ಏಪ್ರಿಲ್ 2018: ಇದು ಲಕ್ಕಿ ತಿಂಗಳು, ಎಲ್ಲಾ ರಾಶಿಯವರಿಗೂ ಒಳ್ಳೆಯದಾಗುತ್ತದೆ

Posted By: Deepu
Subscribe to Boldsky

ಜೀವನದಲ್ಲಿ ನಾವು ಇದ್ದ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಹೋಗುತ್ತೇವೆ ಎಂದರೆ ಏನೋ ಒಂದು ರೀತಿಯ ಖುಷಿ ಹಾಗೂ ತೃಪ್ತಿ ಇರುತ್ತದೆ. ನಮ್ಮ ಅಭಿವೃದ್ಧಿ ಅಥವಾ ಸುಧಾರಣೆಗಾಗಿ ಹಗಲಿರುಳು ಕಷ್ಟಪಡುವುದು ಸಹಜ. ನಮ್ಮ ಕಷ್ಟವು ಕೆಲವೊಮ್ಮೆ ಸಾರ್ಥಕತೆಯ ಭಾವವನ್ನು ನೀಡಿದರೆ ಇನ್ನೂ ಕೆಲವೊಮ್ಮೆ ಮಾಡಿದ ಕೆಲಸಗಳಿಗೆ ಕೊಂಚವೂ ಪ್ರತಿಫಲ ದೊರೆಯುವುದಿಲ್ಲ.

ಆಗ ಮನಸ್ಸಿಗೆ ಬಹಳಷ್ಟು ನೋವುಂಟಾಗುವುದು. ನಮ್ಮ ಏಳು ಬೀಳಿಗೆ ಪ್ರಮುಖ ಹೊಣೆಗಾರರು ಎಂದರೆ ಗ್ರಹಗತಿಗಳು. ಈ ಗ್ರಹಗಳು ಉತ್ತಮ ಪ್ರಭಾವ ಬೀರಿದರೆ ಜೀವನವು ಉಜ್ವಲ ಸ್ಥಿತಿಗೆ ತೆರಳುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಉತ್ತಮ ಬದಲಾವಣೆಯಿಂದಾಗಿ ರಾಶಿಚಕ್ರಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುವುದು. ಹಾಗಾಗಿ ಪ್ರತಿಯೊಂದು ರಾಶಿಚಕ್ರದವರೂ ಸಹ ಏಪ್ರಿಲ್ ತಿಂಗಳಲ್ಲಿ ಉತ್ತಮ ಸ್ಥಿತಿಯನ್ನು ಕಾಣುವರು ಎಂದು ಹೇಳಲಾಗುತ್ತದೆ.... 

ಮೇಷ

ಮೇಷ

ಇವರಿಗೆ ಅಂತಪ್ರಜ್ಞೆ ಉತ್ತಮವಾಗಿರುತ್ತದೆ. ಅಭಿವೃದ್ಧಿಗಾಗಿ ಹೊಸ ಆಯಾಮವನ್ನು ಹೊಂದಲು ಪ್ರಯತ್ನ ಪಡುವರು. ಇವರ ಪ್ರಯತ್ನಕ್ಕೆ ಇತರರಿಂದಲೂ ಬೆಂಬಲ ದೊರೆಯುವುದು. ಇವರು ಆಧ್ಯಾತ್ಮಿಕ ವಿಚಾರದಲ್ಲಿ ನಂಬಿಕೆಯನ್ನು ಹೊಂದುವರು. ಸಕಾರಾತ್ಮಕ ಬದಲಾವಣೆಗಳಿಗೆ ಆರ್ಥಿಕವಾಗಿಯೂ ಪರಿಣಾಮ ಬೀರುವುದು. ಈ ತಿಂಗಳು ನೀವು ಕುಟುಂಬದವರನ್ನು ಹಾಗೂ ಸ್ನೇಹಿತರನ್ನು ಭೇಟಿ ಮಾಡುವಿರಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಮತ್ತು ನಿಮ್ಮ ಪ್ರಕ್ರಿಯೆಯನ್ನು ನಂಬಲು ನೀವು ಭಯಪಡುವ ಅಗತ್ಯವಿಲ್ಲ.

