Latest Updates
-
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ
ನೀವು ಸೆಕ್ಸ್ ಬಗ್ಗೆ ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ..
ಇಂಟರ್ನೆಟ್ ಗೆ ಹೋದರೆ ಅಲ್ಲಿ ನಿಮಗೆ ಸೆಕ್ಸ್ ಬಗ್ಗೆ ಸಾವಿರಾರು ವಿಡಿಯೋಗಳು ಹಾಗೂ ಲೇಖನಗಳು ಲಭ್ಯವಿರುವುದು. ಇದರಲ್ಲಿ ಯಾವುದನ್ನು ನಂಬುವುದು ಮತ್ತು ಬಿಡುವುದು ಎನ್ನುವ ಗೊಂದಲವು ಪ್ರತಿಯೊಬ್ಬರಲ್ಲೂ ಮೂಡುವುದು. ಇಂಟರ್ನೆಟ್ ನಲ್ಲಿ ಸಿಗುವಂತಹ ಪ್ರತಿಯೊಂದು ಮಾಹಿತಿಯು ಸರಿಯಾಗಿರಲ್ಲ.

ಇದನ್ನು ಸರಿಯಾಗಿ ಪರಿಶೀಲಿಸಿ ಅಳವಡಿಸಿಕೊಳ್ಳಬೇಕು. ತಪ್ಪು ಮಾಹಿತಿಯಿಂದ ಅದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಸೆಕ್ಸ್ ಬಗ್ಗೆ ಇರುವಂತಹ ಕೆಲವೊಂದು ಸತ್ಯಗಳನ್ನು ನೀವು ತಿಳಿಯಿರಿ ಮತ್ತು ಸುರಕ್ಷಿತವಾಗಿ ಸೆಕ್ಸ್ ನಡೆಸುವುದು ಹೇಗೆ ಎಂದು ತಿಳಿಯಿರಿ.

ಮೊದಲ ಸಲದ ಸೆಕ್ಸ್ ನಿಂದ ಗರ್ಭಧರಿಸುತ್ತಾರೆಯಾ?
ಮೊದಲ ಸಲದ ಸೆಕ್ಸ್ ನಿಂದಲೇ ಗರ್ಭ ಧರಿಸುವಂತಹ ಸಾಧ್ಯತೆಯು ಇದೆ. ಹುಡುಗನು ಮೊದಲ ಸಲ ಹುಡುಗಿಯೊಂದಿಗೆ ಸೆಕ್ಸ್ ನಡೆಸಿದರೆ ಆಗ ಆಕೆ ಗರ್ಭಿಣಿಯಾಗುವ ಸಾಧ್ಯತೆಯು ಇದೆ. ನೀವು ಮಹಿಳೆಯಾಗಿದ್ದರೆ ಆಗ ನೀವು ಮೊದಲ ಸಲ ಸೆಕ್ಸ್ ನಡೆಸಿದರೆ, ಅಂಡೋತ್ಪತ್ತಿಯಾಗುತ್ತಿರುವಂತೆ ಗರ್ಭಿಣಿಯಾಗಬಹುದು. ಮೊದಲ ಸಲ ಋತುಚಕ್ರಕ್ಕೆ ಒಳಗಾಗುವ ಮೊದಲು ಇದು ನಡೆಯಬಹುದು. ಇದರಿಂದ ಗರ್ಭಧರಿಸುವುದನ್ನು ತಡೆಯಲು ಗರ್ಭನಿರೋಧಕ ಬಳಸಿ. ಮಹಿಳೆಯರು ಹಾಗೂ ಪುರುಷರು ಕಾಂಡೋಮ್ ಧರಿಸುವ ಕಾರಣದಿಂದ ಲೈಂಗಿಕವಾಗಿ ಹರಡುವ ರೋಗ(ಎಸ್ ಐಟಿ)ವನ್ನು ತಡೆಯಬಹುದು. ಸೆಕ್ಸ್ ನಡೆಸುವ ಮೊದಲು ಸಂಗಾತಿಯ ಜತೆಗೆ ಮಾತನಾಡಿ, ಯಾವುದಾದರೂ ಗರ್ಭನಿರೋಧಕ ಬಳಸುವ ಬಗ್ಗೆ ಯೋಚಿಸಿ.

