For Quick Alerts
ALLOW NOTIFICATIONS  
For Daily Alerts

  ಈ ಐದು ರಾಶಿಯವರು ತುಂಬಾ ಬೇಗನೇ ವಂಚನೆಗೆ ಒಳಗಾಗುತ್ತಾರೆ!

  By Deepu
  |

  ಕೆಲವೊಂದು ಜನರನ್ನು ತುಂಬಾ ಸುಲಭವಾಗಿ ಮೋಸಮಾಡಿ, ವಂಚಿಸಬಹುದು. ವಂಚಿಸುವಂತಹ ಜನರು ಇವರ ಮುಖ ನೋಡಿಕೊಂಡು ಹೇಗೆ ವಂಚಿಸಬಹುದು ಎನ್ನುವ ಬಗ್ಗೆ ತಿಳಿದುಬರುವುದು. ಕೆಲವೊಂದು ರಾಶಿಚಕ್ರಗಳ ಜನರನ್ನು ಬೇಗನೆ ವಂಚನೆಗೊಳಪಡಿಸಬಹುದು ಎನ್ನುವುದನ್ನು ನೀವು ಈ ಲೇಖನದ ಮೂಲಕ ತಿಳಿಯಬಹುದು.

  ಬೇಗನೆ ವಂಚನೆಗೊಳಗಾಗುವ ರಾಶಿಚಕ್ರದವರನ್ನು ಇತರ ರಾಶಿಯವರಿಗೆ ವಂಚಿಸುವುದು ಅತೀ ಸುಲಭದ ಕೆಲಸ. ಇವರು ಬೇರೆಯವರನ್ನು ಬೇಗನೆ ನಂಬುವ ಕಾರಣ ಮತ್ತು ಅತಿಯಾಗಿ ಪ್ರೀತಿಸುವದರಿಂದಲೂ ಮೋಸಕ್ಕೆ ಒಳಗಾಗುವರು. ಇತರರಿಂದ ಬೇಗನೆ ವಂಚನೆಗೆ ಒಳಗಾಗುವ ರಾಶಿಚಕ್ರವನ್ನು ಕ್ರಮಬದ್ಧವಾಗಿ ಇಲ್ಲಿ ನೀಡಲಾಗಿದೆ. ಇದನ್ನು ನೀವು ತಿಳಿಯಿರಿ ಮತ್ತು ನಿಮ್ಮ ರಾಶಿ ಇದರಲ್ಲಿದೆಯಾ ಎಂದು ಹುಡುಕಿ.... 

  ಮೀನ (ಫೆಬ್ರವರಿ19-ಮಾರ್ಚ್ 20)

  ಮೀನ (ಫೆಬ್ರವರಿ19-ಮಾರ್ಚ್ 20)

  ಪ್ರತೀ ಸಲ ಈ ರಾಶಿಯವರಿಗೆ ನೋವಾದಾಗ, ಇನ್ನು ಮುಂದೆ ಇಂತಹ ಮೋಸಕ್ಕೆ ಒಲಗಾಗುವುದಿಲ್ಲವೆಂದು ಮನದಲ್ಲೇ ನಿರ್ಧರಿಸುವರು. ಆದರೆ ಮತ್ತೆ ಇವರು ಇದೇ ರೀತಿಯ ವಂಚನೆಗೆ ಒಳಗಾಗುವರು. ಇವರು ಹಿಂದಿನ ಮೋಸದಿಂದ ಪಾಠ ಕಲಿಯದೇ ಇರುವ ಕಾರಣ ಮತ್ತೆ ಇವರನ್ನು ಸುಲಭವಾಗಿ ಮೋಸ ಮಾಡುವ ಅವಕಾಶವನ್ನು ಬೇರೆಯವರು ಬಿಟ್ಟುಕೊಡಲ್ಲ. ಇವರು ತುಂಬಾ ಸೂಕ್ಷ್ಮ ಹಾಗೂ ಆದರ್ಶವಾದಿಗಳು. ಇದರಿಂದಾಗಿಯೇ ಇವರು ಬೇರೆಯವರನ್ನು ಬೇಗನೆ ನಂಬುವರು. ಇನ್ನು ಈ ರಾಶಿಯ ಜನರು ಇವರು ಇತರರನ್ನು ಪ್ರೀತಿಸುವುದಕ್ಕಿಂತ ತಮ್ಮನ್ನು ತಾವು ಹೆಚ್ಚು ಪ್ರೀತಿಸುತ್ತಾರೆ. ಸದಾ ತನ್ನ ಕಲ್ಪನಾ ಲೋಕದಲ್ಲೇ ಜೀವಿಸುತ್ತಾರೆ. ವಾಸ್ತವಿಕ ಜೀವನವನ್ನು ಸಂಗಾತಿಯೊಡನೆ ಕಳೆಯುತ್ತಾರೆ. ಸಂಗಾತಿಯು ಸೌಮ್ಯ ಮತ್ತು ಪೋಷಣಾ ಗುಣ ಹೊಂದಿರಬೇಕೆಂದು ಬಯಸುತ್ತಾರೆ.