ವೃಷಭ

ವೃಷಭ

ಸ್ವಯಂ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ ತಿಂಗಳು ಎಂದು ಹೇಳಬಹುದು. ನಿಮಗೆ ಸಂತೋಷ ನೀಡುವಂತ ವಿಚಾರಗಳನ್ನು ಹತ್ತಿಕ್ಕಬೇಡಿ. ಶಕ್ತಿಯ ಬದಲಾವಣೆಯನ್ನು ನೀವು ಪಡೆದುಕೊಳ್ಳಬೇಕಿದೆ. ಆರೋಗ್ಯದ ಕಡೆಗೂ ಒಂದಿಷ್ಟು ಕಾಳಜಿವಹಿಸಬೇಕು. ಹೊಸ ವಿಧಾನಗಳು ಹಾಗೂ ಯಶಸ್ಸು ನಿಮ್ಮ ಹಾದಿಯಲ್ಲಿ ಬರುತ್ತವೆ. ಈ ಸಮಯದಲ್ಲಿ ನೀವು ಸೂಕ್ತ ರೀತಿಯಲ್ಲಿ ಕಾರ್ಯಗತವಾಗಿರಬೇಕು. ನಿಮ್ಮ ಕನಸುಗಳು ಆಗ ಸುಲಭವಾಗಿ ಸಾಧಿಸಬಹುದು. ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಯಾವುದೇ ಹಠಾತ್ ಯೋಚನೆಯನ್ನು ಮಾಡಬಾರದು.

ಮಿಥುನ

ಮಿಥುನ

ನಿಮ್ಮ ಕನಸು ಹೊರಹೊಮ್ಮಿ ಕಾರ್ಯಗತಗೊಳ್ಳುವುದು. ನಿಮ್ಮ ವಿಶ್ವಾಸದ ಮಟ್ಟವು ಧನಾತ್ಮಕ ರೀತಿಯಲ್ಲಿ ಯಶಸ್ಸನ್ನು ತಂದುಕೊಡುವುದು. ನಿಮಗೆ ಸಿಕ್ಕ ಎಲ್ಲಾ ಶುಭ ಹಾರೈಕೆಗಳು ವಾಸ್ತವದ ಜೀವನಕ್ಕೆ ಅನುಕೂಲವನ್ನುಂಟುಮಾಡುತ್ತದೆ. ಸಾಮಾಜಿಕ ಜೀವನದಲ್ಲಿ ಭಾವೋದ್ರೇಕವನ್ನು ತೋರುವಿರಿ. ಸಮಾನ ಮನಸ್ಸಿನ ಜನರೊಂದಿಗೆ ಸಂಪರ್ಕ ಹೊಂದಲು ಗಮನ ಹರಿಸುವಿರಿ. ಈ ತಿಂಗಳಲ್ಲಿ ನೀವು ಕೊಂಚ ಜಾಗರೂಕತೆಯಿಂದ ಇರಬೇಕು. ಏಕೆಂದರೆ ಕೆಲವು ವಿಚಾರದಲ್ಲಿ ಯಾವುದು ಪ್ರಮುಖವಾದುದ್ದು ಎನ್ನುವುದನ್ನು ನಿರ್ಧರಿಸಲು ಸಮಯ ಬೇಕಾಗುವುದು.

