ನು ಹೊಂದುವಿರಿ. ಇದರಿಂದ ಮೇಲಧಿಕಾರಿಗಳ ಪ್ರಶಂಸೆಗೆ ಕಾರಣರಾಗುವಿರಿ. ಸಹೋದ್ಯೋಗಿಗಳು ಕೂಡಾ ನಿಮ್ಮ ಬಗ್ಗೆ ಮೆಚ್ಚುಗೆಯ ನೋಟವನ್ನು ಹರಿಸುವರು.9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ನಿಮಗೆ ಶುಭ ತರುವ ದಿನವಾಗಿದೆ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಅದಕ್ಕೆ ಪೂರಕವಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಇದರಿಂದ ಹೆಚ್ಚಿನ ಪ್ರಯೋಜನವಾಗುವುದು. ಪರಸ್ಪರ ಮುಕ್ತ ಮಾತುಕತೆಗಳ ಮೂಲಕ ಕೌಟುಂಬಿಕ ಜೀವನದ ಭಿನ್ನಾಭಿಪ್ರಾಯಗಳು ಕಡಿಮೆ ಆಗುವವು. ಕಚೇರಿ ಕೆಲಸಗಳು ಸರಾಗವಾಗಿ ನಡೆಯುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಹಾಗಂತ ಇತರರನ್ನು ಎದುರು ಹಾಕಿಕೊಳ್ಳುವುದು ಸೂಕ್ತವಲ್ಲ. ನೂತನ ವಾಹನ ಖರೀದಿಯನ್ನು ಮುಂದೂಡಿ. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ.9845743807 ಅದೃಷ್ಟ ಸಂಖ್ಯೆ:8

ಮಕರ
ಹೊಸದಾದ ಪಾರ್ಟನರ್‌ಶಿಪ್ ವ್ಯವಹಾರ ಬೇಡ. ಸ್ವಂತ ದುಡಿಮೆಯಿಂದಲೇ ಸಾಕಷ್ಟು ಹಣಕಾಸು ಬರುವುದು. ಸಹೋದರರು ಇಂದಿನ ಕಾರ್ಯಕ್ಕೆ ಸಹಕಾರ ನೀಡಲಿರುವರು. ಹಣಕಾಸು ಉತ್ತಮವಾಗಿರುತ್ತದೆ.ನಿಮ್ಮ ಊಹಾಶಕ್ತಿ, ಸಂಕಲ್ಪ ಶಕ್ತಿ ಮತ್ತು ಆರನೆಯ ಇಂದ್ರಿಯದ ಕಲ್ಪನಾತೀತ ತರ್ಕದಿಂದ ನಿಮ್ಮ ಬದುಕಿನ ದಾರಿಯಲ್ಲಿ ಜಯವನ್ನು ಕಾಣುವಿರಿ. ಉನ್ನತ ವ್ಯಾಸಂಗದಲ್ಲೂ ಹೆಚ್ಚಿನ ಪ್ರಗತಿ ಕಂಡುಬರುವುದು.ಬಂಧು ಒಬ್ಬರಿಂದ ಕೆಲ ಆಸ್ತಿಯ ವಿಚಾರದಲ್ಲಿ ನಿಮಗೆ ಲಾಭವಾಗುವುದು. ನಿಮ್ಮ ಹಿಂಜರಿಕೆಯ ಸ್ವಭಾವದಿಂದ ಮನೆ ಮಾಡಲು ಅಥವಾ ಖರೀದಿ ಮಾಡಲು ಆಗುತ್ತಿಲ್ಲ. ಧೈರ್ಯದಿಂದ ಮುನ್ನುಗ್ಗಿದಲ್ಲಿ ಅನುಕೂಲವಾಗುವುದು. 9845743807 ಅದೃಷ್ಟ ಸಂಖ್ಯೆ:9

