Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತನ್ನ ಮಗಳ ಮನಸ್ಸನ್ನು ಗೆಲ್ಲುವ ವ್ಯಕ್ತಿಗೆ ಮನೆ, ಹತ್ತು ಕಾರು, 1.28 ಮಿಲಿಯನ್ ಹಣ ನೀಡಲಿರುವ ಉದ್ಯಮಿ!!
ರಾಜರ ಕಾಲದಲ್ಲಿ ಸ್ವಯಂವರವು ಏರ್ಪಡುತ್ತಾ ಇದ್ದದನ್ನು ನಾವು ಕೇಳಿದ್ದೇವೆ. ಆಗ ಯುವರಾಣಿಯ ಮನಸ್ಸು ಗೆದ್ದ ಯುವರಾಜನಿಗೆ ರಾಜ್ಯವನ್ನೇ ನೀಡಲಾಗುತ್ತಿತ್ತು. ಇಂತಹ ಹಲವಾರು ಕಥೆಗಳು ಇತಿಹಾಸದಲ್ಲಿದೆ. ಮಕ್ಕಳ ಮದುವೆಗಾಗಿ ಜನರು ತಮ್ಮ ಆಸ್ತಿಯ ಬಹುಪಾಲನ್ನು ಖರ್ಚು ಮಾಡುವುದನ್ನು ನಾವು ನೋಡಿದ್ದೇವೆ. ಇಂತಹ ಒಂದು ಕಥೆಯ ಬಗ್ಗೆ ನಾವು ಇಲ್ಲಿ ನಿಮಗೆ ಹೇಳಲಿದ್ದೇವೆ.
ಇಲ್ಲೊಬ್ಬಳು ಹುಡುಗಿ ತನ್ನ ತಂದೆಯ ಇಚ್ಛೆಯಂತೆ ಮದುವೆಯಾಗಲು ಬಯಸಿದ್ದಾಳೆ. ತನ್ನ ಮಗಳ ಮನಸ್ಸನ್ನು ಗೆಲ್ಲುವ ವ್ಯಕ್ತಿಗೆ ಒಂದು ಮನೆ, ಹತ್ತು ಕಾರು 1.28 ಆರ್ ಎಂ ಮಿಲಿಯನ್ ಹಣ ನೀಡಲು ಆತ ನಿರ್ಧರಿಸಿದ್ದಾನೆ. ಈ ಬಗ್ಗೆ ನೀವು ಲೇಖನದಲ್ಲಿ ಓದುತ್ತಾ ಸಾಗಿ...

ಹುಡುಗಿಯ ತಂದೆ ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ
ಅನೋಂಟ್ ರೊಥಾಂಗ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ತನ್ನ ಮಗಳ ಹೃದಯ ಗೆದ್ದವರಿಗೆ ಒಂದು ಮನೆ, ಹತ್ತು ಕಾರು, ಆರ್ ಎಂ 1.28 ಮಿಲಿಯನ್ ಹೀಗೆ ಹಲವಾರು ಉಡುಗೊರೆ ನೀಡುವುದಾಗಿ ಹೇಳಿ ಹಾಕಿರುವಂತಹ ಪೋಸ್ಟ್ ತುಂಬಾ ವೈರಲ್ ಆಗಿದೆ.

ಈ ಪೋಸ್ಟ್ ನ ಬಗ್ಗೆ ಮತ್ತಷ್ಟು ಮಾಹಿತಿ
ಈ ಉದ್ಯಮಿಯು ಹುಡುಗರಿಗೆ ಉಡುಗೊರೆ ನೀಡುವುದಾಗಿ ಹಾಕಿರುವ ಪೋಸ್ಟ್ ನ ಜತೆಗೆ ತನ್ನ 27ರ ಹರೆಯದ ಮಗಳ ಫೋಟೊ ಮತ್ತು ತನ್ನ ಫೋಟೊ ಕೂಡ ಹಾಕಿದ್ದಾರೆ. ಈ ಫೋಟೊದಲ್ಲಿ ಇಬ್ಬರ ಸುತ್ತಲೂ ತುಂಬಾ ನಗದು ಹಣ ಮತ್ತು ತುಂಬಾ ದುಬಾರಿಯಾಗಿರುವಂತಹ ಬಂಗಾರದ ಆಭರಣಗಳು ಕಾಣಿಸುತ್ತಾ ಇದೆ.

ತನ್ನ ಕಿರಿಯ ಮಗಳ ಮದುವೆಯನ್ನು ತುಂಬಾ ಭಿನ್ನವಾಗಿ ಮಾಡಲು ಬಯಸಿದ್ದಾನೆ
ಉದ್ಯಮಿಯ ಪ್ರಕಾರ ಈಗ ಅವರಿಗೆ ವಯಸ್ಸಾಗುತ್ತಾ ಬಂದಿದೆ ಮತ್ತು ತನ್ನ ಕಿರಿಯ ಮಗಳಿಗೆ ಸೂಕ್ತ ವರನನ್ನು ಹುಡುಕುವುದು ಅತೀ ಮುಖ್ಯವೆಂದು ಭಾವಿಸಿರುವರು. ಅವರು ಡುರೈನ್ ವ್ಯಾಪಾರ ಮತ್ತು ರಫ್ತಿನ ಉದ್ಯಮ ಮಾಡುತ್ತಲಿದ್ದಾರೆ. ತನ್ನ ಮಗಳ ಮದುವೆ ವೇಳೆ ತನ್ನ ಉದ್ಯಮವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಅವರ ಉದ್ದೇಶವಾಗಿದೆ.

ಮಗಳ ಇಚ್ಛೆ
ಈ ಫೇಸ್ ಬುಕ್ ಪೋಸ್ಟ್ ವೈರಲ್ ಆದ ಬಳಿಕ ಉದ್ಯಮಿಯ ಫೋನ್ ನಿರಂತರವಾಗಿ ರಿಂಗ್ ಆಗುತ್ತಿದೆ ಮತ್ತು ಅವರಿಗೆ ಹಲವಾರು ಪ್ರಸ್ತಾವಗಳು ಬಂದಿದೆ. ಎಲ್ಲಾ ವಯೋಮಾನದ ಪುರುಷರು ತಮ್ಮ ಅರ್ಜಿ ಹಾಕಿದ್ದಾರೆ ಮತ್ತು ಕೆಲವರು ಉದ್ಯಮಿಯ ಮಗಳನ್ನು ಆಕರ್ಷಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಮಗಳಲ್ಲಿ ತಂದೆಯ ಪೋಸ್ಟ್ ಬಗ್ಗೆ ಕೇಳಿದಾಗ, ತಂದೆಯನ್ನು ನಾನು ಗೌರವಿಸುತ್ತೇನೆ ಮತ್ತು ಅವರ ಆಯ್ಕೆಯಂತೆ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.



Click it and Unblock the Notifications
