ರಾಶಿಗೆ ಅನುಗುಣವಾಗಿ ಇಂತಹ ಸೂತ್ರಗಳನ್ನು ಅನುಸರಿಸಿ, ಎಲ್ಲವೂ ಒಳ್ಳೆಯದಾಗುವುದು

Posted By: Deepu
Subscribe to Boldsky

ನಮ್ಮ ಅನುಭವಗಳ ಆಧಾರದ ಮೇಲೆ ಹಾಗೂ ಕೆಲವು ಅನುಕರಣೆಯ ಮೂಲಕ ಜೀವನ ನಡೆಸುವುದು ಸಾಮಾನ್ಯವಾದ ಸಂಗತಿ. ಈ ವಿಧಾನದಲ್ಲಿ ನಡೆಯುತ್ತಿದ್ದರೆ ಜೀವನದಲ್ಲಿ ಎಲ್ಲರೂ ಯಶಸ್ಸನ್ನು ಸಾಧಿಸುತ್ತಾರೆ ಎನ್ನಲಾಗುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ವಿಭಿನ್ನ ಬಗೆಯ ಸವಾಲುಗಳನ್ನು ಎದುರಿಸಬೇಕಾಗುವುದು. ಅದಕ್ಕಾಗಿ ಸೂಕ್ತ ತಯಾರಿ ಹಾಗೂ ಅದನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು. ಆಗಲೇ ಜೀವನದಲ್ಲಿ ಸಾರ್ಥಕ ಭಾವನೆಯನ್ನು ತಳೆಯಲು ಸಾಧ್ಯ. ಜೊತೆಗೆ ಜೀವನದಲ್ಲಿ ಒಂದಿಷ್ಟು ಖುಷಿಯನ್ನು ಅನುಭವಿಸಿರುವ ನೆಮ್ಮದಿ ನಮ್ಮ ಪಾಲಿಗೆ ಲಭಿಸುವುದು.

ಪ್ರತಿಯೊಬ್ಬರೂ ಆಯಾ ರಾಶಿ ಚಕ್ರದ ಅನುಸಾರ ಕೆಲವು ಮನೋಭಾವದ ಸುಧಾರಣೆ ಹಾಗೂ ಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡರೆ ನಮ್ಮ ಯಶಸ್ಸಿನ ಹಾದಿ ಸುಲಭವಾಗುವುದು. ಅಲ್ಲದೆ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಾಗಿ ಹೊರ ಹೊಮ್ಮಬಹುದು. ನಿಮಗೂ ನಿಮ್ಮ ರಾಶಿಚಕ್ರದ ಅನುಸಾರ ಯಾವೆಲ್ಲಾ ಬದಲಾವಣೆಯನ್ನು ತಂದುಕೊಳ್ಳಬೇಕು? ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

"ನೀವು ಏನಿದೆಯೋ ಅದನ್ನು ಸ್ವೀಕರಿಸಿ ಹಾಗೂ ಮುಂದೆ ಹೇಗೆ ಇರುವುದೋ ಹಾಗೆಯೇ ಸಾಗಲು ಮುಂದಾಗಿ". ಜೀವನದಲ್ಲಿ ಹೇಗೆ ಸನ್ನಿವೇಶಗಳು ಬರುತ್ತದೆಯೋ ಅದನ್ನು ಎದುರಿಸುತ್ತಾ ಮುಂದೆ ಸಾಗಿ. ಆನಂದದಿಂದ ಇರಲು ಇದೊಂದೆ ಜನ್ಮ ಎನ್ನುವುದನ್ನು ಅರಿಯಿರಿ. ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡು ದುಃಖಿಸುತ್ತ ಸಮಯವನ್ನು ಕಳೆಯದಿರಿ.

ವೃಷಭ

ವೃಷಭ

"ಯಾವುದು ಸುಲಭವಾಗಿ ಬರುವುದಿಲ್ಲ ಎನ್ನುವುದನ್ನು ತಿಳಿದಿರಬೇಕು." ನೀವು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತೀರಿ. ನೀವೇಕೆ ಕಷ್ಟಪಟ್ಟು ಕಲಸ ಮಾಡಬೇಕು? ಎಂದು ಯೋಚಿಸದಿರಿ. ನಿಮ್ಮ ಶ್ರಮದಿಂದ ಕೂಡಿರುವ ಕೆಲಸವು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.

ಮಿಥುನ

ಮಿಥುನ

"ಇದು ನಿಮಗೆ ಸರಿಯಾಗಿ ಇಲ್ಲ ಎನಿಸಿದರೆ ಅದನ್ನು ಮಾಡಬೇಡಿ." ನೀವು ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿದ್ದೀರಿ ಎಂದರೆ ನೀವು ತಪ್ಪದೆ ಈ ನಿಯಮವನ್ನು ಅನುಸರಿಸಿ. ನೀರಿನ ಹರಿವಿನಂತೆ ಹೋಗಬಾರದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ನೀವು ಇಷ್ಟ ಪಡುವಂತಹ ವಿಚಾರ ಪ್ರಮುಖ ವಿಷಯವಾಗಿರುವುದಿಲ್ಲ. ಹಾಗಾಗಿ ನಿಮ್ಮ ಆಲೋಚನೆಯ ಪ್ರಕಾರವೇ ಕೆಲಸ ಮಾಡಿ.

