Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
27-12-2017 ಶನಿವಾರದ ದಿನ ಭವಿಷ್ಯ
ಜೀವನ ಎನ್ನುವುದು ಒಂದು ಸುಂದರ ಪಯಣ. ಈ ಮಧುರ ಜೀವನದಲ್ಲಿ ಸಿಗುವಷ್ಟು ಸಮಯವನ್ನು ನಾವು ಸತ್ಕಾರ್ಯಗಳಿಗೆ ಬಳಸಿಕೊಳ್ಳಬೇಕು. ತಿಳಿಯದೇ ಕಳೆಯುವ ಬಾಲ್ಯ, ನಮ್ಮ ಅರಿವಿಗೆ ಬಾರದೆ ಜಾರುವ ಹರೆಯ, ಬೇಡವೆಂದರೂ ಬರುವ ಮುದಿತನ ಎಲ್ಲವೂ ಜೀವನದ ಒಂದೊಂದು ಹಂತದ ಅನುಭವವನ್ನು ನೀಡುತ್ತವೆ.
ಪ್ರತಿಯೊಂದು ಘಟ್ಟದಲ್ಲೂ ಜೀವನವನ್ನು ಅನುಭವಿಸಿ, ಸೂಕ್ತ ಜೀವನ ನಡೆಸಿದರೆ ಬದುಕು ಹಸನಾಗುತ್ತದೆ. ಸಿಗುವಷ್ಟು ದಿನ ಅಥವಾ ಅನುಭವಿಸುವಷ್ಟು ದಿನ ಯಾರೊಂದಿಗೂ ಕಿತ್ತಾಡದೆ, ಮೋಸ, ವಂಚನೆಗಳನ್ನು ಎಸಗದೆ ಬಾಳಬೇಕು. ಹಾಗೆ ಬಾಳಿದರೆ ನಮ್ಮ ಜೀವನಕ್ಕೂ ಒಂದು ಅರ್ಥ ಸಿಗುತ್ತದೆ.
ಶನಿವಾರವಾದ ಇಂದು ಶನಿ ದೇವರಿಗೆ ಪ್ರಶಸ್ತವಾದ ದಿನ. ಈ ದಿನದಂದು ಆ ದೇವರ ಕೃಪೆ ನಿಮ್ಮ ಮೇಲೆ ಹೇಗಿದೆ? ಜೀವನದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ಸ್ವೀಕರಿಸಬೇಕಾಗುವುದು? ಎನ್ನುವುದನ್ನು ಈ ಮುಂದೆ ನೀಡಿರುವ ರಾಶಿ ಭವಿಷ್ಯದ ವಿವರಣೆಯನ್ನು ಓದಿ ಅರಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್
ಸಮಾಧಾನದ ಬದುಕನ್ನು ಕಾಣುವಿರಿ. ಹೊಸ ಅವಕಾಶಗಳು ಲಭ್ಯವಾಗುವುದು. ಅನಿವಾರ್ಯ ಕಾರಣಗಳಿಗೆ ದೂರದ ಪ್ರಯಾಣವನ್ನು ಕೈಗೊಳ್ಳಬೇಕಾಗುವುದು. ಬಂಧುಗಳು ಅಗಲಿದ ದುರ್ವಾರ್ತೆಗಳನ್ನು ಕೇಳುವ ಸಾಧ್ಯತೆಗಳಿವೆ. ಸ್ಥಿರಾಸ್ತಿಗಾಗಿ ಕಚ್ಚಾಟ ನಡೆಸದಿರಿ. ಮಾಡುತ್ತಿರುವ ಉದ್ಯಮದಲ್ಲಿ ಒಂದಿಷ್ಟು ಲಾಭವನ್ನು ತಂದುಕೊಡುವುದು. ಇನ್ನಷ್ಟು ಅಭಿವೃದ್ಧಿಗೆ ಗಣೇಶನ ಆರಾಧನೆ ಹಾಗೂ ಕುಲದೇವರ ಸ್ಮರಣೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ
ಪೂರ್ತಿ ಪ್ರಮಾಣದ ಸಮಾಧಾನ ಅಲಭ್ಯವಾಗುವುದು. ಮಾನಸಿಕ ಕಿರಿಕಿರಿ ಮುಂದುವರಿಯುವುದು. ಹಣಕಾಸಿಗಾಗಿ ಪರಿತಪಿಸುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿಯಲ್ಲಿ ಉಂಟಾದ ಕೆಲವು ತೊಂದರೆಗಳಿಂದ ಕಷ್ಟವನ್ನು ಅನುಭವಿಸಬೇಕಾಗುವುದು. ಯಾವುದೇ ಕಾರಣಕ್ಕೂ ಸಾಲವನ್ನು ಕೊಡುವುದು ಅಥವಾ ಪಡೆದುಕೊಳ್ಳುವ ಕೆಲಸಕ್ಕೆ ಮುಂದಾಗದಿರಿ. ಜಾಮೀನು ನೀಡುವುದು ಅಥವಾ ಮೂರನೇ ವ್ಯಕ್ತಿಯ ನಡುವೆ ಮಧ್ಯಸ್ಥಿಕೆ ನಡೆಸುವ ಕೆಲಸಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಆಂಜನೇಯ ಮತ್ತು ಶನಿ ದೇವರ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20
