ವಾರದ ಭವಿಷ್ಯ : 12 ಮಾರ್ಚ್ 2018- 20 ಮಾರ್ಚ್ 2018

Posted By: Deepu
Subscribe to Boldsky

ಕತ್ತಲಲ್ಲಿ ನಮ್ಮ ನೆರಳು ಸಹ ನಮ್ಮೊಂದಿಗೆ ಇರುವುದಿಲ್ಲ. ಇದರರ್ಥ ಕಷ್ಟ ಬಂದಾಗ ಅಥವಾ ನಮಗೆ ಸಹಾಯದ ಅಗತ್ಯ ಇದ್ದಾಗ ಯಾರು ನಮ್ಮೊಂದಿಗೆ ಇರುವುದಿಲ್ಲ. ಜೀವನದ ಆಗು ಹೋಗುಗಳು ಹಾಗೂ ನೋವು ನಲಿವು ಎನ್ನುವ ಅನುಭವವನ್ನು ನಾವೇ ಅನುಭವಿಸಬೇಕು. ಹಾಗಾಗಿ ಕಷ್ಟ ಎಂದಾಗ ಹೆದರದೆ ಧೈರ್ಯದಿಂದ ಮುನ್ನಡೆಯಬೇಕು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಡೆದಾಗ ದೂರ ಸರಿದ ವ್ಯಕ್ತಿಗಳು ಮತ್ತೆ ನಿಮ್ಮನ್ನು ಅರಸಿ ಬರುತ್ತಾರೆ. ಅದೇ ಜೀವನ. ಅದೇನೇ ಇರಲಿ ಆದರೆ ಇಂತಹ ಜೀವನದಲ್ಲಿ ಸಂಭವಿಸುವ ಇಂತಹ ಸನ್ನಿವೇಶಗಳಿಗೆ ನಮ್ಮ ಗ್ರಹಗತಿಗಳ ಸಂಚಾರ ಹಾಗೂ ರಾಶಿ ಚಕ್ರಗಳ ಪ್ರಭಾವವೇ ಕಾರಣ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಗ್ರಹಗತಿಗಳ ಸಂಚಾರ ವಿವಿಧ ಬಗೆಯ ವ್ಯತ್ಯಾಸಗಳನ್ನು ತಂದೊಡ್ಡುತ್ತವೆ. ಅವುಗಳ ಅನ್ವಯದಡಿಯಲ್ಲಿ ಕೆಲವು ರಾಶಿ ಚಕ್ರದವರು ಉತ್ತಮ ಫಲಿತಾಂಶವನ್ನು, ಇನ್ನೂ ಕೆಲವು ರಾಶಿಚಕ್ರದವರು ಮಧ್ಯಮ ಫಲಿತಾಂಶವನ್ನು ಹಾಗೂ ಕೆಲವರು ದುಃಖಗಳನ್ನು ಅನುಭವಿಸುವ ಸಾಧ್ಯತೆಗಳಿವೆ. ಇದೇ ತಿಂಗಳ 12-20ನೇ ತಾರೀಖಿನ ಒಳಗೆ ಯಾವೆಲ್ಲಾ ಬದಲಾವಣೆ ಹಾಗೂ ಪ್ರಭಾವವನ್ನು ಅನುಭವಿಸಬೇಕಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....

ಮೇಷ

ಮೇಷ

ನೀವು ಕಾಣುತ್ತಿರುವ ಸುಂದರ ಕನಸುಗಳಿಗೆ ಭಗವಂತನ ಕೃಪೆ ಲಭಿಸುವುದು. ನಿಮ್ಮ ಸಾಧನೆ ಹಾಗೂ ಕೀರ್ತಿಯು ಉತ್ತುಂಗಕ್ಕೆ ಏರುವ ಸಾಧ್ಯತೆಗಳಿವೆ. ಸಂಶೋಧನಾತ್ಮಕ ಕಾರ್ಯದಲ್ಲಿ ತೊಡಗಿರುವವರಿಗೆ ಮುಂಬರಲಿರುವ ದಿನಗಳು ಉತ್ತಮವಾಗಲಿದೆ. ನಿಮ್ಮ ಜೀವನದಲ್ಲಿ ಪ್ರತಿಯನ್ನು ಸಾಧಿಸುವ ಸಮಯ ಇದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೀವನದಲ್ಲಿ ಇನ್ನಷ್ಟು ಸಂತೋಷವನ್ನು ಪಡೆದುಕೊಳ್ಳಲು ಶಿವನ ಆರಾಧನೆ ಮಾಡಿ. ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವು ನಿಮ್ಮ 7ನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಆಗ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಹೊಂದುವುದನ್ನು ನೀವು ಕಾಣುತ್ತೀರಿ. ಹೊಸ ಹೊಸ ಯೋಜನೆಗಳು ನಿಮ್ಮ ಮನಸ್ಸಿಗೆ ಬರುವುದು. ಅದನ್ನು ಸಕಾರಗೊಳಿಸಿಕೊಳ್ಳಲು ಇದು ಸೂಕ್ತ ಸಮಯ ಎನ್ನುವುದನ್ನು ಅರಿಯಬೇಕು. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಅದು ನಿಮ್ಮ ಸಂಬಳ ಹೆಚ್ಚುವುದಾಗಿರಬಹುದು ಅಥವಾ ಇತರ ವ್ಯಾಪಾರದ ಮೂಲಕ ಆಗಿರಬಹುದು.

