ರಾಶಿ ಭವಿಷ್ಯ: ಈ ನಾಲ್ಕು ರಾಶಿಯವರು ಸ್ವಲ್ಪ ಸೋಮಾರಿಗಳಂತೆ!

Posted By: Deepu
Subscribe to Boldsky

ಬಹಳ ದಣಿವಾದಾಗ ಅಥವಾ ಮಾನಸಿಕವಾಗಿ ಬೇಸರಕ್ಕೆ ಒಳಗಾಗಿರುವಾಗ ಯಾವ ಕೆಲಸ ಮಾಡಲೂ ಮನಸ್ಸು ಬಯಸುವುದಿಲ್ಲ. ಸುಮ್ಮನೆ ಕುಳಿತುಕೊಳ್ಳೋಣ ಎನಿಸುವುದು ಸಹಜ. ಹಾಗಂತ ಇಂತಹ ಮನಸ್ಸಿನ ಸ್ಥಿತಿ ಎಲ್ಲಾ ಸಮಯದಲ್ಲೂ ಇರುವುದಿಲ್ಲ. ಅದು ಅಪರೂಪಕ್ಕೆ ಉಂಟಾಗಬಹುದು. ಮಾಡುತ್ತಿರುವ ಕೆಲಸವು ಒಂದೇ ರೀತಿಯಲ್ಲಿದ್ದರೂ ಮನಸ್ಸು ಬೇಸರಗೊಳ್ಳುವುದು. ನಿಧಾನವಾಗಿ ಕೆಲಸದಲ್ಲಿ ಆಲಸ್ಯವನ್ನು ತೋರುವ ಸಾಧ್ಯತೆಗಳು ಇರುತ್ತವೆ.

ಆದರೆ ಕೆಲವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಹೆಚ್ಚು ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಕೆಲಸದಲ್ಲಿ ಆಲಸ್ಯ ಪ್ರವೃತ್ತಿಯು ಹೆಚ್ಚಿರುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಆಲಸ್ಯ ಪ್ರವೃತ್ತಿ ಹೊಂದಿರುವ ರಾಶಿಚಕ್ರಗಳ ಪಟ್ಟಿಯಲ್ಲಿ ನಿಮ್ಮ ರಾಶಿಯೂ ಇದೆಯೇ ಎನ್ನುವುದನ್ನು ತಿಳಿಸಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

ಈ ರಾಶಿಚಕ್ರದವರು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಹೆಚ್ಚು ವಿಶ್ರಾಂತಿ ಹೊಂದಲು ಬಯಸುತ್ತಾರೆ. ತಾಳ್ಮೆಯ ಪ್ರಮಾಣ ಕಡಿಮೆ ಇರುವುದರಿಂದ ಇವರು ಮೊಂಡುತನದ ಸ್ವಭಾವವನ್ನೂ ಹೆಚ್ಚು ತೋರುತ್ತಾರೆ. ಬಹುಬೇಗ ಸಿಟ್ಟಿಗೆ ಒಳಗಾಗುವ ಇವರು ತಾವು ಮಾಡಿದ ಕೆಲಸವನ್ನು ಪುನಃ ಪರಿಶೀಲಿಸುವ ತಾಳ್ಮೆ ಅಥವಾ ಅವಧಾನ ಇವರಲ್ಲಿ ಇರುವುದಿಲ್ಲ. ಉತ್ಸಾಹವನ್ನು ಹೊಂದಿರುವ ಇವರಲ್ಲಿ ಏನು ಮಾಡಬೇಕು ಎನ್ನುವ ನಿರ್ದಿಷ್ಟ ಗುರಿ ಇರುವುದಿಲ್ಲ.

