ವಾರಣಾಸಿಯಲ್ಲಿ ಹೋಳಿ ಹಬ್ಬ ಎಲ್ಲರೂ ಸ್ಮಶಾನದಲ್ಲಿ ಆಚರಿಸುತ್ತಾರಂತೆ!!

Posted By: Divya pandit Pandit
Subscribe to Boldsky

ಹೋಳಿ ಎಂದರೆ ಹಿಂದೂಗಳ ಪವಿತ್ರ ಆಚರಣೆಯಲ್ಲಿ ಒಂದು. ನಮ್ಮ ದೇಶ ಬಹು ಸಂಸ್ಕøತಿಯಿಂದ ಕೂಡಿರುವುದರಿಂದ ಒಂದೇ ಹಬ್ಬವನ್ನು ವಿವಿಧ ಹಿನ್ನೆಲೆಯ ಆಧಾರದಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಪ್ರತಿಯೊಂದು ಹಬ್ಬವನ್ನು ವಿಭಿನ್ನ ಸಮುದಾಯದವರು ಅವರದ್ದೇ ಆದ ರೀತಿ-ನೀತಿಯ ಹಿನ್ನೆಲೆಯಲ್ಲಿ ಆಚರಿಸುತ್ತಾರೆ. ವರ್ಣರಂಜಿತವಾದ ಹೋಳಿ ಹಬ್ಬವನ್ನು ದೇಶದಾದ್ಯಂತ ವಿವಿಧ ಆಚರಣೆಯ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಾರೆ. ಅದರಲ್ಲೂ ವಾರಣಾಸಿಯಲ್ಲಿ ಸ್ಮಶಾನದ ಚಿತಾ ಭಸ್ಮದಿಂದ ಆಚರಿಸುವುದು ಒಂದು ವಿಶೇಷ.

ಈ ಸಂಗತಿ ಕೇಳಲು ಹಾಗೂ ನೋಡಲು ಸ್ವಲ್ಪ ವಿಲಕ್ಷಣ ಅನಿಸುತ್ತದೆ. ವಾರಣಾಸಿಯ ಮಣಿಕಾರ್ಣಿಕ ಘಾಟ್ ಬಹಳ ಜನಪ್ರಿಯವಾದ ಸ್ಥಳ ಎಂದು ಹೇಳಬಹುದು. ಏಕೆಂದರೆ ಇಲ್ಲಿ ವಿವಿಧ ಬಗೆಯ ಆಚರಣೆಯಲ್ಲಿ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ ಎನ್ನಲಾಗುವುದು. ಇದು ಶವ ಸಂಸ್ಕಾರ ಮಾಡುವ ಸ್ಥಳ. ಗಂಗಾ ನದಿಗೆ ಸಮೀಪವಿರುವ ಈ ಸ್ಥಳದಲ್ಲಿ ಶವ ಸಂಸ್ಕಾರ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುವುದು ಎನ್ನುವ ಹಿನ್ನೆಲೆಯಿದೆ. ಹೋಳಿ ಹಬ್ಬದಂದು ಈ ಸ್ಥಳದಲ್ಲಿರುವ ಭಸ್ಮವನ್ನು ತೆಗೆದುಕೊಂಡು ಜನರು ಹಬ್ಬವನ್ನು ಆಚರಿಸುತ್ತಾರೆ ಎನ್ನಲಾಗುವುದು.

 

