ವಾರ ಭವಿಷ್ಯ: 1ನೇ ಏಪ್ರಿಲ್ 2018 ರಿಂದ 7ನೇ ಏಪ್ರಿಲ್ 2018ರ ವರೆಗೆ....

Posted By: Deepu
Subscribe to Boldsky

ವಾರದಲ್ಲಿ ಕೇವಲ ಏಳು ದಿನಗಳೇ ಆದರೂ ಪ್ರತಿಯೊಂದು ವಾರವು ನಮ್ಮ ಜೀವನದಲ್ಲಿ ಒಂದೊಂದು ಬಗೆಯ ವಿಶೇಷ ಬದಲಾವಣೆಯನ್ನು ತರುತ್ತವೆ. ಪ್ರಪಂಚಕ್ಕೆ ಕಾಲಿಟ್ಟ ನಮಗೆ ನಮ್ಮದು ಎನ್ನುವುದು ಎಂದರೆ ಸಮಯಗಳು ಮಾತ್ರ. ನಮಗಾಗಿ ಸಿಕ್ಕ ಒಂದೊಂದು ಕ್ಷಣ ಹಾಗೂ ಗಂಟೆಗಳು ಮಾತ್ರ ನಮ್ಮದೆನಿಸಿಕೊಳ್ಳುತ್ತವೆ. ನಮಗೆ ಸಿಕ್ಕ ಸಮಯವನ್ನು ನಾವು ಹೇಗೆ ಬಳಸಿಕೊಂಡೆವು ಎನ್ನುವುದು ಪ್ರಮುಖವಾದ ವಿಚಾರವಾಗುವುದು. ಅದರಿಂದಲೇ ನಮ್ಮ ಭವಿಷ್ಯವೂ ನಿರ್ಧಾರವಾಗುವುದು.

ಹೊಸ ತಿಂಗಳ ಆರಂಭದಿಂದಲೇ ಕೆಲವು ಮಹತ್ತರವಾದ ಬದಲಾವಣೆ ಹಾಗೂ ಪರಿಣಾಮವನ್ನು ಗ್ರಹಗತಿಗಳು ನೀಡಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮಗೂ ನಿಮ್ಮ ಭವಿಷ್ಯ ತಿಂಗಳ ಆರಂಭದಲ್ಲಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ವಿದ್ದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಗಳನ್ನು ಪರಿಶೀಲಿಸಿ...

ಮೇಷ

ಮೇಷ

ಹಣಕಾಸಿನ ವಿಚಾರದಲ್ಲಿ ಕೆಲವು ಏರಿಳಿತಗಳನ್ನು ನೀವು ಅನುಭವಿಸಬೇಕಾಗುವುದು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಹೊಸ ಯೋಜನೆಯನ್ನು ಕಾರ್ಯಗತಗೊಳಿಸುವ ಸಾಧ್ಯತೆಗಳಿವೆ. ಕೆಲಸದ ಮುಂಭಾಗದಲ್ಲಿ ನಿಮ್ಮ ಸೃಜನ ಶೀಲತೆ ಮತ್ತು ಕಲಾತ್ಮಕ ವಿಚಾರಗಳೊಂದಿಗೆ ನೀವು ಹೆಚ್ಚಿನ ಲಾಭವನ್ನು ಗಳಿಸಬಹುದು. ಮತ್ತೊಂದೆಡೆ ಉದ್ಯಮಿಗಳು ಮತ್ತು ವ್ಯವಹಾರ ಉದ್ಯಮಗಳನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುವಿರಿ.

ವೃಷಭ

ವೃಷಭ

ವೃತ್ತಿ ಜೀವನದಲ್ಲಿ ಉತ್ತಮ ಸ್ಥಿತಿಯನ್ನು ಕಾಣುವಿರಿ. ಈ ವಾರದಲ್ಲಿ ನೀವು ಬಯಸಿದ ಲಾಭ ಮತ್ತು ಯಶಸ್ಸನ್ನು ಪಡೆದುಕೊಳ್ಳುವಿರಿ. ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಸಂತೋಷ ಪಡುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ ಎಂದು ತೋರುವುದು. ನಿಮಗೆ ಈ ವಾರ ಹಾಗೂ ಮುಂದಿನ ದಿನದಲ್ಲಿ ಐಷಾರಾಮಿ ಜೀವನವನ್ನು ನಡೆಸುವಿರಿ.

ಮಿಥುನ

ಮಿಥುನ

ಜೀವನದ ವಾಸ್ತವಾಂಶದ ವಿಷಯಗಳ ಬಗ್ಗೆ ಮಾರ್ಗದರ್ಶನ ಹಾಗೂ ಸಮಾಲೋಚನೆ ಪಡೆಯಲು ಈ ವಾರ ಒಂದು ಉತ್ತಮ ಅವಧಿಯಾಗಿದೆ. ಜೀವನದ ಶಕ್ತಿಯನ್ನು ನೀವು ಧ್ಯಾನಿಸಬಹುದು. ಅಧ್ಯಯನ ಮಾಡುವುದರ ಕುರಿತು ಒಂದಿಷ್ಟು ಯೋಜನೆಯನ್ನು ಯೋಜಿಸಬೇಕಾಗುವುದು. ಭಾವನಾತ್ಮಕ ಬೆಳವಣಿಗೆಗೆ ಅಗತ್ಯವಾದ ಜೀವ ಪೋಷಕಾಂಶಗಳನ್ನು ನೀವು ಹೊಂದಬೇಕಾಗುವುದು.