ವೃಷಭ

ವೃಷಭ

ಮುಂಬರುವ ದಿನ ಉತ್ತಮವಾದ ದಿನ. ಅಂದುಕೊಂಡ ಕಾರ್ಯವು ಯಶಸ್ಸನ್ನು ಪಡೆದುಕೊಳ್ಳಬೇಕೆಂದರೆ ಅವಿರತವಾದ ಶ್ರಮ ವಹಿಸಬೇಕಾಗುವುದು. ಮನೆಯಲ್ಲಿ ನೆಮ್ಮದಿ ಉಂಟಾಗುವುದು. ಸಹೋದರರ ಸಹಕಾರ ದೊರೆಯುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರು ಮುಂಬರಲಿರುವ ದಿನಗಳಲ್ಲಿ ಲಾಭಾಂಶ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಉದ್ಯೋಗ ಕ್ಷೇತ್ರದಲ್ಲೂ ಉತ್ತಮ ಲಾಭ ಹಾಗೂ ಸಹಕಾರ ದೊರೆಯುವುದು. ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರ ವಾದ ಜೀವನಕ್ಕಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ. ಜ್ಯೋತಿಷ್ಯದ ಪ್ರಕಾರ, ಗುರು ಗ್ರಹದ ಪರಿವರ್ತನೆಯಿಂದ ಹೊಸ ಕೆಲಸದ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಅದನ್ನು ಸ್ವೀಕರಿಸಲು ಇದು ಉತ್ತಮ ಸಮಯ ಎನ್ನುವುದನ್ನು ನೀವು ತಿಳಿಯಬೇಕು. ವೃತ್ತಿಯ ಆರಂಭದಲ್ಲಿ ನಿಮಗೆ ಲವಲವಿಕೆಯಿರುತ್ತದೆ. ಈ ರಾಶಿಯವರು ಬೇರೆಯವರಿಂದ ಸಾಲ ಅಥವಾ ಎರವಲು ಹಣವನ್ನು ಪಡೆದುಕೊಳ್ಳಬಾರದು.

ಮಿಥುನ

ಮಿಥುನ

ಮುಂಬರಲಿರುವ ದಿನಗಳಲ್ಲಿ ಕೈಗೊಂಡ ಕಾರ್ಯಗಳೆಲ್ಲಾವು ಶುಭವಾಗಲಿದೆ. ಹೆಣ್ಣುಮಕ್ಕಳಿಗೆ ಇದ್ದ ವಿವಾಹ ಅಡೆತಡೆಗಳು ದೂರ ಆಗುವಾಗುವುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲ, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ ಉಂಟಾಗುವುದು. ಆರ್ಥಿಕವಾಗಿ ಲಾಭವನ್ನು ಗಳಿಸುವಿರಿ.ಜೀವನದಲ್ಲಿ ಇನ್ನಷ್ಟು ಸುಧಾರಣೆ ಹಾಗೂ ಯಶಸ್ಸಿಗೆ ಶಕ್ತಿ ಮತ್ತು ಶಿವನ ಆರಾಧನೆ ಮಾಡಿ. ಗುರು ಗ್ರಹವು 5ನೇ ಮನೆಯ ಪ್ರವೇಶ ಹೊಂದುವುದು ಎಂದು ಜ್ಯೋತಿಷ್ಯ ಹೇಳುವುದು. ಈ ರಾಶಿಯ ಪೋಷಕರು ಚಂದ್ರನ ಪ್ರಭಾವಕ್ಕೆ ಒಳಗಾಗಿದ್ದರೆ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವರು. ಈ ರಾಶಿಯವರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುವುದು. ಅಲ್ಲದೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು.