  ತುಲಾ (ಸೆಪ್ಟಂಬರ್ 23-ಅಕ್ಟೋಬರ್22)

  ತುಲಾ (ಸೆಪ್ಟಂಬರ್ 23-ಅಕ್ಟೋಬರ್22)

  ಇವರು ತುಂಬಾ ದಯಾಳು ಹಾಗೂ ನಿಷ್ಠರಾಗಿರುವಂತಹ ರಾಶಿಯವರು. ಈ ರಾಶಿಯವರನ್ನು ಮೋಸ ಮಾಡಿದಾಗ ಅದು ತುಂಬಾ ವಿನಾಶಕಾರಿಯಾಗಿರುವುದು. ತಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಇವರಿಗೆ ತುಂಬಾ ಗೊಂದಲವಿರುವುದು. ಇವರನ್ನು ಮೋಸ ಅಥವಾ ಮೂರ್ಖರನ್ನಾಗಿಸಿದರೆ, ಆಗ ಅವರು ಇದು ಯಾಕಾಯಿತು ಎಂದು ಯೋಚಿಸುವರು. ಈ ರಾಶಿಯವರು ಮೋಸ ಹೋಗದಿದ್ದರೂ ಬೇರೆಯವರ ಅನುಭವದಿಂದ ಕಲಿಯಬಾರದೆಂದೇನೂ ಇಲ್ಲ. ಇನ್ನು ಈ ರಾಶಿಯ ವ್ಯಕ್ತಿಗಳು ತಾವು ವಹಿಸಿಕೊಂಡಿರುವ ಕೆಲಸಗಳು ಸುಸೂತ್ರವಾಗಿ ಮುಂದುವರೆಯಲು ಅತಿ ಹೆಚ್ಚಿನ ಕಾಳಜಿ ವಹಿಸುತ್ತಾರೆ ಮತ್ತು ತಮ್ಮ ಸಮಯವನ್ನು ವ್ಯಯಿಸುತ್ತಾರೆ. ಹಾಗೂ ಯಾವುದೇ ವಿಷಯದ ಬಗ್ಗೆ ತಮ್ಮ ನೇರವಾದ ಹಾಗೂ ಪ್ರಾಮಾಣಿಕ ಅಭಿಪ್ರಾಯವನ್ನು ಮಂಡಿಸುತ್ತಾರೆ. ಇವರನ್ನು ಅರಿತ ಹೆಚ್ಚಿನವರ ದೃಷ್ಟಿಯಲ್ಲಿ ಇವರು ವಯಸ್ಸಿನ ಅಂತರವಿಲ್ಲದೇ ಅತಿ ಹೆಚ್ಚಿನ ಜ್ಞಾನಿಗಳೆಂದು ಪರಿಗಣಿಸಲ್ಪಡುತ್ತಾರೆ. ಇವರ ಪ್ರಾಮಾಣಿಕತೆಯ ಕಾರಣದಿಂದಲೇ ಇವರಿಗೆ ಅತಿ ಹೆಚ್ಚಿನ ಸ್ನೇಹಿತರಿರುತ್ತಾರೆ.

