Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಪಬ್ ಜಿ ಗೇಮ್‌ನ ಭಾರತೀಯ ವರ್ಷನ್! ಸಖತ್ ಇಂಟರೆಸ್ಟಿಂಗ್ ಆಗಿದೆ...
ವಿಡಿಯೋ ಗೇಮ್ ಆಡುವ ಚಟವು ಒಂದು ಸಲ ಹತ್ತಿಕೊಂಡರೆ ಅದರಿಂದ ಬಿಡುಗಡೆ ಪಡೆಯುವುದು ತುಂಬಾ ಕಷ್ಟ. ಹೀಗಾಗಿ ವಿಡಿಯೋ ಗೇಮ್ಸ್ ನಿಂದ ದೂರವಿರುವಂತೆ ಯುವಜನತೆಗೆ ಮನವಿ ಮಾಡಿಕೊಳ್ಳಲಾಗುತ್ತದೆ. ಆದರೆ ಹೊಸ ಹೊಸ ವಿಡಿಯೋ ಗೇಮ್ಸ್ ಗಳು ಯುವಜನತೆಯನ್ನು ಸೆಳೆಯುವುದು. ಅದರಲ್ಲೂ ಪಬ್ ಜಿ ಎನ್ನುವ ಗೇಮ್ ಆಡುವಂತಹ ಅಗ್ರ ಮೂರು ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಹೇಳಲಾಗುತ್ತಿದೆ.
ಭಾರತದ ಯುವಜನಾಂಗದಲ್ಲಿ ಈ ಗೇಮ್ ತುಂಬಾ ಜನಪ್ರಿಯವಾಗಿದೆ. ಅದೇ ರೀತಿ ಭಾರತದ ಹುಡುಗನೊಬ್ಬ ಪಬ್ ಜಿ ಗೇಮ್ಸ್ ಭಾರತದಲ್ಲಿ ನಡೆದರೆ ಹೇಗಿರುತ್ತದೆ ಎಂದು ತನ್ನ ಕ್ರಿಯಾತ್ಮಕತೆ ಪ್ರದರ್ಶನ ಮಾಡಿದ್ದಾನೆ. ಇದನ್ನು ಆತ ತನ್ನ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾನೆ. ಮುಷ್ತಝ್ ಅಹ್ಮದ್ಎನ್ನುವಾತ ತನ್ನ ಕ್ರಿಯಾತ್ಮಕತೆಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾನೆ. ಭಾರತದಲ್ಲಿ ಪಬ್ ಜಿ ಆಡಿದರೆ ಹೇಗಿರುವುದು ಎಂದು ಫೋಟೊಗಳನ್ನು ಆತ ಹಾಕಿದ್ದಾರೆ. ಇದು ತುಂಬಾ ಆಸಕ್ತಿ ಕೆರಳಿಸುವಂತಿದೆ. ಇದನ್ನು ನೀವು ನೋಡಿ.

ಭಾರತದಲ್ಲಿ ಬೈಕ್ ಸವಾರರ ಸರ್ಕಸ್
ಭಾರತದಲ್ಲಿ ಬೈಕ್ ಮೇಲೆ ಸಂಪೂರ್ಣ ಕುಟುಂಬದವರು ಹೋಗುವುದು ಸಾಮಾಣ್ಯ ಸಂಗತಿಯಾಗಿರುವುದು. ಈ ದೃಶ್ಯವನ್ನು ಗೇಮ್ ನಲ್ಲಿ ಹಾಕಿದರೆ ಹೇಗಿರಬಹುದು ಊಹಿಸಿ. ತುಂಬಾ ತಮಾಷೆಯಾಗಿರುವುದು.

ಧಾರ್ಮಿಕ ಮೂಲಭೂತವಾದಿಗಳನ್ನು ನೀವು ಕಾಣಲಿದ್ದೀರಿ
ನೀವು ಭಾರತದ ಯಾವುದೇ ಬೀದಿಗೆ ಹೋದರೂ ಅಲ್ಲಿ ನೀವು ಧಾರ್ಮಿಕ ಮೂಲಭೂತವಾದಿಗಳನ್ನು ಕಾಣಲಿದ್ದೀರಿ. ಧಾರ್ಮಿಕ ಮೂಲಭೂತವಾದಿಗಳು ಇಲ್ಲದೆ ಇರುವ ಜಾಗವೇ ಇಲ್ಲವೆನ್ನಬಹುದು.

