For Quick Alerts
ALLOW NOTIFICATIONS  
For Daily Alerts

ರಾಶಿ ಚಕ್ರದ ಪ್ರಕಾರ ನಿಮ್ಮ ಹಿಂದಿನ ಜನ್ಮದಲ್ಲಿ ಯಾರಿದ್ದರು?

By Deepu
|

ಏಳೇಳು ಜನ್ಮಕ್ಕೂ ನೀನೇ ನನ್ನ ಬಾಳಸಂಗಾತಿಯಾಗಬೇಕೆಂದು ಕೆಲವರು ಹೇಳುವುದಿದೆ. ತುಂಬಾ ಪ್ರೀತಿಸುವವರು ಮತ್ತು ಒಬ್ಬರನ್ನೊಬ್ಬರು ಬಿಟ್ಟಿರದೆ ಇರುವವರು ಇಂತಹ ಮಾತು ಆಡುವರು. ಮುಂದಿನ ಜನ್ಮದಲ್ಲಿ ಇವರೇ ನನ್ನ ಸಂಗಾತಿಯಾಗಿರಬೇಕೆಂದು ಅವರು ಬಯಸುವರು. ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದೀರಿ ಎನ್ನುವುದನ್ನು ನಿಮ್ಮ ರಾಶಿಚಕ್ರದ ಅನುಗುಣವಾಗಿ ತಿಳಿಯಬಹುದು. ರಾಶಿಯ ನಡವಳಿಕೆ ಹಾಗೂ ಅದರಲ್ಲಿನ ಕೆಲವೊಂದು ಅಂಶಗಳನ್ನು ತೆಗೆದುಕೊಂಡು ಹಿಂದಿನ ಜನ್ಮದ ಬಗ್ಗೆ ತಿಳಿಯಲಾಗಿದೆ. ಇದು ಹೇಗೆ ಎಂದು ನೀವು ತಿಳಿಯಿರಿ....

 ಮೇಷ: ಮಾ.21-ಎ19 ಯೋಧ

ಮೇಷ: ಮಾ.21-ಎ19 ಯೋಧ

ಮೇಷ ರಾಶಿಯವರಲ್ಲಿ ಯಾವಾಗಲೂ ಒಬ್ಬ ಯೋಧನ ಮನಸ್ಥಿತಿಯು ಇರುತ್ತದೆ ಮತ್ತು ಅವರಿಗೆ ಇದನ್ನು ಹೇಗೆ ಬಿಡಬೇಕೆಂದು ತಿಳಿಯಲ್ಲ. ಇವರ ವ್ಯಕ್ತಿಯು ತುಂಬಾ ಶ್ರಮ ಹಾಗೂ ಪಟ್ಟುಹಿಡಿದಿರುವುದಾಗಿದೆ. ಇವರು ಯಾವತ್ತೂ ಜಗಳದಿಂದ ಓಡಿ ಹೋಗುವವರಲ್ಲ. ಇವರು ಆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವವರು. ಹಿಂದಿನ ಜನ್ಮದಲ್ಲಿ ಇವರು ಯೋಧ ಅಥವಾ ಹೋರಾಟಗಾರನಾಗಿದ್ದರು.

ವೃಷಭ: ಎಪ್ರಿಲ್ 20-ಮೇ 20 (ನಾಯಕ)

ವೃಷಭ: ಎಪ್ರಿಲ್ 20-ಮೇ 20 (ನಾಯಕ)

ವೃಷಭ ರಾಶಿಯವರು ತಮ್ಮ ಅಭಿಪ್ರಾಯ ಮಂಡಿಸಿ, ತಮ್ಮ ನಿರ್ಧಾರಕ್ಕೆ ಬದ್ಧರಾಗಿ ನಿಲ್ಲುವವರು. ನಾಯಕನಾಗಿರಲು ಏನು ಬೇಕು ಎಂದು ಅವರಿಗೆ ತಿಳಿದಿದೆ. ಇವರು ಬೇರೆಯವರಿಗೆ ಮಾದರಿಯಾಗಬಲ್ಲರು. ಇವರು ತುಂಬಾ ಸೌಮ್ಯ ಸ್ವಭಾವದವರಾಗಿರುವ ಕಾರಣದಿಂದಾಗಿ ಯಶಸ್ಸಿನ ಶ್ರೇಯ ಬೇರೆಯವರಿಗೂ ನೀಡುವರು. ಹಿಂದಿನ ಜನ್ಮದಲ್ಲಿ ಈ ವ್ಯಕ್ತಿಗಳು ಒಬ್ಬ ನಾಯಕ, ಪ್ರವರ್ತಕ ಅಥವಾ ಪರಿಶೋಧಕನಾಗಿದ್ದಿರಬಹುದು.

