ನಮ್ಮ ಸುತ್ತಲ್ಲೂ ಕಾಗೆಗಳು ಹಾರಾಡುತ್ತಿದ್ದರೆ ಏನರ್ಥ? ಇದು ಅಶುಭವೇ?

Posted By: Deepu
Subscribe to Boldsky
ನಿಮ್ಮ ಸುತ್ತಲೂ ಕಾಗೆಗಳು ಹಾರಾಡುತ್ತಿದ್ದರೆ ಅದರ ಸೂಚನೆಯೇನು? | Oneindia Kannada

ಆಧ್ಯಾತ್ಮ ಹಾಗೂ ಪುರಾಣ ಎನ್ನುವುದು ಒಂದು ವಿಶಾಲವಾದ ವಿಚಾರ. ಅದರಲ್ಲಿ ತಿಳಿದುಕೊಳ್ಳುವುದು ಬಹಳಷ್ಟು ಇರುತ್ತದೆ. ನಾವು ಅದೆಷ್ಟೇ ವಿಚಾರವನ್ನು ತಿಳಿದಿದ್ದರೂ ಕಮ್ಮಿಯೇ ಎನಿಸುತ್ತದೆ. ಪುರಾಣ ಹಾಗೂ ಶಾಸ್ತ್ರಗಳಲ್ಲಿ ಪ್ರಕೃತಿಗೆ ವಿಶೇಷವಾದ ಸ್ಥಾನ ನೀಡಲಾಗುವುದು. ಅದರಲ್ಲಿ ಒಂದು ಜೀವಿಯಾಗಿ ಬದುಕುವ ನಾವು ಪ್ರಕೃತಿಯಲ್ಲಿ ಉಂಟಾಗುವ ಕೆಲವು ವಿಧಾನಗಳನ್ನು ಸೂಕ್ಷ್ಮವಾಗಿ ವೀಕ್ಷಿಸಬಹುದು. ಪ್ರಕೃತಿಯಲ್ಲಿ ಮನುಷ್ಯ ವಿಶೇಷವಾದ ಶಕ್ತಿ ಹೊಂದಿರುವ ಪ್ರಾಣಿಯಾಗಿರಬಹುದು. ಆದರೆ ಮನುಷ್ಯನ ಭವಿಷ್ಯವನ್ನು ಪ್ರಕೃತಿಯಲ್ಲಿರುವ ಕೆಲವು ಪ್ರಾಣಿಪಕ್ಷಿಗಳು ಹೇಳುತ್ತವೆ ಎನ್ನುವುದು ವಿಶೇಷ.

ಹೌದು, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರಾಣಿ-ಪಕ್ಷಿಗಳಿಗೂ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅವುಗಳಲ್ಲಿ ಬೆಕ್ಕು, ನಾಯಿ, ಕಾಗೆ, ಗೂಬೆ ಸೇರಿದಂತೆ ವಿವಿಧ ಪ್ರಾಣಿಗಳು ವಿಶೇಷ ಸಂದೇಶವನ್ನು ನಮಗೆ ನೀಡುತ್ತವೆ. ಜೊತೆಗೆ ಭವಿಷ್ಯದ ಮಾಹಿತಿಯನ್ನು ನೀಡುತ್ತವೆ ಎನ್ನಲಾಗುವುದು. ನಿತ್ಯ ಮುಂಜಾನೆ ಕಾಣಿಸಿಕೊಳ್ಳುವ ಕಾಗೆ ನಮ್ಮ ಭವಿಷ್ಯದ ಬಗ್ಗೆ ವಿವಿಧ ವಿಷಯಗಳನ್ನು ತೆರೆದಿಡುತ್ತದೆ. ಆ ವಿಚಾರಗಳು ಯಾವವು? ಕಾಗೆ ಯಾವ ಬಗೆಯಲ್ಲಿ ಸಂದೇಶ ನೀಡುವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಬಯಸುವುದಾದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.... 

ಇದು ಸಾವನ್ನು ಸೂಚಿಸುತ್ತದೆ

ಇದು ಸಾವನ್ನು ಸೂಚಿಸುತ್ತದೆ

ಕಾಗೆಯನ್ನು ಮರಣದ ಅಶುಭ ಶಕುನ ಎಂದು ಕರೆಯಲಾಗುತ್ತದೆ. ಕಾಗೆ ಜೀವನ ಮತ್ತು ಮರಣದ ಬದಲಾವಣೆ ಹಾಗೂ ಜೀವನ ಚಕ್ರದಲ್ಲಿ ಸಂಭವಿಸುವ ಬದಲಾವಣೆಗಳ ಪ್ರಬಲ ಜ್ಞಾನವನ್ನು ಹೊಂದಿರುತ್ತದೆ ಎನ್ನಲಾಗುವುದು. ಹಾಗಾಗಿ ಕಾಗೆಯು ನಿಮ್ಮ ಸುತ್ತಲಲ್ಲೇ ಹಾರಾಡುತ್ತಿದ್ದರೆ ಅದು ನಿಮಗೊಂದು ಎಚ್ಚರಿಕೆ ಅಥವಾ ಆಧ್ಯಾತ್ಮಿಕ ಆಶೀರ್ವಾದ ಎಂದು ಪರಿಗಣಿಸಬಹುದು. ಕಾಗೆ ಸದಾ ನಿಮ್ಮ ಹತ್ತಿರದಲ್ಲಿಯೇ ಗೋಚರಿಸುತ್ತಿದ್ದರೆ ಯಾರದೋ ಸಾವಿನ ಸೂಚನೆ ಎಂದು ಗುರುತಿಸಬೇಕಿಲ್ಲ. ಬದಲಿಗೆ ಸಾವು ಸುಪ್ತವಾಗಿದೆ ಎಂದು ಸಹ ಅರ್ಥೈಸಬಹುದು ಅಥವಾ ಯಾರನ್ನಾದರೂ ಕರೆದೊಯ್ಯುವುದನ್ನು ಪರಿಗಣಿಸಲಾಗುತ್ತಿದೆ ಅದನ್ನು ಅಂಗೀಕರಿಸಿದೆ ಎಂದು ಹೇಳಬಹುದು.