ಆತ ತುಂಬಾ ಕ್ರಿಯಾತ್ಮಕ ವ್ಯಕ್ತಿ
ಈ ಯುವಕ ತುಂಬಾ ಕ್ರಿಯಾತ್ಮಕವಾಗಿದ್ದಾನೆ ಮತ್ತು ಗೇಮ್ ನ ಪ್ರತಿಯೊಂದು ವಿಚಾರವನ್ನು ಆತ ತುಂಬಾ ಗಂಭೀರವಾಗಿ ಪರಿಗಣಿಸಿದಂತೆ ಇದೆ. ಇದರಿಂದಾಗಿ ಆತ ಸಣ್ಣ ಸಣ್ಣ ವಿವರವನ್ನು ದೃಶ್ಯದಲ್ಲಿ ನೀಡಿದ್ದಾನೆ.

ಉದ್ಯಾನವನ ಮತ್ತು ಜೋಡಿಗಳು!
ಭಾರತೀಯರು ತುಂಬಾ ರೋಮ್ಯಾಂಟಿಕ್ ಎಂದು ತಿಳಿದಿದೆ ಮತ್ತು ಉದ್ಯಾನವನಕ್ಕೆ ಹೋದರೆ ಪ್ರತಿಯೊಂದು ಮರದ ಕೆಳಗಡೆ ನಿಮಗೆ ಜೋಡಿಯೊಂದು ಸಿಗುವುದು. ಆ ಯುವಕ ಇದನ್ನು ಬಿಂಬಿಸದೆ ಇರಲು ಹೇಗೆ ಸಾಧ್ಯ.

ಕಾರಿನಲ್ಲಿ ಹೋಗುವಾಗ ಉಗುಳುವುದನ್ನು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ!!
ರಸ್ತೆಗಳಲ್ಲಿ ಉಗಿಯುವುದು ಭಾರತೀಯರ ಅಚ್ಚುಮೆಚ್ಚಿನ ಅಭ್ಯಾಸವಾಗಿದೆ. ಈ ದೃಶ್ಯವಿಲ್ಲದೆ ಈ ಆಟವು ಹೇಗೆ ಪೂರ್ಣವಾಗುವುದು?

ಗೋಡೆಗಳ ಮೇಲೆ ಮೂತ್ರ ಮಾಡುವುದು
ಭಾರತದ ಪಬ್ ಜಿ ಆಟದ ದೃಶ್ಯಗಳಲ್ಲಿ ಪುರುಷರು ಯಾವುದೇ ನಾಚಿಕೆ ಇಲ್ಲದೆ ಗೋಡೆಗಳ ಮೇಲೆ ಮೂತ್ರ ಮಾಡುವುದನ್ನು ಕಾಣಬಹುದು. ಈ ದೃಶ್ಯವನ್ನು ಕೂಡ ಇಲ್ಲಿ ಕಾಣಬಹುದು.

ಸಲ್ಮಾನ್ ಖಾನ್ ಮಾಡಿರುವಂತಹ ಅಪಘಾತ
ಸಲ್ಮಾನ್ ಖಾನ್ ಮಾಡಿರುವಂತಹ ರಸ್ತೆ ಅಪಘಾತದ ಬಗ್ಗೆಯೂ ಇಲ್ಲಿ ದೃಶ್ಯಗಳು ಇವೆ.

ಇನ್ನು ಕೊನೆಯದಾಗಿ…
ಭಾರತದ ಹೆಚ್ಚಿನ ರಿಯಾಲಿಟಿ ಷೋಗಳು ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಇಡೀ ಸಮಾರಂಭದಲ್ಲಿ ಸೇರಿರುವ ಜನರನ್ನು ಮತ್ತು ವೀಕ್ಷಕರನ್ನು ನಗಿಸುವಂತ ವ್ಯಕ್ತಿ ಮನಿಷ್ ಪೌಲ್. ಆತ ಕೂಡ ಇಲ್ಲಿ ಸ್ಥಾನ ಪಡೆದಿದ್ದಾನೆ. ಈ ಕ್ರಿಯಾತ್ಮಕತೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ
ಹಾಕಿಬಿಡಿ.



Click it and Unblock the Notifications