ಮಿಥುನ: ಮೇ 21- ಜೂನ್ 20(ವೈದ್ಯ)

ಮಿಥುನ: ಮೇ 21- ಜೂನ್ 20(ವೈದ್ಯ)

ಮಿಥುನ ರಾಶಿಯವರದ್ದು ಬಂಗಾರದಂತಹ ಮನಸ್ಸು ಮತ್ತು ಪ್ರತಿಯೊಬ್ಬರಿಗೂ ಅವರು ನೆರವಾಗುವರು. ಇವರಿಗೆ ಇನ್ನೊಬ್ಬರ ನೋವು ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ತೀಕ್ಷ್ಣವಾಗಿರುವ ಬುದ್ಧಿಯಿದೆ. ನೋವಿನಲ್ಲಿ ಇರುವವರ ಕಾಳಜಿ ಹೇಗೆ ವಹಿಸಬೇಕೆಂದು ಅವರಿಗೆ ತಿಳಿದಿದೆ. ಅವರು ನಿಸ್ವಾರ್ಥ ಭಾವದಿಂದ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ ಎಂದು ಬಯಸವರು. ಹಿಂದಿನ ಜನ್ಮದಲ್ಲಿ ಇವರು ವೈದ್ಯ ಅಥವಾ ಔಷಧಿಕಾರನಾಗಿರಬಹುದು.

ಕರ್ಕಾಟಕ: ಜೂನ್ 21-ಜುಲೈ 22(ರಾಜತಾಂತ್ರಿಕ)

ಕರ್ಕಾಟಕ: ಜೂನ್ 21-ಜುಲೈ 22(ರಾಜತಾಂತ್ರಿಕ)

ಕರ್ಕಾಟಕ ರಾಶಿಯವರು ತುಂಬಾ ಹೊಂದಿಕೊಳ್ಳುವ ಸ್ವಭಾವ ಹಾಗೂ ತೀಕ್ಷ್ಣ ಬುದ್ಧಿ ಹೊಂದಿರುವರು. ಇವರು ಸ್ವಭಾವದಲ್ಲಿ ತಂತ್ರಜ್ಞರಾಗಿರುವರು. ಯಾವುದೇ ಕೆಟ್ಟ ಪರಿಸ್ಥಿತಿಯಿಂದ ಒಳ್ಳೆಯದನ್ನು ಮಾಡುವ ಕಲೆ ಇವರಿಗೆ ತಿಳಿದಿದೆ. ಪರಿಸ್ಥಿತಿಯನ್ನು ತಮ್ಮ ಪರ ಹೇಗೆ ತಿರುಗಿಸಬೇಕು ಎಂದು ಅವರಿಗೆ ತಿಳಿದಿದೆ. ಹಿಂದಿನ ಜನ್ಮದಲ್ಲಿ ಇವರುಪರಿಣಿತ ರಾಜತಾಂತ್ರಿಕ ಅಥವಾ ಸಂಧಾನಕಾರನಾಗಿರಬಹುದು.