ಸಮಾಧಾನವನ್ನು ಕಾಣುವಿರಿ. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ದೊರೆಯುವುದು. ಹೊಸ ಉದ್ಯಮದಲ್ಲಿ ಲಾಭಾಂಶವನ್ನು ಗಳಿಸಿಕೊಳ್ಳುವ ಸಾಧ್ಯತೆಗಳಿವೆ. ರೈತರು ಅನೇಕ ಬಗೆಯಲ್ಲಿ ಲಾಭವನ್ನು ಗಳಿಸಿಕೊಳ್ಳುವ ಸಾಧ್ಯತೆಗಳಿವೆ. ಸರ್ಕಾರಿ ನೌಕರರಿಗೆ ನೆಮ್ಮದಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುವವರಿಗೆ ಅನುಕೂಲ ದೊರೆಯುವುದು. ಎಲ್ಲಾ ಬಗೆಯ ಪ್ರಗತಿಯ ಜೀವನಕ್ಕೆ ಗಣೇಶನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22
ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಲಾಭವನ್ನು ಪಡೆದುಕೊಳ್ಳುವರು. ಫ್ಯಾನ್ಸಿ ಸ್ಟೋರ್‍ನಿಂದ ಹಿಡಿದು ಎಲ್ಲಾ ಬಗೆಯ ಉದ್ಯಮ ಹಾಗೂ ವ್ಯಾಪಾರದಲ್ಲಿ ಲಾಭವನ್ನು ಗಳಿಸುವರು. ಮಮನೆಯಲ್ಲಿ ನೆಮ್ಮದಿ ದೊರೆಯುವುದು. ಚಿತ್ರೋದ್ಯಮ ಕ್ಷೇತ್ರದಲ್ಲಿರುವವರು ಉನ್ನತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ನಿಮಗಾಗಿ ದೊರೆಯುವ ಹೊಸ ಅವಕಾಶಗಳು ಮನಸ್ಸಿಗೆ ಮುದವನ್ನು ಕೊಡುವುದು. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ವಿಷ್ಣುವಿನ ಆರಾಧನೆ ಹಾಗೂ ದೇವಿಯ ಸ್ಮರಣೆಯನ್ನು ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23
ವಿಪರೀತವಾದ ಆಯಾಸ ನಿಮ್ಮನ್ನು ಕಾಡುವುದು. ಹದಗೆಟ್ಟ ಮಾನಸಿಕ ಸ್ಥಿತಿಯು ನಿಮ್ಮನ್ನು ಹೈರಾಣಗೊಳಿಸುವುದು. ಮೋಸಗಾರರ ಜಾಲಕ್ಕೆ ತುತ್ತಾಗುವ ಲಕ್ಷಣಗಳಿವೆ. ಆರ್ಥಿಕ ವಲಯದಲ್ಲಿ ವಿಪರೀತವಾದ ಸಮಸ್ಯೆಗಳು ಅತಿಯಾಗಿ ನಿಮ್ಮನ್ನು ಕಾಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶನಿದೇವರ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23
