Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಒಂದೇ ಬಾರಿ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ- 480 ವರ್ಷಗಳಲ್ಲಿ ಒಂದು ಸಲ ಇಂತಹ ಜನನವಾಗುವುದು!!
ಮಗುವಿಗೆ ಜನ್ಮ ನೀಡುವುದು ಒಂದು ಅದ್ಭುತವಾಗಿರುವಂತಹ ಅನುಭವ. ದೇಹದ ಮೂಳೆಗಳೆಲ್ಲಾ ತುಂಡಾಗಿ ಬರುವಂತಹ ನೋವಿಗಿಂತಲೂ ಎಷ್ಟೋ ಪಟ್ಟು ಅಧಿಕವಾಗಿರುವುದು. ಅದರಲ್ಲೂ ಒಂದಕ್ಕಿಂತ ಅಧಿಕ ಮಗುವಿದ್ದರೆ ಆಗ ಹೆರಿಗೆಗೆ ತುಂಬಾ ಕಷ್ಟಪಡಬೇಕಾಗುತ್ತದೆ. ಅವಳಿ ಮಕ್ಕಳಿದ್ದರೂ ಹೆರಿಗೆ ತುಂಬಾ ಕಷ್ಟವಾಗಿರುವುದು ಎಂದು ಹೇಳಲಾಗುತ್ತದೆ.

ಆದರೆ ಐದು ಮಕ್ಕಳಿಗೆ ಜನ್ಮ ನೀಡಿದರೆ ಆಗ ಮಹಿಳೆಯ ಸ್ಥಿತಿ ಹೇಗಿರಬಹುದು ಎಂದು ನೀವು ಊಹೆ ಮಾಡಿ. ಜೆಕ್ ಗಣರಾಜ್ಯದ ಮಹಿಳೆಯೊಬ್ಬರು ಐದು ಮಂದಿ ಮಕ್ಕಳಿಗೆ ಜನ್ಮ ನೀಡಿರುವಂತಹ ಸುದ್ದಿಯಿದು. ಇದರ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಇದು ಅವಳಿ ಮಕ್ಕಳಿರಬಹುದು ಎಂದು ಆಕೆ ಭಾವಿಸಿದಳು!
ಗರ್ಭ ಧರಿಸುವ ವೇಳೆ ಅಲೆಕ್ಸಾಂಡ್ರ ಕಿನೋವಾ ಎಂಬಾಕೆಗೆ ಕೇವಲ 23ರ ಹರೆಯದ. ಅವಳಿ ಮಕ್ಕಳು ತನ್ನ ಗರ್ಭದಲ್ಲಿ ಇರಬಹುದು ಎಂದು ಆಕೆ ಆರಂಭದಲ್ಲಿ ಯೋಚಿಸಿದ್ದರು. ಆದರೆ ಗರ್ಭಧಾರಣೆಯ ಮಧ್ಯದ ಅವಧಿಯಲ್ಲಿ ಹೊಟ್ಟೆಯಲ್ಲಿ ನಾಲ್ಕು ಮಕ್ಕಳು ಇರುವುದಾಗಿ ವೈದ್ಯರು ಹೇಳಿದರು. ಅಚ್ಚರಿ ಎಂದರೆ ಮುಂದಿನ ತಿಂಗಳು ಈ ಸಂಖ್ಯೆಯು ಐದಕ್ಕೇರಿತು.

31ನೇ ವಾರದಲ್ಲಿ ಹೆರಿಯಾಯಿತು!
ಕಿನೋವಾ ತನ್ನ ಗರ್ಭಧಾರಣೆಯ 31ನೇ ವಾರದಲ್ಲಿ ಸಿಸೇರಿಯನ್ ಚಿಕಿತ್ಸೆ ಮೂಲಕ ಐದು ಮಕ್ಕಳಿಗೆ ಜನ್ಮ ನೀಡಿದರು. ಯಾವುದೇ ಸಮಸ್ಯೆಯಿಲ್ಲದೆ ಹರಿಗೆ ಆಯಿತು ಮತ್ತು ಎಲ್ಲಾ ಮಕ್ಕಳು ಆರೋಗ್ಯವಾಗಿದ್ದವು. ಕಿನೋವಾ ಮತ್ತು ಆಕೆಯ ಶಿಶುಗಳನ್ನು ತೀವ್ರ ನಿಗಾ ಕೊಠಡಿಯಲ್ಲಿಡಲಾಯಿತು.

ಎಲ್ಲಾ ಮಕ್ಕಳು ಒಂದೇ ರೀತಿಯಾಗಿದ್ದಾರೆ ಎನ್ನುತ್ತಾರೆ ತಂದೆ!
ಜೆಕ್ ಗಣರಾಜ್ಯದಲ್ಲಿ ಜನಿಸಿದ ಮೊದಲ ಐದು ಶಿಶುಗಳು ಇದಾಗಿದೆ ಮತ್ತು ಎಲ್ಲಾ ಶಿಶುಗಳು ಒಂದೇ ರೀತಿಯಾಗಿವೆ. ಗಂಡು ಮಕ್ಕಳಿಗೆ ಡೇನಿಯಲ್, ಮೈಕಲ್, ಅಲೆಕ್ಸ್ ಮತ್ತು ಮಾರ್ಟಿನ್ ಎಂದು ಹೆಸರಿಸಲಾಗಿದೆ. ಅದೇ ಒಂದು ಹೆಣ್ಣು ಮಗುವಿಗೆ ತೆರೆಝ್ಕ ಎಂದು ಹೆಸರನ್ನಿಡಲಾಗಿದೆ.
Most Read: ತನ್ನ ಮಗಳ ಮನಸ್ಸನ್ನು ಗೆಲ್ಲುವ ವ್ಯಕ್ತಿಗೆ ಮನೆ, ಹತ್ತು ಕಾರು, 1.28 ಮಿಲಿಯನ್ ಹಣ ನೀಡಲಿರುವ ಉದ್ಯಮಿ!!

ಇದು ತುಂಬಾ ವಿಭಿನ್ನ ಜನನದ ಇತಿಹಾಸ!
ಜೆಕ್ ಗಣರಾಜ್ಯದ ಅಂಕಿಅಂಶಗಳ ಪ್ರಕಾರ ಇಂತಹ ಶಿಶುಗಳ ಜನನವು 480 ವರ್ಷಗಳಲ್ಲಿ ಒಂದು ಸಲ ಆಗುತ್ತದೆ. ಇದರಿಂದಾಗಿ ಇದು ಅದ್ಭುತವಾಗಿರುವಂತಹ ಜನ ಮತ್ತು ಎಲ್ಲಾ ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.



Click it and Unblock the Notifications
