ಸೋಮವಾರದ ದಿನ ಭವಿಷ್ಯ

By Divya Pandith
Subscribe to Boldsky

ನಾವು ಮಾಡುವ ಕೆಲಸದಲ್ಲಿ ತೃಪ್ತಿ ಹಾಗೂ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ಇರಬೇಕು. ಯಾವಾಗ ನಾವು ಮಾಡುವ ಕೆಲಸದಲ್ಲಿ ಉತ್ಸಾಹವನ್ನು ಕಳೆದುಕೊಲ್ಳುತ್ತೇವೆಯೋ ಆಗ ಕೆಲಸದ ಗುಣಮಟ್ಟ ಕುಗ್ಗುತ್ತಾಹೋಗುತ್ತದೆ. ಕೆಲಸದ ಗುಣಮಟ್ಟ ಕುಗ್ಗಿದ ಹಾಗೆ ನಮ್ಮ ಗುರಿಯನ್ನು ತಲುಪುವ ವೇಗವೂ ಕಡಿಮೆಯಾಗುತ್ತಾ ಹೋಗುತ್ತದೆ. ಅಂತಿಮವಾಗಿ ಅಂದುಕೊಂಡಿರುವುದನ್ನು ಸಾಧಿಸಲಾಗದೆ ನಿರಾಶೆಗೆ ಒಳಗಾಗುತ್ತೇವೆ. ಹಾಗಾಗಿ ನಾವು ಮಾಡುವ ಕೆಲಸದ ಆಯ್ಕೆ ಹಾಗೂ ಅದರ ಬಗ್ಗೆ ನಮಗಿರುವ ಆಸಕ್ತಿ ಬಹು ಮುಖ್ಯವಾಗುತ್ತದೆ. ಯಾವುದೇ ಕೆಲಸದ ಆರಂಭ ಮಾಡುವಾಗ ನಿಮ್ಮಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ತುಂಬಿಕೊಳ್ಳಿ. ಪ್ರಮುಖವಾಗಿ ಆತ್ಮ ವಿಶ್ವಾಸ ನಿಮ್ಮಲ್ಲಿ ಇರಲಿ.

ಅದ್ಭುತವಾದ ಆತ್ಮವಿಶ್ವಾಸ ಹೊಂದಿದ್ದೀರಿ ಎಂದಾದರೆ ಈ ಪ್ರಪಂಚದಲ್ಲಿ ನಿಮ್ಮನ್ನು ಸೋಲಿಸುವ ವ್ಯಕ್ತಿ ಇರುವುದಿಲ್ಲ ಎನ್ನುವುದನ್ನುಮರೆಯದಿರಿ. ಸೋಮವಾರವಾದ ಇಂದು ಸಾಮಾನ್ಯವಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ಮುಂದಾಗುತ್ತಾರೆ. ಈ ದಿನ ನಿಮ್ಮ ಕೆಲಸದ ಜೊತೆಗೆ ವೈಯಕ್ತಿಕ ಜೀವನದಲ್ಲಿ ಹಾಗೂ ಭಾವನೆಗಳಿಗೆ ಯಾವೆಲ್ಲಾ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡುತ್ತಿದೆ. ಹಾಗಾದರೆ ಅದು ಹೇಗೆ ಎನ್ನುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಪರಿಶೀಲಿಸಿ....

ಮೇಷ: 28 ಮಾರ್ಚ್ -20 ಏಪ್ರಿಲ್

ಮೇಷ: 28 ಮಾರ್ಚ್ -20 ಏಪ್ರಿಲ್

ಅನೇಕ ದಿನಗಳಿಂದ ತೀರ್ಮಾನಿಸಿಕೊಂಡ ವಿಚಾರಗಳು ಇಂದು ಕಾರ್ಯರೂಪಕ್ಕೆ ಬರುವುದು. ಹೊಸ ಉದ್ಯೋಗದಲ್ಲಿ ಹೊಸ ತಿರುವು ನಿಮಗೆ ಅದೃಷ್ಟವನ್ನು ತಂದುಕೊಡುವುದು. ಮಕ್ಕಳಿಂದ ಶುಭ ವಾರ್ತೆಗಳನ್ನು ನೀರಿಕ್ಷಿಸಬಹುದು. ವಿದೇಶಯಾನದ ಕನಸಿದ್ದರೆ ಈ ದಿನ ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ದೊರೆಯುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಸಹ ಇಂದು ಉತ್ತಮ ವಾದ ದಿನ. ವಿದ್ಯಾರ್ಥಿಗಳಿಗೂ ಇಂದು ಶುಭ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಇಂದು ಸಾಮಾನ್ಯ ನೆಮ್ಮದಿ ಕಾಣಲಿದ್ದೀರಿ. ಮನೆಯಲ್ಲಿ ಸಂಪೂರ್ಣ ನೆಮ್ಮದಿ ದೊರೆಯದು. ಸಾಲಗಾರರಿಂದ ಕಿರಿಕಿರಿ ಉಂಟಾಗುವುದು. ಖಾಸಗಿ ಮತ್ತು ಕೈಗಾರಿಕೋದ್ಯಮದಲ್ಲಿ ದುಡಿಯುವವರಿಗೆ ಸಂಪೂರ್ಣ ನೆಮ್ಮದಿ ದೊರೆಯದು. ಖನಿಜೋತ್ಪನ್ನ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯದು. ಮಕ್ಕಳಿಗಾಗಿ ಒಂದಿಷ್ಟು ಹಣವನ್ನು ವ್ಯಯಿಸಬೇಕಾಗುವುದು. ಹೆಂಡತಿಯ ಆರೋಗ್ಯದಲ್ಲೂ ಏರು ಪೇರು ಉಂಟಾಗುವ ಸಾಧ್ಯತೆಗಳಿವೆ. ಸಮೃದ್ಧ ಬದುಕು ಹಾಗೂ ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇಂದು ನೀವು ಸುಖಮಯವಾದ ಜೀವನ್ನು ಕಳೆಯುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ದೊರೆಯುವುದು. ಅನೇಕ ಸಮಸ್ಯೆಗಳಿಂದ ಪಾರಾದ ನೆಮ್ಮದಿ ನಿಮಗೆ ಲಭಿಸುವುದು. ವಿದೇಶ ಯಾನ ಕೈಗೊಳ್ಳುವ ಕನಸು ನನಸಾಗುವುದು. ಉನ್ನತ ವ್ಯಾಸಂಗಕ್ಕೆ ಇದ್ದ ಅಡೆತಡೆಗಳು ದೂರಾಗುವುದು. ಹಿರಿಯರ ಜೀವನದಲ್ಲಿ ಆರೋಗ್ಯ ಸಮಸ್ಯೆ ಸುಧಾರಣೆ ಕಾಣುವುದು. ಇನ್ನಷ್ಟು ಸಮೃದ್ಧಿ ಹಾಗೂ ಪ್ರಗತಿ ಜೀವನಕ್ಕಾಗಿ ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇಂದು ನಿಮಗೆ ಲಾಭದಾಯಕವಾದ ದಿನ. ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿ ಹಾಗೂ ಲಾಭವನ್ನು ಕಾಣುವಿರಿ. ಸಣ್ಣ ಪುಟ್ಟ ವ್ಯಾಪಾರ ಉದ್ಯಮಗಳಿಂದ ಹೊಡೊದು ದೊಡ್ಡ ದೊಡ್ಡ ವ್ಯಾಪಾರ ಉದ್ಯಮದಲ್ಲಿ ತೊಡಗಿಕೊಂಡವರಿಗೂ ಸಹ ಉತ್ತಮ ಲಾಭ ಲಭಿಸುವುದು. ಮಕ್ಕಳಿಂದಲೂ ಶುಭ ವಾರ್ತೆಯ ನಿರೀಕ್ಷೆ ಮಾಡಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಅಂದುಕೊಂಡ ಕಾರ್ಯವು ಸರಾಗವಾಗಿ ನೆರವೇರುವುದು. ನ್ಯಾಯಾಂಗ ವ್ಯವಸ್ಥೆಯಲ್ಲೂ ಜಯ ನಿಮ್ಮ ಪಾಲಿಗೆ ಲಭಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಆದಷ್ಟು