ಕನ್ಯಾ ರಾಶಿಯವರಿಗೆ ಇಂದು ಸಾಮಾನ್ಯವಾದಂತಹ ದಿನ. ಹಾವು ಸಾಯಲ್ಲ ಕೋಲು ಮುರಿಯಲ್ಲ ಎನ್ನುವಂತಹ ಪರಿಸ್ಥಿತಿ ಎದುರಾಗುವುದು. ವಿಪರೀತವಾದ ದೇಹದ ಆಯಾಸ ಹಾಗೂ ಒಂದಿಷ್ಟು ಮಟ್ಟದ ಅಡೆತಡೆಗಳು ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಅಪರಿಮಿತವಾಗಿ ಶ್ರಮಿಸಿರುವ ನಿಮ್ಮ ಕೆಲಸಕ್ಕೆ ಸೂಕ್ತರೀತಿಯ ಪ್ರತಿಫಲ ಲಭ್ಯವಾಗದು. ಮಕ್ಕಳ ವಿವಾಹದ ಕುರಿತು ಹಿರಿಯರು ಕೆಲವು ನಿರ್ಣಯವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಹಿರಿಯರಿಗೆ ದೇವರ ದರ್ಶನವನ್ನು ಮಾಡುವ ಭಾಗ್ಯ ದೊರೆಯುವುದು. ಇನ್ನಷ್ಟು ಸಮಾಧಾನ ಹಾಗೂ ಸಂತೋಷದ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23
ಇಂದು ನಿಮಗೆ ಸಮಾಧಾನ ದೊರೆಯುವುದು. ಮಾನಸಿಕವಾಗಿ ಅನುಕೂಲವನ್ನು ಪಡೆದುಕೊಳ್ಳುವಿರಿ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಲಭ್ಯವಾಗುವುದು. ಹೊಸ ಆಯಾಮಗಳಿಗೆ ಸಂಬಂಧಿಸಿದಂತೆ ಜಯ ದೊರೆಯುವುದು. ಹತ್ತು ಹಲವಾರು ಶುಭ ವಾರ್ತೆಗಳನ್ನು ನೀವು ಕೇಳುವ ಸಾಧ್ಯತೆಗಳಿವೆ. ಮಕ್ಕಳಿಂದ ಶುಭವಾರ್ತೆ ಲಭಿಸುವುದು. ಇನ್ನಷ್ಟು ಸಮಾಧಾನ ಹಾಗೂ ಸಂತೋಷದ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಕಿರಿಕಿರಿಯ ವಾತಾವರಣ ನಿಮಗಿಂದು ಮುಂದುವರಿಯುವುದು. ಸಂಪೂರ್ಣ ಪ್ರಮಾಣದ ಸಮಾಧಾನ ಲಭಿಸದು. ಬಂಧುಗಳಿಂದ ಇಲ್ಲಸಲ್ಲದ ಆಪಾಧನೆಗಳು ಲಭ್ಯವಾಗುವುದು. ಸ್ಥಿರಾಸ್ತಿಯನ್ನು ಕಳೆದುಕೊಳ್ಳುವ ದೆಸೆಯಲ್ಲಿ ಚರ್ಚೆ ಕೈಗೊಳ್ಳುವ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿಯನ್ನು ಮಾರುವ ತೀರ್ಮಾನಕ್ಕೆ ಬರದಿರಿ. ಹೆಂಡತಿಯ ಮಾತನ್ನು ಧಿಕ್ಕರಿಸದಿರಿ. ಇನ್ನಷ್ಟು ಪ್ರಗತಿ ಹಾಗೂ ಸಮಾಧಾನದ ಬದುಕಿಗಾಗಿ ಆಂಜನೇಯನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್
ನಿಮಗೆ ಜನ್ಮ ಶನಿಯ ಪ್ರಭಾವ ಇರುವುದರಿಂದ ಆರ್ಥಿಕ ಸಮಸ್ಯೆ ಹಾಗೂ ಹದಗೆಟ್ಟ ಆರೋಗ್ಯ ನಿಮ್ಮನ್ನು ಕಾಡುವುದು. ಇಲ್ಲ ಸಲ್ಲದ ಆರೋಪ ಅನೇಕ ಸಮಸ್ಯೆಗಳಾಗಿ ಕಾಡುವ ಸಾಧ್ಯತೆಗಳಿವೆ. ಬಂಧುಗಳಿಂದ ಅಪಮಾನ ಹಾಗೂ ಇಲ್ಲಸಲ್ಲದ ಅವಮಾನಗಳು ನಿಮ್ಮನ್ನು ಕಾಡುವುದು. ಈ ಬಗೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಇರುವ ಸರಳ ವಿಧಾನ ಗುರುವಿನ ಆರಾಧನೆ ಮತ್ತು ಕುಲದೇವರ ಸ್ಮರಣೆ.

ಮಕರ: 23 ಡಿಸೆಂಬರ್ -20 ಜನವರ
ಸಂಪೂರ್ಣವಾದ ಸಮಾಧಾನದ ಬದುಕನ್ನು ಕಾಣಲಿದ್ದೀರಿ. ಆದರೂ ಆರ್ಥಿಕ ವಲಯ ಕುಸಿತವನ್ನು ಕಾಣುವುದು. ಮಾಡುತ್ತಿರುವ ಕೆಲಸದಲ್ಲಿ ಗೊಂದಲ ಹಾಗೂ ಬೇಸರ ಉಂಟಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಅಶುಭ ವಾರ್ತೆಯನ್ನು ಕೇಳುವಿರಿ. ಮಕ್ಕಳ ಆರೋಗ್ಯಕ್ಕಾಗಿ ಹಣವನ್ನು ವ್ಯಯಿಸಬೇಕಾಗುವುದು. ಶಿಕ್ಷಕ ವೃತ್ತಿಯಲ್ಲಿರುವವರು ಆದಷ್ಟು ಎಚ್ಚರಿಕೆಯಿಂದ ಇರಬೇಕು. ಶನಿಯ ಪ್ರಭಾವದಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಾಧನೆ ಹಾಗೂ ವಿಷ್ಣುವಿನ ಸ್ಮರಣೆಯನ್ನು ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18
ಇಂದು ನಿಮಗೆ ಸಮಾಧಾನ ಲಭಿಸುವುದು. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯ ದಾಪುಗಾಲನ್ನು ಇಡಲಿದ್ದೀರಿ. ಸಂತೋಷ ಭರಿತವಾದ ವಾತಾವರಣವು ನಿರ್ಮಾಣವಾಗಲಿದೆ. ನಿಮ್ಮ ಜನಪ್ರಿಯತೆ ಇನ್ನಷ್ಟು ಇಮ್ಮಡಿಗೊಳ್ಳುವ ಸಾಧ್ಯತೆಗಳಿವೆ. ಎಲ್ಲಾ ರೀತಿಯ ಪ್ರಗತಿಯನ್ನು ಕಾಣುವಿರಿ. ಗೃಹ ಕೈಗಾರಿಕೆ ಲಾಭವನ್ನು ತಂದುಕೊಡುವುದು. ಕಬ್ಬಿಣ ವ್ಯಾಪಾರದಲ್ಲೂ ಲಾಭವನ್ನು ಪಡೆದುಕೊಳ್ಳುವಿರಿ. ಆಂಜನೇಯನ ಆರಾಧನೆಯಿಂದ ಬಲವನ್ನು ಪಡೆದುಕೊಳ್ಳುವಿರಿ.

ಮೀನ: 20 ಫೆಬ್ರವರಿ -20 ಮಾರ್ಚ್
ಸುಂದರವಾದ ಜೀವನದ ಕಾಯಕಲ್ಪವನ್ನು ಪಡೆದುಕೊಳ್ಳುವಿರಿ. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವರು. ತಂದೆ ತಾಯಿಯಿಂದ ಆಶೀರ್ವಾದ, ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ಹತ್ತು ಹಲವಾರು ಬಗೆಯಲ್ಲಿ ಲಾಭ ಹಾಗೂ ಸಂತೋಷವನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಪ್ರಗತಿ ಹಾಗೂ ಸುಂದರ ಬದುಕಿಗಾಗಿ ದೇವಿ ಮತ್ತು ಆಂಜನೇಯನ ಆರಾಧನೆ ಮಾಡಿ.



Click it and Unblock the Notifications











