Just In
- 48 min ago
ಶನಿವಾರದ ದಿನ ಭವಿಷ್ಯ (14-12-2019)
- 10 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- 11 hrs ago
ಮಗುವಿಗೆ ಸೀಬೆ ಹಣ್ಣು ತಿನಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
- 12 hrs ago
ರೆಸಿಪಿ: ತುಂಬಾ ಟೇಸ್ಟ್ ಆಗಿದೆ ದಾಸವಾಳದ ಮೊಸರು ಗೊಜ್ಜು
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Technology
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಗುರುವಾರದ ದಿನ ಭವಿಷ್ಯ

ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ ಯಶಸ್ಸು ಉಂಟಾಗುವುದು ಎನ್ನಲಾಗುತ್ತದೆ.
ಗುರುವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ಗುರುವು ಈದಿನ ನಿಮ್ಮ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರಿದ್ದಾನೆ ಎನ್ನುವುದನ್ನು ಅರಿಯಬೇಕೆಂದರೆ ಈ ಮುಂದಿರುವ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ.

ಮೇಷ:
ಇಂದು ನಿಮಗೆ ಸಮಾಧಾನದ ಬದುಕನ್ನು ಕಾಣುವಿರಿ. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವರು. ಸೌಂದರ್ಯ ವರ್ಧಕ ವಿಚಾರಗಳಲ್ಲಿ ಲಾಭಾಂಶವನ್ನು ಪಡೆದುಕೊಳ್ಳುವಿರಿ. ವಿದೇಶದ ಕನಸು ನನಸಾಗುವುದು.
ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಚಿಂತಿಸುವ ಅಗತ್ಯವಿಲ್ಲ. ಪತ್ರಕರ್ತರಿಗೆ ಉತ್ತಮವಾದ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗೆ ಗಣೇಶ ಮತ್ತು ದೇವಿಯ ಉಪಾಸನೆ ಮಾಡಿ.

ವೃಷಭ:
ಆಂತರಿಕ ವಿಚಾರವನ್ನು ಇತರರೊಂದಿಗೆ ಹೇಳಿಕೊಳ್ಳದಿರಿ. ನಿಮ್ಮ ಮಾನ ಹರಾಜಾಗುವ ಸಾಧ್ಯತೆಗಳಿವೆ. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ರಾಜಕಾರಣಿಗಳು ಅನೇಕ ಬಗೆಯ ಅಡೆತಡೆಗಳನ್ನು ಅನುಭವಿಸಬೇಕಾಗುವುದು.
ಒಂದಿಷ್ಟು ಮಟ್ಟದ ಸಮಾಧಾನವನ್ನು ಪಡೆದುಕೊಳ್ಳಲು ನೀವು ವಿಫಲರಾಗುವ ಸಾಧ್ಯತೆಗಳಿವೆ. ಕಬ್ಬಿಣ, ಬಟ್ಟೆ ಸೇರಿದಂತೆ ಅನೇಕ ವ್ಯಾಪಾರ ವಹಿವಾಟಿನಲ್ಲಿ ಸಮಸ್ಯೆ ಹಾಗೂ ಅಡೆತಡೆಯನ್ನು ಅನುಭವಿಸಬೇಕಾಗುವುದು. ವಿದ್ಯಾರ್ಥಿಗಳಿಗೂ ಅಶುಭ. ಸಹಪಾಠಿಗಳೊಂದಿಗೆ ಘರ್ಷಣೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಮಿಥುನ:
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಬಂಧು ಮಿತ್ರರ ನಡುವೆ ಇದ್ದ ಕಲಹ ದೂರವಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಶುಭ ವಾರ್ತೆಯನ್ನು ನೀವು ನಿರೀಕ್ಷಿಸಬಹುದು.
ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ನಿಮಗೆ ಹೈರಾಣ ಉಂಟುಮಾಡುವುದು. ಬಂಧುಗಳಿಂದ ನಿರೀಕ್ಷಿತ ಮಟ್ಟದ ಸಹಕಾರ ದೊರೆಯದು. ಸಣ್ಣ ವ್ಯಾಪಾರದಲ್ಲಿ ಅನುಕೂಲ ಉಂಟಾಗಲು ಶಿವನ ಆರಾಧನೆ ಮಾಡಿ. ಗುರುವಿನ ಉಪಾಸನೆ ಮಾಡಿ.