ಯಕ್ಷಿಣಿ ಸಂಪರ್ಕ

ಯಕ್ಷಿಣಿ ಸಂಪರ್ಕ

ಕಾಗೆಗಳು ಆಗಾಗ ಯಕ್ಷಿಣಿಯಂತಹ ಅಥವಾ ಕಾಣದ ಶಕ್ತಿಯೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುವುದು. ನಿಮ್ಮ ಕನಸಿನಲ್ಲಿ ಕಾಗೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದರೆ, ಕನಸಿನಲ್ಲಿ ಕಂಡ ವಿಚಾರಗಳು ಸತ್ಯದ ಅಂಶಗಳಿವೆ ಎಂದು ಹೇಳಲಾಗುವುದು. ಹೆಚಿನ ಶಕ್ತಿ ಅಥವಾ ಆತ್ಮವು ನಿಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದೆ ಎನ್ನುವ ಅರ್ಥವನ್ನು ನೀಡುತ್ತದೆ. ಕಾಗೆಗಳು ಅಗತ್ಯವಾದ ಸಮಯಗಳಲ್ಲಿ ಮಾತ್ರ ಕಂಡುಬರುತ್ತದೆ. ಹಾಗಾಗಿ ಕಾಗೆಗಳು ಹಾದುಹೋಗುವಾಗ ನೀಡುವ ಸಂದೇಶದಿಂದ ಎಚ್ಚರಿಕೆಯಿಂದ ಇರಬೇಕು.

ಸಮತೋಲನ

ಸಮತೋಲನ

ಕಾಗೆ ಬೆಳಕು ಮತ್ತು ಕತ್ತಲ ಸಮತೋಲನದ ಉತ್ತಮ ಸಂಕೇತ ಎಂದು ಹೇಳಲಾಗುವುದು. ನಿಮ್ಮ ಜೀವನದಲ್ಲಿ ಅಸಮತೋಲನ ಎನ್ನುವುದು ಉಂಟಾಗುತ್ತಿದ್ದರೆ ನಿಮ್ಮ ಸುತ್ತಲಿನಲ್ಲಿರುವ ಕಾಗೆಗಳನ್ನು ಗುರುತಿಸಿ ಮತ್ತು ಹೆಜ್ಜೆಯನ್ನು ಹಾಕಿ. ಕತ್ತಲು ಇದ್ದಲ್ಲಿ ಬೆಳಕು ಸಹ ಇರುತ್ತದೆ ಎನ್ನುವುದನ್ನು ಕಾಗೆ ನೆನಪಿಸುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ ಎಂದು ಹೇಳಲಾಗುವುದು.

ದೈವಸಂಪರ್ಕ

ದೈವಸಂಪರ್ಕ

ಕಾಗೆಯು ಹೆಚ್ಚು ಬುದ್ಧಿವಂತ ಮತ್ತು ಅತೀಂದ್ರಿಯ ಶಕ್ತಿಯನ್ನು ಹೊಂದಿರುತ್ತವೆ. ಒಬ್ಬ ವ್ಯಕ್ತಿ ಅವರ ಕಣ್ಣುಗಳನ್ನುನೋಡುವುದರ ಮೂಲಕ ಉತ್ತಮ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುವುದು. ಅಲ್ಲದೆ ಸಮಾನ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಲಾಗುವುದು.

ಬದಲಾವಣೆ

ಬದಲಾವಣೆ

ಕಾಗೆಗಳು ಪ್ರಕೃತಿಯ ಆಳವಾದ ಮತ್ತು ಶಕ್ತಿಯುತವಾದ ಅಂಶಗಳನ್ನು ಪ್ರತಿನಿಧಿಸುತ್ತವೆ. ಜೀವನ ಮತ್ತು ಸಾವು ಯಾವುದೇ ಇದ್ದರೂ ಅಲ್ಲಿ ಕಾಗೆ ಕಾಣಿಸಿಕೊಳ್ಳುತ್ತದೆ. ಇತರ ಪಕ್ಷಿಗಳಿಗೆ ಹೋಲಿಸಿದರೆ ಕಾಗೆಯು ಒಂದೇ ರೀತಿಯ ಗೀಳಿಗೆ ಒಳಗಾಗಿರುವುದಿಲ್ಲ. ಇವು ಎಲ್ಲಾದರೂ ಹೋಗಲು ಬಯಸಿದರೆ ಅದು ಅವರ ಬದುಕಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಕಾರಣದಿಂದ ಅವರ ಗಮ್ಯ ಸ್ಥಾನದ ಆಯ್ಕೆಯು ಹೆಚ್ಚು ವಿಚಿತ್ರ ಅಥವಾ ವಿಶೇಷವಾಗಿರುತ್ತದೆ ಎಂದು ಹೇಳಬಹುದು.

English summary

What Does It Mean When You See Crows Around

Are you tired or scared of seeing too many crows around you? Well, this might be a sign of certain oncoming events in your life! Apart from symbolising death, seeing a crow around can reveal a lot about many other significant things.Here, in this article, we are revealing to you about the significance of seeing crows around. Check it out.