ಈ 9 ರಾಶಿಚಕ್ರದವರು ಪ್ರೀತಿಯಲ್ಲಿ ಬೀಳುವ ಮೊದಲು ಯೋಚಿಸಬೇಕು!

Posted By: Divya pandit Pandit
Subscribe to Boldsky

ಪ್ರಾಯಕ್ಕೆ ಬಂದ ಮೇಲೆ ಪ್ರೀತಿಯಲ್ಲಿ ಬೀಳಿವುದು ಸಹಜ. ವಿರುದ್ಧ ಲಿಂಗದವರೊಂದಿಗಿನ ಆಕರ್ಷಣೆ ನಿಧಾನವಾಗಿ ಪ್ರೀತಿಯ ತಿರುವನ್ನು ಪಡೆದುಕೊಳ್ಳುವುದು. ಪ್ರೀತಿಯಲ್ಲಿ ಬಿದ್ದಾಗ ಸಾಮಾನ್ಯವಾಗಿ ವಾಸ್ತವದ ಅರಿವು ಕಡಿಮೆಯಾಗಿರುತ್ತದೆ. ಕೇವಲ ಕಲ್ಪನೆಯ ಲೋಕದಲ್ಲಿಯೇ ತೇಲಾಡುತ್ತಿರುತ್ತಾರೆ. ತಾವು ಪ್ರೀತಿಸಿದ ವ್ಯಕ್ತಿಯೊಂದಿಗೆ ಎಲ್ಲಾ ಬಗೆಯ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತೇವೆ ಎನ್ನುವ ಭಾವದಲ್ಲಿ ಇರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಕ್ಷತ್ರ ಹಾಗೂ ರಾಶಿಚಕ್ರದವರು ದೀರ್ಘಕಾಲದ ದಾಂಪತ್ಯ ಜೀವನಕ್ಕೆ ಬೆಂಬಲ ನೀಡುವುದಿಲ್ಲ. ಅಂತಹ ಅನುಚಿತ ಹೊಂದಾಣಿಕೆಯಿರುವ ರಾಶಿಚಕ್ರದವರು ಪ್ರೀತಿ ಹಾಗೂ ವಿವಾಹವನ್ನು ಮಾಡಿಕೊಂಡರೆ ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಜೊತೆಗೆ ಜೀವನದಲ್ಲಿ ಬೇಸರ ಹಾಗೂ ವಿರಸಗಳು ತಲೆದೂರುತ್ತವೆ. ಹಾಗಾಗಿ ಪ್ರೀತಿಯಲ್ಲಿ ಬೀಳುವ ಮೊದಲು ಎರಡು ಬಾರಿ ಯೋಚಿಸುವ ಅನಿವಾರ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಸಂಯೋಜನೆಯಿಂದ ಯಾವ ಬಗೆಯ ತೊಂದರೆಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರವಾಗಿ ಚಿತ್ರಿಸಿದೆ....

 ವೃಶ್ಚಿಕ ಮತ್ತು ಕರ್ಕ

ವೃಶ್ಚಿಕ ಮತ್ತು ಕರ್ಕ

ಈ ಎರಡು ರಾಶಿಚಕ್ರದವರ ಪ್ರೀತಿಯ ಜೀವನ ಶೇ.100ರಷ್ಟು ನೋವು ಅಥವಾ ನೋವಿನ ಸ್ಥಿತಿಯನ್ನು ತಂದೊಡ್ಡುತ್ತದೆ. ಈ ವ್ಯಕ್ತಿಗಳ ಭಾವನೆ ಹಾಗೂ ವರ್ತನೆಗಳು ವಿಭಿನ್ನವಾಗಿರುತ್ತವೆ. ಮೂಡಿ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಈ ವ್ಯಕ್ತಿಗಳು ವಾದಗಳ ಮೂಲಕವೇ ಸಂಬಂಧದಲ್ಲಿ ಅಂತ್ಯವನ್ನು ಕಾಣುತ್ತಾರೆ. ಇವರ ನಡುವೆ ಆರೋಗ್ಯಕರ ಸಂಬಂಧ ಬೆಳೆಯುವುದು ಕಷ್ಟ.

