ಮಗುವಿಗೆ ಜನ್ಮ ನೀಡಿದ ಲಿಂಗ ಪರಿವರ್ತಿತ ಹೆಣ್ಣು!!

Posted By: Hemanth
Subscribe to Boldsky

ದೂರದ ಬೆಟ್ಟ ನುಣ್ಣಗೆ ಎನ್ನುವ ಗಾದೆಯಿದೆ. ಇದು ಕೆಲವೊಂದು ಸಂದರ್ಭದಲ್ಲಿ ನಿಜ ಕೂಡ. ಯಾಕೆಂದರೆ ನಮಗೆ ನಮ್ಮ ಕಷ್ಟಗಳೇ ದೊಡ್ಡದಾಗಿ ಕಾಣುತ್ತದೆ. ಬೇರೆಯವರು ತುಂಬಾ ಸುಖಿ ಜೀವನ ನಡೆಸುತ್ತಿದ್ದಾರೆಂದು ನಾವು ಭಾವಿಸಿರುವೆವು. ಆದರೆ ವಾಸ್ತವ ಹಾಗಿಲ್ಲ. ಅದರಲ್ಲೂ ಗಂಡು ಹಾಗೂ ಹೆಣ್ಣಿನ ವಿಚಾರದಲ್ಲಿ ಇದೇ ಆಗಿರುತ್ತದೆ. ಗಂಡು ತುಂಬಾ ಸುಖಿ ಎಂದು ಹೆಣ್ಣು ಭಾವಿಸಿರುವಳು. ಅದೇ ಹೆಣ್ಣು ತುಂಬಾ ಸುಖಿ, ಆಕೆಗೆ ಯಾವುದೇ ಸಮಸ್ಯೆಗಳಿರಲ್ಲ ಎಂದು ಭಾವಿಸಿರುವಳು.

ಆದರೆ ಅವರವರ ಪಾತ್ರ ನಿಭಾಯಿಸಿದರೆ ಮಾತ್ರ ಎಲ್ಲವೂ ತಿಳಿದುಬರುವುದು. ಇದಕ್ಕಾಗಿ ಇಂದಿನ ದಿನಗಳಲ್ಲಿ ಕೆಲವರು ಲಿಂಗ ಪರಿವರ್ತನೆ ಮಾಡಿಕೊಂಡು ಎಲ್ಲವನ್ನು ಅನುಭವಿಸಿ ನೋಡಲು ಮುಂದಾಗುತ್ತಿದ್ದಾರೆ. ಲಿಂಗ ಪರಿವರ್ತನೆ ಮಾಡಿಕೊಂಡವರು ಮಗುವಿಗೆ ಜನ್ಮ ನೀಡಿದರೆ ಹೇಗಿರಬಹುದು ಎಂದು ಯೋಚಿಸುವುದು ಕಷ್ಟ. ಆದರೆ ಇದು ನಿಜ! ಹೌದು, ಕಾಸಿ ಸುಲ್ಲಿವಾನ್ ಎನ್ನುವಾತ ಎರಡು ಲಿಂಗಗಳೊಂದಿಗೆ ಜೀವನ ನಡೆಸಿದ್ದಾನೆ. ಆತನ ಬಗ್ಗೆ ಮುಂದಕ್ಕೆ ಓದಿಕೊಳ್ಳಿ....

ಆತನ ಗರ್ಭಧಾರಣೆ

ಆತನ ಗರ್ಭಧಾರಣೆ

25ರ ಹರೆಯದಲ್ಲಿ ಕಾಸಿಗೆ ತನ್ನ ಲಿಂಗ ಪರಿವರ್ತನೆ ಮಾಡಿಕೊಳ್ಳಬೇಕೆಂಬ ಹಂಬಲವಾಯಿತು. ಆತ ಇದಕ್ಕೆ ಚಿಕಿತ್ಸೆ ಆರಂಭಿಸಿಕೊಂಡ. ಇದಕ್ಕಾಗಿ ಪುರುಷರ ಹಾರ್ಮೋನು, ಟೆಸ್ಟೊಸ್ಟೆರಾನ್ ಮತ್ತು ಎರಡು ಸ್ತನ ಛೇದನ ಚಿಕಿತ್ಸೆಗೆ ಒಳಪಟ್ಟ.

Image Source

ಆತ ಗರ್ಭಧರಿಸಿದಾಗ

ಆತ ಗರ್ಭಧರಿಸಿದಾಗ

ಕೆಲವೊಂದು ಆರೋಗ್ಯ ಕಾರಣಗಳಿಂದಾಗಿ ಪುರುಷರ ಹಾರ್ಮೋನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಕಾಸಿ ಗರ್ಭಿಣಿಯಾದಳು.