ಕರ್ಕ

ಕರ್ಕ

ಈ ತಿಂಗಳು ನೀವು ಆಕ್ತಿಯುತವಾದ ಅನುಭವವನ್ನು ನೀವು ಅನುಭವಿಸುವಿರಿ. ವಿಶೇಷವಾಗಿ ವೃತ್ತಿ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ನೀಡಬೇಕಾಗುವುದು. ಹೊಸ ವ್ಯಕ್ತಿಗಳೊಂದಿಗೆ ನಿಮ್ಮ ಆಸಕ್ತಿಯನ್ನು ಹಂಚಿಕೊಳ್ಳುವುದು ಮತ್ತು ವಿಷಯಗಳನ್ನು ಅನುಭವಿಸಲು ಮುಂದಾಗುವಿರಿ. ಶಾಂತಿಯ ವಿಚಾರದಲ್ಲಿ ಹೊಸ ವಿಷಯಗಳನ್ನು ಕಲಿಯುವ ತಿಂಗಳು ಇದಾಗಿರುತ್ತದೆ. ಇತರರ ಬೆಂಬಲವನ್ನು ಪಡೆಯಲು ನಿಮಗೆ ಇದು ಸೂಕ್ತ ಸಮಯವಾಗಿದೆ. ತಿಂಗಳ ಮಧ್ಯದ ಅವಧಿಯಲ್ಲಿ ಸಕಾರಾತ್ಮಕವಾದ ಸಂಬಂಧವನ್ನು ಹೊಂದುವಿರಿ.

ಸಿಂಹ

ಸಿಂಹ

ಹಿಂದಿನ ಶಕ್ತಿ ಹಾಗೂ ಕರ್ಮಗಳನ್ನು ತೆರವುಗೊಳಿಸಿ ಹೊಸ ಅಧ್ಯಾಯ ಪ್ರಾರಂಭಿಸಲು ಇದು ಉತ್ತಮ ಸಮಯ. ಎಲ್ಲಾ ಉತ್ಕøಷ್ಟವಾದ ಸಂಗತಿಗಳನ್ನು ಗ್ರಹಿಸಲು ಮತ್ತು ಗಮನಹರಿಸಲು ನೀವು ನಿಮ್ಮನ್ನು ಅನುಮತಿಸಬೇಕಾದ ಅಗತ್ಯವಿದೆ. ಇತರರೊಂದಿಗೆ ಆಧ್ಯಾತ್ಮಿಕ ವಿಚಾರದಲ್ಲಿ ಆಳವಾದ ಸಂಪರ್ಕವನ್ನು ಕಂಡುಕೊಳ್ಳುವರು. ನಿಮ್ಮ ಜ್ಞಾನದ ಬಾಯಾರಿಕೆಯು ನಿಮ್ಮನ್ನು ಸಾಮಾಜಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಸೃಜನಶೀಲ ಶಕ್ತಿಯನ್ನು ತುಂಬಿಸುತ್ತದೆ. ಇನ್ನೊಂದೆಡೆ ಒಂದು ದೊಡ್ಡ ಬದಲಾವಣೆಯ ಬಯಕೆ ನಿಮ್ಮಲ್ಲಿ ನೆಲೆಯಾಗುವುದು.

ಕನ್ಯಾ

ಕನ್ಯಾ

ಗ್ರಹಗತಿಗಳ ಪ್ರಕಾರ ಬುಧನು ನಿಮ್ಮ ತಾಳ್ಮೆಯ ಮಟ್ಟವನ್ನು ಪರೀಕ್ಷಿಸುತ್ತಾನೆ. ಅದು ನಿಮ್ಮ ವೈಯಕ್ತಿ ಜೀವನದಲ್ಲಿ ಎನ್ನಬಹುದು. ಹಣಕಾಸಿನ ವಿಚಾರದಲ್ಲಿ ಅಥವಾ ಕಾನೂನು ಸಮಸ್ಯೆಗಳಿಂದಾಗಿ ಒಂದಿಷ್ಟು ಒತ್ತಡವನ್ನು ಅನುಭವಿಸಬೇಕಾಗುವುದು. ಇದನ್ನು ನೀವು ಎಚ್ಚರಿಕೆಯಿಂದ ನಿರ್ವಹಿಸಿದರೆ ನಿಮ್ಮ ದಾರಿ ಯಶಸ್ಸಿನ ಪಥವನ್ನು ಕಾಣುವುದು. ಆದಷ್ಟು ತಾಳ್ಮೆಯಿಂದ ಇರಬೇಕು. ನಿಮ್ಮ ಸ್ವಯಂ ಸಂತೋಷಕ್ಕಾಗಿ ಸ್ವಲ್ಪ ಸಮಯವನ್ನು ನೀಡಿ. ಆರೋಗ್ಯ, ಮಾನಸಿಕ ಚಿಂತನೆ ಹಾಗೂ ಆಧ್ಯಾತ್ಮಿಕ ವಿಚಾರದ ಕಡೆ ಒಂದಿಷ್ಟು ಗಮನಹರಿಸಬೇಕು.