ಕರ್ಕ:
ಇಂದು ನೀವು ಸುಂದರ ಜೀವನವನ್ನು ನಡೆಸುವಿರಿ. ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುವುದು. ಮನೆಯಲ್ಲಿ ನೆಮ್ಮದಿ ದೊರೆಯುವುದು.
ಕೋರ್ಟ್ ವ್ಯವಹಾರದಲ್ಲಿ ಜಯವನ್ನು ಗಳಿಸುವಿರಿ. ಖಾಸಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿರುವವವರಿಗೆ ನೆಮ್ಮದಿ ದೊರೆಯುವುದು. ಎಲ್ಲಾ ರೀತಿಯ ಅನುಕೂಲವನ್ನು ನೀವು ಪಡೆದುಕೊಳ್ಳುವಿರಿ. ಉತ್ತಮ ಜೀವನ ಹಾಗೂ ಸುಂದರ ಬದುಕಿಗೆ ಗುರುವಿನ ಆರಾಧನೆ ಮಾಡಿ.

ಸಿಂಹ:
ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಸ್ಥಿರಾಸ್ತಿಯಿಂದ ಲಾಭ ದೊರೆಯದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳ ಏರು ಪೇರು ನಿಮ್ಮನ್ನು ಹೈರಾಣಗೊಳಿಸುವುದು.
ಮನೆಯಲ್ಲಿ ಪೂರ್ತಿ ಪ್ರಮಾಣದ ಸಮಾಧಾನ ಅಲಭ್ಯವಾಗುವುದು. ಮಾಡುತ್ತಿರುವ ಕೆಲಸದಲ್ಲಿ ನಿರಂತರ ಪರಿಶ್ರಮವನ್ನು ವಹಿಸಿ. ಧಾರ್ಮಿಕ ಚಿಂತಕರಿಗೂ ಸಹ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ಪರಿಹಾರಕ್ಕೆ ವಿಷ್ಣುವಿನ ಆರಾಧನೆ ಹಾಗೂ ವೆಂಕಟೇಶ್ವರನ ಪ್ರಾರ್ಥನೆ ಮಾಡಿ.

ಕನ್ಯಾ:
ಸಮಾಧಾನದ ಬದುಕನ್ನು ಕಾಣುವಿರಿ. ಬಂಧು ಮಿತ್ರರಿಂದ ಸಂಪೂರ್ಣ ಸಹಕಾರ ಪಡೆದುಕೊಳ್ಳುವಿರಿ. ನೀವು ಅಂದುಕೊಂಡ ತೀರ್ಮಾನಗಳನ್ನು ಕೈಬಿಡದಿರಿ. ಪ್ರಗತಿಯತ್ತ ಹೆಜ್ಜೆಹಾಕುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ತುಲಾ:
ಇಂದು ನಿಮಗೆ ಅದೃಷ್ಟಕರವಾದ ದಿನ. ಇಂದು ನೀವು ಜಂಟಿ ವ್ಯವಹಾರಕ್ಕೆ ಮುಂದಾಗಬಹುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅನುಕೂಲವನ್ನು ಪಡೆದುಕೊಳ್ಳುವರು.
ಧಾರ್ಮಿಕ ಚಿಂತಕರಿಗೂ ಅನುಕೂಲ ಲಭ್ಯವಾಗುವುದು. ದೂರದ ಪ್ರಯಾಣ ಅನಿವಾರ್ಯವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸುಂದರ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಶ್ಚಿಕ:
ನಿಮಗೆ ಶನಿ ಪ್ರಭಾವ ಮುಂದುವರಿಯುತ್ತಿದೆ. ಯಾವುದೇ ಕಾರಣಕ್ಕೂ ಗಲಾಟೆಯನ್ನು ಮಾಡದಿರಿ. ಮನೆಯಲ್ಲಿ ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಬಂಧುಗಳಿಂದ ನಿರೀಕ್ಷಿತ ಸಹಾಯ ಲಭಿಸದು. ತಂದೆ ತಾಯಿಯ ಆಶೀರ್ವಾದ ಪಡೆದುಕೊಳ್ಳುವಿರಿ. ಸ್ಥಿರಾಸ್ತಿಯಲ್ಲಿ ಸಂಪೂರ್ಣವಾದ ಲಾಭ ಪಡೆದುಕೊಳ್ಳಲು ಕಷ್ಟವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ವಿಷ್ಣು ಮತ್ತು ಶಕ್ತಿಯ ಆರಾಧನೆ ಮಾಡಿ.

