ನೈತಿಕ ಪೊಲೀಸರಿಗೆ ಮಹಿಳೆಯೇ ಟಾರ್ಗೆಟ್! ಎಲ್ಲಿದೆ ನ್ಯಾಯ?

Posted By: Deepu
Subscribe to Boldsky

ಕೆಲವೊಂದು ಸಲ ನೈತಿಕ ಪೊಲೀಸ್ ಗಿರಿ ಬಗ್ಗೆ ನಮಗೆ ತುಂಬಾ ಹೇಸಿಗೆ ಮೂಡಿಸುತ್ತದೆ. ಯಾಕೆಂದರೆ ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಕೆಲವರು ಸ್ವಚ್ಛಂದವಾಗಿ ಗೂಂಡಾಗಿರಿ ಮಾಡುತ್ತಾರೆ. ಇಂತವರಿಗೆ ಯಾವುದೇ ಕರುಣೆ, ದಯೆ ಅನ್ನುವುದು ಇರುವುದೇ ಇಲ್ಲ. ಇಲ್ಲೊಂದು ನೈತಿಕ ಪೊಲೀಸ್ ಗಿರಿ ತಂಡವು ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.

ತನ್ನ ಬಾಯ್ ಫ್ರೆಂಡ್ ಜತೆಗೆ ಹೋಗುತ್ತಿದ್ದ ಮಹಿಳೆಗೆ ನೈತಿಕ ಪೊಲೀಸರು ಇನ್ನಿಲ್ಲದಂತೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ನೋಡಿದರೆ ನಿಮಗೆ ಕೂಡ ಮನಸ್ಸಿಗೆ ತುಂಬಾ ನೋವಾಗಬಹುದು. ಮುಂದಕ್ಕೆ ಓದಿ....

ಭಾರತದಲ್ಲೇ ನಡೆದಿರುವುದು

ಭಾರತದಲ್ಲೇ ನಡೆದಿರುವುದು

ಅಸ್ಸಾಂನ ಗೋಲಪಾರ ಜಿಲ್ಲೆಯಲ್ಲಿ ವೈದ್ಯಕೀಯ ಕೇಂದ್ರದಲ್ಲಿ ತನ್ನ ಬಾಯ್ ಫ್ರೆಂಡ್ ಜತೆಗೆ ಹೋಗುತ್ತಿದ್ದ 22ರ ಹರೆಯದ ಮಹಿಳೆಗೆ ನೈತಿಕ ಪೊಲೀಸರು ಸರಿಯಾಗಿ ಹಲ್ಲೆ ನಡೆಸಿದ್ದಾರೆ. ಇದು ವೀಡಿಯೋದಲ್ಲಿ ನೀವು ಕಾಣಬಹುದಾಗಿದೆ.

ವೀಡಿಯೋದ ವಿವರಣೆ

ವೀಡಿಯೋದ ವಿವರಣೆ

ಈ ವೀಡಿಯೋದಲ್ಲಿ ಕಂಡುಬರುವಂತೆ ನೈತಿಕ ಪೊಲೀಸರೆಂದು ಹೇಳಿಕೊಂಡವರು ಮಹಿಳೆಯ ಕೆನ್ನೆಗೆ ಬಾರಿಸಿ, ಆಕೆಗೆ ಸರಿಯಾಗಿ ಒದೆ ನೀಡಿದ್ದಾರೆ. ಮಹಿಳೆಯು ತನ್ನ ಬಾಯ್ ಫ್ರೆಂಡ್ ಜತೆಗೆ ಹೋಗುವುದು ಇವರಿಗೆ ಇಷ್ಟವಿಲ್ಲದೆ ಇದ್ದ ಕಾರಣದಿಂದ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಕೋರರು ಹೇಳುವಂತೆ….

ಹಲ್ಲೆಕೋರರು ಹೇಳುವಂತೆ….

ಈ ಪುರುಷ ಮತ್ತು ಮಹಿಳೆ ಅನೈತಿಕ ಸಂಬಂಧದಲ್ಲಿದ್ದಾರೆಂದು ಯೋಚಿಸಿ ಹಲ್ಲೆ ಮಾಡಲಾಗಿದೆ ಎನ್ನುವುದು ಹಲ್ಲೆಕೋರರ ಮಾತು. ಮಹಿಳೆಗೆ ಈಗಾಗಲೇ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆ ಇನ್ನೊಬ್ಬ ಪುರುಷನ ಜತೆಗೆ ಹೋಗುವುದನ್ನು ನೋಡಿ ಹಲ್ಲೆ ಮಾಡಲಾಗಿದೆ.

ಹಲ್ಲೆಕೋರರನ್ನು ಬಂಧಿಸಲಾಯಿತು…

ಹಲ್ಲೆಕೋರರನ್ನು ಬಂಧಿಸಲಾಯಿತು…

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ. ಹಲ್ಲೆಕೋರರನ್ನು ಬಂಧಿಸಲಾಗಿದ್ದರೂ ವೀಡಿಯೊ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಲಿದೆ. ಮಹಿಳೆ ಕೆನ್ನೆಗೆ ಬಾರಿಸಿರುವುದು ಮತ್ತು ಕಾಲಿನಿಂದ ತುಳಿದಿರುವುದು ತುಂಬಾ ಜನರನ್ನು ಕೆರಳಿಸಿದೆ. ಆಕೆ ನೋವಿನಿಂದ ನರಳುತ್ತಿದ್ದರೂ ಹಲ್ಲೆಕೋರರು ಆಕೆಯನ್ನು ಕೂದಲಿನಲ್ಲಿ ಹಿಡಿದು ಎಳೆದುಕೊಂಡು ಹೋಗುತ್ತಿದ್ದಾರೆ.

English summary

Watch Moral Policing Kick And Slap A Woman!

With so many bizarre things being reported each day, we bring in details of a shocking case, which will make you feel disgusted. This is the case of a woman being beaten black and blue by the moral policing gang. The reason will trigger anger in you, as the reports claim that the woman was apparently travelling with a male colleague. Check on the details of the bizarre and disgusting video of how brutally the woman is being bashed by the hooligans who believe that they were doing moral policing!