ತುಲಾ

ತುಲಾ

ಇದೀಗ ನಕ್ಷತ್ರಗಳ ಪ್ರಕಾರ ನಿಮ್ಮ ಜೀವನ ಪ್ರಣಯದ ವಿಚಾರದಲ್ಲಿ ಬಿಸಿಯಾಗಿರುತ್ತದೆ. ಇದು ಈಗಾಗಲೆ ಇರುವ ಪ್ರಣಯದ ಜೀವನವನ್ನು ಉತ್ತೇಜಿಸುವುದು ಅಥವಾ ಹೊಸ ಪಾಲುದಾರರು ನಿಮ್ಮ ಜೀವನದಲ್ಲಿ ಪ್ರವೇಶ ಪಡೆಯಬಹುದು ಎಂದು ಸೂಚಿಸುತ್ತದೆ. ಪ್ರೀತಿ, ಆತ್ಮವಿಶ್ವಾಸ, ಸೃಜನಶೀಲತೆಯ ಶಕ್ತಿಯು ಹೆಚ್ಚುವುದು. ಮುಂಬರುವ ದಿನಗಳಲ್ಲಿ ಕೆಲವು ವಿಷಯಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ಹೊಸ ಸ್ನೇಹ ಹಾಗೂ ಉತ್ತಮ ಬದಲಾವಣೆಗಳು ಈ ತಿಂಗಳಲ್ಲಿ ಹೆಚ್ಚಿನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ನಿತ್ಯದ ಆಹಾರ ಸೇವನೆಯಂತೆ ವ್ಯಾಯಾಮವನ್ನು ಸಹ ನೀವು ಮಾಡಬೇಕು. ಈ ತಿಂಗಳು ನಿಮ್ಮ ಮಾರ್ಗದಲ್ಲಿ ಅನೇಕ ಧನಾತ್ಮಕ ಬದಲಾವಣೆಯನ್ನು ತಂದುಕೊಡುವುದು. ನೀವು ಸಾಮಾನ್ಯಕ್ಕಿಂತ ಹೆಚ್ಚು ಪ್ರಕ್ಷುಬ್ಧವಾದ ಭಾವನೆಯನ್ನು ಹೊಂದಿರುತ್ತೀರಿ. ತಪ್ಪಾಗಿ ಜೋಡಿಸಲ್ಪಟ್ಟ ಅನುಭವವನ್ನು ಅನುಭವಿಸಲು ಮತ್ತು ಧನಾತ್ಮಕ ಬದಲಾವಣೆಯನ್ನು ರಚಿಸಲು ಕ್ರಮ ತೆಗೆದುಕೊಳ್ಳಲು ನೀವು ಏನು ಮಾಡಬೇಕು ಎನ್ನುವುದನ್ನು ಗಮನಿಸಬೇಕು.