ಎಚ್ಚರಿಕೆಯಿಂದ ಇರಿ. ರಕ್ತ ಸಂಬಂಧಿ ಕಾಯಿಲೆ ಸೇರಿದಂತೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಸಹ ನಿಮ್ಮನ್ನು ಹೈರಾಣಗೊಳಿಸುವ ಸಾಧ್ಯತೆಗಳಿವೆ. ದೂರ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವುಂಟಾಗುವ ಸಾಧ್ಯತೆಗಳಿವೆ. ಹಿತಶ್ರುಗಳ ಕಾಟ ಉಂಟಾಗುವುದು. ಅನಿವಾರ್ಯ ಕಾರಣಗಳಿಗೆ ಅಧಿಕ ಹಣ ವ್ಯಯಿಸಬೇಕಾಗುವ ಸಾಧ್ಯತೆಗಳು ಇವೆ. ವಿದ್ಯಾರ್ಥಿಗಳು ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯುವುದರಲ್ಲಿ ವಂಚಿತರಾಗುವರು. ವಿದ್ಯಾಭ್ಯಾಸದಲ್ಲಿ ಭಗ್ನವಾಗುವುದು. ಇನ್ನಷ್ಟು ಸಮಾಧಾನ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಸಮಾಧಾನದ ಬದುಕನ್ನು ಕಾಣುವಿರಿ. ಅನಿರೀಕ್ಷಿತವಾದ ಹಲವು ಸೋಲುಗಳನ್ನು ದೂರ ಮಾಡಿಕೊಳ್ಳುವ ಲಕ್ಷಣಗಳಿವೆ. ಮನೆಯಲ್ಲಿ ನೆಮ್ಮದಿ ದೊರೆಯುವುದು. ನೆಮ್ಮದಿಯ ಜೀವನಕ್ಕೆ ನೀವು ಸಾಕ್ಷಿಯಾಗುವಿರಿ. ಹೊಸ ಆಯಾಮದ ತಿರುವುಗೆ ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತಂದುಕೊಡುವುದು. ದೂರದ ಪ್ರದೇಶಕ್ಕೆ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಇಂದು ನಿಮಗೆ ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಸಮಾಧಾನದ ಬದುಕು ನಿಮ್ಮದಾಗಲಿದೆ. ಅನಿರೀಕ್ಷಿತವಾದ ಸೋಲು ದೂರಾಗುವುದು. ಸ್ಥಿರಾಸ್ತಿಯಿಂದ ಲಾಭ ಗಳಿಸುವಿರಿ. ನ್ಯಾಯಾಂಗ ವ್ಯವಸ್ಥೆಯಲ್ಲಿ ಜಯ ನಿಮ್ಮೆಡೆಗೆ ತಿರುಗುವುದು. ಅನೇಕ ದಿನಗಳಿಂದ ನಿಮಗೆ ಬರಬೇಕಿದ್ದ ಆಸ್ತಿಪಾಸ್ತಿಗಳು ನಿಮ್ಮ ಕೈ ಸೇರುವುದು. ನೀವು ಕೊಟ್ಟ ಸಾಲದ ಹಣ ಮರುಪಾವತಿಯನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಸಂಪೂರ್ಣ ಪ್ರಮಾಣದ ನೆಮ್ಮದಿ ದೊರೆಯದು. ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಉಂಟಾಗುವ ಸಾಧ್ಯತೆಗಳಿವೆ. ಕೆಲವು ಸೋಲುಗಳಿಗೆ ನೀವು ತಲೆ ಬಾಗಬೇಕಾಗುವುದು. ಅವಮಾನಕರ ಸನ್ನಿವೇಶವನ್ನು ಎದುರಿಸುವಿರಿ. ಸಮಾಜ ಸುಧಾರಕರಿಗೆ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವವರಿಗೂ ಸಹ ಕೆಲವು ಅಡೆತಡೆಗಳು ಉಂಟಾಗುವುದು. ವಿದ್ಯಾರ್ಥಿಗಳು ನಿರಂತರ ಶ್ರಮ ವಹಿಸಿದರೆ ಮಾತ್ರ ಜಯ ಪಡೆದುಕೊಳ್ಳುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ನಿಮಗೆ ಶನಿಯ ಪ್ರಭಾವ ಇರುವುದರಿಂದ ಆಂತರಿಕ ವಿಚಾರಗಳು ಬಹಿರಂಗಗೊಳ್ಳುವುದು. ಸ್ತ್ರೀಯರಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿಗೆ ಮಸಿ ಬಡಿಯುವಂತಹ ಕೆಲಸ ಉಂಟಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೂ ಅಡೆತಡೆ ಉಂಟಾಗುವುದು. ಸಂಘಟಿತ ಕೆಲಸದಲ್ಲಿ ತೊಡಗಿಕೊಂಡವರು ಅನುಕೂಲವನ್ನು ಅನುಭವಿಸುವರು. ಕಪ್ಪು ಬಟ್ಟೆಯನ್ನು ತೊಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಸುಂದರವಾದ ಜೀವನಕ್ಕೆ ನಾಂದಿಯಾಗುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರದಿಂದಲೂ ಅನುಕೂಲವನ್ನೇ ಪಡೆದುಕೊಳ್ಳುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲೂ ಸಮಾಧಾನ ಉಂಟಾಗುವುದು. ಹಿರಿಯರಿಂದಲೂ ಒಂದಿಷ್ಟು ಹಣಕಾಸಿನ ನೆರವು ದೊರೆಯುವುದು. ಕೈಗಾರಿಕಾ ಕ್ಷೇತ್ರದಲ್ಲಿ ಇರುವವರಿಗೂ ಸಹ ಉತ್ತಮವಾದ ದಿನವಾಗಲಿದೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಗಣೇಶನ ಆರಾಧನೆ ಮಾಡಿ.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಸುಂದರವಾದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಅನೇಕ ಸಮಸ್ಯೆಗಳು ದೂರಾಗುವುದು. ಚಿತ್ರೋದ್ಯಮದಲ್ಲಿ ಇರುವವರಿಗೆ ಹೊಸ ಅವಕಾಶಗಳು ಹಾಗೂ ಅನುಕೂಲಗಳು ಉಂಟಾಗಲಿವೆ. ಇನ್ನಷ್ಟು ಪ್ರಗತಿ ಹಾಗೂ ಸುಂದರ ಜೀವನಕ್ಕಾಗಿ ಗಣೇಶನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಇಂದು ನಿಮಗೆ ಶುಭ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಲೇಖಕರಿಗೆ ಗೌರವ ಸನ್ಮಾನಗಳು ಲಭಿಸುವುದು. ಕಲಾವಿದರಿಗೆ ಅನುಕೂಲ ಹಾಗೂ ಚಿತ್ರೋದ್ಯಮದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಸಣ್ಣ ಪುಟ್ಟ ಉದ್ಯಮ, ಗೃಹಕೈಗಾರಿಕೆ ಸೇರಿದಂತೆ ಎಲ್ಲಾ ಬಗೆಯ ಉದ್ಯೋಗದಲ್ಲೂ ಅನುಕೂಲ ಹಾಗೂ ಲಾಭ ದೊರೆಯುವುದು. ವಿದ್ಯಾರ್ಥಿಗಳಿಗೂ ಇಂದು ಶುಭದಿನ. ಇನ್ನಷ್ಟು ಪ್ರಗತಿ ಹಾಗೂ ಸಂತೋಷದ ಜೀವನಕ್ಕಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

For Quick Alerts
ALLOW NOTIFICATIONS
For Daily Alerts

    English summary

    your-daily-horoscope-22-january

    Know what astrology and the planets have in store for you today. Choose your zodiac sign and read the details..
    Story first published: Monday, January 22, 2018, 7:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more