ಧಾರ್ಮಿಕ ಹಿನ್ನೆಲೆ

ಧಾರ್ಮಿಕ ಹಿನ್ನೆಲೆ

ಧಾರ್ಮಿಕ ಹಿನ್ನೆಲೆಯ ಪ್ರಕಾರ ಹೋಳಿ ಹಬ್ಬವನ್ನು ಶಿವನಿಂದ ಪ್ರಾರಂಭಿಸಲಾಯಿತು ಎನ್ನಲಾಗುತ್ತದೆ. ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅವರ "ಗಾನ"(ಮದುವೆ ವಿಧಿ)ಸಂದರ್ಭದಲ್ಲಿ ಅವರು ತಮ್ಮ ಭಕ್ತರೊಂದಿಗೆ ಆಟವಾಡಿದರು. ಜೊತೆಗೆ ಪತಿ ಪಾರ್ವತಿಯೊಂದಿಗೆ ಒಮ್ಮೆ ಇಲ್ಲಿಗೆ ಮರಳಿದ್ದರು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಹಬ್ಬದ ಆಚರಣೆ ಮುಂದುವರಿಯಿತು. ನಂತರ ಅವರ ಅನುಯಾಯಿಗಳು ಮುಂದುವರಿಸಿದರು ಎನ್ನಲಾಗುತ್ತದೆ. ಇದೊಂದು ಕಠೋರವಾದ ಆಚರಣೆ ಎಂದಲ್ಲ. ಚಿತೆಯ ಭಸ್ಮವನ್ನು ಕೆಂಪು ಬಣ್ಣದೊಂದಿಗೆ ಬೆರೆಸಿ ಪರಸ್ಪರ ಬಳಿದುಕೊಳ್ಳುವುದರ ಮೂಲಕ ಆಚರಣೆ ನಡೆಸುತ್ತಾರೆ.

 ಹಾಡಿನ ಪೂಜೆ

ಹಾಡಿನ ಪೂಜೆ

ಇಲ್ಲಿಯ ಜನರು ಸಾಮಾನ್ಯವಾಗಿ ಎಲ್ಲಾ ಹಬ್ಬಗಳ ಆಚರಣೆಯಂತೆ ಹಾಡುಗಳನ್ನು ಹಾಡುವುದರ ಮೂಲಕ ಹಬ್ಬವನ್ನು ಆನಂದಿಸುತ್ತಾರೆ. ಬಾಬಾ ಮಹಾಸ್ಮಶಾನ್ ನಾಥ್ ಮಂದಿರದಲ್ಲಿ ಹಣ್ಣು, ಹೂವು, ಗಾಂಜಾ, ಬಾಂಗ್ ಗಳನ್ನು ದೇವರ ನೈವೇದ್ಯಕ್ಕೆ ಇಡಲಾಗುವುದು.

ಭಾಂಗ್ ನಿಂದ ನಶೆ ಮಾತ್ರವಲ್ಲ... ಆರೋಗ್ಯಕ್ಕೂ ಲಾಭಗಳಿವೆ!

ವಿಭಿನ್ನ ಆಚರಣೆ

ವಿಭಿನ್ನ ಆಚರಣೆ

ಹೋಳಿ ಹಬ್ಬಕ್ಕೆ ಒಂದು ದಿನ ಮುಂಚೆಯೇ ಹೋಳಿಯ ದಹನ್ ಎಂದು ಆಚರಿಸುತ್ತಾರೆ. ಉತ್ತರ ಪ್ರದೇಶದಲ್ಲಿ ಹೋಳಿ ಹಬ್ಬವನ್ನು ಸಂಪೂರ್ಣವಾಗಿ ಅನನ್ಯ ರೀತಿಯಲ್ಲಿ ಆಚರಿಸುತ್ತಾರೆ. ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ಬಗೆಯ ಆಚರಣೆಯನ್ನು ಹೊಂದಿರುತ್ತದೆ. ಕೆಲವೆಡೆ ಬಣ್ಣವನ್ನು ಎರಚುವ ಪದ್ಧತಿ ಇದ್ದರೆ ಇನ್ನೂ ಕೆಲವು ಕಡೆ ಬಣ್ಣವನ್ನು ನೀರಿನಲ್ಲಿ ಬೆರೆಸಿ ಎರಚುತ್ತಾರೆ. ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಈ ಹಬ್ಬದ ಆಚರಣೆಯನ್ನು ಕಣ್ತುಂಬಿಕೊಳ್ಳುವಂತಿರುತ್ತದೆ.