ಕರ್ಕ

ಕರ್ಕ

ಕೆಲವು ವಿಚಾರಕ್ಕೆ ನೀವು ಕಾಯಬೇಕಾಗುವುದು. ನಿಮ್ಮ ಗುರಿಯನ್ನು ಸಾಧಿಸಲು ಹಾಗೂ ಅಂದುಕೊಂಡ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉತ್ತಮ ಸಂವಹನ ಅಗತ್ಯವಾಗಿರುತ್ತದೆ. ನಿಮ್ಮ ಕನಸು ವಾಸ್ತವಕ್ಕೆ ತಿರುಗುವುದರಿಂದ ಹೊಸ ಪ್ರೇಕ್ಷಕರನ್ನು ನೀವು ಪಡೆದುಕೊಳ್ಳುವಿರಿ.

ಸಿಂಹ

ಸಿಂಹ

ನಿಮ್ಮ ಹೆಮ್ಮೆಯು ನಿಮ್ಮ ರೀತಿಯಲ್ಲಿಯೇ ನಿಲ್ಲಬೇಕು ಎಂದರೆ ನೀವು ಎರಡು ಬಾರಿ ಯೋಚಿಸಬೇಕಾಗುತ್ತದೆ. ಇಲ್ಲವಾದರೆ ಅವು ನಿಮ್ಮ ಜೀವನದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವುದು. ನೀವು ಕೆಲಸದಲ್ಲಿ ಒಂದು ಪ್ರಮುಖ ಸ್ಥಾನವನ್ನು ಹೊಂದುವಿರಿ. ನಿಮ್ಮ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಿರಿ. ಇದರಿಂದ ಬಹಳಷ್ಟು ಪ್ರಯೋಜನವನ್ನು ಪಡೆದುಕೊಳ್ಳುವಿರಿ.

ಕನ್ಯಾ

ಕನ್ಯಾ

ಈ ವಾರ ನಿಮಗೆ ಬದಲಾವಣೆ ಹಾಗೂ ಹೊಂದಾಣಿಕೆಯ ವಿಚಾರದಲ್ಲಿ ಮಹತ್ತರವಾದ ಅವಧಿ ಎಂದು ಹೇಳಬಹುದು. ಕೆಲಸದ ವಿಚಾರದಲ್ಲಿ ಮೇಲಾಧಿಕಾರಿಗಳಿಂದ ಸಹಕಾರ ಪ್ರಶಂಸೆ ದೊರೆಯುವುದು. ಜೊತೆಗೆ ವೃತ್ತಿ ಜೀವನವು ಸುಧಾರಣೆ ಕಾಣುವುದು. ಪ್ರಣಯದ ವಿಚಾರದಲ್ಲಿ ಮತ್ತು ಪ್ರೀತಿಯ ಜೀವನದಲ್ಲಿ ಕೆಲವು ಗೊಂದಲಗಳಿಗೆ ಒಳಗಾಗುವ ಸಾಧ್ಯತೆಗಳಿವೆ.

ತುಲಾ

ತುಲಾ

ನಿಮ್ಮ ಬೆಳವಣಿಗೆ ಹಾಗೂ ಚಟುವಟಿಕೆಗಳ ಬಗ್ಗೆ ನೀವು ಹಿಂತಿರುಗಿ. ವಿಶ್ರಾಂತಿ ಮತ್ತು ವಿಮರ್ಶೆ ಮಾಡಲು ಇದೊಂದು ಉತ್ತಮವಾದ ವಾರ ಎನ್ನಬಹುದು. ಮುಂದಿನ ದಿನಗಳಲ್ಲಿ ಆಟದ ಯೋಜನೆಯನ್ನು ಸೆಳೆಯಲು ಪರಿಪೂರ್ಣವಾದ ಸಮಯ. ಅನಗತ್ಯವಾದ ಘರ್ಷಣೆ ತಪ್ಪಿಸಲು ನೀವು ಆಳವಾದ ಪರೀಕ್ಷೆ ಮತ್ತು ಧ್ಯಾನವನ್ನು ಪ್ರಾರಂಭಿಸಬೇಕಾಗುವುದು.