ಸಿಂಹ

ಸಿಂಹ

ಇವರು ಹೆಚ್ಚಿನ ಆಕರ್ಷಣೆಗೆ ಒಳಗಾಗಬೇಕೆನ್ನುವ ಆಸೆಯನ್ನು ಹೊಂದಿರುತ್ತಾರೆ. ಇನ್ನೊಂದೆಡೆಗೆ ಇವರು ಕೆಲವು ವೈಯಕ್ತಿಕ ವಿಚಾರಕ್ಕಾಗಿ ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಇವರ ವೈಯಕ್ತಿಕ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದನ್ನು ಗಮನಿಸುತ್ತಾರೆ. ಹೆಚ್ಚಿನ ವಿಚಾರದಲ್ಲಿ ಇವರು ವಿಶ್ರಾಂತಿ ಹೊಂದಲು ಬಯಸುವರು.

ಮಕರ

ಮಕರ

ಈ ರಾಶಿಯವರು ವಿನೋದ, ಬೌದ್ಧಿಕ, ಮಾನವೀಯ ಗುಣವನ್ನು ಹೊಂದಿರುವ ಇವರು ತಮ್ಮದೇ ಆದ ಕೆಲವು ವಿಚಾರದಲ್ಲಿ ಹೆಚ್ಚು ಆಲಸ್ಯವನ್ನು ಹೊಂದಿರುತ್ತಾರೆ. ಇವರು ತೊಂದರೆಗೆ ಒಳಗಾದಾಗ ಅಥವಾ ಒತ್ತಡದಲ್ಲಿರುವಾಗ ಇವರ ಮನಃಸ್ಥಿತಿ ಬೇರೆಯೇ ಇರುತ್ತದೆ. ಇವರು ಉತ್ತಮ ನಿದ್ರೆಯನ್ನು ಹೊಂದಿದ ನಂತರ ಮನಸ್ಸು ಶಾಂತ ಸ್ಥಿತಿಗೆ ಮರಳುವುದು. ಹೆಚ್ಚಿನ ಸಮಯದಲ್ಲಿ ಇವರು ಹೆಚ್ಚು ಶಾಂತ ಸ್ಥಿತಿಯಲ್ಲಿ ಇರುತ್ತಾರೆ. ಅಂತೆಯೇ ಆಲಸ್ಯದ ಗುಣವು ಹೆಚ್ಚಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ಮೀನ

ಮೀನ

ಈ ರಾಶಿಚಕ್ರದವರು ಹೆಚ್ಚಿನ ಕಾಳಜಿ ಮತ್ತು ಸಿಹಿಯಾದ ಪ್ರವೃತ್ತಿಯವರು. ತಮ್ಮ ಪ್ರೀತಿಪಾತ್ರರಿಗಾಗಿ ಎಂತಹ ಮಟ್ಟಕ್ಕಾದರೂ ಇವರು ಮುಂದೆ ಹೋಗುತ್ತಾರೆ. ಇವರಲ್ಲಿರುವ ಒಂದು ನ್ಯೂನತೆ ಎಂದರೆ ವಾಸ್ತವದಿಂದ ಇವರು ತಪ್ಪಿಸಿಕೊಳ್ಳುವುದು ಹಾಗೂ ಸಾಮಥ್ರ್ಯವನ್ನು ಮೌಲೀಕರಣ ಮಾಡುವುದು ಎನ್ನಬಹುದು. ಇವರಿಗೆ ನಿದ್ರೆ ಸೂಕ್ತ ರೀತಿಯಲ್ಲಿ ಆಗದಿದ್ದರೆ ತೊಂದರೆಯನ್ನುಂಟುಮಾಡುತ್ತಾರೆ. ಇವರು ಹೆಚ್ಚು ಕಾಲ ಉತ್ತಮ ನಿದ್ರೆ ಮಾಡುವ ಮೂಲಕ ವಿಶ್ರಾಂತಿಯನ್ನು ಪಡೆಯುತ್ತಾರೆ.

English summary

zodiac-signs-that-are-believed-to-be-the-laziest-of-all

Here, in this article, we are revealing to you about the zodiac signs that are ranked as being the laziest and the most tired zodiac signs of all, especially when they are resting.Disturbing their sleep means their temper goes from zero to a hundred-billion in a matter of seconds! Well, do not blame us, as we're already warning you about these zodiac signs!