ಕನ್ಯಾ ಮತ್ತು ಮಿಥುನ

ಕನ್ಯಾ ಮತ್ತು ಮಿಥುನ

ಈ ಎರಡು ರಾಶಿಯ ವ್ಯಕ್ತಿಗಳ ನಡುವೆ ಪರಸ್ಪರ ಹೊಂದಾಣಿಕೆ ಆಗುವುದಿಲ್ಲ. ಇವರು ಪರಸ್ಪರ ವಿಭಿನ್ನವಾದ ಅರ್ಥಗಳಲ್ಲಿ ವಿಷಯವನ್ನು ಅರ್ಥೈಸಿಕೊಳ್ಳುತ್ತಾರೆ. ಸಂಕ್ಷಿಪ್ತಾಗಿ ಹೇಳುವುದಾದರೆ ಪರಸ್ಪರ ನರಕದ ರೂಪದಲ್ಲಿ ನಿರಾಶೆಗೆ ಒಳಗಾಗುತ್ತಾರೆ. ಕನ್ಯಾರಾಶಿಯವರು ಬಹಳ ಕಠಿಣ ಹಾಗೂ ಹೊಂದಾಣಿಕೆಯ ಸ್ವಭಾವವನ್ನು ತೋರುವುದಿಲ್ಲ. ಇದಕ್ಕೆ ವಿರುದ್ಧವಾದಂತಹ ಪ್ರವೃತ್ತಿಯನ್ನು ಮಿಥುನ ರಾಶಿಯವರು ಹೊಂದಿರುತ್ತಾರೆ.

ಧನು ಮತ್ತು ತುಲಾ

ಧನು ಮತ್ತು ತುಲಾ

ಈ ಎರಡು ರಾಶಿಯವರು ಸದಾ ಜಗಳದಲ್ಲಿಯೇ ಮುಳುಗಿರುತ್ತಾರೆ. ಈ ಎರಡು ಚಿಹ್ನೆಯವರು ಪ್ರೀತಿ ಮಾಡಿದರೆ ಸದಾ ಜಗಳವನ್ನು ಮಾಡುತ್ತಲೇ ಇರುತ್ತಾರೆ. ಇವರು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುವ ಅಥವಾ ಬೆಳೆಸುವ ಮಾರ್ಗದ ಕುರಿತು ಎಂದಿಗೂ ಯೋಚಿಸುವುದಿಲ್ಲ. ಇವರ ವಿಭಿನ್ನವಾದ ಜೀವನ ಶೈಲಿ ಗಂಭೀರವಾದ ಹೋರಾಟವನ್ನು ಮಾಡುತ್ತದೆ.

ಮೀನ ಮತ್ತು ಕುಂಭ

ಮೀನ ಮತ್ತು ಕುಂಭ

ಈ ಎರಡು ರಾಶಿಯವರಲ್ಲಿ ಕೆಲವು ವಿಚಾರಗಳು ಸಾಮಾನ್ಯವಾಗಿರುವಂತೆ ಕಂಡು ಬಂದರೂ ಸ್ವಾತಂತ್ರ್ಯ ಹಾಗೂ ಸೃಜನಶೀಲ ಪ್ರವೃತ್ತಿಯಲ್ಲಿ ವಿಭಿನ್ನತೆಯನ್ನು ಹೊಂದಿದ್ದಾರೆ. ಮೀನ ರಾಶಿಯವರು ನಿರಂತರ ಪ್ರೀತಿ, ಕಾಳಜಿ ಹಾಗೂ ಊರ್ಜಿತಗೊಳಿಸುವಿಕೆಯಂತೆ ಕೂರುತ್ತದೆ. ಆದರೆ ಕುಂಭರಾಶಿಯವರು ಸಂಬಂಧದಲ್ಲಿನ ಸ್ಥಳ ಮತ್ತು ಸ್ವಾತಂತ್ರ್ಯವನ್ನು ಬಯಸುತ್ತಾರೆ.

ಮಕರ ಮತ್ತು ಮಿಥುನ

ಮಕರ ಮತ್ತು ಮಿಥುನ

ಈ ರಾಶಿಚಕ್ರದವರು ವಿಕೋಪಗೊಳ್ಳುತ್ತಾರೆ. ಇವರಿಬ್ಬರ ವ್ಯಕ್ತಿತ್ವ ವಿರುದ್ಧವಾದ ಗುಣವನ್ನು ಹೊಂದಿರುತ್ತಾರೆ. ಮಕರ ರಾಶಿಯವರ ರಚನೆ ಮತ್ತು ಕ್ರಮಬದ್ಧತೆಗಳನ್ನು ಹೊಂದಿರುತ್ತಾರೆ. ಮಿಥುನ ರಾಶಿಯವರ ವ್ಯಕ್ತಿತ್ವ ವಿರುದ್ಧವಾಗಿರುತ್ತದೆ. ಹಾಗಾಗಿ ಇವರು ಎಂದಿಗೂ ಸಂತೋಷದ ಜೀವನವನ್ನು ನಡೆಸರು.