ಧನು

ಧನು

ನಿಮ್ಮ ಶಕ್ತಿ ಮತ್ತು ಮೋಡಿಯು ನಿಮ್ಮ ಸಂಬಂಧಗಳ ಕಡೆಗೆ ಸಕಾರಾತ್ಮಕ ರೀತಿಯಲ್ಲಿ ಕೆಲಸ ಮಾಡಲು ನಿಮಗೆ ಉತ್ತೇಜನ ನೀಡುತ್ತದೆ. ನಿಮ್ಮ ಪ್ರಣಯದ ಭಾವನೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಭಯ ಮತ್ತು ಅಭದ್ರತೆಯ ವಿಚಾರವನ್ನು ನೀವು ಮರೆಯದಿರಿ. ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಕಾಳಜಿ ಹಾಗೂ ಪ್ರಾರ್ಥಮಿಕ ಗಮನ ಹರಿಸಬೇಕು. ಇದರಿಂದ ಆರ್ಥಿಕ ವಿಷಯದಲ್ಲಿ ಒತ್ತಡ ಉಂಟಾಗಬಹುದು.

ಮಕರ

ಮಕರ

ನಿಮಗೆ ನಿಮ್ಮ ಮನೆ ಅಥವಾ ಕುಟುಂಬದ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕಾದ ಸಮಯ ಎನ್ನಬಹುದು. ಇತರರಿಗೆ ನೀವು ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುವಿರಿ. ಸೃಜನಶೀಲ ವಿಚಾರದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರುವ ಸಾಧ್ಯತೆಗಳಿವೆ. ಇದು ನಿಮ್ಮ ಜೀವನದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು. ನೀವು ಬಯಸುವ ಪ್ರಗತಿಯತ್ತ ಗಮನ ಹರಿಸುವುದನ್ನು ಮರೆಯದಿರಿ.

ಕುಂಭ

ಕುಂಭ

ನೀವು ಈ ತಿಂಗಳು ಸಂವಹನದ ಒಳಹರಿವಿನಿಂದ ಹೊಸ ಯೋಜನೆಯನ್ನು ರೂಪಿಸುವಿರಿ. ನಿಮ್ಮ ಹತ್ತಿರದವರು ನಿಮ್ಮ ಸಲಹೆಯನ್ನು ಪಡೆಯುವುದು ಮತ್ತು ಹೊಸ ಜ್ಞಾನವನ್ನು ಪರಿಶೀಲಿಸುತ್ತಾರೆ. ಕೆಲವು ವಿಚಾರದಲ್ಲಿ ನೀವು ನಿಮ್ಮ ಹತ್ತಿರದವರಿಂದ ಸಲಹೆಯನ್ನು ಪಡೆಯಬೇಕಾಗುವುದು. ನಿಮ್ಮನ್ನು ಸೃಜನಾತ್ಮಕವಾಗಿ ಹಾಗೂ ಸ್ವಯಂ ಕಾರ್ಯಗಳಿಗಾಗಿ ಹೊಸ ಯೋಜನೆಯನ್ನು ಕೈಗೊಳ್ಳುವಿರಿ.

ಮೀನ

ಮೀನ

ಈ ತಿಂಗಳು ನಿಮ್ಮ ಸಂಪನ್ಮೂಲವು ಹೆಚ್ಚುವುದು. ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಸೃಜನಾತ್ಮಕವಾಗಿ ಸಕಾರಾತ್ಮಕತೆಯನ್ನು ಕಾಣುವಿರಿ. ಕಲೆಯನ್ನು ರಚಿಸಲು, ಪ್ರಯಾಣ ಮಾಡಲು ಮತ್ತು ಹೊಸ ಸಂಗತಿಗಳನ್ನು ಕಲಿಯಲು ಹಾಗೂ ಹಂಚಿಕೊಳ್ಳಲು ನಿಮಗೆ ಇದು ಉತ್ತಮವಾದ ತಿಂಗಳಾಗಿದೆ. ಮತ್ತೊಂದೆಡೆ ಇದು ನೀವು ಪ್ರಣಯ ಜೀವನಕ್ಕಾಗಿ ಹೋರಾಟ ನಡೆಸುವ ಸಾಧ್ಯತೆಗಳಿವೆ.

English summary

What Each Zodiac Sign Should Look Forward To In April

There are certain expectations that each person can have based on his/her zodiac sign. These changes are based on the predictions for the month of April. Check out on the things that can change in your sun sign and also this is what you can expect from the mystical month of April.