 ಸಿಂಹ: ಜುಲೈ 23-ಆಗಸ್ಟ್ 23(ಕಲಾವಿದ)

ಸಿಂಹ: ಜುಲೈ 23-ಆಗಸ್ಟ್ 23(ಕಲಾವಿದ)

ಸಿಂಹ ರಾಶಿಯವರು ಅಭಿವ್ತಕ್ತಿ ಪಡಿಸುವ ಹಾಗೂ ಭಾವನಾತ್ಮಕವಾದ ವ್ಯಕ್ತಿಗಳಾಗಿರುವರು. ತಮ್ಮ ಹೃದಯವು ಯಾವುದರ ಆಕಾಂಕ್ಷಿಯಾಗಿದೆ ಮತ್ತು ಅದನ್ನು ಹೇಗೆ ಪಡೆಯಬೇಕು ಎಂದು ಅವರಿಗೆ ತಿಳಿದಿದೆ. ಆದರೆ ಇವರಲ್ಲಿ ಇರುವಂತಹ ದೊಡ್ಡ ಗುಣವೆಂದರೆ ಜಗತ್ತು ಇವರನ್ನು ಇನ್ನೊಂದು ದೃಷ್ಟಿಯಿಂದ ನೋಡುವಂತೆ ಮಾಡುವರು. ಹಿಂದಿನ ಜನ್ಮದಲ್ಲಿ ಇವರು ಒಂದಾ ಕಲಾವಿದ, ಚಿತ್ರಕಲಾವಿದ ಅಥವಾ ತನ್ನದೇ ಕಲ್ಪನೆಯಿಂದ ಜಗತ್ತನ್ನು ನಿರ್ಮಿಸಿದ ಶಿಲ್ಪಿಯಾಗಿದ್ದಿರಬಹುದು.

ಕನ್ಯಾ: ಆ.24-ಸೆ.23: ಚಿಂತಕ

ಕನ್ಯಾ: ಆ.24-ಸೆ.23: ಚಿಂತಕ

ಕನ್ಯಾ ರಾಶಿಯವರು ಯಾವಾಗಲೂ ತಮ್ಮದೇ ಆಲೋಚನೆಗಳಲ್ಲಿ ಜೀವನ ಸಾಗಿಸುವರು. ಇವರು ತಮ್ಮ ಮನಸ್ಸಿನಲ್ಲಿ ತಮ್ಮದೇ ಆಗಿರುವಂತಹ ವಿಶ್ವವೊಂದನ್ನು ರೂಪಿಸಿಕೊಂಡಿರುವರು. ಇವರ ಆಲೋಚನೆಗಳು, ಕಲ್ಪನೆಗಳು ಮತ್ತು ದೃಷ್ಟಿಕೋನವು ಇವರಿಗೆ ತುಂಬಾ ಮಹತ್ವದ್ದಾಗಿರುವುದು. ಹಿಂದಿನ ಜನ್ಮದಲ್ಲಿ ಈ ರಾಶಿಯವರು ನಿಜವಾಗಿಯೂ ಒಬ್ಬ ಚಿಂತಕ, ತತ್ವಜ್ಞಾನಿ ಅಥವಾ ಮನಶಾಸ್ತ್ರಜ್ಞನಾಗಿದ್ದಿರಬಹುದು.

ತುಲಾ: ಸೆ.24-ಅ.23(ನ್ಯಾಯಧೀಶ)

ತುಲಾ: ಸೆ.24-ಅ.23(ನ್ಯಾಯಧೀಶ)

ತುಲಾ ರಾಶಿಯವರು ಯಾವುದೇ ವಿಚಾರವನ್ನು ತೀರ್ಮಾನಿಸುವ ಸಾಮರ್ಥ್ಯ ಹೊಂದಿರುವನು. ಇವರು ಯಾವತ್ತೂ ಮೋಸ ಮಾಡಲ್ಲ, ಇದು ಅವರ ವ್ಯಕ್ತಿತ್ವ ಹೇಳುತ್ತದೆ. ಪೂರ್ವಗ್ರಹದಲ್ಲಿ ಅವರು ಏಳಿಗೆ ಪಡೆಯಲ್ಲ. ಆದರೆ ಸಮಾನ ನ್ಯಾಯ ಮತ್ತು ಪ್ರತಿಯೊಬ್ಬರಿಗೂ ನ್ಯಾಯ ಎಂಬ ತತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವರು. ಹಿಂದಿನ ಜನ್ಮದಲ್ಲಿಇವರು ಒಬ್ಬ ನ್ಯಾಯಯುತ ವ್ಯಕ್ತಿ, ತೀರ್ಪುಗಾರ ಅಥವಾ ನ್ಯಾಯಾಧೀಶರಾಗಿದ್ದೀರಬಹುದು.