ವೀರ್ಯಸ್ಖಲನದ ಮೊದಲು ಹೊರತೆಗೆದರೆ ಗರ್ಭಧರಿಸುವ ಸಾಧ್ಯತೆಯಿದೆಯಾ?
ವೀರ್ಯ ಸ್ಖಲನವಾಗುವ ಮೊದಲು ಹೊರತೆಗೆದರೆ ಅದರಿಂದ ಗರ್ಭ ಧರಿಸುವಂತಹ ಸಾಧ್ಯತೆಯು ಕಡಿಮೆ ಎಂದು ಹೇಳಲಾಗುತ್ತದೆ. ಆದರೆ ಇದು ತಪ್ಪು. ಹೀಗೆ ಮಾಡಿದರೂ ಗರ್ಭಧರಿಸುವ ಸಾಧ್ಯತೆಯಿದೆ. ವೀರ್ಯಸ್ಖಲನವಾಗುವ ಮೊದಲೇ ಹುಡುಗರ ಜನನೇಂದ್ರೀಯದಿಂದ ಸ್ಖಲನದ ಮೊದಲಿನ ದ್ರವು ಹೊರಬರುವುದು. ಕೇವಲ ಒಂದು ವೀರ್ಯದಿಂದ ಹುಡುಗಿಯು ಗರ್ಭಿಣಿಯಾಗುವಳು. ಸ್ಖಲನಕ್ಕೆ ಮೊದಲು ಹೊರತೆಗೆದು ಎಚ್ಚರಿಕೆ ವಹಿಸುತ್ತೇನೆಂದು ಹುಡುಗ ಹೇಳಿದರೆ ಅದನ್ನು ನಂಬಬೇಡಿ. ವೀರ್ಯ ಸ್ಖಲನವಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗದು.

ಋತುಚಕ್ರದ ವೇಳೆ ಸೆಕ್ಸ್ ನಡೆಸಿದರೆ ಗರ್ಭ ಧರಿಸುವರೇ?
ಋತುಚಕ್ರದ ವೇಳೆ ಕೂಡ ಹುಡುಗಿಯು ಗರ್ಭ ಧರಿಸುವ ಸಾಧ್ಯತೆ ಇದೆ. ಗರ್ಭನಿರೋಧಕ ಬಳಸದೆ ತಿಂಗಳ ಯಾವುದೇ ಅವಧಿಯಲ್ಲಿ ಸೆಕ್ಸ್ ನಡೆಸಿದರೆ ಆಕೆ ಗರ್ಭ ಧರಿಸುವ ಸಾಧ್ಯತೆಯು ಇದೆ. ಸೆಕ್ಸ್ ಬಳಿಕ ವೀರ್ಯವು ಹಲವು ದಿನಗಳ ಕಾಲ ಉಳಿಯಬಹುದು. ಇದರಿಂದ ಋತುಚಕ್ರದ ವೇಳೆ ಸೆಕ್ಸ್ ನಡೆಸಿದರೂ ಗರ್ಭ ಧರಿಸುವ ಸಾಧ್ಯತೆಯು ಇರುವುದು.

ನಿಂತುಕೊಂಡು ಸೆಕ್ಸ್ ನಡೆಸಿದರೆ ಗರ್ಭಧಾರಣೆಯ ಸಾಧ್ಯತೆ ಇದೆಯಾ?
ಯಾವುದೇ ಭಂಗಿಯಲ್ಲಿ ಸೆಕ್ಸ್ ನಡೆಸಿದರೂ ಹುಡುಗಿಯು ಗರ್ಭ ಧರಿಸುವಂತಹ ಸಾಧ್ಯತೆಯು ಇದೆ. ನಿಂತುಕೊಂಡು, ಕುಳಿತುಕೊಂಡು ಸೆಕ್ಸ್ ನಡೆಸಿದರೆ ಅಥವಾ ಜಿಗಿದರೆ ಹುಡುಗಿಯು ಗರ್ಭಿಣಿಯಾಗಲ್ಲ ಎನ್ನುವುದು ಸುಳ್ಳು. ಯಾವುದೇ ಕಾಂಡೋಮ್ ಬಳಕೆ ಮಾಡದರೆ ಸೆಕ್ಸ್ ನಡೆಸಿದರೆ ಯಾವುದೇ ಭಂಗಿಯಲ್ಲೂ ಗರ್ಭ ಧರಿಸಬಹುದು. ಸ್ನಾನಗೃಹ ಅಥವಾ ಶಾವರ್ ಅಡಿಯಲ್ಲಿ ಸೆಕ್ಸ್ ನಡೆಸಿದರೂ ಗರ್ಭ ಧರಿಸುವರು. ಯಾವುದೇ ಸುರಕ್ಷಿತ ಪ್ರದೇಶವೆನ್ನುವುದು ಇಲ್ಲ. ನೀವು ಎಲ್ಲೇ ಮಾಡಿದರೂ ಹೇಗೆ ಮಾಡಿದರೂ ಗರ್ಭಧಾರಣೆಯಾಗುವುದು. ಅಂಡಾಣುವನ್ನು ವೀರ್ಯವು ತಲುಪುವುದು ಮುಖ್ಯ.