ಕರ್ಕ

ಕರ್ಕ

ಮುಂಬರಲಿರುವ ದಿನಗಳು ಶುಭಕರವಾದ ದಿನ. ಫ್ಯಾಷನ್ ಡಿಸೈನರ್ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ಉಂಟಾಗುವುದು. ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೂ ಉತ್ತಮವಾದ ಲಾಭ ಉಂಟಾಗುವುದು. ಚಿಕ್ಕ ಪುಟ್ಟ ಉದ್ಯೋಗದಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರ ವಹಿವಾಟು ನಡೆಸುವವರಿಗೂ ಉತ್ತಮವಾದ ಲಾಭ ಲಭಿಸುವುದು. ಮನದಾಳದಲ್ಲಿರುವ ವಿಚಾರಗಳು ನೆರವೇರುವುದು. ಉತ್ತಮವಾದ ಜೀವನ ನಿಮ್ಮದಾಗಲಿದೆ.

ಸಿಂಹ

ಸಿಂಹ

ಆರ್ಥಿಕವಾಗಿ ಕುಗ್ಗುವಿರಿ. ನಿಮ್ಮ ಅನಾರೋಗ್ಯದ ಸಮಸ್ಯೆಯು ನಿಮ್ಮನ್ನು ಇನ್ನಷ್ಟು ದುಃಖಿತರನ್ನಾಗಿಸುವುದು. ಮಕ್ಕಳಿಂದ ಅಶುಭ ವಾರ್ತೆ ಕೇಳುವ ಸಾಧ್ಯತೆಗಳಿವೆ. ವಿಪರೀತವಾದ ಸಾಲದಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲೂ ಹಿನ್ನೆಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಪ್ರತಿ ಸೋಮವಾರ ಶಿವನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಮುಂಬರಲಿರುವದ ದಿನಗಳಲ್ಲಿ ನೆಮ್ಮದಿ ದೊರೆಯುವುದು. ಮಾನಸಿಕವಾಗಿ ಸಂತೋಷಗೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಪತ್ರಕರ್ತರಿಗೆ ಅನುಕೂಲಕರವಾದ ದಿನ, ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನಡೆ, ಧಾರ್ಮಿಕ ಚಿಂತಕರಿಗೆ ಅನುಕೂಲವುಂಟಾಗುವ ದಿನ. ವಿದ್ಯಾರ್ಥಿಗಳಿಗೂ ಶುಭ ಉಂಟಾಗುವುದು. ಸಮಸ್ಯೆಗಳ ನಿವೃಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಸೋಮವಾರದಂದು ಶಿವನಿಗೆ ಎಣ್ಣೆ ಅರ್ಪಿಸಿ ಹಾಗೂ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿಯನ್ನು ಪಠಣೆ ಮಾಡಿ.

ತುಲಾ

ತುಲಾ

ಲಾಭಾಂಶದ ಸುರಿಮಳೆಯನ್ನು ನಿರೀಕ್ಷಿಸಬಹುದು. ಸಂತೋಷಕರವಾದ ಜೀವನಕ್ಕೆ ನಾಂದಿಯಾಗುವುದು. ಪ್ರವಾಸೋದ್ಯಮ ಕ್ಷೇತ್ರ ಹಾಗೂ ಸಾರಿಗೆ ಕ್ಷೇತ್ರದಲ್ಲಿ ದುಡಿಯುವವರಿಗೆ ಲಾಭ ಉಂಟಾಗುವುದು. ಮನಸ್ಸಿನಲ್ಲಿರುವ ಅನೇಕ ಬಯಕೆಗಳು ಈಡೇರುತ್ತವೆ. ಮನೆಯಲ್ಲಿ ನೆಮ್ಮದಿ ಸಿಗುವುದು.

ವೃಶ್ಚಿಕ

ವೃಶ್ಚಿಕ

ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. ಉಪನ್ಯಾಸ ಕೆಲಸದಲ್ಲಿರುವವರು ಅವಮಾನ ಅಥವಾ ಆರೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯನ್ನು ಮಾರುವಾಗ ಕಾಳಜಿ ಇರಲಿ. ಅದನ್ನು ಪಡೆಯುವವರಿಂದಲೇ ಒಂದಿಷ್ಟು ಸಂಚಕಾರ ಉಂಟಾಗಬಹುದು. ಸಾಲವನ್ನು ಕೊಡುವುದು, ಜಾಮೀನು ಸಹಿ ಅಥವಾ ಸಾಲ ಪಡೆಯುವ ಕಾರ್ಯಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆಗೆ ಶಕ್ತಿ ಉಪಾಸನೆ ಹಾಗೂ ಶಿವನ ಆರಾಧನೆ ಮಾಡಿ.