ವೃಶ್ಚಿಕ: ಅ.24-ನ.22(ಕೊಲೆಪಾತಕ)

ವೃಶ್ಚಿಕ: ಅ.24-ನ.22(ಕೊಲೆಪಾತಕ)

ವೃಶ್ಚಿಕ ರಾಶಿಯವರು ತುಂಬಾ ಗೌಪ್ಯ ಹಾಗೂ ಕುಟುಕು ಸ್ವಭಾವದವರು. ಆದರೆ ನಡತೆಯಲ್ಲಿ ಇವರು ತುಂಬಾ ಶಾಂತ ವ್ಯಕ್ತಿತ್ವದವರಾಗಿರುವ ಕಾರಣದಿಂದಾಗಿ ಇವರ ಗುಣ ಬೇರೆಯವರಿಗೆ ತಿಳಿದುಬರಲ್ಲ. ಇವರ ಅಪಾಯಕಾರಿ ಮುಖವಾಡವಿದೆ. ಇದರ ಬಗ್ಗೆ ಕೆಲವೊ ಜನರಿಗೆ ಮಾತ್ರ ತಿಳಿದಿದೆ. ಇವರನ್ನು ಅನಾವಶ್ಯಕವಾಗಿ ಕೆದಕಿದಾಗ ಅಥವಾಕುಪಿತಗೊಳಿಸಿದಾಗ ಇವರು ಕೊಲೆ ಮಾಡಲು ಹಿಂಜರಿಯಲ್ಲ. ಹಿಂದಿನ ಜನ್ಮದಲ್ಲಿ ಇವರು ಒಬ್ಬ ಕೊಲೆಪಾತಕಿಯಾಗಿದ್ದೀರಬಹುದು. ಇವರು ಒಳ್ಳೆಯದಕ್ಕಾಗಿ ಕೊಲೆ ಮಾಡಿಬಹುದು.

ಧನು: ನ.23- ಡಿ.22(ಬರಹಗಾರ)

ಧನು: ನ.23- ಡಿ.22(ಬರಹಗಾರ)

ಧನು ರಾಶಿಯವರು ಭಾವನೆಗಳ ಸ್ಫೋಟವನ್ನೇ ಮಾಡುವಂತವರಾಗಿರುವರು. ಈ ವ್ಯಕ್ತಿಗಳು ಸಂಪೂರ್ಣ ಸಾಮರ್ಥ್ಯ ಪಡೆಯಲು ಬೇಕಾಗುವ ಪ್ರತಿಭೆ ಮತ್ತು ಇದನ್ನು ಸಾಧಿಸಲು ಕಠಿಣ ಪರಿಶ್ರಮ ಮಾಡುವರು. ಇನ್ನೊಂದು ಬದಿಯಲ್ಲಿ ಇವರ ಭಾವನಾತ್ಮಕ ಶಕ್ತಿ ಮತ್ತು ಕ್ರಿಯಾತ್ಮಕ ಆತ್ಮವು ಇದನ್ನು ಶಬ್ಧ ಮತ್ತು ಸಂಗೀತದಲ್ಲಿ ಹೊರಹಾಕುವುದು. ಹಿಂದಿನ ಜನ್ಮದಲ್ಲಿ ಈ ರಾಶಿಯವರು ಲೇಖಕ ಅಥವಾ ಸಂಗೀತಗಾರನಾಗಿರಬಹುದು.

ಮಕರ: ಡಿ.23-ಜ.20(ರಕ್ಷಕ)

ಮಕರ: ಡಿ.23-ಜ.20(ರಕ್ಷಕ)

ಮಕರ ರಾಶಿಯವರು ತಮಗಿಂತ ದುರ್ಬಲರನ್ನು ರಕ್ಷಿಸುವವರಾಗಿರುವರು. ಇವರಿಗೆ ಏನೂ ಮಾಡದವರಿಗಾಗಿ ಮಿಡಿಯುವಂತಹ ಹೃದಯವು ಇವರದ್ದಾಗಿದೆ ಮತ್ತು ಇವರ

ಜತೆಗೆ ನಿಲ್ಲದವರಿಗೂ ಇವರು ನೆರವಾಗುವಂತಹ ಆತ್ಮ ಹೊಂದಿರುವರು. ಹಿಂದಿನ ಜನ್ಮದಲ್ಲಿ ಈ ರಾಶಿಯವರು ಒಬ್ಬ ರಕ್ಷಕ ಅಥವಾ ಉದ್ಧಾರಕನಾಗಿದ್ದೀರಬಹುದು.

