ಮಹಿಳೆಯರಲ್ಲಿ ಎದುರಾಗುವ ಹೃದಯಾಘಾತದ ಸಾಮಾನ್ಯ ಮುನ್ಸೂಚನೆಗಳು

ಹೃದಯಾಘತಕ್ಕೂ ಮುನ್ನ ಎದೆಯಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾದ ಹಾಗೂ ಎಲ್ಲರ ಗಮನಕ್ಕೆ ಬರುವ ಸೂಚನೆಯಾಗಿದೆ. ಎಲ್ಲರ ಗಮನಕ್ಕೆ ಬರುತ್ತದೆ ಎಂಬ ಕಾರಣದಿಂದಲೇ ಈ ಸೂಚನೆಯನ್ನೇ ಸಿನೇಮಾಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಾಗಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಹೃದಯಾಘಾತಕ್ಕೆ ಒಳಗಾಗುವ ವ್ಯಕ್ತಿ ತನ್ನ ಎದೆಯನ್ನು ಕಿವಿಚಿಕೊಂಡು ನೆಲಕ್ಕೆ ಕುಸಿಯುವ ದೃಶ್ಯ ಚಲನಚಿತ್ರದ ಯಾವುದೇ ಕಥೆಯಲ್ಲಿ ಬರುವ ಹೃದಯಾಘಾತದ ಅಭಿನಯವಾಗಿದೆ. ಆದರೆ ನಿಜಜೀವನದಲ್ಲಿ ಹೃದಯಾಘಾತದ ಸೂಚನೆಗಳು ಎದೆಯಲ್ಲಿ ನೋವಿನ ಹೊರತಾಗಿ ಇನ್ನೂ ಹಲವಾರು ರೂಪದಲ್ಲಿರುತ್ತವೆ ಹಾಗೂ ಸಾಮಾನ್ಯರಿಗೆ ಇದು ತಕ್ಷಣಕ್ಕೆ ಅರ್ಥವಾಗುವುದಿಲ್ಲ.

ಹೆಚ್ಚಿನವು ತುಂಬಾ ಸೂಕ್ಷ್ಮವಾದ ಸೂಚನೆಗಳಾಗಿರುತ್ತವೆ ಹಾಗೂ ಇವು ಹೃದಯಸಂಬಂಧಿ ತೊಂದರೆಗಳನ್ನು ಅತಿ ಸೂಕ್ಷವಾಗಿ ಗಮನಿಸಿದರೆ ಮಾತ್ರವೇ ಮೇಲ್ನೋಟಕ್ಕೆ ಕಾಣುವಂತಿರುತ್ತವೆ. ಪ್ರತಿಯೊಬ್ಬರೂ ಈ ಸೂಚನೆಗಳನ್ನು ಅರಿತಿದ್ದಷ್ಟೂ ಉತ್ತಮ. ಒಂದು ಅಧ್ಯಯನದ ಪ್ರಕಾರ, ಮಹಿಳೆಯರಿಗೆ ಹೃದಯಸಂಬಂಧಿ ತೊಂದರೆಗಳು ಎದುರಾದಾಗ ಎದೆಯಲ್ಲಿ ನೋವು ಅತಿ ಹೆಚ್ಚು ಎಂದು ಕಾಣಿಸಿಕೊಳ್ಳುವುದಿಲ್ಲ. ಆದರೆ ದೇಹ ಇತರ ಸೂಚನೆಗಳ ಮೂಲಕ ಈ ತೊಂದರೆಗಳನ್ನು ಪ್ರಕಟಿಸುತ್ತದೆ. ಒಂದು ವೇಳೆ ಈ ಸೂಚನೆಗಳನ್ನು ಅಲಕ್ಷಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಮಹಿಳೆಯರಿಗೆ ಎದುರಾಗುವ ಹೃದಯಾಘಾತದ ಸೂಚನೆಗಳನ್ನು ನೀಡುವ ಐದು ಸಾಮಾನ್ಯ ಲಕ್ಷಣಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ, ಮುಂದೆ ಓದಿ