ಕನ್ಯಾ ಮತ್ತು ಮೀನ

ಕನ್ಯಾ ಮತ್ತು ಮೀನ

ಈ ಎರಡು ರಾಶಿಯವರು ಪರಸ್ಪರ ಘರ್ಷಣೆಯಲ್ಲಿಯೇ ಮುಳುಗಿರುತ್ತಾರೆ. ಮೀನ ರಾಶಿಯವರು ಸದಾ ಕಲ್ಪನೆ ಹಾಗೂ ಕನಸಿನ ಲೋಕದಲ್ಲಿ ಇರಲು ಬಯಸಿದರೆ ಕನ್ಯಾ ರಾಶಿಯವರು ವಾಸ್ತವದ ರೀತಿಯಲ್ಲಿ ಚಿಂತಿಸುತ್ತಾರೆ. ಹಾಗಾಗಿ ಈ ಎರಡು ವ್ಯಕ್ತಿಗಳ ನಡುವೆ ಅಷ್ಟು ಸುಲಭವಾಗಿ ರಾಜಿ ಅಥವಾ ಹೊಂದಾಣಿಕೆಗಳು ನಡೆಯುವುದಿಲ್ಲ.

ಮೀನ ಮತ್ತು ಸಿಂಹ

ಮೀನ ಮತ್ತು ಸಿಂಹ

ಇವರ ನಡುವೆ ಒಂದೇ ಬಗೆಯ ಸಂವಹನಗಳು ನಡೆಯುವುದಿಲ್ಲ. ಎಂತಹ ವಿಚಾರದಲ್ಲೂ ಸಹ ಪರಸ್ಪರ ಹೊಂದಾಣಿಕೆ ಮತ್ತು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಮೀನ ರಾಶಿಯವರು ಬಹಳ ಸೂಕ್ಷ್ಮ ಪ್ರವೃತ್ತಿಯವರಾಗಿದ್ದರೆ ಸಿಂಹ ರಾಶಿಯವರು ಆಕ್ರಮಣ ಶೀಲ ಹಾಗೂ ಅಧಿಕಾರ ನಡೆಸುವ ಗುಣವನ್ನು ತೋರುತ್ತಾರೆ. ಒಟ್ಟಿನಲ್ಲಿ ಇಬ್ಬರ ನಡುವೆ ಪ್ರೀತಿ ವಿಶ್ವಾಸದ ಕೊರತೆ ಉಂಟಾಗಿರುತ್ತದೆ.

ಧನು ಮತ್ತು ವೃಷಭ

ಧನು ಮತ್ತು ವೃಷಭ

ಧನು ರಾಶಿಯವರು ಸಾಹಸ ಪ್ರಿಯರು. ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗುವರು. ಹೊಸ ವಿಚಾರಗಳಿಗೆ ತೆರೆದುಕೊಳ್ಳಲು ಬಯಸುವರು. ಆದರೆ ವೃಷಭ ರಾಶಿಯವರು ಹಾಗಲ್ಲ. ಇವರು ದೈನಂದಿನ ವಿಚಾರಗಳಿಗೆ ಸ್ಥಿರವಾಗಿರುತ್ತಾರೆ. ಬಹಳ ವಿಭಿನ್ನತೆಯನ್ನು ಹೊಂದಿರುವ ಈ ರಾಶಿಚಕ್ರದವರ ನಡುವೆ ಪ್ರೀತಿಯ ಬಂಧನ ಸಂತೋಷವನ್ನು ನೀಡದು.

ಮೇಷ ಮತ್ತು ಕರ್ಕ

ಮೇಷ ಮತ್ತು ಕರ್ಕ

ಈ ಎರಡು ರಾಶಿಚಕ್ರದವರು ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದಿಲ್ಲ. ಮೇಷ ರಾಶಿಯು ಒಂದು ಬಲವಾದ ರಾಶಿಚಕ್ರ. ಇದು ಕರ್ಕ ರಾಶಿಯವರಂತಹ ಸೂಕ್ಷ್ಮ ಚಿಹ್ನೆಗೆ ಬೆದರಿಕೆ ಹಾಕುವುದು. ಈ ಎರಡು ರಾಶಿಚಕ್ರದವರಲ್ಲಿ ಅನೇಕ ವಿಷಯಗಳು ಸಾಮಾನ್ಯವಾಗಿರುತ್ತದೆ. ವೈಯಕ್ತಿಕವಾಗಿ ಎರಡು ರಾಶಿಯವರು ಕುಟುಂಬಕ್ಕೆ ಹೆಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರೀತಿ ಹಗೂ ಕಾಳಜಿಯನ್ನು ತೋರುತ್ತಾರೆ. ಆದರೆ ಸ್ವಭಾವದಲ್ಲಿ ವಿಭಿನ್ನತೆ ಹೆಚ್ಚಾಗಿರುವುದರಿಂದ ಇಬ್ಬರ ನಡುವೆಯೂ ಸಂತೋಷ ಇರುವುದಿಲ್ಲ.

English summary

Zodiac Signs That Should Think Twice Before Falling In Love

There are those zodiac sign combinations that are known to be quite disastrous and hence the individuals of these combinations need to have a second thought before they fall in love with each other.
Story first published: Wednesday, March 28, 2018, 7:01 [IST]