  ಮೇಷ (ಮಾರ್ಚ್ 21-ಎಪ್ರಿಲ್ 19)

  ಮೇಷ (ಮಾರ್ಚ್ 21-ಎಪ್ರಿಲ್ 19)

  ಇವರು ಪ್ರೀತಿಯಲ್ಲಿರುವಾಗ ತುಂಬಾ ಗಲಿಬಿಲಿಯ ಸ್ವಭಾವದವರು. ಸುತ್ತಲಿನವರು ತುಂಬಾ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರೂ ಇವರು ಮಾತ್ರ ಪ್ರೀತಿ ಮೇಲೆ ನಂಬಿಕೆಯಿರಿಸಿಕೊಂಡವರು. ಇವರು ಪ್ರೀತಿಯಲ್ಲಿ ಮೋಸ ಹೋದರೆ ಆಗ ಪರಿಸ್ಥಿತಿ ಸರಿಯಾಗಿಲ್ಲದ ಸಮಯದಲ್ಲಿ ಇವರು ತಮ್ಮ ಮನಸ್ಸಿನ ಮಾತನ್ನು ಹೇಳಿಲ್ಲವೆಂದು ಅರ್ಥ. ಇವರು ಪ್ರೀತಿಯಲ್ಲಿ ಇರುವಾಗ ಬೇರೆಯವರು ಇದರ ದುರ್ಲಾಭ ಪಡೆಯಬಹುದು ಮತ್ತು ಇವರು ಮಾತ್ರ ಏನೂ ಆಗಿಲ್ಲವೆನ್ನುವಂತೆ ಇರುವರು.ಇನ್ನು ಮೇಷ ರಾಶಿಯವರು ಅತ್ಯಂತ ಶಕ್ತಿಶಾಲಿಯಾಗಿರುತ್ತಾರೆ. ತೀವ್ರವಾದ ಮತ್ತು ಸಾಹಸಮಯ ವ್ಯಕ್ತಿತ್ವದಿಂದ ಅವರು ಶಕ್ತಿ ಮತ್ತು ಚೈತನ್ಯವನ್ನು ಹೊಂದಿದ್ದಾರೆ. ಮೇಷಗಳ ಸಂಕೇತದಲ್ಲಿ ಹುಟ್ಟಿದ ಜನರು ಯಾವುದಕ್ಕೂ ಭಯ ಪಡುವುದಿಲ್ಲ. ಅವರು ಹೊಸ ಸವಾಲುಗಳನ್ನು ಪ್ರಾರಂಭಿಸಲು ಯಾವಾಗಲೂ ಸಿದ್ಧರಿರುತ್ತಾರೆ. ನಾಯಕರ ಧೋರಣೆಯನ್ನು ಹೊಂದಿರುತ್ತಾರೆ. ಅದು ಅವರಿಗೆ ಉತ್ತಮ ಸ್ವಯಂ ಭದ್ರತೆಯನ್ನು ನೀಡುತ್ತದೆ.ಅವರು ಸಾಮಾನ್ಯವಾಗಿ ಬಂಡಾಯಗಾರ ಮತ್ತು ಹಠಾತ್ ಪ್ರವೃತ್ತಿಯವರಾಗಿರುತ್ತಾರೆ.

  ಧನು (ನವಂಬರ್ 22-ಡಿಸೆಂಬರ್ 21)

  ಧನು (ನವಂಬರ್ 22-ಡಿಸೆಂಬರ್ 21)