ಧನು

ಧನು

ಮಾನಸಿಕ ಕಿರಿಕಿರಿ ಮುಂದುವರಿಯಲಿದೆ. ಮಾನಸಿಕ ಆರೋಗ್ಯ ಹದಗೆಡುವುದು. ರಕ್ತದೊತ್ತಡದ ಸಮಸ್ಯೆ ಉಲ್ಭಣಗೊಳ್ಳುವುದು. ಅನಿರೀಕ್ಷಿತ ಅಪಜಯ ಹಾಗೂ ಆಘಾತ ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು. ದೂರದ ಬಂಧುಗಳಿಂದ ಅಶುಭ ಸುದ್ದಿ ಕೇಳಬೇಕಾಗುವುದು. ಜಲ ಕಂಟಕ ಇರುವುದರಿಂದ ನೀರಿನ ವಿಚಾರದಲ್ಲಿ ಆದಷ್ಟು ಜಾಗರೂಕರಾಗಿರಿ.

ಮಕರ

ಮಕರ

ಸಮಾಧಾನದ ಬದುಕು ಲಭಿಸದು. ಮಾನಸಿಕ ಕಿರಿಕಿರಿ ಕಾಡುವುದು. ಸ್ತ್ರೀಯರಿಂದ ಅವಮಾನ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಒಮ್ಮೆಲೇ ಕಾಡುವುದು. ಉನ್ನತ ವ್ಯಾಸಂಗದಲ್ಲಿ ವಿಫಲತೆ ಉಂಟಾಗುವುದು. ತಂದೆ ತಾಯಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು. ಹದಗೆಟ್ಟ ಆರೋಗ್ಯ ಸಮಸ್ಯೆಯ ನಿವಾರಣೆಗೆ ಸ್ನೇಹಿತರಲ್ಲಿ ಸಾಲ ಕೇಳಬೇಕಾಗುವುದು.

ಕುಂಬ

ಕುಂಬ

ಸುಂದರವಾದ ಜೀವನವನ್ನು ನೀವು ಕಾಣಲಿದ್ದೀರಿ. ಬಂಧು ಮಿತ್ರರ ಸಹಕಾರವನ್ನು ನೀವು ಬಯಸಿದರೆ ಲಭ್ಯವಾಗುವುದು. ನೀವು ತೀರ್ಮಾನಿಸಿಕೊಂಡಿರುವ ಕೆಲಸದಲ್ಲಿ ಜಯ ಲಭಿಸುವುದು. ಸ್ತ್ರೀಯರಿಗೆ ಕೆಲವು ವಿಚಾರದಲ್ಲಿ ಸಮಾಧಾನವನ್ನು ಕಾಣಲು ಅಸಾಧ್ಯವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವನ ಆರಾಧನೆ ಮಾಡಿ.

ಮೀನ

ಮೀನ

ಮುಂಬರಲಿರುವ ಒಂದು ವಾರ ಶುಭಕರವಾದ ದಿನ. ಹೆಚ್ಚು ಲಾಭವನ್ನು ಪಡೆದುಕೊಳ್ಳುವಿರಿ. ಹೋಟೆಲ್ ಉದ್ಯಮದಲ್ಲಿ ಲಾಭ ಉಂಟಾಗುವುದು. ಮಕ್ಕಳ ಉತ್ತಮ ವಿದ್ಯಾಭ್ಯಾಸದ ಪರಿಯಿಂದ ಸಂತೋಷ ಪಡೆದುಕೊಳ್ಳುವಿರಿ. ದೂರದ ಬಂಧುಗಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ರಾಜಕಾರಣಿಗಳಿಗೆ ಒಳ್ಳೆಯದಾಗುವುದು.

English summary

Weekly Predictions For Each Zodiac Sign: 12-20th March, 2018

With just two weeks away from us entering the Aries season, there are many changes that each zodiac sign is going through currently! This week, i.e., March 12-20th, 2018, is said to be important for many zodiac signs, as most of them could face a lot of changes.