ಕರ್ಕ

ಕರ್ಕ

"ನಿಮ್ಮ ಭಾವನೆಗಳು ನಿಮ್ಮ ಬುದ್ಧಿವಂತಿಕೆಯನ್ನು ಮೀರಿಸಬಾರದು." ನೀವು ಸಮಯಗಳಲ್ಲಿ ಅನಿರೀಕ್ಷಿತ ಮತ್ತು ಭಾವನಾತ್ಮಕ ಗೊಂದಲಗಳಿಗೆ ಒಳಗಾಗದಿರಿ. ನಿಮ್ಮ ಕರುಳಿನ ಮತ್ತು ಅಂತದೃಷ್ಟಿಯ ಭಾವನೆಗಳನ್ನು ಯಾವಾಗಲೂ ನೋಡುತ್ತೀರಿ. ಕೆಲವೊಮ್ಮೆ ಪ್ರಾಯೋಗಿಕವಾಗಿಯೂ ಯೋಚಿಸಬೇಕು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಮರೆಯದಿರಿ.

ಸಿಂಹ

ಸಿಂಹ

"ಅದು ನನ್ನ ಬಗ್ಗೆ ಅಲ್ಲ" ನೀವು ಪ್ರಕೃತಿದತ್ತವಾಗಿಯೇ ಪ್ರಬಲರಾಗಿದ್ದೀರಿ. ಈ ಪ್ರಪಂಚದಲ್ಲಿ ಯಾವುದು ಶ್ರೇಷ್ಠವಾದದ್ದಲ್ಲ. ಅಂತೆಯೇ ಪ್ರಮುಖವಾದ್ದೂ ಯಾವುದೂ ಇಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಹೋರ ಹೋಗುವ ನಿಮ್ಮ ಭಾವನೆಗಳನ್ನು ನೀವು ಬದಲಿಸಿಕೊಳ್ಳಬೇಕು.

ಕನ್ಯಾ

ಕನ್ಯಾ

"ನಾನು ಸಾಕಷ್ಟು ಹೊಂದಿದ್ದೇನೆ". ನಿಮ್ಮ ಬಗ್ಗೆ ನೀವು ಮೊದಲು ಯೋಚಿಸುವುದನ್ನು ಕಲಿಯಬೇಕು. ಇತರರು ನಿಮ್ಮ ಬಗ್ಗೆ ಹೇಗೆ ಯೋಚಿಸುತ್ತಾರೆ ಎನ್ನುವುದನ್ನು ನೀವು ಯೋಚಿಸುತ್ತಿರುತ್ತೀರಿ. ನಿಮ್ಮ ಜೀವನದಲ್ಲಿ ಸಾಕಷ್ಟು ಉತ್ತಮ ಫಲವನ್ನು ಹೊಂದಿದ್ದೇನೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. ಇದರೊಟ್ಟಿಗೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಗಮನಹರಿಸಿ.

ತುಲಾ

ತುಲಾ

"ನಿಮ್ಮ ಹೃದಯದ ಮಾತನ್ನು ಅನುಸರಿಸಿ, ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿ ತಂದುಕೊಳ್ಳಿ." ಅಂತಃಪ್ರಜ್ಞೆಯು ನಿಮ್ಮ ಹೆಚ್ಚಿನ ಶಕ್ತಿಯಾಗಿರುತ್ತದೆ. ಯಾವಾಗಲು ಆದಷ್ಟು ಪ್ರಾಯೋಗಿಕವಾಗಿ ಚಿಂತನೆ ನಡೆಸಿ. ನಿಮ್ಮ ಹೃದಯದ ಮಾತನ್ನು ಅನುಸರಿಸಲು ಮರೆಯದಿರಿ. ಆಗ ನಿಮ್ಮ ಮನಸ್ಸು ಸಹ ಹೃದಯದ ಮಾತನ್ನು ಅನುಸರಿಸುತ್ತದೆ.

ವೃಶ್ಚಿಕ

ವೃಶ್ಚಿಕ

"ಕೆಲವು ವಿಚಾರವನ್ನು ದಯೆಯಿಂದ ಹತ್ತಿಕ್ಕಿ. ಒಂದು ನಗುವಿನ ಮೂಲಕ ಕೆಲಸವನ್ನು ಸಾಧಿಸಿ." ಆಕ್ರಮಣಶೀಲ ಪ್ರವೃತ್ತಿಯು ನಿಮ್ಮ ಒಂದು ಪ್ರಮುಖ ಸಮಸ್ಯೆ. ನಿಮ್ಮ ವೈರಿಯನ್ನು ದಯೆಯ ರೂಪದಲ್ಲಿ ಸೋಲಿಸಿ. ಒಂದು ನಗುವಿನ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.