  ಈ ರಾಶಿಯವರು ಪ್ರಯಾಣದ ವೇಳೆ ತುಂಬಾ ಜಾಣ ಹಾಗೂ ನಿಷ್ಕಪಟರಾಗಿರುವರು. ಇವರ ಸುತ್ತಲಿನ ಜನರು ತುಂಬಾ ಸ್ನೇಹಪರರಾಗಿರಬೇಕೆಂದು ಅವರು ನಿರೀಕ್ಷಿಸಿಸುವರು. ಆದರೆ ಇದು ಸರಿಯಲ್ಲ. ಯಾಕೆಂದರೆ ಸುತ್ತಲಿನ ಪರಿಸ್ಥಿತಿ ಬಗ್ಗೆ ಜಾಗೃತೆಯಿಂದ ಇರಬೇಕು ಮತ್ತು ಪ್ರಯಾಣದ ವೇಳೆ ಸಿಗುವವರೆಲ್ಲರೂ ಒಳ್ಳೆಯವರಾಗಿರಲ್ಲ. ಈ ರಾಶಿಯ ಜನರು ಸದಾ ಧನಾತ್ಮಕ ಚಿಂತನೆ ನಡೆಸುವವರಾಗಿದ್ದು ಜೀವನದ ಚಿಕ್ಕ ಪುಟ್ಟ ತೊಂದರೆಗಳಿಗೆ ಇವರು ಕಿಂಚಿತ್ತೂ ಚಿಂತಿಸುವುದಿಲ್ಲ. ಯಾವುದೇ ಪರಿಸ್ಥಿತಿಗೆ ಒಳಗಾದರೂ ಇದರಿಂದ ಹೊರಬರಲು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಬಾಲ್ಯದ ಗೆಳೆಯರು. ನಿಮ್ಮ ಬಾಲ್ಯದ ಗೆಳೆತನವನ್ನು ಇಡಿಯ ಜೀವಮಾನ ಕಾಪಾಡುವ ನಿಮಗೆ ಬಾಲ್ಯದ ನೆನಪುಗಳು ಅತಿಹೆಚ್ಚಿನ ಸಂತೋಷ ನೀಡುತ್ತದೆ.

  ಕರ್ಕಾಟಕ (ಜೂನ್ 21- ಜುಲೈ 22)

  ಕರ್ಕಾಟಕ (ಜೂನ್ 21- ಜುಲೈ 22)

  ಈ ರಾಶಿಯವರು ಜೀವನದಲ್ಲಿ ಹಲವಾರು ಸಲ ಮೋಸಕ್ಕೆ ಒಳಗಾಗಿರುವ ಅಥವಾ ಮೂರ್ಖರಾಗಿರುವಂತಹ ಘಟನೆಗಳು ನಡೆದಿರುವುದು. ಇವರು ತಮ್ಮ ಪ್ರೀತಿಪಾತ್ರರೊಂದಿಗೆ ಜಗಳವಾಡಿದ್ದರೆ ಅಥವಾ ಪ್ರೀತಿಸಿದವರು ಕೈಕೊಟ್ಟಿದ್ದರೆ ಆಗ ಈ ರಾಶಿಯವರು ಬೇರೆಯವರನ್ನು ಬೇಗನೆ ನಂಬುವರು. ಇವರು ಪ್ರೀತಿಸುವವರಿಗಾಗಿ ಜತೆಯಾಗಿರಲು ಬಯಸುವರು ಮತ್ತು ಅವರಿಗೆ ಒಳ್ಳೆಯದೆನಿಸುವ ವಿಚಾರಗಳನ್ನು ಮಾಡುವರು. ಬೇರೆಯವರು ಕೂಡ ಇದನ್ನೇ ಮಾಡಬೇಕೆಂದು ಅವರು ನಿರೀಕ್ಷೆಯಲ್ಲಿರುವರು. ಇನ್ನು ಈ ರಾಶಿಚಕ್ರದವರು ಬೇರೆಲ್ಲಾ ರಾಶಿಗಳಿಗಿಂತ ತುಂಬಾ ಸೂಕ್ಷ್ಮ ಮನಸ್ಸಿನವರು ಎಂದು ಪರಿಗಣಿಸಲಾಗಿದೆ. ಇವರು ಬೇರೆಯವರ ಭಾವನೆಗಳ ಬಗ್ಗೆ ಚಿಂತೆ ಮಾಡುವ ಕಾರಣ ಸಂಗಾತಿಗೆ ಮೋಸ ಮಾಡುವುದರಿಂದ ದೂರ ಉಳಿಯುವರು. ಇವರು ತಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವರು ಮತ್ತು ಸಂಗಾತಿಗೆ ನಿಷ್ಠರಾಗಿರುವರು.

  English summary

  Zodiac Signs That Are Ranked As The Most Gullible

  Do you know that gullible people are known for being easily deceived and cheated? Well, they are an easy target for people as they can take full advantage of them. Here in this article, we are revealing the list of the zodiac signs which are known to top the rank of being the most gullible signs. These sign zodiacs tend to believe anything and everything and hence fooling them is one of the easiest tasks for the rest of the zodiacs. Check out if your zodiac is listed in the list of the zodiac signs that can be tricked the most.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more