ಮಗುವಿನ ಪಾಲನೆ

ಮಗುವಿನ ಪಾಲನೆ

ತಮ್ಮ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವ ತನಕ, ಮಗು ಲಿಂಗ ತಟಸ್ಥತೆ ಹೊಂದಿದೆ ಎಂದು ಬಹಿರಂಗಪಡಿಸುವುದು ಬೇಡವೆಂದು ಸಂಗಾತಿ ಜತೆ ಸೇರಿಕೊಂಡು ನಿರ್ಧರಿಸಿರುವುದಾಗಿ ಕಾಸಿ ಹೇಳಿದಳು. ಜನರಿಗೆ ಮಗುವಿನ ಲಿಂಗದ ಬಗ್ಗೆ ತಿಳಿಯಲು ತುಂಬಾ ಕುತೂಹಲವಿತ್ತು. ಆದರೆ ದಂಪತಿ ಇದನ್ನು ಬಹಿರಂಗಪಡಿಸಲಿಲ್ಲ.

ಆತನ ಆರಂಭಿಕ ಜೀವನ

ಆತನ ಆರಂಭಿಕ ಜೀವನ

ಲಿಂಗ ಪರಿವರ್ತನೆಗೆ ನಾಲ್ಕು ವರ್ಷಗಳ ಚಿಕಿತ್ಸೆ ವೇಳೆ ತಾನು ಗರ್ಭಿಣಿಯಾದೆ ಎಂದು ಕಾಸಿ ಹೇಳಿಕೊಂಡಿದ್ದಾಳೆ. ವರದಿಗಳ ಪ್ರಕಾರ ಆತ ಐದು ವರ್ಷದ ಮಗುವಿಗೆ ಕೂಡ ತಂದೆಯಾಗಿದ್ದಾನೆ. ಹಳೆ ಗಂಡನಿಂದ ಆ ಗಂಡು ಮಗುವಿನ ಜನನವಾಗಿತ್ತು. ಇದು ಕಾಸಿ ಲಿಂಗಪರಿವರ್ತನೆ ಮಾಡಿಕೊಳ್ಳುವ ಮೊದಲು ನಡೆದ ಘಟನೆ.

ಕಾಸಿಯ ಮೊದಲ ಮಗು

ಕಾಸಿಯ ಮೊದಲ ಮಗು

ಮೊದಲ ಮಗುವಿಗೆ ಗರ್ಭಧರಿಸಿದ ವೇಳೆ ಆತನಿಗೆ ತನ್ನ ಗುರುತಿನ ಬಗ್ಗೆ ಗೊಂದಲವಿತ್ತು. ಯಾಕೆಂದರೆ ಮಗುವಿನ ಜನ್ಮ ನೀಡಿದ ಬಳಿಕ ತಾನು ಎಲ್ಲಿ ಹೆಚ್ಚು ಹೆಣ್ತನವನ್ನು ಅಪ್ಪಿಕೊಳ್ಳುತ್ತೇನೆಯೋ ಎನ್ನುವ ಚಿಂತೆಯಿತ್ತು. ಆದರೆ ಅಂತಿಮವಾಗಿ ಇದು ನಡೆಯಲಿಲ್ಲ.

ಆತ ಲಿಂಗ ಪರಿವರ್ತನೆಗೆ ನಿರ್ಧರಿಸಿದ

ಆತ ಲಿಂಗ ಪರಿವರ್ತನೆಗೆ ನಿರ್ಧರಿಸಿದ

ಕಾಸಿ ಮಗುವಿಗೆ ಜನ್ಮ ನೀಡಿದಾಗ, ಆತ ಮತ್ತು ಆಕೆಯ ಸಂಗಾತಿ ಸ್ಟೀವನ್ ತಮ್ಮ ಮಗುವನ್ನು ಲಿಂಗ ತಟಸ್ಥವಾಗಿ ಬೆಳೆಸಬೇಕೆಂದು ನಿರ್ಧರಿಸಿದರು. ಲಿಂಗಭೇದವಿಲ್ಲದ ಬಟ್ಟೆ ಮತ್ತು ವಿವಿಧ ರೂಪದ ಆಟಿಕೆಗಳನ್ನು ತಂದರು.

ಆತ ಲಿಂಗ ಪರಿವರ್ತನೆಗೆ ನಿರ್ಧರಿಸಿದ

ಆತ ಲಿಂಗ ಪರಿವರ್ತನೆಗೆ ನಿರ್ಧರಿಸಿದ

ಮಗು ತನ್ನನ್ನು ಯಾವ ರೀತಿಯಲ್ಲಿ ತೋರಿಸಿಕೊಡಲು ಬಯಸುತ್ತಿದೆ ಎನ್ನುವುದನ್ನು ತಿಳಿಯಲು ಅವರು ಪ್ರಯತ್ನಿಸಿದರು. ಇದರ ಬಗ್ಗೆ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯದಿರಿ.

English summary

Transgender-who-lives-a-life-as-both-sexes

Kaci Sullivan is a transgender who is enjoying life living as both sexes. Kaci revealed about her pregnancy as she was living as a woman but by the end of the pregnancy, she preferred giving birth as a MAN! Kaci also explained about the excitement he and his boyfriend had with the thought of having the baby.