ಏಕತೆ ಮೂಡಿಸುತ್ತದೆ

ಏಕತೆ ಮೂಡಿಸುತ್ತದೆ

ಸಾಂಸ್ಕೃತಿ ಮತ್ತು ಧಾರ್ಮಿಕ ವೈವಿಧ್ಯತೆಗಳು ಭಾರತದ ಮೂಲತತ್ವವನ್ನು ಹೊಂದಿವೆ. ಇವು ದೇಶದ ವಿವಿಧೆಡೆ ವಿವಿಧತೆಯನ್ನು ಪತಿ ಬಿಂಬಿಸುತ್ತದೆ. ಸಂತೋಷದ ಉತ್ಸಾಹದಲ್ಲಿ ಜನರನ್ನು ಒಟ್ಟುಗೂಡಿಸುತ್ತದೆಯಾದರೂ ವೈವಿಧ್ಯಮಯ ಭಾವನೆಗಳ ರೂಪ ಮತ್ತು ಉತ್ಸವಕ್ಕೆ ಸಂಬಂಧಿದ ಆಚರಣೆಗಳು ಅನನ್ಯತೆಯನ್ನು ಸೃಷ್ಟಿಸುತ್ತದೆ. ಜೊತೆಗೆ ವಿವಿಧತೆಯಲ್ಲಿ ಏಕತೆಯನ್ನು ಸೃಷ್ಟಿಸುವುದು.

ವಿವಿಧೆಡೆಯಲ್ಲಿ ವಿಭಿನ್ನತೆ

ವಿವಿಧೆಡೆಯಲ್ಲಿ ವಿಭಿನ್ನತೆ

ಹೋಳಿ ಎನ್ನುವ ಬಣ್ಣದ ಹಬ್ಬದ ಆಚರಣೆಯನ್ನು ವಿಭಿನ್ನ ಬಗೆಯಲ್ಲಿ ಆಚರಿಸುತ್ತಾರೆ. ಮುಂಬೈನಲ್ಲಿ ಬಣ್ಣದ ನೀರನ್ನು ತುಂಬಿರುವ ಮಡಕೆಯನ್ನು ಒಡೆಯುವುದರ ಮೂಲಕ ಆಚರಿಸುತ್ತಾರೆ. ವಾರಣಾಸಿಯಲ್ಲಿ ಮಣಿಕಾರ್ಣಿಕ್ ಘಾಟ್‍ನಲ್ಲಿರುವ ಚಿತೆಯ ಮಸ್ಮವನ್ನು ಬಳಿದುಕೊಳ್ಳುವ ಮೂಲಕ ಆಚರಿಸುತ್ತಾರೆ. ಉತ್ತರ ಪ್ರದೇಶ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನತೆಯ ಆಚರಣೆ ಪದ್ಧತಿ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಕಾಮನನ್ನು ಸುಡುವ ಆಚರಣೆಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಅಲ್ಲದೆ ಕರ್ನಾಟಕದ ಕರಾವಳಿ ತೀರದಲ್ಲಿ ಹಾಲಕ್ಕಿ ಗೌಡರ ಸಮುದಾಯವು ವಿಭಿನ್ನ ಬಗೆಯ ಜಾನಪದ ಶೈಲಿಯ ನೃತ್ಯ ಮಾಡುವುದರ ಮೂಲಕವೂ ಹಬ್ಬವನ್ನು ಸಂಭ್ರಮಿಸುತ್ತಾರೆ.

ಉದ್ದೇಶ ಒಂದೇ

ಉದ್ದೇಶ ಒಂದೇ

ಭಾರತದಾದ್ಯಂತ ವಿವಿಧ ಭಾಷೆ ಹಾಗೂ ಪ್ರದೇಶದ ಜನರು ಒಂದೇ ಹಬ್ಬವನ್ನು ವಿವಿಧ ಬಗೆಯಲ್ಲಿ ಆಚರಣೆ ಮಾಡುತ್ತಾರೆ. ಆದರೆ ಅವುಗಳ ಉದ್ದೇಶವು ಒಂದೇ. ದೇವರ ಆರಾಧನೆ ಹಾಗೂ ಜೀವನದಲ್ಲಿ ಸುಖ ಶಾಂತಿ ಸಿಗಲೆಂದು ಬೇಡುವುದು. ದೇವರಿಗಾಗಿ ವಿವಿಧ ಬಗೆಯಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಸಂಭ್ರಮಿಸುವುದಾಗಿದೆ.

English summary

Varanasi people celebrating holi in funeral-ashes!!

Although it may seem bizarre, but Manikarnika Ghat from Varanasi is famous for the last rites in Hindu customs. This celebration is called the chita-bhasma Holi, which literally means the ash left from the funeral pyres. Hindus across the country believe in conducting the funeral of their loved ones near the Holy river Ganga. Death leads to salvation here, according to the belief. So the area is known for conducting funerals. On the ever of Holi, some people roister by smearing the ash from these funeral pyres.