ಎದೆಯಲ್ಲಿ ಅಹಿತಕರವಾದ ಒತ್ತಡದ ಅನುಭವ

ಎದೆಯಲ್ಲಿ ಅಹಿತಕರವಾದ ಒತ್ತಡದ ಅನುಭವ

ಮಹಿಳೆಯರಿಗೆ ಎದುರಾಗುವ ಹೃದಯಾಘಾತಗಳಲ್ಲಿ ಈ ಸೂಚನೆ ಅತಿ ಸಾಮಾನ್ಯವಾಗಿದೆ. ಒಂದು ವೇಳೆ ನಿಮಗೆ ಎದೆಯ ಭಾಗದಲ್ಲಿ ಒಳಗಿನಿಂದ ಒತ್ತಡ ಎದುರಾದಂತೆ, ಎದೆ ಬಿಗಿಯಾದಂತೆ ಅನ್ನಿಸಿದರೆ ತಕ್ಷಣವೇ ವೈದ್ಯಕೀಯ ನೆರವನ್ನು ಯಾಚಿಸಬೇಕು. ಒತ್ತಡದ ಜೊತೆಗೇ ನೋವು ಸಹಾ ಕಾಣಿಸಿಕೊಳ್ಳಬಹುದು, ಆದರೆ ಇದು ಎದೆಯ ನಡುವಣ ಭಾಗದ ಸಹಿತ ಎದೆಯ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಹೆಚ್ಚಿನವರ ಸಾಮಾನ್ಯ ಜ್ಞಾನದ ಪ್ರಕಾರ, ಒಂದು ವೇಳೆ ಎದೆಯ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ ಮಾತ್ರವೇ ಹೃದಯದ ತೊಂದರೆ ಇರುತ್ತದೆ. ವಾಸ್ತವದಲ್ಲಿ ಎದೆಯ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಹೃದಯಕ್ಕೆ ಹಾಗೂ ರಕ್ತಪರಿಚಲನಾ ವ್ಯವಸ್ಥೆಗೆ ಸಂಬಂಧಿಸಿರಬಹುದು.

ಉಸಿರಾಡಲು ಕಷ್ಟವಾಗುವುದು

ಉಸಿರಾಡಲು ಕಷ್ಟವಾಗುವುದು

ಉಸಿರೆಳೆದುಕೊಳ್ಳಲು ಎದೆಯ ಒಳಗೆ ಜಾಗವೇ ಇಲ್ಲದಂತಾಗಿ ಉಸಿರಾಟ ಕಷ್ಟಕರವಾಗಿದ್ದರೆ ಇದು ಮಹಿಳೆಯರಿಗೆ ಎದುರಾಗುವ ಹೃದಯಾಘಾತದ ಇನ್ನೊಂದು ಸೂಚನೆಯಾಗಿದೆ. ಬಿಟ್ಟ ಉಸಿರನ್ನು ಮತ್ತೆ ಒಳಗೆಳೆದುಕೊಳ್ಳಲಾಗದಂತೆ ಎದೆಯೊಳಗೆ ಒತ್ತಡ ಎದುರಾಗಿದ್ದು ಕೊಂಚವೂ ಬಿಗಿ ಎನಿಸಿದರೆ ಇದು ಹೃದಯಕ್ಕೆ ಸಂಬಂಧಪಟ್ಟ ತೊಂದರೆ ಎಂದು ಅರಿತುಕೊಳ್ಳಬೇಕು.

