Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ಮೂರು ರಾಶಿಯವರು ಸಾಧು ಸ್ವಭಾವದ ವ್ಯಕ್ತಿಗಳು! ಹೃದಯಕ್ಕೆ ಹತ್ತಿರವಾಗಿರುವವರು...
ಜೀವನದ ಪಯಣದಲ್ಲಿ ಹಲವಾರು ಮಂದಿ ನಮಗೆ ಪರಿಚಯವಾಗುತ್ತಾರೆ. ಇದರಲ್ಲಿ ಕೆಲವರನ್ನು ಬೇಗನೆ ಮರೆತರೆ, ಇನ್ನು ಕೆಲವರನ್ನು ಮರೆತುಬಿಡಲು ಸಾಧ್ಯವೇ ಆಗಲ್ಲ. ಇವರು ನಿಮ್ಮ ಹೃದಯಕ್ಕೆ ಹತ್ತಿರವಾಗಿರುವರು ಮತ್ತು ತುಂಬಾ ಸಾಧು ಸ್ವಭಾವದ ವ್ಯಕ್ತಿಯಾಗಿರುವರು. ಅವರಿಗೆ ನೋವುಂಟು ಮಾಡಲು ನಿಮಗೆ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಅವರು ಹುಟ್ಟಿರುವಂತಹ ರಾಶಿಚಕ್ರ.
ಹೌದು, ಕೆಲವೊಂದು ರಾಶಿಚಕ್ರದವರನ್ನು ನೀವು ಎಷ್ಟೇ ಪ್ರಯತ್ನಿಸಿದರೂ ದೂರ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರು ನಿಮ್ಮೊಂದಿಗೆ ಆ ರೀತಿಯ ಬೆಸುಗೆ ಇಟ್ಟುಕೊಂಡಿರುವರು. ನಮಗೆ ದೂರ ಮಾಡಲು ಸಾಧ್ಯವೇ ಇಲ್ಲದಿರುವ ರಾಶಿಚಕ್ರದವರು ಯಾರು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ....

ಮೀನ: ಫೆ.19-ಮಾ.20
ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಮತ್ತು ಹಾಸ್ಯ ಸ್ವಭಾವ ಹೊಂದಿರುವವರು. ಇವರ ಶಕ್ತಿಯು ನೈಜವಾಗಿರುವುದು. ಇವರ ಕಲ್ಪನಾತ್ಮಕ ನೋಟ ಮತ್ತು ಯಾವುದೇ ಪರಿಸ್ಥಿತಿಯಲ್ಲು ತಮಾಷೆಯಾಗಿರುವ, ಒತ್ತಡಕ್ಕೆ ಒಳಗಾಗದ ವ್ಯಕ್ತಿತ್ವವು ಇವರದ್ದಾಗಿರುವುದು.

ಮೀನ: ಫೆ.19-ಮಾ.20
ಇವರು ಸಂಕಷ್ಟದಲ್ಲಿ ಇರುವಂತಹ ತಮ್ಮ ಸ್ನೇಹಿತರಿಗೆ ನೆರವಿನ ಹಸ್ತ ಚಾಚುವರು. ಅವರ ಕಷ್ಟದಲ್ಲಿ ಭಾಗಿಯಾಗಿ ಹೆಗಲು ಕೊಡುವರು ಮತ್ತು ಅಗತ್ಯವಿದ್ದರೆ ಸಲಹೆ ನೀಡುವರು. ಇದರಿಂದ ಅವರನ್ನು ದೂರ ಮಾಡುವುದು ತುಂಬಾ ಕಷ್ಟವಾಗುವುದು.

ಮಿಥುನ: ಮೇ21-ಜೂನ್ 20
ಈ ರಾಶಿಯವರೊಂದಿಗೆ ಇರುವುದು ಒಂದು ಮನರಂಜನೆಯಾಗಿರುವುದು. ಇವರು ತಮ್ಮ ಅಲೌಕಿಕ ಬುದ್ಧಿವಂತಿಕೆ, ಅತಿಯಾದ ಜ್ಞಾನದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸುವರು.

ಮಿಥುನ: ಮೇ21-ಜೂನ್ 20
ಇನ್ನೊಂದು ಕಡೆಯಲ್ಲಿ ಇಂತಹ ಅದ್ಭುತವಾಗಿರುವ ವ್ಯಕ್ತಿಯು ನಿಮ್ಮೊಂದಿಗೆ ಇರುವುದರಿಂದ ಸ್ನೇಹಿತರು ಸಂತೋಷಗೊಳ್ಳುವರು. ಇವರು ನಿಮ್ಮ ಸ್ನೇಹಿತರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಕಾರಣದಿಂದಾಗಿ ಇಂತಹ ವ್ಯಕ್ತಿಯನ್ನು ದೂರ ಮಾಡುವುದು ಕಷ್ಟ.

ಸಿಂಹ: ಜುಲೈ23-ಆಗಸ್ಟ್ 23
ಇವರು ತುಂಬಾ ಜನಪ್ರಿಯವಾಗಿರುವಂತಹ ವ್ಯಕ್ತಿಗಳ ಜತೆಗೆ ಒಳ್ಳೆಯ ಸಂಪರ್ಕವನ್ನಿಟ್ಟುಕೊಂಡಿರುವರು. ಇವರ ಸ್ವಭಾವದಿಂದ ನಿಮ್ಮ ಸ್ನೇಹಿತರು ತುಂಬಾ ಆಕರ್ಷಿತರಾಗಬಹುದು. ರಾಶಿಪುಂಜದಲ್ಲಿರುವ ತುಂಬಾ ಸಾಮರ್ಥ್ಯ ಹೊಂದಿರುವ ಮತ್ತು ದೂರ ಮಾಡಿದ ಬಳಿಕವೂ ಅವರ ಬಗ್ಗೆ ಮಾತನಾಡುವಂತಹ ರಾಶಿಚಕ್ರದವರು ಇವರು.

ಸಿಂಹ: ಜುಲೈ23-ಆಗಸ್ಟ್ 23
ಇವರ ವ್ಯಕ್ತಿತ್ವದ ಚರಿಷ್ಮಾವು ನಿಮ್ಮನ್ನು ದೂರ ಮಾಡಲು ಬಿಡದು. ಇನ್ನು ಹೆಚ್ಚಿನ ರಾಶಿಚಕ್ರದ ಬಗ್ಗೆ ನಿಮಗೆ ತಿಳಿಯಬೇಕೆಂದು ಅನಿಸುತ್ತಾ ಇದೆಯಾ? ಹಾಗಾದರೆ ಇದೇ ಸೆಕ್ಷನ್ ನಲ್ಲಿ ಇನ್ನಷ್ಟು ಆಸಕ್ತಿದಾಯಕ ಲೇಖನಗಳಿಗೆ ಕಾಯುತ್ತಿರಿ.



Click it and Unblock the Notifications