ವೃಶ್ಚಿಕ

ವೃಶ್ಚಿಕ

ನೀವು ಮಾಡುತ್ತಿರುವ ಕೆಲಸದಲ್ಲಿ ಮಿಶ್ರ ಫಲಿತಾಂಶವನ್ನು ನೀವು ಅನುಭವಿಸಬೇಕಾಗುವುದು. ಸಕಾರಾತ್ಮಕ ಘಟನೆಗಳಿಗೆ ಹೋಲಿಸಿದರೆ ನಕಾರಾತ್ಮಕ ಘಟನೆಗಳು ಹೆಚ್ಚು ಕಂಡುಬರುತ್ತವೆ. ಇತರ ಧನಾತ್ಮಕ ಬದಿಯಲ್ಲಿ ಹಠಾತ್ ಸಂಪತ್ತಿನ ಲಾಭವನ್ನು ಅನುಭವಿಸುವಿರಿ. ನಿಮ್ಮ ಗುರಿಯನ್ನು ಕೇಂದ್ರೀಕರಿಸಲು ಕೆಲವು ಅಡಚಣೆಗಳಿಂದ ಹೆಜ್ಜೆಯನ್ನು ಹಿಂದೆ ಇಡಬೇಕಾಗುವುದು.

ಧನು

ಧನು

ವಿವಿಧ ದಿಕ್ಕುಗಳಿಂದ ದೊಡ್ಡ ಪ್ರಮಾಣದ ಸುಧಾರಣೆಯ ಭರವಸೆಯನ್ನು ಕಂಡುಕೊಳ್ಳುವಿರಿ. ಅಂತಿಮವಾಗಿ ನೀವು ಮುನ್ನಡೆಯಲು ಮತ್ತು ನಿಮ್ಮ ಪರಿಸ್ಥಿತಿಯನ್ನು ಸುಧಾರಣೆಗೆ ತಂದುಕೊಳ್ಳಲು ಸಾಧ್ಯವಾಗುವುದು. ಕೆಲವು ವಿಚಾರದಲ್ಲಿ ಬಹಳ ಸ್ವಾರ್ಥಿಯಾಗಿ ಚಿಂತಿಸುವಿರಿ.

ಮಕರ

ಮಕರ

ಇತರರಿಗೆ ಸೂಕ್ತ ರೀತಿಯ ಮಾರ್ಗದರ್ಶನ ಹಾಗೂ ಸಲಹೆಯನ್ನು ನೀಡಲು ಸಮರ್ಥರಾಗುವಿರಿ. ಕುಟುಂಬದಲ್ಲಿ ಧಾರ್ಮಿಕ ಆಚರಣೆಯನ್ನು ಆಚರಿಸಲು ಸಾಧ್ಯವಾಗುವುದು. ಇದು ನಿಮಗೆ ಅಪಾರ ಮಾನಸಿಕ ಶಾಂತಿ ಹಾಗೂ ತೃಪ್ತಿಯನ್ನು ನೀಡುವುದು. ಇದಲ್ಲದೆ ಈ ವಾರ ನೀವು ಅನಿರೀಕ್ಷಿತ ಖರ್ಚನ್ನು ಮಾಡಬೇಕಾಗುವುದು.

ಕುಂಭ

ಕುಂಭ

ಜಗತ್ತಿನಲ್ಲಿ ನಿಮ್ಮ ಸ್ಥಾನವನ್ನು ಸುಧಾರಿಸಲು ಹಾಗೂ ಬದ್ಧತೆಯನ್ನು ಕಾಯ್ದುಕೊಳ್ಳಲು ಸೂಕ್ತ ಪ್ರೇರಣೆ ಪಡೆದುಕೊಳ್ಳುವಿರಿ. ಈ ಸಮಯದಲ್ಲಿ ನಿಮಗೆ ಉತ್ತಮ ಆಕ್ತಿ ಹಾಗೂ ಬಲವೂ ಲಭ್ಯವಾಗುವುದು. ನೀವು ಈ ಶಕ್ತಿಯನ್ನು ಸೃಜನಶೀಲ ಮತ್ತು ರಚನಾತ್ಮಕ ರೀತಿಯಲ್ಲಿ ಬಳಸಬೇಕು.

ಮೀನ

ಮೀನ

ಈ ವಾರದ ಆರಂಭದಿಂದ ವಿಷಯವು ನಿಮಗಾಗಿ ಪ್ರಾರಂಭಿಸಲು ಅನುಕೂಲವನ್ನು ತಂದುಕೊಡುವುದು. ಮುಂಬರುವ ವಾರವು ನಿಮಗೆ ಸಾಮರಸ್ಯದ ಅವಧಿಯನ್ನು ಹೊಂದಿರುತ್ತದೆ. ಮತ್ತೊಂದೆಡೆ ನೈಸರ್ಗಿಕವಾಗಿರುವ ನಿಮ್ಮ ನಾಯಕತ್ವದ ಗುಣದಿಂದ ನೀವು ಬಹಳಷ್ಟು ಲಾಭವನ್ನು ಪಡೆಯುತ್ತೀರಿ. ಪ್ರಣಯದ ವಿಚಾರದಲ್ಲೂ ಪ್ರೀತಿಯು ಸಹ ಉತ್ತಮವಾಗಿ ಕಾಣುವುದು.

English summary

Weekly Predictions For Each Zodiac Sign: 1st-7th April, 2018

There are a few things that you need to know for this week and we bring in details about what are the major changes that your zodiac sign will undergo this week. Here are the major changes that you need to know about. So, check out these weekly predictions (April 1-7) and find out on the facts and things that you need to know about your zodiac sign.Check out what the stars have in store for you.