ಮುಖ ಮೈಥುನದಿಂದ ಗರ್ಭಧರಿಸುವರೇ?
ಇಲ್ಲ, ಹುಡುಗಿಯು ಮುಖಮೈಥುನ ನಡೆಸಿದರೆ ಅದರಿಂದ ಗರ್ಭಧರಿಸುವಂತಹ ಸಾಧ್ಯತೆಯು ಇಲ್ಲ. ವೀರ್ಯವನ್ನು ನುಂಗಿದರೂ ಇದು ಕಡಿಮೆ. ಆದರೆ ಗೊನೊರಿಯಾ, ಕ್ಲಮೈಡಿಯಾ ಮತ್ತು ಹರ್ಪಿಸ್ ನಂತಹ ಕೆಲವೊಂದು ಲೈಂಗಿಕ ರೋಗಗಳು ಹರಡಬಹುದು. ಮುಖಮೈಥುನ ಮಾಡುತ್ತಲಿದ್ದರೆ ಹುಡುಗರು ಕಾಂಡೋಮ್ ಹಾಕಿ.

ಆಲ್ಕೋಹಾಲ್ ನಿಂದ ಪ್ರದರ್ಶನ ಉತ್ತಮವಾಗುವುದೇ?
ಇಲ್ಲ, ಆಲ್ಕೋಹಾಲ್ ನಿಂದಾಗಿ ಹಾಸಿಗೆಯಲ್ಲಿ ಪ್ರದರ್ಶನವು ಉತ್ತಮವಾಗಲ್ಲ. ನೀವು ಹೆಚ್ಚು ಕುಡಿದರೆ ಆಗ ಸರಿಯಾದ ನಿರ್ಧಾರ ಮಾಡಲು ಆಗಲ್ಲ. ಆಲ್ಕೋಹಾಲ್ ನಿಂದಾಗಿ ಕೆಲವೊಂದು ಅಪಾಯಗಳು ಇವೆ. ನೀವು ತಯಾರಾಗದೆ ಸೆಕ್ಸ್ ನಡೆಸಬಹುದು, ಇಷ್ಟವಿಲ್ಲದೆ ಇರುವವರ ಜತೆಗೂ ಸೆಕ್ಸ್ ನಡೆಸಬಹುದು ಅಥವಾ ಗರ್ಭನಿರೋಧಕ ಧರಿಸಲು ಮರೆತಿರಬಹುದು. ಕುಡಿತದಿಂದ ಅನುಭವವು ಉತ್ತಮವಾಗಲ್ಲ ಮತ್ತು ಕುಡಿತದ ವೇಳೆ ಸೆಕ್ಸ್ ನಿಂದಾಗಿ ನಿಮಗೆ ಕೀಳರಿಮೆ ಮೂಡಬಹುದು.

ಕ್ಲಿಂಗ್ ಫಿಲ್ಮ್ ನ್ನು ಕಾಂಡೋಮ್ ಆಗಿ ಬಳಸಬಹುದೇ?
ಕ್ಲಿಂಗ್ ಫಿಲ್ಮ್ ಅಥವಾ ಪ್ಲಾಸ್ಟಿಕ್ ನ್ನು ಕಾಂಡೋಮ್ ಆಗಿ ಬಳಸಬಾರದು. ಎಸ್ ಟಿಐಯಿಂದ ರಕ್ಷಿಸಲು ಮಹಿಳೆಯರ ಅಥವಾ ಪುರುಷರ ಕಾಂಡೋಮ್ ಬಳಸಬೇಕು.