ಧನು

ಧನು

"ಇತರರು ಹೇಳುವುದನ್ನು ಕೇಳಿ ಮತ್ತು ಕಲಿಸುವಂತವರಾಗಿ. ಪ್ರತಿಯೊಂದರ ಬಗ್ಗೆಯೂ ನೀವು ಸರಿಯಾದ ವ್ಯಕ್ತಿಯಲ್ಲ. ಯಾರೂ ಕೂಡ ಹಾಗೆ ಇರಲ್ಲ'' ನೀವು ಜಾಣ್ಮೆಯ ಮತ್ತು ಯಾವಾಗಲೂ ನೀವೇ ಸರಿಯೆಂದು ಯೋಚಿಸುತ್ತೀರಿ. ಇದನ್ನು ನೀವು ಈಗಲೇ ನಿಲ್ಲಿಸಬೇಕು. ನೀವು ಸರಿಯಾದ ಹಾದಿಯಲ್ಲಿ ಇಲ್ಲವೆನ್ನುವುದನ್ನು ಅರ್ಥ ಮಾಡಿಕೊಳ್ಳಿ. ಬೇರೆಯವರಿಂದಲೂ ನೀವು ಕಲಿಯಬೇಕಾಗಿದೆ.

ಮಕರ

ಮಕರ

"ಆತಂಕವು ಎಂದಿಗೂ ಬದಲಾಗುವುದಿಲ್ಲ." ನೀವು ಎಲ್ಲಾ ವಿಚಾರಕ್ಕೂ ಭಯಪಡುವುದನ್ನು ನಿಲ್ಲಿಸಬೇಕು. ಎಲ್ಲದರ ಬಗ್ಗೆಯೂ ಅತಿಯಾಗಿ ಚಿಂತಿಸುವಿರಿ. ನೀವು ಕಠಿಣ ಕಾರ್ಯಕರ್ತರಾಗಿರುತ್ತೀರಿ. ಆದ್ದರಿಂದ ನಿಮ್ಮ ಮನಸ್ಸಿನಲ್ಲಿ ನೀವು ಇಟ್ಟುಕೊಳ್ಳಿ. ಚಿಂತಿಸುವುದನ್ನು ನಿಲ್ಲಿಸಿ.

ಕುಂಭ

ಕುಂಭ

"ನೀವು ತೆರೆದ ಮನಸ್ಸಿನಿಂದ ಕೂಡಿರುವ ಹಾಗೂ ಮುಕ್ತ ಹೃದಯವನ್ನು ಹೊಂದಿದವರಾಗಿರಿ". ನೀವು ಸ್ವಲ್ಪ ಮಟ್ಟಿಗೆ ಮೀಸಲಾಗಿಟ್ಟಿರುವ ವ್ಯಕ್ತಿಗಳಾಗಿರುತ್ತೀರಿ. ಜನರು ನಿಮ್ಮನ್ನು ಗುರುತಿಸುವಂತೆ ನಿಮ್ಮನ್ನು ನೀವು ತೆರೆದುಕೊಳ್ಳಲು ಅಗತ್ಯವಾದ ಸಮಯ ಬೇಕಾಗುವುದು. ಹಾಗೆಯೇ ನೀವು ಕೆಲವು ವಿಚಾರಕ್ಕೆ ಮುಕ್ತವಾದ ಹೃದಯವನ್ನು ಹೊಂದಿರಬೇಕು.

ಮೀನ

ಮೀನ

"ಅತಿಯಾಗಿ ಚಿಂತಿಸಬೇಡಿ, ಅದನ್ನು ಬಿಟ್ಟುಬಿಡಿ." ನೀವು ತುಂಬಾ ಬೌದ್ಧಿಕರಾಗಿದ್ದೀರಿ ಮತ್ತು ನಿಮ್ಮ ಸುತ್ತಲಿನ ಪ್ರತಿಯೊಂದು ಸಣ್ಣ ವಿಷಯಗಳನ್ನು ನೀವು ವಿಶ್ಲೇಷಿಸಲು ಪ್ರಯತ್ನಿಸುತ್ತೀರಿ. ನೀವು ಹೆಚ್ಚು ಯೋಚಿಸಬೇಕಾಗಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಿ.

English summary

Zodiac sign updates: Life Mantras That You Need To Follow

Most of us have certain mantras that we follow in our lives. Apart from looking at the positive side of life and its experiences, we have certain things that we need to follow. Here, in this article, we bring to you the list of mantras that you need to follow according to your zodiac signs.