ಕುಂಭ: ಜ.21-ಫೆ.18(ಪ್ರೇರಕರು)

ಕುಂಭ: ಜ.21-ಫೆ.18(ಪ್ರೇರಕರು)

ಕುಂಭ ರಾಶಿಯ ಜನರು ಬೇರೆಯವರಿಗೆ ಪ್ರೇರಕರಾಗಿರುವರು. ಇವರು ಯಶಸ್ಸು ಪಡೆಯುವಂತಹ ಪ್ರೇರಣೆ ಹೊಂದಿರುವರು ಮತ್ತು ಇತರರು ಇವರನ್ನು ನೋಡಿ ಪ್ರೇರಣೆ ಪಡೆದುಕೊಳ್ಳುವರು. ಈಗ ಮಾಡುವುದಕ್ಕಿಂತ ಇನ್ನು ಹೆಚ್ಚಿಗೆ ಮಾಡಬಹುದೆಂದು ಬೇರೆಯವರಿಗೆ ತೋರಿಸಿಕೊಡುವರು. ಹಿಂದಿನ ಜನ್ಮದಲ್ಲಿ ಈ ರಾಶಿಯವರು ಒಬ್ಬ ಪ್ರೇರಕ, ನಾಯಕ ಅಥವಾ ಪ್ರವರ್ತಕನಾಗಿದ್ದೀರಬಹುದು.

ಮೀನ: ಫೆ.19-ಮಾ.20(ದಾರ್ಶನಿಕ)

ಮೀನ: ಫೆ.19-ಮಾ.20(ದಾರ್ಶನಿಕ)

ಮೀನ ರಾಶಿಯವರು ತಮ್ಮ ಆದ ಭಿನ್ನ ದೃಷ್ಟಿಯಿಂದ ವಿಶ್ವವನ್ನು ನೋಡುವರು. ಇವರು ಸಾಮಾಜಿಕ ಕಟ್ಟುಪಾಡುಗಳಿಗೆ ಜೋತುಬಿದ್ದವರಲ್ಲ. ಆದರೆ ತಮ್ಮದೇ ಆಗಿರುವ ಹಾದಿ ಸೃಷ್ಟಿಸುವರು. ಜಗತ್ತಿಗೆ ಇವರಲ್ಲಿ ತಮ್ಮದೇ ಆಗಿರುವ ಆಲೋಚನೆಗಳಿರುವುದು ಮತ್ತು ಸಮಾಜಕ್ಕೂ ತಮ್ಮದೇ ಆಗ ದೃಷ್ಟಿ ಕೋನವಿರುವುದು. ಹಿಂದಿನ ಜನ್ಮದಲ್ಲಿ ಇವರು ದಾರ್ಶನಿಕನಾಗಿದ್ದೀರ ಬಹುದು. ಇವರು ಎಲ್ಲ ಕಟ್ಟುಪಾಡುಗಳನ್ನು ಮುರಿದು ತಮ್ಮದೇ ಆಗಿರುವ ಹಾದಿ ಸೃಷ್ಟಿಸಿದವರಾಗಿದ್ದೀರಬಹುದು.

English summary

Who Were You In Your Past Life, Based On Your Zodiac

When we are in love, we wish that our partner remains the same in our next birth as well or the fact that we get the same life partner! But have you thought what kind of a person you were in your last birth? Well, according to astrology, based on the details of each zodiac sign, it is found that we can help know what we were in our past birth. Check them out, as you would be surprised to know about your previous birth. Do note: These predictions are based on the characteristics of each zodiac sign. So, go ahead and find out...
X
Desktop Bottom Promotion