ಬೆವರುವಿಕೆ

ಬೆವರುವಿಕೆ

ಒಂದು ವೇಳೆ ಸೆಖೆ ಅಥವಾ ವ್ಯಾಯಾಮದ ಹೊರತಾಗಿಯೂ ನಿಮ್ಮ ದೇಹದಿಂದ ಅತೀವವಾದ ಬೆವರು ಸುರಿಯುತ್ತಿದ್ದರೆ ತಕ್ಷಣವೇ ನೆರವನ್ನು ಯಾಚಿಸಬೇಕು. ಒಂದು ವೇಳೆ ಅಕಾರಣವಾಗಿ ಎಲ್ಲವೂ ಸರಿ ಇದ್ದಂತೆಯೇ ಅನ್ನಿಸಿದ್ದರೂ ಕೇವಲ ಬೆವರು ಮಾತ್ರ ಏಕಾಗಿ ಧಾರಾಕಾರವಾಗಿ ಸುರಿಯುತ್ತಿದೆ ಎಂಬ ಅನುಮಾನ ಮೂಡಿದರೆ, ಇದು ರಕ್ತಪರಿಚಲನೆಗೆ ಸಂಬಂಧಿಸಿದ ಸೂಚನೆ ಎಂದು ಅರಿತುಕೊಳ್ಳಬೇಕು. ಸಾಮಾನ್ಯವಾಗಿ ಈ ಬೆವರುವಿಕೆ ವಯಸ್ಸಾಗುತ್ತಿದ್ದಂತೆ ಹೆಚ್ಚುವ ರಾತ್ರಿಯ ಹೊತ್ತಿನ ಭಯ ಅಥವಾ ತೀಕ್ಷ್ಣವಾಗಿ ದೇಹದ ತಾಪಮಾನ ಏರುವ ಸಂದರ್ಭದಲ್ಲಿ ಎದುರಾಗುವ ಬೆವರುವಿಕೆಯಂತೆಯೇ ಇರುವ ಕಾರಣ ಈ ಸೂಚನೆಯನ್ನು ಹೃದಯದ ತೊಂದರೆಯ ಸೂಚನೆ ಎಂದು ಪರಿಗಣಿಸದೇ ಹೋಗುವ ಸಾಧ್ಯತೆ ಹೆಚ್ಚು. ಆದರೂ ಈ ಸೂಚನೆಯನ್ನು ಅಲಕ್ಷಿಸಿದರೆ ಇದು ಮುಂದೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಎರಡೂ ಕೈಗಳಲ್ಲಿ ನೋವು ಕಾಣಿಸಿಕೊಳ್ಳುವುದು

ಎರಡೂ ಕೈಗಳಲ್ಲಿ ನೋವು ಕಾಣಿಸಿಕೊಳ್ಳುವುದು

ಹೃದಯದ ತೊಂದರೆ ಎದುರಾದಾಗ ಕೇವಲ ಎದೆಯ ನಡುವಣ ಭಾಗದಲ್ಲಿ ಅಥವಾ ಹೃದಯದ ಭಾಗದಲ್ಲಿ ಮಾತ್ರವೇ ನೋವು ಕಾಣಿಸಿಕೊಳ್ಳಬೇಕಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಎಡ ಮತ್ತು ಬಲ ತೋಳುಗಳಲ್ಲಿ, ಅಂದರೆ ಕಂಕುಳ ಪಕ್ಕದ ಭಾಗದಲ್ಲಿ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿಯೂ ಕಾಣಿಸಿಕೊಳ್ಳಬಹುದು. ಆದರೆ ನೋವು ಎಲ್ಲಿಯೇ ಕಾಣಿಸಿಕೊಳ್ಳಲಿ, ಎಷ್ಟೇ ಕಡಿಮೆ ಅಥವಾ ಹೆಚ್ಚಿನ ತೀವ್ರತೆಯಿರಲಿ, ಇದು ಹೃದಯಕ್ಕೆ ಸಂಬಂಧಿಸಿದ ಸೂಚನೆಯಾಗಿರಬಹುದು. ಕೆಲವು ಸಂದರ್ಭದಲ್ಲಿ ಈ ನೋವು ಸತತವಾಗಿ ತೀವ್ರವಾಗಿಯೇ ಮುಂದುವರೆಯುತ್ತಿದ್ದರೆ ಕೆಲವು ಸಂದರ್ಭಗಳಲ್ಲಿ ಆಗಾಗ ಬರುತ್ತಾ ಕಡಿಮೆಯಾಗುತ್ತಲೂ ಇರಬಹುದು.