ಕುಂಭ
ಹಳೆಯ ತಕರಾರುಗಳು ಬಹುಮಟ್ಟಿಗೆ ನಿರ್ಣಾಯಕ ಹಂತವನ್ನು ತಲುಪಲಿದ್ದು ಆ ಮೂಲಕ ಬರಬೇಕಾದ ಹಣಕಾಸಿನ ವ್ಯವಹಾರಕ್ಕೆ ನಿರ್ದಿಷ್ಟ ದಿನಾಂಕ ಗೊತ್ತಾಗುವುದು. ಇದರಿಂದ ನಿಮ್ಮ ಮುಂದಿನ ಕಾರ್ಯ ಯೋಜನೆಗೆಸಹಕಾರದೊರೆಯುವುದು. ಜನ್ಮಶನಿಯ ಬಿಡುಗಡೆ ಆಗಿದ್ದರೂ ಧನಸ್ಥಾನದ ಶನಿಯಿಂದಾಗಿ ಹೊಸ ಬಂಡವಾಳದೊಂದಿಗೆ ವ್ಯಾಪಾರ ಆರಂಭಿಸುವುದು ಸೂಕ್ತವಲ್ಲ. ನೆರೆಹೊರೆಯವರೊಡನೆ ಕಲಹ ಬೇಡ. ಅವರೊಂದಿಗೆ ಸ್ನೇಹ, ಸೌಹಾರ್ದತೆಯಿಂದ ವರ್ತಿಸಿ. ಮನಸ್ಸು ಗಾಬರಿಗೊಳ್ಳುವುದು. ಅಂದುಕೊಂಡ ಕಾರ್ಯಗಳು ಸಕಾಲದಲ್ಲಿ ಮುಗಿಯದೆ ಬೇಸರವುಂಟು ಮಾಡುವುದು. ಕೆಲವರಿಗೆ ಸ್ಥಾನ ಬದಲಾವಣೆ ಯಿಂದ ಮನಸ್ಸಿಗೆ ಕಿರಿಕಿರಿ ಆಗುವುದು.9845743807
ಅದೃಷ್ಟ ಸಂಖ್ಯೆ:2

ಮೀನ
ಕೆಲವರಿಗೆ ಕೆಲಸದ ಸ್ಥಳದಲ್ಲಿ ಪದೋನ್ನತಿ ದೊರೆಯುವುದು. ಹಿರಿಯರ ಆಸ್ತಿಗೆ ಸಂಬಂಧಪಟ್ಟಂತೆ ಶುಭ ಸೂಚನೆ ದೊರೆಯುವುದು. ಕಾರ್ಯ ನೆರವೇರಲು ಅಧಿಕ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಕಲಾಕಾರರು, ಕುಶಲಕರ್ಮಿಗಳು ಚಿತ್ರ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಧನಲಾಭಕ್ಕೆ ಕೂಡ ಅನೇಕ ದಾರಿಗಳು ತೆರೆದುಕೊಳ್ಳುವುದು. ಕೆಲವರಿಗೆ ವಿವಾಹ ಭಾಗ್ಯ ದೊರೆಯುವುದು. ಅರ್ಥಾತ್ ಮಾತುಕತೆಯು ಪೂರ್ಣ ಗೊಳ್ಳುವುದು. ಉದ್ಯೋಗದಲ್ಲಿ ಭಡ್ತಿ, ನಿರುದ್ಯೋಗಿಗಳಿಗೆ ನೌಕರಿ ದೊರೆಯುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಂಡು ಬರುವುದು. ಹಳೆಯ ಗೆಳೆಯರ ಭೇಟಿ ಸಾಧ್ಯತೆ ಇದೆ. ಕುಲದೇವರ ದರ್ಶನದಿಂದ ಆತ್ಮತೃಪ್ತಿ ಉಂಟಾಗಲಿದೆ. 9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ, ಕುಜದೋಷ ಪರಿಣಾಮ,ಮಕ್ಕಳು ತೊಂದರೆ, ಸ್ತ್ರೀ ಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