ಧನು:
ವಿಪರೀತವಾದ ಆಯಾಸ ಹಾಗೂ ಆರೋಗ್ಯದ ಏರುಪೇರು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡುವುದು. ನೀವು ಮಾಡದಿರುವ ತಪ್ಪಿಗೆ ಶಿಕ್ಷೆ ಅನುಭವಿಸುವಿರಿ.
ಇತರರೊಂದಿಗೆ ನಿಮ್ಮ ಆಂತರ್ಯದ ವಿಚಾರವನ್ನು ಹೇಳಿಕೊಳ್ಳುದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಆಂಜನೇಯ ಮತ್ತು ಗುರುವಿನ ಆರಾಧನೆ ಮಾಡಿ.

ಮಕರ:
ಸಂಪೂರ್ಣ ಪ್ರಮಾಣದ ಸಮಾಧಾನವನ್ನು ನೀವು ಪಡೆದುಕೊಳ್ಳಲು ಕಷ್ಟವಾಗುವುದು. ಭರತನಾಟ್ಯ, ಸಂಗೀತಗಳಲ್ಲಿ ತೊಡಗಿಕೊಂಡವರು ಸರಸ್ವತಿಯ ಆರಾಧನೆ ಮಾಡುವುದರಿಂದ ಲಾಭವನ್ನು ಪಡೆದುಕೊಳ್ಳುವಿರಿ.
ಬಂಧುಗಳು ಅಗಲಿದ ದುರ್ವಾತೆಯನ್ನು ನೀವು ಕೇಳುವ ಸಾಧ್ಯತೆಯಿದೆ. ಸಮಸ್ಯೆಗಳ ನಿವಾರಣೆಗೆ ದೇವಿಯ ಆರಾಧನೆ ಮತ್ತು ಶಕ್ತಿಯ ಉಪಾಸನೆ ಮಾಡಿ.

ಕುಂಬ:
ಸಮಾಧಾನದ ಬದುಕನ್ನು ನೀವು ಕಾಣುವಿರಿ. ಬಂಧುಮಿತ್ರರಿಂದಲೂ ಸಂಪೂರ್ಣವಾದ ಸಹಕಾರ ಪಡೆದುಕೊಳ್ಳುವಿರಿ.
ಸುಂದರವಾದ ಜೀವನಕ್ಕೆ ನೀವು ಸಾಕ್ಷಿಯಾಗುವಿರಿ. ಮಾಡುತ್ತಿರುವ ಉದ್ಯಮದಲ್ಲಿ ಅಲ್ಪ ಪ್ರಮಾಣದ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಸ್ತ್ರೀಯರು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವರು. ಪ್ರಗತಿಪರ ಬದುಕಿಗಾಗಿ ವಿಷ್ಣುವಿನ ಆರಾಧನೆ ಹಾಗೂ ಶಕ್ತಿಯ ಉಪಾಸನೆ ಮಾಡಿ.

ಮೀನ:
ಸುಂದರವಾದ ಜೀವನವನ್ನು ನೀವು ಪಡೆದುಕೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಬಂಧು ಮಿತ್ರರಿಂದ ಸಹಕಾರ ಪಡೆಯುವಿರಿ. ಸಹೋದರರ ಜೊತೆ ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ಸ್ತ್ರೀಯರಿಗೆ ತವರು ಮನೆಯಿಂದ ಉಡುಗೊರೆ ಲಭ್ಯವಾಗುವ ಸಾಧ್ಯತೆಗಳಿವೆ. ಕೆಲವು ಶುಭ ವಾರ್ತೆಗಳನ್ನು ನೀವು ಕೇಳುವಿರಿ. ಜೀವನದಲ್ಲಿ ಇನ್ನಷ್ಟು ಅಭಿವೃದ್ಧಿ ಹಾಗೂ ಸಂತೋಷಕ್ಕೆ ವಿಷ್ಣು ಮತ್ತು ದೇವಿಯ ಆರಾಧನೆ ಮಾಡಿ.