ತಲೆ ತಿರುಗುವಿಕೆ

ತಲೆ ತಿರುಗುವಿಕೆ

ವಾಕರಿಕೆ ಮತ್ತು ವಾಂತಿ ಮಹಿಳೆಯರಿಗೆ ಕೆಲವಾರು ತೊಂದರೆಗಳಿಂದಾಗಿ ಎದುರಾಗುತ್ತಲೇ ಇರುತ್ತದೆ. ರಸದೂತಗಳ ಏರುಪೇರಿನ ಪರಿಣಾಮವಾಗಿಯೂ ಕಾಣಿಸಿಕೊಳ್ಳುವ ಮುಂಜಾನೆಯ ವಾಕರಿಕೆ, ಅಥವಾ ಆಹಾರದ ತೊಂದರೆಯಿಂದ ಎದುರಾಗುವ ವಾಕರಿಕೆ ಮತ್ತು ತಲೆತಿರುಗುವಿಕೆಯೂ ಹೃದಯ ಸಂಬಂಧಿ ತೊಂದರೆಗಳಿಂದಾಗಿ ಕಾಣಿಸಿಕೊಳ್ಳುವ ವಾಕರಿಕೆಯಂತೆಯೇ ಇರುತ್ತದೆ. ಹಾಗಾಗಿ ಈ ಸೂಚನೆ ಎದುರಾದಾಗ ಇದರೊಂದಿಗೆ ದೇಹದ ಎದೆಯ ಭಾಗದಲ್ಲಿ ಚಿಕ್ಕದಾಗಿ ನೋವು ಸಹಾ ಕಾಣಿಸಿಕೊಂಡರೆ ಇದು ಹೃದಯಕ್ಕೆ ಸಂಬಂಧಿಸಿದ ನೋವು ಎಂದು ಖಚಿತಪಡಿಸಿಕೊಳ್ಳಬಹುದು. ಹೌದು ಎಂದಾದರೆ, ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ಼್ಸೆಯನ್ನು ಪಡೆದುಕೊಳ್ಳಬೇಕು.

ಅತಿಯಾದ ಆಯಾಸ

ಅತಿಯಾದ ಆಯಾಸ

ಮಹಿಳೆಯರಿಗೂ ವಯಸ್ಸಾದಂತೆ ದೇಹದ ಶಕ್ತಿ ಉಡುಗುತ್ತಾ ಕೊಂಚ ಕೆಲಸ ಮಾಡಿದರೂ ಆಯಾಸ ಎದುರಾಗುತ್ತದೆ. ಆದರೆ ಆಯಾಸ ವಾಗುವಂತಹ ಯಾವುದೇ ಕೆಲಸಗಳನ್ನು ಮಾಡದೇ ಇದ್ದಾಗ್ಯೂ ಏನೂ ಮಾಡಲಾಗದಷ್ಟು ಆಯಾಸ ಎದುರಾದರೆ ಇದು ಹೃದಯಾಘಾತದ ಇನ್ನೊಂದು ಮುನ್ಸೂಚನೆಯಾಗಿರಬಹುದು. ಈ ಸಂದರ್ಭ ಎದುರಾದರೆ ಮೊದಲಾಗಿ ನೀವು ವೈದ್ಯರಿಂದ ಸೂಕ್ತ ಪರೀಕ್ಷೆಗೊಳಪಟ್ಟು ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ಈ ಆಯಾಸ ಎದುರಾದಾಗ ಬೇರೆ ಯಾವುದೇ ಕೆಲಸವನ್ನು ಮಾಡದೇ ಸುಮ್ಮನೇ ಪವಡಿಸುವ ಮನಸ್ಸಾಗುತ್ತದೆ. ಸಾಮಾನ್ಯವಾಗಿ ಉದ್ವೇಗ ಎದುರಾದಾಗಲೂ ಇದೇ ಸೂಚನೆ ಎದುರಾಗುತ್ತದೆ. ಕಾರಣ ಏನೇ ಇದ್ದರೂ ಈ ಪರಿಯ ಆಯಾಸ ಎದುರಾದರೆ ತಕ್ಷಣ ತಮ್ಮ ಆಪ್ತರಲ್ಲಿ ಈ ಬಗ್ಗೆ ವಿವರಿಸಿ ತಕ್ಷಣವೇ ವೈದ್ಯರ ನೆರವು ಪಡೆದುಕೊಳ್ಳಲು ಧಾವಿಸಬೇಕು.

English summary

Common signs of a heart attack in women

It is known to all that chest pain is a common sign of heart attack. Even in movies every time a man is shown to have a heart attack, he gasps for breath, clutches his chest and falls down on the ground. But when it comes to real life, the symptoms of heart attack are many more than just pain in the chest. Yes, chest pain is a symptom of heart attack, but there are other subtle signs of cardiovascular problems, which are important to know. As per studies, women do not mostly feel chest pain when they suffer from a cardinal problem, there are few other signs you should be cautious about. If these signs are overlooked then it can even turn fatal.
X
Desktop Bottom Promotion