ಕಾಂಡೋಮ್ ನ್ನು ತೊಳೆದು ಮತ್ತೆ ಬಳಸಬಹುದೇ?
ಕಾಂಡೋಮ್ ನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಕಾಂಡೋಮ್ ನ್ನು ತೊಳೆದು ಮತ್ತೆ ಬಳಸಿ ಎಂದರೆ ನೀವು ಅದನ್ನು ನಂಬಬೇಡಿ. ನೀವು ಕಾಂಡೋಮ್ ಬಳಸಿದರೆ ಅದನ್ನು ಆಗಲೇ ಬಿಸಾಡಿಬಿಡಿ. ಮತ್ತೆ ಹೊಸ ಕಾಂಡೋಮ್ ಬಳಸಿ. ಪುರುಷರ ಹಾಗೂ ಮಹಿಳೆಯರ ಕಾಂಡೋಮ್ ಎರಡಕ್ಕೂ ಇದು ಅನ್ವಯವಾಗುವುದು. 30 ನಿಮಿಷ ಸೆಕ್ಸ್ ಬಳಿಕ ಕಾಂಡೋಮ್ ನ್ನು ಬದಲಾಯಿಸಬೇಕು. ಯಾಕೆಂದರೆ ಘರ್ಷಣೆಯಿಂದಾಗಿ ಕಾಂಡೋಮ್ ದುರ್ಬಲವಾಗುವುದು. ಇದರಿಂದ ಅದು ಹರಿದುಹೋಗಬಹುದು.

ಒಂದು ಸಲ ಸೆಕ್ಸ್ ನಡೆಸಿದರೆ ಗರ್ಭಧರಿಸುವರೇ?
ಕೇವಲ ಒಂದು ಸಲ ಸೆಕ್ಸ್ ನಡೆಸಿದರೂ ಗರ್ಭ ಧರಿಸುವಂತಹ ಸಾಧ್ಯತೆಯು ಇದ್ದೇ ಇದೆ. ಗರ್ಭ ಧರಿಸಲು ಹಲವಾರು ಸಲ ಸೆಕ್ಸ್ ನಡೆಸಬೇಕು ಎನ್ನುವಂತಹ ಸುಳ್ಳು ಇದೆ. ಆದರೆ ನಿಜವೆಂದರೆ ಒಂದು ವೀರ್ಯವು ಅಂಡಾಣುವನ್ನು ತಲುಪಿದರೂ ಸಾಕು. ಸುರಕ್ಷಿತವಾಗಿ ಸೆಕ್ಸ್ ನಡೆಸಬೇಕಿದ್ದರೆ ಆಗ ನೀವು ಗರ್ಭನಿರೋಧಕಗಳನ್ನು ಬಳಸಿಕೊಳ್ಳಿ. ಸಾಮಾನ್ಯವಾಗಿ ಜನಸಾಮಾನ್ಯರು ಲೈಂಗಿಕ ವಿಷಯದ ಬಗ್ಗೆ ಎಂದಿಗೂ ಚರ್ಚಿಸದ, ಆದರೆ ಲೈಂಗಿಕ ಜೀವನಕ್ಕೆ ಅತಿ ಅಗತ್ಯವಾದ ಕೆಲವು ಸಂಗತಿಗಳನ್ನು ವಿವರಿಸಲಾಗಿದೆ. ಪ್ರತಿಯೊಬ್ಬರೂ ಈ ವಿಷಯಗಳನ್ನು ತಿಳಿದುಕೊಂಡಿರಬೇಕಾಗಿರುವುದು ಅಗತ್ಯವಾಗಿದೆ. ಯಾರೋ ಹೇಳಿದ, ಎಲ್ಲೋ ಓದಿದ ಮಾಹಿತಿಗಳು ಅರ್ಧಂಬರ್ಧ ಅರ್ಥವಾಗಿ ಇದೇ ಸ್ಥಿತಿಯಲ್ಲಿ ಲೈಂಗಿಕ ಕ್ರಿಯೆಗೆ ಮುಂದಾದರೆ ಎಡವಟ್ಟು ಖಂಡಿತಾ!



Click it and Unblock the Notifications











